ಈ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿದ ನಟಿ ಸಾನ್ವಿ ಶ್ರೀವಾಸ್ತವ್ 'ಸೈಮಾ ಜೊತೆ ನನ್ನ ಜರ್ನಿ ಮೊದಲ ವರ್ಷದಿಂದಲೇ ಆರಂಭ ಆಗಿದೆ. ಸೆಪ್ಟೆಂಬರ್ 11 ಮತ್ತು 12 ನೇ ದಿನಾಂಕಗಳಂದು ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ' ಎಂದಿದ್ದಾರೆ.

South Indian International Movie Awards 2026 (SIIMA): ಸೈಮಾ ಅವಾರ್ಡ್ 14ನೇ ಸೀಸನ್ ಕಾರ್ಯಕ್ರಮ ನಡೆದಿದೆ. ಬೆಂಗಳೂರಿನಲ್ಲಿ ಸೈಮಾ ಆಯೋಜಕರಿಂದ ಸುದ್ದಿಘೋಷ್ಠಿ ನಡೆದಿದ್ದು, ಅದರಲ್ಲಿ ಸ್ಯಾಂಡಲ್‌ವುಡ್ ತಾರೆಯರಾದ ನಟ ಶ್ರೀಮುರಳಿ, ಪ್ರಣಿತಾ, ಸಾನ್ವಿ‌ ಶ್ರೀವತ್ಸವ್, ತೆಲುಗು ನಟಿ ಫರಿಯಾ ಅಬ್ದುಲ್ಲಾ ಭಾಗಿಯಾಗಿದ್ದಾರೆ. ಸೈಮಾ ಕಾರ್ಯಕ್ರಮದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸೈಮಾ ಆಯೋಜಕರಿಂದ ಸುದ್ದಿಘೋಷ್ಠಿ: ನಟ ಶ್ರೀಮುರುಳಿ ಮಾತು

'ಸೈಮಾ ಕಡೆಯಿಂದ ನನಗೊಂದು ಜವಾವ್ಧಾರಿ ಕೊಟ್ಟಿದ್ದಾರೆ. ಈ ಭಾರಿ ಸೈಮಾ ಕಾರ್ಯಕ್ರಮದಲ್ಲಿ ನಾನು ಬವಾಬ್ದಾರಿಯಿಂದ ಈ ಕಾರ್ಯಕ್ರಮದಲ್ಲಿ ಒಬ್ಬ ಪ್ರತಿನಿಧಿಯಾಗಿ ಭಾಗಿಯಾಗಿದ್ದೇನೆ. ಸೈಮಾಗೂ ನಮ್ಮ ಕುಟುಂಬಕ್ಕೆ ಭಾಂದವ್ಯ ಇದೆ. ಅಪ್ಪು ಮಾವ ನಾಲ್ಕು‌ ಬಾರಿ, ಶಿವಣ್ಣ ಮೂರು ಬಾರಿ ಸೈಮಾ‌ ಪ್ರಶಸ್ತಿ ಪಡೆದಿದ್ದಾರೆ. ಈ ಬಾರಿಯ ಸೀಸನ್ 14 ತುಂಬಾ ಅದ್ಭುತವಾಗಿರುತ್ತೆ ಅಂತ ಭಾವಿಸಿದ್ದೇನೆ.

'ಕಳೆದ ಭಾರಿ ನಟ ದುನಿಯಾ ವಿಜಯ್ ಸೈಮಾದಲ್ಲಿ ಆದ ಅವಮಾನದ ಬಗ್ಗೆ ಮಾತಾಡಿದ್ರು.. ಕಾರ್ಯಕ್ರಮದಲ್ಲಿ ಜನ ಖಾಲಿ ಆದ ಮೇಲೆ ಪ್ರಶಸ್ತಿ ಕೊಟ್ಟಿದ್ದಾರೆ ಅಂತ ಹೇಳಿದ್ರು..' ಎಂಬ ಮಾತಿಗೆ ಉತ್ತರ ಕೊಡುತ್ತ, ಈ ವಿಚಾರವಾಗಿ ಮಾತನಾಡಿದ ನಟ ಶ್ರೀಮುರಳಿ- ಸಿನಿಮಾ ಮಾಡೋದು ಜನರಿಗಾಗಿ, ಪ್ರಶಸ್ತಿ ಕೊಡೋದು ನಮ್ಮ ಗೌರವಕ್ಕಾಗಿ.. ನಮ್ಮ ಗಮನ ಪ್ರಶಸ್ತಿ ಮೇಲೆ ಇರಬೇಕ, ಅಲ್ಲಿ ಯಾರಿದ್ದಾರೆ ಅನ್ನೋದರ ಮೇಲೆ ಅಲ್ಲ. ಈ‌ ಭಾರಿ ಎಲ್ಲವೂ ಚೆನ್ನಾಗಿ ಇರುತ್ತೆ ಅನ್ನೋ ನಂಬಿಕೆ ಇದೆ..' ಎಂದಿದ್ದಾರೆ.

ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿದ ನಟಿ ಸಾನ್ವಿ ಶ್ರೀವಾಸ್ತವ್ 'ಸೈಮಾ ಜೊತೆ ನನ್ನ ಜರ್ನಿ ಮೊದಲ ವರ್ಷದಿಂದಲೇ ಆರಂಭ ಆಗಿದೆ.

ಸೆಪ್ಟೆಂಬರ್ 11 ಮತ್ತು 12 ನೇ ದಿನಾಂಕಗಳಂದು ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ' ಎಂದಿದ್ದಾರೆ. ಇನ್ನು, ಅಲ್ಲಿಯೇ ಇದ್ದ ನಟಿಯರಾದ ಪ್ರಣೀತಾ ಹಾಗೂ ತೆಲುಗು ನಟಿ ಫರಿಯಾ ಅಬ್ದುಲ್ಲಾ ಈ ಈವೆಂಟ್‌ನಲ್ಲಿ ಭಾಗಿಯಾಗಿದ್ದರ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.