MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮೊಸರಲ್ಲಿ ಕಲ್ಲು.. 'ಸೀತೆ' ಸಾಯಿ ಪಲ್ಲವಿ ಬಗ್ಗೆ ಬ್ಯಾಡ್ ಕಾಮೆಂಟ್ಸ್ ಮಧ್ಯೆ 'ನಯನತಾರಾ' ಬಂದಿದ್ದು ಏಕೆ?

ಮೊಸರಲ್ಲಿ ಕಲ್ಲು.. 'ಸೀತೆ' ಸಾಯಿ ಪಲ್ಲವಿ ಬಗ್ಗೆ ಬ್ಯಾಡ್ ಕಾಮೆಂಟ್ಸ್ ಮಧ್ಯೆ 'ನಯನತಾರಾ' ಬಂದಿದ್ದು ಏಕೆ?

2026ರ ಈ ಹೊಸ ರಾಮಾಯಣ ಸಿನಿಮಾದಲ್ಲಿ 'ಸೀತೆ' ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಶುರುವಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ.  ಟ್ರೇಲರ್ ಬಿಡುಗಡೆ ಬಳಿಕ ನಟಿ ಸಾಯಿ ಪಲ್ಲವಿ ಲುಕ್ ಹಾಗೂ ನಟನೆಗೆ ಬಹಳಷ್ಟು ಜನರು ಫಿದಾ ಆಗಿದ್ದಾರೆ. ಆದರೂ ಈಗ ಏನ್ ಆಗ್ತಿದೆ ನೋಡಿ..

3 Min read
Author : Shriram Bhat
Published : Aug 01 2026, 05:24 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Asianet News

Sai Pallavi-Nayanthara: Social Media Trolls and War- ಸೋಷಿಯಲ್ ಮೀಡಿಯಾ ಅಂದ್ರೆ ಏನು ಅಂತ ಎಲ್ಲರಿಗೂ ಹೊಸದಾಗಿ ಹೇಳಬೇಕಿಲ್ಲ. ಅದೊಂಥರಾ ಊರ ಮಧ್ಯೆ ಇಟ್ಟಿರುವ ಡಬ್ಬಿಯಂತೆ. ಅದರಲ್ಲಿ ಯಾರು ಏನು ಬೇಕಾದರೂ ಹಾಕಬಹುದು. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗೋದು, ಟ್ರೋಲ್ ಆಗೋದು, ಕಾಮೆಂಟ್ ಆಗೋದು ಕೆಲವೊಮ್ಮೆ ಅದೆಲ್ಲವನ್ನೂ ಮೀರಿ ದೊಡ್ಡ ದೊಡ್ಡ ಜಗಳುಗಳು, ಕೇಸ್‌ಗಳೂ ಆಗುವುದು ಕಾಮನ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : Chatgpt AI And instagram

ಕೆಲವು ದೇಶಗಳಲ್ಲಿ ಸೋಷಿಯಲ್ ಮೀಡಿಯಾ ಉಪಯೋಗದ ಬಗ್ಗೆ ಸ್ಟ್ರಿಕ್ಟ್‌ ರೂಲ್ಸ್ ಇದೆ. ಅದು ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಸೋಷಿಯಲ್ ಮೀಡಿಯಾ ಅಂದ್ರೆ ಕಸದ ಡಬ್ಬಿ ತರಹ ಯೂಸ್ ಮಾಡೋರೂ ಇದ್ದಾರೆ. ಈಗ ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ, ಇತ್ತೀಚೆಗೆ ಬಿಡುಗಡೆಯಾದ ರಾಮಾಯಣ ಟ್ರೇಲರ್‌, ಅದರಲ್ಲಿನ ಕೆಲವು ಪಾತ್ರಧಾರಿಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಆಗುತ್ತಿರುವ ಚರ್ಚೆ, ಅವಹೇಳನ ಹಾಗೂ ಟೀಕೆಗಳು.

Related Articles

Related image1
ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ರಾಮಾಯಣ ಟ್ರೇಲರ್; ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕಿಕ್ಕೇರಿಸುವ ಸಂಗತಿಗಳು ಇವೇ ನೋಡಿ..!
Related image2
ಸೀತೆ 'ಬಾದಾಮಿ ಕಣ್ಣುಗಳ ಸುಂದರಿ' ಆಗಿರಬೇಕು.. ಸಾಯಿ ಪಲ್ಲವಿ ಹೊಗಳಿ, ಹೀಗೆ ಅಂದಿದ್ಯಾಕೆ ಹಳೆಯ ರಾಮಾಯಣದ ಸೀತೆ..!?
38
Image Credit : Youtube

ಮೊನ್ನೆ, ಜುಲೈ 30ರಂದು ರಾಮಾಯಣ್ ಟ್ರೇಲರ್ ಬಿಡುಗಡೆ ಆಗಿದ್ದೇ ತಡ, ರಾಮಯಣ ಬದಲಿಗೆ ಇದು 'ರಾವಣಾಯಣ' ಆಗಿದೆ ಎಂಬಲ್ಲಿಂದ ಶುರುವಾಗಿ, 'ಇದು ರಾಮನ ರಾಮಾಯಣವೋ ಅಥವಾ ರಾವಣನ ರಾಮಾಯಣವೋ' ಎಂಬ ಚರ್ಚೆ ಶುರುವಾಗಿದೆ. ಕೆಲವರು ಅಷ್ಟಕ್ಕೇ ನಿಲ್ಲದೇ, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಆಯ್ಕೆ ಸರಿಯಲ್ಲ ಎನ್ನುತ್ತಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಬದಲು ನಟ ಮಹೇಶ್ ಬಾಬು ಅವರನ್ನು ಆಯ್ಕೆ ಮಾಡಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ. ಜೊತೆಗೆ, ಮಹೇಶ್ ಬಾಬು ಅವರನ್ನು ರಾಮನ ಪಾತ್ರದಲ್ಲಿ ಕಲ್ಪಿಸಿದ ಒಂದಷ್ಟು ಎಐ (AI) ರೀಲ್ಸ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿದೆ.

48
Image Credit : Youtube

ರಾಮನನ್ನು ಮಾತ್ರ ಅಲ್ಲ, ಸೀತೆಯನ್ನೂ ಬಿಟ್ಟಿಲ್ಲ ನೆಟ್ಟಿಗರು. 2026ರ ಈ ಹೊಸ ರಾಮಾಯಣ ಸಿನಿಮಾದಲ್ಲಿ 'ಸೀತೆ' ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಶುರುವಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ. ಆದರೆ, ಟ್ರೇಲರ್ ಬಿಡುಗಡೆ ಬಳಿಕ ನಟಿ ಸಾಯಿ ಪಲ್ಲವಿ ಲುಕ್ ಹಾಗೂ ನಟನೆಗೆ ಬಹಳಷ್ಟು ಜನರು ಫಿದಾ ಆಗಿದ್ದಾರೆ. ಮೊದಲಿದ್ದ ಟೀಕೆಗಳಿಗೆ ಹೋಲಿಸಿದರೆ, 99% ಟೀಕೆಗಳು ನಿಂತಿವೆ. ಆದರೂ ಕೂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ಅವರನ್ನು ಟೀಕಿಸುವ ಹೊಸ ಟ್ರೆಂಟ್ ಒಂದು ಹುಟ್ಟಿಕೊಂಡಿದೆ.

58
Image Credit : Instagram

ಅಷ್ಟೇ ಅಲ್ಲ, ನಟಿ ಸಾಯ ಪಲ್ಲವಿಯವರ ಸೀತೆ ಪಾತ್ರಕ್ಕೆ ನಟಿ ನಯನತಾರಾ ನಿರ್ವಹಿಸಿದ ಸೀತೆ ಪಾತ್ರವನ್ನು ಹೋಲಿಕೆ ಮಾಡಿ ಸಾಯಿ ಪಲ್ಲವಿಗಿಂತ ನಯನತಾರಾ ಬೆಟರ್ ಎನ್ನುವ ಹೊಸ ಟ್ರೋಲ್ ಶುರುವಾಗಿದೆ. ಕೆಲವರು ಕೀರ್ತಿ ಸುರೇಶ್, ಅನುಷ್ಕಾ ಶೆಟ್ಟಿ ಸಾಯಿ ಪಲ್ಲವಿಗಿಂತ ಬೆಟರ್ ಆಯ್ಕೆಯಾಗಿತ್ತು ಎಂದಿದ್ದೂ ಇದೆ. ಆದರೆ, ಈಗ ಶುರವಾಗಿರುವ ಹೊಸ ಟ್ರೋಲ್ ಹಾಗು ಟೀಕೆ- ರಾಮಾಯಣದ ಸೀತೆ ಪಾತ್ರವನ್ನು ಸಾಯಿ ಪಲ್ಲವಿ ಬದಲು ನಯನತಾರಾ ಅವರಿಗೆ ಕೊಡಬೇಕಿತ್ತು ಅನ್ನೋದು!

68
Image Credit : X

ಅದಕ್ಕೆ ಸಾಕ್ಷಿಯಾಗಿ ಒಂದು ಹೇಳಿಕೆ- 'ಕಳಪೆ ವೇಷಭೂಷಣಗಳು ಪಾತ್ರದ ಮೆರುಗನ್ನು ಹಾಳುಮಾಡುತ್ತವೆ. ಆ ಭಾರವಾದ ಮತ್ತು ಅತಿಯಾದ ಅಲಂಕಾರದ ಉಡುಪುಗಳು ಸೀತೆಯ ಪಾತ್ರಕ್ಕೂ ಮತ್ತು ಸಾಯಿ ಪಲ್ಲವಿಯವರಿಗೂ ಸ್ವಲ್ಪವೂ ಒಪ್ಪುತ್ತಿಲ್ಲ. ಎಂತಹ ಅನಾಹುತ! ಇದಕ್ಕಿಂತ ನಯನತಾರಾ ಅವರು ಸೀತೆಯ ಪಾತ್ರವನ್ನು ಅದೆಷ್ಟೋ ಪಟ್ಟು ಉತ್ತಮವಾಗಿ ನಿರ್ವಹಿಸಿದ್ದರು."

ಎರಡನೇ ಹೇಳಿಕೆ- "ಕೆಟ್ಟ ಕಾಸ್ಟ್ಯೂಮ್ ಇಡೀ ಪಾತ್ರವನ್ನೇ ಹಾಳುಮಾಡಿದೆ. ಆ ಅತಿಯಾದ ವೇಷಭೂಷಣಗಳು ಸೀತೆ ಪಾತ್ರಕ್ಕೆ ಮತ್ತು ಸಾಯಿ ಪಲ್ಲವಿಗೆ ಸೆಟ್ ಆಗುತ್ತಿಲ್ಲ. ಎಂತಹ ಅವಮಾನ! ಸೀತೆಯಾಗಿ ನಯನತಾರಾ ಅವರ ನಟನೆ ಮತ್ತು ನೋಟ ಇದಕ್ಕಿಂತ ಲಕ್ಷ ಪಟ್ಟು ಚೆನ್ನಾಗಿತ್ತು."

ಆದರೆ, ಕೆಲವರ ಈ ಅನಿಸಿಕೆಗಳಿಗೆ ಅದೇ ಸೋಷಿಯಲ್ ಮೀಡಿಯಾಗಳಲ್ಲಿ ಇನ್ನೂ ಕೆಲವರು ತಮ್ಮ ಕಾಮೆಂಟ್ಸ್ ಹಂಚಿಕೊಂಡಿದ್ದಾರೆ. ಆ ಸ್ಯಾಂಪಲ್‌ಗಳು ಇಲ್ಲಿವೆ ನೋಡಿ..

78
Image Credit : others
  1. ನೆಟ್ಟಿಗರು ಒಂದು ಸತ್ಯವನ್ನು, ಗಮನಸಿಬೇಕಾದ ಅದೊಂದು ಸಂಗತಿಯನ್ನು ಮರೆತಂತೆ ತೋರುತ್ತಿದೆ. ಯಾವುದೇ ಸಿನಿಮಾಗೆ ನಟನಟಿಯರನ್ನು ಆಯ್ಕೆ ಮಾಡುವಾಗ ನಿರ್ದೇಶಕರು ಹಾಗೂ ನಿರ್ಮಾಪಕರು ಹಲವು ಸಂಗತಿಗಳನ್ನು ಲೆಕ್ಕಾಚಾರ ಮಾಡಿ, ಅಳೆದೂ-ತೂಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಅದರಲ್ಲೂ ರಾಮಾಯಣದಂತೆ ಸನಾತತ ಧರ್ಮದ ಮಹಾಕಾವ್ಯವೊಂದನ್ನು ತೆರೆಯ ಮೇಲೆ ತೋರಸುವಾಗ ಇನ್ನಷ್ಟು ಮತ್ತಷ್ಟು ಜಾಗರೂಕತೆ ವಹಿಸಿರುತ್ತಾರೆ. ಐತಿಹಾಸಿಕ ಸಿನಿಮಾ ಮಾಡುವಾಗ ಅಷ್ಟೊಂದು ದಿನಗಳ ಕಾಲ್‌ಶೀಟ್ ಕೊಟ್ಟು ಕಾಯುವ ನಟನಟಿಯರ ಅಗತ್ಯವೂ ಇರುತ್ತದೆ. ಇಷ್ಟೆಲ್ಲಾ ನೋಡಿದ ಮೇಲೆಯೇ ನಟನಟಿಯರ ಆಯ್ಕೆ ಮುಗಿದು ಶೂಟಿಂಗ್ ಶುರುವಾಗಿರುತ್ತದೆ. ಹಾಗಿರುವಾ ಟ್ರೇಲರ್ ಬಂದು, ಇನ್ನೇನು ಸಿನಿಮಾ ಬಿಡುಗಡೆ ಆಗಲಿದೆ ಎನ್ನುವಾಗ ನೆಟ್ಟಗರು ಚರ್ಚೆ ಮಾಡಿದರೆ ಪ್ರಯೋಜನವೇನು?

2. ಈ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಸ್, ಕಾಮೆಂಟ್ ಹಾಗೂ ಟೀಕೆ ಮಾಡುವ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸಿನಿಮಾದ ಪಾತ್ರವರ್ಗದ ಅಯ್ಕೆಯಲ್ಲಿ ದೇಶದಲ್ಲಿನ ರಾಜಕೀಯ, ಚುನಾವಣೆಯಂತೆ ವೋಟಿಂಗ್ ಪದ್ಧತಿ ಇಲ್ಲ. ಹಣ ಹಾಕುವವರ ಅಂದರೆ ನಿರ್ಮಾಪಕರು ಹಾಗೂ ಸೂತ್ರಧಾರಿ ನಿರ್ದೇಶಕರ ಆಯ್ಕೆ ಆದು. ಅವರಿಗೆ ತಮ್ಮ ಸಿನಿಮಾದ ತಾರಾಬಳಗದ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯ ಇದೆ. ಅವರು ಅದನ್ನು ಸೋಷಿಯಲ್ ಮೀಡಿಯಾಗಳಿಗೆ ಬಿಟ್ಟುಕೊಡುತ್ತಾರಾ?

88
Image Credit : instagram

ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಗರಿಗೆ ಸ್ವಾತಂತ್ರ-ಅಧಿಕಾರ ಇದೆ ಎನ್ನುವ ಮಾತಿನಂತೆ, ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಅದನ್ನು ಟೀಕಿಸುವ, ಪ್ರಶ್ನಿಸುವ, ಕಾಮೆಂಟ್ ಮಾಡುವ ಅಧಿಕಾರವೂ ಇದೆ ಎನ್ನುವ ಮಾತು ನಿಜವಾದರೂ, ಅದರಿಂದ ನೆಟ್ಟಗರಿಗೆ ಅಗುವ ಉಪಯೋಗವೇನು ಎಂಬ ಪ್ರಶ್ನೆ ಸಹಜ!

ಒಂದು ಸಿನಿಮಾದ ಟ್ರೇಲರ್ ಬಿಡುಗಡೆ ಬಳಿಕ ಮಾಡುವ ಸೋಷಿಯಲ್ ಮೀಡಿಯಾ ಚರ್ಚೆ ವೇಸ್ಟ್.. ಅದು 'ಟ್ರೇನ್ ಹೋದ ಬಳಿಕ ಟಿಕೆಟ್ ಪಡೆದುಕೊಂಡಂತೆ' ಆಗುತ್ತದೆ. ಇದು ಒಂಥರಾ ಟೈಮ್ ವೇಸ್ಟ್ ಆಗುವುದರ ಜೊತೆಗೆ ಇರುವ ನೆಮ್ಮದಿಯೂ ಬೆಂಕಿ ಇಟ್ಟುಕೊಂಡಂತೆ. ಆದರೆ, ಮಾಡೋದೇನು? 'ಕಾಲಾಯ ತಸ್ಮೈ ನಮಃ' ಎನ್ನದೇ ಬೇರೆ ದಾರಿ ಇಲ್ಲ..!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಾಮಾಯಣ ಚಲನಚಿತ್ರ
ಸಾಯಿ ಪಲ್ಲವಿ
ನಯನತಾರ
ಮನರಂಜನಾ ಸುದ್ದಿ
Latest Videos
Recommended Stories
Recommended image1
ಅಪ್ಪ-ಅಮ್ಮನ ಜೊತೆ ಹೇಮಕುಂಡ್ ಚಾರಣ: ಸಂಗೀತಾ ಶೃಂಗೇರಿ ಹಂಚಿಕೊಂಡ್ರು ಹಿಮಾಲಯದ ಸುಂದರ ನೆನಪುಗಳು
Recommended image2
ಜಾಲಿ ಸಿನಿಮಾ ವಿಮರ್ಶೆ: ಹುಡುಗಿಯಲ್ಲಿ ಅಮ್ಮನನ್ನು, ಹುಡುಗನಲ್ಲಿ ತಂದೆಯನ್ನು ಕಂಡ ಪ್ರೀತಿಯ ಕಥೆ!
Recommended image3
ಶ್ರೀಮತಿ ಸಿಂಧೂರ ಸಿನಿಮಾ ವಿಮರ್ಶೆ: ಕುಟುಂಬ, ನಂಬಿಕೆ ಮತ್ತು ಹನುಮನ ಶಕ್ತಿಯ ಕಥೆ ಹೇಗಿದೆ?
Related Stories
Recommended image1
ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ರಾಮಾಯಣ ಟ್ರೇಲರ್; ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕಿಕ್ಕೇರಿಸುವ ಸಂಗತಿಗಳು ಇವೇ ನೋಡಿ..!
Recommended image2
ಸೀತೆ 'ಬಾದಾಮಿ ಕಣ್ಣುಗಳ ಸುಂದರಿ' ಆಗಿರಬೇಕು.. ಸಾಯಿ ಪಲ್ಲವಿ ಹೊಗಳಿ, ಹೀಗೆ ಅಂದಿದ್ಯಾಕೆ ಹಳೆಯ ರಾಮಾಯಣದ ಸೀತೆ..!?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved