MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • Job: ಕೆಲಸ ಬಿಟ್ಟ ಮೇಲೂ ಡೆಲಿವರಿ ಮಾಡ್ಬೇಕಂತೆ! ಕೊನೆಯ ದಿನದ ವಿಚಿತ್ರ ಅನುಭವ ಬಿಚ್ಚಿಟ್ಟ ಉದ್ಯೋಗಿ!

Job: ಕೆಲಸ ಬಿಟ್ಟ ಮೇಲೂ ಡೆಲಿವರಿ ಮಾಡ್ಬೇಕಂತೆ! ಕೊನೆಯ ದಿನದ ವಿಚಿತ್ರ ಅನುಭವ ಬಿಚ್ಚಿಟ್ಟ ಉದ್ಯೋಗಿ!

ರಾಜೀನಾಮೆ ನೀಡಿ, ಕಂಪನಿಯಲ್ಲಿ ಕೊನೆಯ ದಿನದಂದು ಕೆಲಸ ಮುಗಿಸಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ಮತ್ತೆ ಕೆಲಸ ನೀಡಿದ ವಿಚಿತ್ರ ಘಟನೆ ನಡೆದಿದೆ. ಅಧಿಕೃತವಾಗಿ ಉದ್ಯೋಗ ಮುಗಿದ ನಂತರವೂ ಮುಂದಿನ 10 ದಿನಗಳ ಕಾಲ ಕೆಲಸ ಮಾಡುವಂತೆ ಮ್ಯಾನೇಜರ್ ಕೇಳಿಕೊಂಡಿದ್ದಾರೆ. ಆದರೆ ಮುಂದೆ ಆಗಿದ್ದೆ ಬೇರೆ.

2 Min read
Author : Bhimasi M Koleppanavar
Published : Aug 01 2026, 04:04 PM IST
Share this Photo Gallery
  • FB
  • TW
  • Linkdin
  • Whatsapp
14
ಅದು ವಿದಾಯ ಹೇಳುವ ಸಮಯ!
Image Credit : AI image - Gemini

ಅದು ವಿದಾಯ ಹೇಳುವ ಸಮಯ!

ಸಾಮಾನ್ಯವಾಗಿ ಉದ್ಯೋಗಿಯೊಬ್ಬರಿಗೆ ಕಂಪನಿಯಲ್ಲಿ ಕೊನೆಯ ಕೆಲಸದ ದಿನ ಎಂದರೆ ಬಾಕಿ ಇರುವ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿ, ತಮ್ಮ ಹುದ್ದೆಯ ಜವಾಬ್ದಾರಿಗಳನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿ, ಸಹೋದ್ಯೋಗಿಗಳಿಗೆ ವಿದಾಯ ಹೇಳುವ ಸಮಯ. ಆದರೆ, ರಿಮೋಟ್ ಮೂಲಕ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರಿಗೆ ತಮ್ಮ ಕೊನೆಯ ದಿನದಂದು ಅತ್ಯಂತ ವಿಚಿತ್ರ ಹಾಗೂ ಮುಜುಗರದ ಅನುಭವ ಎದುರಾಗಿದೆ. ರಾಜೀನಾಮೆ ನೀಡಿ ಉದ್ಯೋಗ ಅಧಿಕೃತವಾಗಿ ಮುಗಿದ ನಂತರವೂ ಬಾಸ್ ತಮಗೆ ಹೊಸ ಹೊಸ ಕೆಲಸ ನೀಡುತ್ತಿದ್ದಾರೆ ಎಂದು ಉದ್ಯೋಗಿಯೊಬ್ಬರು ರೆಡ್ಡಿಟ್ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಉದ್ಯೋಗಿ ಹೇಳಿದ್ದೇನು?
Image Credit : Gemnini

ಉದ್ಯೋಗಿ ಹೇಳಿದ್ದೇನು?

ಉದ್ಯೋಗಿ ಹಂಚಿಕೊಂಡ ಪೋಸ್ಟ್ ಪ್ರಕಾರ, ಅವರು ಸಂಸ್ಥಾಪಕರೂ ಸೇರಿದಂತೆ ಕೇವಲ ನಾಲ್ಕು ಜನರಿದ್ದ ಸಣ್ಣ ಸ್ಟಾರ್ಟ್‌ಅಪ್ ಒಂದರಲ್ಲಿ ಪೂರ್ಣಾವಧಿ ಕಿರಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಉಳಿದ ಮೂವರು ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಂಪನಿಯಲ್ಲಿ ಯಾವುದೇ ಮಾನವ ಸಂಪನ್ಮೂಲ (HR) ವಿಭಾಗವಿರಲಿಲ್ಲ ಮತ್ತು ಅವರು ನಿರ್ಗಮಿಸುವ ಮುನ್ನ ಆ ಹುದ್ದೆಗೆ ಬೇರೆ ಯಾರನ್ನೂ ನೇಮಕ ಮಾಡಿರಲಿಲ್ಲ. ತಮ್ಮ ಕೊನೆಯ ದಿನದಂದು ಬೆಳಗಿನ ಸಭೆಯಲ್ಲಿ ಮ್ಯಾನೇಜರ್ ಸಾಲು ಸಾಲು ಸಣ್ಣ ಕೆಲಸಗಳನ್ನು ನೀಡಿದರು. 'ಕೊನೆಯ ದಿನ' ಎಂಬುದನ್ನು ಮ್ಯಾನೇಜರ್ ಮರೆತಿರಬಹುದು ಎಂದು ಭಾವಿಸಿದ ಉದ್ಯೋಗಿ ಆ ಕೆಲಸಗಳನ್ನು ಪೂರ್ಣಗೊಳಿಸಿದರು. ಆದರೆ, ದಿನದ ಕೊನೆಯಲ್ಲಿ ಪೂರ್ಣಗೊಳಿಸಲು ಹಲವು ಗಂಟೆಗಳು ಬೇಕಾಗುವ ಮತ್ತೊಂದು ದೊಡ್ಡ ಕೆಲಸವನ್ನು ವಹಿಸಲಾಯಿತು. ಅದನ್ನು ಮುಗಿಸಿದ ಮೇಲೆಯೂ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿದ್ದವು.

Related Articles

Related image1
Police Job: 3991 ಪೇದೆ ನೇಮಕಾತಿ ಪರೀಕ್ಷೆ: ಮೊದಲ ಬಾರಿಗೆ ಒಎಂಆರ್ ದೊಡ್ಡ ಬದಲಾವಣೆ, ಅಭ್ಯರ್ಥಿಗಳೇ ಈ ವಿಷಯ ತಿಳಿದಿರಲಿ!
34
ಮ್ಯಾನೇಜರ್‌ ಹೇಳಿದ್ದೇನು?
Image Credit : Gemnini

ಮ್ಯಾನೇಜರ್‌ ಹೇಳಿದ್ದೇನು?

ಕಂಪನಿಯು ಮರುದಿನವೇ ಉತ್ಪನ್ನ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರಿಂದ, ಮುಂದಿನ 10 ದಿನಗಳ ಕಾಲ ಲಭ್ಯವಿದ್ದಾಗ ಸಣ್ಣ ಕೆಲಸಗಳನ್ನು ಮಾಡಿಕೊಡುವಂತೆ ಮ್ಯಾನೇಜರ್ ವಿನಂತಿಸಿದರು. ಕಂಪನಿಯಲ್ಲಿ ನೀಡುತ್ತಿದ್ದ ಕಡಿಮೆ ವೇತನವೇ ರಾಜೀನಾಮೆಗೆ ಮುಖ್ಯ ಕಾರಣವಾಗಿದ್ದರೂ, ಉದ್ಯೋಗಿ ವೈಯಕ್ತಿಕ ಕಾರಣ ನೀಡಿ ಕೆಲಸ ಬಿಡುತ್ತಿದ್ದರು. ಮ್ಯಾನೇಜರ್ ಅವರ ಈ ದಿಢೀರ್ ವಿನಂತಿಗೆ 'ಹೌದು' ಎನ್ನಲು ತಮಗೆ ತೀವ್ರ ಮುಜುಗರ ಮತ್ತು ಒತ್ತಡ ಉಂಟಾಯಿತು ಎಂದು ಉದ್ಯೋಗಿ ಬರೆದುಕೊಂಡಿದ್ದಾರೆ.

44
ಪೋಸ್ಟ್‌ ಫುಲ್‌ ವೈರಲ್!
Image Credit : Gemnini

ಪೋಸ್ಟ್‌ ಫುಲ್‌ ವೈರಲ್!

ರೆಡ್ಡಿಟ್‌ನ 'TwoXIndia' ಸಮುದಾಯದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಲವು ನೆಟ್ಟಿಗರು ಉದ್ಯೋಗಿಗೆ ಬೆಂಬಲವಾಗಿ ನಿಂತು ಉದ್ಯೋಗದಾತರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೋಟಿಸ್ ಅವಧಿಯು ಹಸ್ತಾಂತರಕ್ಕಾಗಿಯೇ ಹೊರತು ಹೊಸ ಕೆಲಸಗಳನ್ನು ಸ್ವೀಕರಿಸುವುದಕ್ಕಲ್ಲ, ಇದು ನಿಮ್ಮ ಕೊನೆಯ ದಿನ ಎಂಬುದನ್ನು ನೆನಪಿಸಿ ಬಾಕಿ ಕೆಲಸಗಳನ್ನು ಹೊಸಬರಿಗೆ ಹಸ್ತಾಂತರಿಸಿ ಎಂದು ಒಬ್ಬ ಬಳಕೆದಾರರು ಸಲಹೆ ನೀಡಿದರು. ಮ್ಯಾನೇಜರ್‌ಗಳು ಉದ್ಯೋಗಿಗಳನ್ನು ಒದ್ದೆ ಬಟ್ಟೆಯಿಂದ ನೀರು ಹಿಂಡಿದಂತೆ ಕೊನೆಯ ಹಂತದವರೆಗೂ ಹಿಂಡಿ ಹಿಂಡಿ ಕೆಲಸ ತೆಗೆಯುತ್ತಾರೆ ಎಂದು ಮತ್ತೊಬ್ಬರು ಟೀಕಿಸಿದರು. ಇನ್ನು ಕೆಲವರಂತೂ, ಅಧಿಕೃತವಾಗಿ ಕೆಲಸ ಮುಗಿದ ನಂತರವೂ ಕೆಲಸ ಮಾಡುವುದು ಅಪಾಯಕಾರಿ, ಒಂದು ವೇಳೆ ನಿಮ್ಮ ಕೆಲಸದಲ್ಲಿ ಏನಾದರೂ ತಪ್ಪಾದರೆ ಕಂಪನಿಯು ನಿಮ್ಮ ಮೇಲೆಯೇ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ತಕ್ಷಣವೇ ಕೆಲಸ ನಿಲ್ಲಿಸಿ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಉದ್ಯೋಗಗಳು
ಸುದ್ದಿ
ವೈರಲ್ ಸುದ್ದಿ
ವೈರಲ್ ವಿಡಿಯೋ
Latest Videos
Recommended Stories
Recommended image1
ಸಂಬಳದ ಬಗ್ಗೆ ಕೇಳಿದ್ದಕ್ಕೆ ಉದ್ಯೋಗ ಕಿತ್ತುಕೊಂಡ HR: ರೆಡ್ಡಿಟ್‌ನಲ್ಲಿ ಚಾಟ್ ಸ್ಕ್ರೀನ್‌ಶಾಟ್ ವೈರಲ್!
Recommended image2
ಸಾವಿನಲ್ಲೂ ಸಾರ್ಥಕತೆ: ಕಳೆದುಕೊಂಡ ಮಗನ ಎದೆಬಡಿತ ಬೇರೊಬ್ಬ ಮಗುವಿನಲ್ಲಿ ಜೀವಂತ – ಕಣ್ಣೀರಾದ ತಾಯಿ!
Recommended image3
ಈ ಒಂದು ಕಾರಣಕ್ಕಾಗಿ ಬರೋಬ್ಬರಿ ₹66 ಲಕ್ಷ ಸಂಬಳದ ಉದ್ಯೋಗ ಬಿಟ್ಟು, ರಿಸೆಪ್ಶನಿಸ್ಟ್ ಆದ ಮಹಿಳೆ!
Related Stories
Recommended image1
Police Job: 3991 ಪೇದೆ ನೇಮಕಾತಿ ಪರೀಕ್ಷೆ: ಮೊದಲ ಬಾರಿಗೆ ಒಎಂಆರ್ ದೊಡ್ಡ ಬದಲಾವಣೆ, ಅಭ್ಯರ್ಥಿಗಳೇ ಈ ವಿಷಯ ತಿಳಿದಿರಲಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved