MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಜೆನ್‌ ಜಿ 'ಜಿರಳೆ' ಪೋಸ್ಟ್‌ಗೆ ಸಮರ್ಥನೆ; ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟ ಕಂಗನಾ!

ಜೆನ್‌ ಜಿ 'ಜಿರಳೆ' ಪೋಸ್ಟ್‌ಗೆ ಸಮರ್ಥನೆ; ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟ ಕಂಗನಾ!

ಯಾವುದಾದರೊಂದು ವಿಷಯದ ಬಗ್ಗೆ ನೇರವಾಗಿ ಮಾತನಾಡಿ ಸುದ್ದಿಯಲ್ಲಿರುವ ಕಂಗನಾ, ಇತ್ತೀಚೆಗೆ  ‘ಜೆನ್ ಜಿ’ ಪ್ರತಿಭಟನಾಕಾರರ ವಿರುದ್ಧ ಯುದ್ಧ ಸಾರಿದ್ದಾರೆ. ಟ್ರೋಲರ್‌ಗಳು ಕಂಗನಾರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಸಿ ಕಾಲೆಳೆದಿದ್ದಕ್ಕೆ ಇದೀಗ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ, ನೋಡಿ..

2 Min read
Author : Shriram Bhat
Published : Aug 01 2026, 02:45 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

Kangana Ranaut-Zen G Trollers War: ಬಾಲಿವುಡ್‌ನ ‘ಕ್ವೀನ್’ ವರ್ಸಸ್ ಟ್ರೋಲರ್ಸ್: ಜೆನ್ ಝಡ್ ವಿರುದ್ಧ ಕೆಂಡ ಕಾರಿದ ಸಂಸದೆ ಕಂಗನಾ!

ಬಾಲಿವುಡ್‌ನ ಫೈರ್ ಬ್ರಾಂಡ್ ನಟಿ, ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಎಂದರೆ ಅಲ್ಲಿ ವಿವಾದಗಳು ಮನೆ ಮಾಡಿರುತ್ತವೆ. ಸದಾ ಯಾವುದಾದರೊಂದು ವಿಷಯದ ಬಗ್ಗೆ ನೇರವಾಗಿ ಮಾತನಾಡಿ ಸುದ್ದಿಯಲ್ಲಿರುವ ಕಂಗನಾ, ಈಗ ‘ಜೆನ್ ಝಡ್’ (Gen Z) ಪ್ರತಿಭಟನಾಕಾರರ ವಿರುದ್ಧ ಯುದ್ಧ ಸಾರಿದ್ದಾರೆ. ಆದರೆ ಈ ಬಾರಿ ಟ್ರೋಲರ್‌ಗಳು ಕಂಗನಾ ಅವರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಸಿ ಅವರನ್ನು ಕಾಲೆಳೆಯಲು ಶುರು ಮಾಡಿದ್ದು, ಅದಕ್ಕೆ ಕಂಗನಾ ನೀಡಿರುವ ತಿರುಗೇಟು ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಏನಿದು ‘ಜಿರಳೆ’ ವಿವಾದ?

ಇತ್ತೀಚೆಗೆ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಆಕ್ರೋಶ ಹೊರಹಾಕಿದ್ದ ಕಂಗನಾ, "ಭಾರತವು ಸಾಂಸ್ಕೃತಿಕವಾಗಿ ಶ್ರೀಮಂತವಾದ ದೇಶ. ಆದರೆ ನೀವು ನಿಮ್ಮನ್ನು ಜಿರಳೆಗಳೆಂದು (Cockroaches) ಕರೆದುಕೊಳ್ಳುತ್ತಿದ್ದೀರಿ ಮತ್ತು ಅದೇ ರೀತಿ ವರ್ತಿಸುತ್ತಿದ್ದೀರಿ. ಜಗತ್ತಿಗೆ ನಿಮ್ಮ ಅಸಹ್ಯ ಮತ್ತು ಕಸವನ್ನು ತೋರಿಸುತ್ತಿದ್ದೀರಷ್ಟೇ" ಎಂದು ಹರಿಹಾಯ್ದಿದ್ದರು. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

Related Articles

Related image1
ಪ್ರೊಟೀನ್ ಶೇಕ್ ಕುಡಿದ್ರೆ ಬುದ್ಧಿಹೀನ ಆಗ್ತಾರೆ - ಫಿಟ್ನೆಸ್ ಪ್ರಿಯರಿಗೆ ಆಘಾತ ತಂದ ಕಂಗನಾ ಹೇಳಿಕೆ
Related image2
ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗ ಜಯಕೃಷ್ಣಗೆ ಬೆಂಬಲ ನೀಡದ 'ಪ್ರಿನ್ಸ್‌' ಹಿಂದಿರೋದು ಆ 'ರಹಸ್ಯ ಕಾರಣ'ವೇ?
37
Image Credit : Instagram

ಕಂಗನಾಗೆ ಟಕ್ಕರ್ ನೀಡಿದ ಟ್ರೋಲರ್ಸ್:

ಕಂಗನಾ ಅವರ ಈ ಕಟು ಟೀಕೆಯನ್ನು ಸಹಿಸದ ನೆಟ್ಟಿಗರು, ಕಂಗನಾ ಅವರೇ ನಟಿಸಿದ ಸಿನಿಮಾಗಳ ಬೋಲ್ಡ್ ದೃಶ್ಯಗಳು ಹಾಗೂ ವಿಭಿನ್ನ ಪಾತ್ರಗಳ ಕ್ಲಿಪ್ಪಿಂಗ್‌ಗಳನ್ನು ಹಂಚಿಕೊಳ್ಳಲು ಶುರು ಮಾಡಿದರು. "ಸಿನಿಮಾದಲ್ಲಿ ಇಂತಹ ಪಾತ್ರಗಳನ್ನು ಮಾಡುವ ನೀವು, ಈಗ ಯುವಕರಿಗೆ ಬುದ್ಧಿ ಹೇಳುತ್ತಿದ್ದೀರಾ?" ಎಂಬರ್ಥದಲ್ಲಿ ಟ್ರೋಲ್ ಮಾಡಲಾರಂಭಿಸಿದರು.

47
Image Credit : Instagram

ಟ್ರೋಲರ್‌ಗಳಿಗೆ ಕಂಗನಾ ‘ಖಡಕ್’ ಆನ್ಸರ್:

ತಮ್ಮನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದವರಿಗೆ ಕಂಗನಾ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ತಕ್ಕ ಉತ್ತರ ನೀಡಿದ್ದಾರೆ. "ನನ್ನ ಚಲನಚಿತ್ರದ ಪಾತ್ರಗಳ ತುಣುಕುಗಳನ್ನು ನೀವು ಬಳಸುತ್ತಿದ್ದೀರಿ. ಆ ಪಾತ್ರಗಳನ್ನು ನಿರ್ವಹಿಸಲು ನಾನು ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತೇನೆ. ನನ್ನ ಸುತ್ತ ಭದ್ರತಾ ಪಡೆಗಳಿರುತ್ತವೆ, ಅದು ಶೋ ಬ್ಯುಸಿನೆಸ್. ಆದರೆ, ಅದೇ ರೀತಿ ರಸ್ತೆಯಲ್ಲಿ ಅಥವಾ ಶಾಲಾ ಸಮಾರಂಭಗಳಲ್ಲಿ ದುರ್ಬಲ ಹದಿಹರೆಯದವರು ವರ್ತಿಸಬಹುದು ಎಂದು ನೀವು ಮನವರಿಕೆ ಮಾಡುತ್ತಿರುವುದು ಸರಿಯೇ?" ಎಂದು ಪ್ರಶ್ನಿಸಿದ್ದಾರೆ.

57
Image Credit : Instagram

ಮುಂದುವರಿದು ಮಾತನಾಡಿದ ಅವರು, "ಯುವಕರನ್ನು ದಾರಿ ತಪ್ಪಿಸಬೇಡಿ. ಸಿನಿಮಾದ ಪಾತ್ರಕ್ಕೂ ನೈಜ ಜೀವನಕ್ಕೂ ವ್ಯತ್ಯಾಸವಿದೆ. ಇಂದು ನೀವು ಇತರರನ್ನು ದಾರಿ ತಪ್ಪಿಸುತ್ತೀರಿ, ನಾಳೆ ಅದು ನಿಮಗೇ ತಿರುಗುಬಾಣವಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದ ಈ ವಾತಾವರಣದಿಂದ ಬೇಸತ್ತು ತಮಗೆ ‘ಡಿಜಿಟಲ್ ಡಿಟಾಕ್ಸ್’ (Digital Detox) ಅಗತ್ಯವಿದೆ ಎಂದಿದ್ದಾರೆ.

67
Image Credit : Instagram

ಚಿತ್ರರಂಗದಲ್ಲಿ ಕಂಗನಾ 20 ವರ್ಷಗಳ ಪಯಣ:

ಕಂಗನಾ ಚಿತ್ರರಂಗಕ್ಕೆ ಕಾಲಿಟ್ಟು ಈಗ ಭರ್ತಿ 20 ವರ್ಷಗಳಾಗಿವೆ. 2006ರಲ್ಲಿ ಕೇವಲ 18ನೇ ವಯಸ್ಸಿನಲ್ಲಿ 'ಗ್ಯಾಂಗ್‌ಸ್ಟರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ಹಿಮಾಚಲದ ಬೆಡಗಿ, ಅಂದಿನಿಂದ ಇಂದಿನವರೆಗೆ ಸೋಲನ್ನೊಪ್ಪದ ಹೋರಾಟಗಾರ್ತಿಯಂತೆ ಬೆಳೆದಿದ್ದಾರೆ. ಮೊದಲ ಸಿನಿಮಾದಲ್ಲೇ ಅದ್ಭುತ ನಟನೆ ತೋರಿ ಪ್ರಶಂಸೆ ಗಳಿಸಿದ್ದ ಕಂಗನಾ, ಇಂದು ರಾಜಕೀಯದಲ್ಲೂ ತಮ್ಮದೇ ಆದ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

77
Image Credit : Instagram

ಒಟ್ಟಿನಲ್ಲಿ, ಸಿನಿಮಾದಲ್ಲಿ ಅಬ್ಬರಿಸುತ್ತಿದ್ದ ಈ ‘ಕ್ವೀನ್’, ಈಗ ಸಂಸತ್ತಿನಲ್ಲೂ ಮತ್ತು ಸೋಶಿಯಲ್ ಮೀಡಿಯಾದಲ್ಲೂ ತನ್ನ ವಿರೋಧಿಗಳ ವಿರುದ್ಧ ಘರ್ಜಿಸುತ್ತಿರುವುದು ಮಾತ್ರ ಸುಳ್ಳಲ್ಲ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಕಂಗನಾ ರಣಾವತ್
ಸಾಮಾಜಿಕ ಮಾಧ್ಯಮ
ಮನರಂಜನಾ ಸುದ್ದಿ
Latest Videos
Recommended Stories
Recommended image1
ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗ ಜಯಕೃಷ್ಣಗೆ ಬೆಂಬಲ ನೀಡದ 'ಪ್ರಿನ್ಸ್‌' ಹಿಂದಿರೋದು ಆ 'ರಹಸ್ಯ ಕಾರಣ'ವೇ?
Recommended image2
ಲಿಪ್‌ಸ್ಟಿಕ್‌ ತಿಂದ ಕಥೆ ಹೇಳುತ್ತಲೇ, Gen G ಎಮೋಷನ್ಸ್‌ ಬಗ್ಗೆ ಹೀಗ್ಯಾಕಂದ್ರು ನಟಿ ಸುಧಾರಾಣಿ!
Recommended image3
Toxic: ಯಶ್ 'ಬ್ಲಾಕ್ & ವೈಟ್, ಹ್ಯಾಟ್-ಗನ್ ಮ್ಯಾನ್' ಪೋಸ್ಟರ್‌ ಲುಕ್ ನೋಡಿ ಜಗತ್ತು ಹೇಳ್ತಿರೋದೇನು?
Related Stories
Recommended image1
ಪ್ರೊಟೀನ್ ಶೇಕ್ ಕುಡಿದ್ರೆ ಬುದ್ಧಿಹೀನ ಆಗ್ತಾರೆ - ಫಿಟ್ನೆಸ್ ಪ್ರಿಯರಿಗೆ ಆಘಾತ ತಂದ ಕಂಗನಾ ಹೇಳಿಕೆ
Recommended image2
ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗ ಜಯಕೃಷ್ಣಗೆ ಬೆಂಬಲ ನೀಡದ 'ಪ್ರಿನ್ಸ್‌' ಹಿಂದಿರೋದು ಆ 'ರಹಸ್ಯ ಕಾರಣ'ವೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved