MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಭಾರತದ ಪರ ಅತಿ ಹೆಚ್ಚು ODI ವಿಶ್ವಕಪ್ ಆಡಿದ ಟಾಪ್-7 ಕ್ರಿಕೆಟಿಗರು ಯಾರು? ಒಬ್ಬರು ಕನ್ನಡಗರು, ದ್ರಾವಿಡ್‌ ಅಲ್ಲ

ಭಾರತದ ಪರ ಅತಿ ಹೆಚ್ಚು ODI ವಿಶ್ವಕಪ್ ಆಡಿದ ಟಾಪ್-7 ಕ್ರಿಕೆಟಿಗರು ಯಾರು? ಒಬ್ಬರು ಕನ್ನಡಗರು, ದ್ರಾವಿಡ್‌ ಅಲ್ಲ

ಭಾರತವು ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದು, ಈ ಲೇಖನವು ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಟಾಪ್-7 ಆಟಗಾರರ ಪಟ್ಟಿಯನ್ನು ನೀಡುತ್ತದೆ. ಸಚಿನ್ ತೆಂಡೂಲ್ಕರ್ 6 ವಿಶ್ವಕಪ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

2 Min read
Author : Ganesh Mabla Gowda
Published : Aug 01 2026, 05:48 PM IST
Share this Photo Gallery
  • FB
  • TW
  • Linkdin
  • Whatsapp
18
ಟಾಪ್ 7 ಆಟಗಾರರ ವಿವರ
Image Credit : X/BCCI

ಟಾಪ್-7 ಆಟಗಾರರ ವಿವರ

ಬೆಂಗಳೂರು: ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮೊದಲ ಬಾರಿಗೆ 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದರೆ, 2011 ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಆದರೆ ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ ಗೊತ್ತಾ? ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಶ್ವಕಪ್ ಆಡಿದ ಟಾಪ್-7 ಆಟಗಾರರ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
1. ಸಚಿನ್ ತೆಂಡೂಲ್ಕರ್ (Sachin Tendulkar)
Image Credit : stockPhoto

1. ಸಚಿನ್ ತೆಂಡೂಲ್ಕರ್ (Sachin Tendulkar)

ಭಾರತದ ಪರ ಅತಿ ಹೆಚ್ಚು ವಿಶ್ವಕಪ್ ಆಡಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೋಬ್ಬರಿ 6 ಏಕದಿನ ವಿಶ್ವಕಪ್‌ಗಳನ್ನು ಆಡಿದ್ದಾರೆ. 1992 ರಲ್ಲಿ ತಮ್ಮ ಮೊದಲ ವಿಶ್ವಕಪ್ ಆಡಿದ್ದ ಸಚಿನ್, 2011 ರಲ್ಲಿ ಕೊನೆಯ ವಿಶ್ವಕಪ್ ಆಡಿದರು. ಅದೇ ವರ್ಷ ಭಾರತ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ವಿಶೇಷ.

Related Articles

Related image1
ಕೊಹ್ಲಿ, ಸಚಿನ್‌, ಧೋನಿ ಬಳಿ ಇದು ಆಗಲಿಲ್ಲ.. ಅಪರೂಪದ ದಾಖಲೆಗೆ KL ರಾಹುಲ್‌ ರೆಡಿ..!
Related image2
11 ಬೌಂಡರಿ, 5 ಸಿಕ್ಸರ್: ಆರ್‌ಸಿಬಿ ಮಾಜಿ ಕ್ರಿಕೆಟಿಗನಿಂದ ವಿಸ್ಪೋಟಕ ಶತಕ! ಆತನನ್ನು ಕೈಬಿಟ್ಟು ಬೆಂಗಳೂರು ಫ್ರಾಂಚೈಸಿಯಿಂದ ಮಹಾ ಎಡವಟ್ಟು?
38
2. ಕಪಿಲ್ ದೇವ್ (Kapil Dev)
Image Credit : X

2. ಕಪಿಲ್ ದೇವ್ (Kapil Dev)

ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 4 ವಿಶ್ವಕಪ್‌ಗಳನ್ನು ಆಡಿದ್ದಾರೆ. ಇವರು 1979 ರಲ್ಲಿ ಮೊದಲ ವಿಶ್ವಕಪ್ ಆಡಿದ್ದರೆ, 1992 ರಲ್ಲಿ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡಿದ್ದರು.

48
3. ಮೊಹಮ್ಮದ್ ಅಜರುದ್ದೀನ್ (Mohammad Azharuddin)
Image Credit : x

3. ಮೊಹಮ್ಮದ್ ಅಜರುದ್ದೀನ್ (Mohammad Azharuddin)

ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ 4 ವಿಶ್ವಕಪ್ ಆಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿದ್ದಾರೆ. 1987 ರಲ್ಲಿ ಇವರು ಮೊದಲ ವಿಶ್ವಕಪ್ ಆಡಿದ್ದರೆ, 1999 ರಲ್ಲಿ ತಮ್ಮ ಕೊನೆಯ ವಿಶ್ವಕಪ್ ಪಂದ್ಯವನ್ನಾಡಿದರು.

58
4. ಜವಗಲ್ ಶ್ರೀನಾಥ್ (Javagal Srinath)
Image Credit : Getty

4. ಜವಗಲ್ ಶ್ರೀನಾಥ್ (Javagal Srinath)

ಕರ್ನಾಟಕದ ಹೆಮ್ಮೆ ಹಾಗೂ ಭಾರತದ ಮಾಜಿ ವೇಗಿ ಜವಗಲ್ ಶ್ರೀನಾಥ್ ಕೂಡ ಭಾರತದ ಪರ 4 ಏಕದಿನ ವಿಶ್ವಕಪ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಶ್ರೀನಾಥ್ ಅವರ ಮೊದಲ ವಿಶ್ವಕಪ್ 1992 ರದ್ದಾಗಿದ್ದರೆ, 2003 ರಲ್ಲಿ ಕೊನೆಯ ವಿಶ್ವಕಪ್ ಆಡಿದ್ದರು.

68
5. ಎಂ.ಎಸ್. ಧೋನಿ (MS Dhoni)
Image Credit : Getty

5. ಎಂ.ಎಸ್. ಧೋನಿ (MS Dhoni)

ಭಾರತಕ್ಕೆ 28 ವರ್ಷಗಳ ಬಳಿಕ 2011 ರಲ್ಲಿ ಎರಡನೇ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಎಂ.ಎಸ್. ಧೋನಿ ಕೂಡ 4 ವಿಶ್ವಕಪ್‌ಗಳನ್ನಾಡಿದ್ದಾರೆ. 2007 ರಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಆಡಿದ್ದ ಧೋನಿ, 2019 ರಲ್ಲಿ ಕೊನೆಯ ವಿಶ್ವಕಪ್ ಆಡಿದರು.

78
6. ವಿರಾಟ್ ಕೊಹ್ಲಿ (Virat Kohli)
Image Credit : bcci

6. ವಿರಾಟ್ ಕೊಹ್ಲಿ (Virat Kohli)

ಈ ಪಟ್ಟಿಯಲ್ಲಿ ರನ್‌ ಮಷೀನ್ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಸದ್ಯ ಸಕ್ರಿಯ ಆಟಗಾರರಾಗಿರುವ ಕೊಹ್ಲಿ ಈಗಾಗಲೇ 4 ಏಕದಿನ ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 2011 ರಲ್ಲಿ ಮೊದಲ ವಿಶ್ವಕಪ್ ಆಡಿದ್ದ ಅವರು, ಕಳೆದ 2023 ರಲ್ಲಿ ತಮ್ಮ 4ನೇ ವಿಶ್ವಕಪ್ ಆಡಿದ್ದರು. ಮುಂಬರುವ 5ನೇ ವಿಶ್ವಕಪ್‌ನಲ್ಲೂ ಅವರು ಆಡುವ ನಿರೀಕ್ಷೆಯಿದೆ.

88
7. ರೋಹಿತ್ ಶರ್ಮಾ (Rohit Sharma)
Image Credit : Asianet News

7. ರೋಹಿತ್ ಶರ್ಮಾ (Rohit Sharma)

ಭಾರತ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಹಿಟ್‌ಮ್ಯಾನ್ ಈಗಾಗಲೇ 3 ಏಕದಿನ ವಿಶ್ವಕಪ್‌ಗಳನ್ನು ಆಡಿದ್ದಾರೆ. ರೋಹಿತ್ ತಮ್ಮ ಮೊದಲ ವಿಶ್ವಕಪ್ ಅನ್ನು 2015 ರಲ್ಲಿ ಮತ್ತು ಕೊನೆಯ ವಿಶ್ವಕಪ್ ಅನ್ನು 2023 ರಲ್ಲಿ ಆಡಿದ್ದರು. ಸದ್ಯ ಸಕ್ರಿಯ ಆಟಗಾರರಾಗಿರುವ ರೋಹಿತ್ ಶರ್ಮಾ ಅವರು ಮುಂದಿನ ದಿನಗಳಲ್ಲಿ ತಮ್ಮ 4ನೇ ವಿಶ್ವಕಪ್ ಆಡುವ ಅವಕಾಶ ಹೊಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಟೀಮ್ ಇಂಡಿಯಾ
ಸಚಿನ್ ತೆಂಡೂಲ್ಕರ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಎಂ.ಎಸ್. ಧೋನಿ
Latest Videos
Recommended Stories
Recommended image1
ವೈಭವ್ ಸೂರ್ಯವಂಶಿ ಭಾರತ ಪರ ಮೊದಲ 6 ಪಂದ್ಯಗಳಿಂದ 193 ರನ್..! ಕೊಹ್ಲಿ ಮೊದಲ ಆರು ಟಿ20 ಮ್ಯಾಚ್‌ನಲ್ಲಿ ಗಳಿಸಿದ ರನ್ ಎಷ್ಟು?
Recommended image2
Gautam Gambhir: ಆ ಸ್ಟಾರ್‌ಗೆ ಇದೇ ಕೊನೆಯ ಚಾನ್ಸ್! ಗಂಭೀರ್ ತಂಡದಿಂದ ಡ್ರಾಪ್ ಮಾಡೋ ಮುನ್ನ ಜಾಗ ಉಳಿಸಿಕೊಳ್ಳಲು 'ಆ ಪ್ರಭಾವಿ' ಬೆನ್ನು ಬಿದ್ದ ಕ್ರಿಕೆಟರ್!
Recommended image3
11 ಬೌಂಡರಿ, 5 ಸಿಕ್ಸರ್: ಆರ್‌ಸಿಬಿ ಮಾಜಿ ಕ್ರಿಕೆಟಿಗನಿಂದ ವಿಸ್ಪೋಟಕ ಶತಕ! ಆತನನ್ನು ಕೈಬಿಟ್ಟು ಬೆಂಗಳೂರು ಫ್ರಾಂಚೈಸಿಯಿಂದ ಮಹಾ ಎಡವಟ್ಟು?
Related Stories
Recommended image1
ಕೊಹ್ಲಿ, ಸಚಿನ್‌, ಧೋನಿ ಬಳಿ ಇದು ಆಗಲಿಲ್ಲ.. ಅಪರೂಪದ ದಾಖಲೆಗೆ KL ರಾಹುಲ್‌ ರೆಡಿ..!
Recommended image2
11 ಬೌಂಡರಿ, 5 ಸಿಕ್ಸರ್: ಆರ್‌ಸಿಬಿ ಮಾಜಿ ಕ್ರಿಕೆಟಿಗನಿಂದ ವಿಸ್ಪೋಟಕ ಶತಕ! ಆತನನ್ನು ಕೈಬಿಟ್ಟು ಬೆಂಗಳೂರು ಫ್ರಾಂಚೈಸಿಯಿಂದ ಮಹಾ ಎಡವಟ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved