Published : Feb 08, 2026, 06:01 AM ISTUpdated : Feb 08, 2026, 11:27 PM IST

Karnataka News Live: ರಾಸಲೀಲೆ ರಾಮಚಂದ್ರ ರಾವ್ ಸಸ್ಪೆಂಡ್ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಮಾನತು; ಈ ಬಾರಿ ಕಾರಣವನ್ನೇ ತಿಳಿಸಿಲ್ಲ!

ಸಾರಾಂಶ

ವಿಜಯಪುರ: ಡಿಸಿಎಂ ಡಿ.ಕೆ.ಶಿವಕುಮಾರ್‌ ಜತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದರೆ ಆತ್ಮಹತ್ಯೆ ಮಾಡಿಕೊಂಡಂತೆ, ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಒಪ್ಪಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಡಿಕೆಶಿಯೊಂದಿಗೆ ಸೇರಿ ಬಿಜೆಪಿ ಸರ್ಕಾರ ಮಾಡುತ್ತೆ ಅನ್ನೋ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸದನದಲ್ಲಿ ಅಬಕಾರಿ ಸಚಿವರ ವಿರುದ್ಧ ಹೋರಾಟ ಮಾಡುತ್ತಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರು ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್‌ ವಿರುದ್ಧ ಆರೋಪ ಕೇಳಿ ಬಂದಾಗ ಇವರ್ಯಾರು ಹೋರಾಟ ಮಾಡಲಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಆರೋಪ ಕೇಳಿ ಬಂದಾಗ ಗಂಭೀರ ಹೋರಾಟ ಮಾಡಲಿಲ್ಲ. ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.

Bagalkot CPI HR Patil Suspend

11:27 PM (IST) Feb 08

ರಾಸಲೀಲೆ ರಾಮಚಂದ್ರ ರಾವ್ ಸಸ್ಪೆಂಡ್ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಮಾನತು; ಈ ಬಾರಿ ಕಾರಣವನ್ನೇ ತಿಳಿಸಿಲ್ಲ!

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ವೃತ್ತದ ಸಿಪಿಐ ಹೆಚ್.ಆರ್. ಪಾಟೀಲ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ. ಚೇತನ್ ಸಿಂಗ್ ರಾಠೋರ್ ಅಮಾನತುಗೊಳಿಸಿದ್ದಾರೆ. ಆದರೆ, ಪೊಲೀಸ್ ಇಲಾಖೆಯಿಂದ ಅಮಾನತಿಗೆ ನಿಖರ ಕಾರಣವನ್ನೇ ಬಹಿರಂಗಪಡಿಸಿಲ್ಲ.

Read Full Story

10:28 PM (IST) Feb 08

ಭಾನುವಾರವೆಂದು ಬೀಗರ ಮನೆಗೆ ಹೋಗಿದ್ದ ಅಪ್ಪ-ಅಮ್ಮ-ಮಗಳು ಬೈಕ್ ಡಿಕ್ಕಿಯಾಗಿ ಸೇತುವೆ ಮೇಲೆಯೇ ದುರಂತ ಸಾವು!

ಬೀದರ್ ಜಿಲ್ಲೆ ಹುಮನಾಬಾದ್ ಬಳಿ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ನೆಂಟರ ಮನೆಯಿಂದ ವಾಪಸಾಗುತ್ತಿದ್ದ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Read Full Story

08:20 PM (IST) Feb 08

ಕಿರುತೆರೆ ನಟ-ನಟಿಯರ ಮೊದಲ ಕ್ರಷ್​ ಯಾರು? ಕೊನೆಗೂ ರಿವೀಲ್​ ಮಾಡಿದ್ರು ಬಹುದೊಡ್ಡ ಸಿಕ್ರೇಟ್​

ಪ್ರೇಮಿಗಳ ದಿನದ ವಿಶೇಷವಾಗಿ, ಕಿರುತೆರೆಯ ಜನಪ್ರಿಯ ನಟ-ನಟಿಯರ ಮೊದಲ ಕ್ರಷ್ ಯಾರೆಂದು ಕೇಳಲಾಗಿದೆ. ಶಿವು, ಪಾರು, ಕಿರಣ್ ರಾಜ್, ದುರ್ಗಾ ಸೇರಿದಂತೆ ಹಲವು ತಾರೆಯರು ತಮ್ಮ ಶಾಲಾ-ಕಾಲೇಜು ದಿನಗಳ ಪ್ರೀತಿಯ ಗುಟ್ಟನ್ನು ಹಂಚಿಕೊಂಡಿದ್ದಾರೆ. 

Read Full Story

07:09 PM (IST) Feb 08

ಲಕ್ಕುಂಡಿ ನಿಧಿ ಆಯ್ತು, ಜನರ ಕಣ್ಣು ಬಳ್ಳಾರಿಯ ತೆಕ್ಕಲಕೋಟೆ ಮೇಲೆ - ಉತ್ಖನನದ ಸಮಯದಲ್ಲಿ ಸಂಚಲನ

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ,ನಡೆದ ಉತ್ಖನನದಲ್ಲಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಇದರೊಂದಿಗೆ ನವಶಿಲಾಯುಗದ ಜನರ ಆಯುಧಗಳು ಮತ್ತು ವಿಶಿಷ್ಟ ಶವಸಂಸ್ಕಾರ ಪದ್ಧತಿಯ ಕುರುಹುಗಳು ದೊರೆತಿದ್ದು, ಇದು ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.

Read Full Story

06:31 PM (IST) Feb 08

ಕೇಕ್​ ಕಟ್​ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ - ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ, ಸ್ನೇಹಿತನಿಗೆ ಕೇಕ್ ತಿನ್ನಿಸುತ್ತಿರುವ ವಿಡಿಯೋ ಪ್ರೇಮಿಗಳ ದಿನದ ಸಂದರ್ಭದಲ್ಲಿ ವೈರಲ್ ಆಗಿದೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಸ್ವತಃ ರಕ್ಷಿತಾ ಅವರೇ ಮಾಹಿತಿ ನೀಡಿದ್ದಾರೆ. ಅವರು ಹೇಳಿದ್ದೇನು? 

Read Full Story

06:23 PM (IST) Feb 08

Kamalakar Bhat Case - ಜಮೀನ್ದಾರನಿಗೆ ಗಾಳ, ಅಪ್ಪು ಆರ್ಕೆಸ್ಟ್ರಾ ಶುರು; ಸುಚಿತ್ರಾಳ ಮತ್ತೊಂದು ಕರ್ಮಕಾಂಡ ಬಯಲು

Astrologer Kamalakar Bhat News: ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಸಂಬಂಧವು ಈಗ ವಸಂತ್‌ ನಾಯ್ಕ್‌ ಎನ್ನುವವರ ಕೊಲೆಯಲ್ಲಿ ಅಂತ್ಯವಾಗಿದೆ. ಈಗ ಇವರಿಬ್ಬರು ಜೈಲಿನಲ್ಲಿದ್ದಾರೆ. ಈಗ ಸುಚಿತ್ರಾ ಅವರ ಇನ್ನೊಂದು ಸಂಬಂಧ ಬಯಲಾಗಿದೆ.

 

Read Full Story

05:48 PM (IST) Feb 08

'ಗಂಡನಿಲ್ಲದ ಸಮಯದಲ್ಲಿ....!' ಸುಚಿತ್ರಾ ಖಾಸಗಿ ಕ್ಷಣದ ಫೋಟೋಗಳು ವೈರಲ್! ಕಮಲಾಕರ ಭಟ್‌ಗಿಂತ ಮೊದಲು ಈ ಜಮೀನ್ದಾರನ ಜತೆ ಲವ್ವಿಡವ್ವಿ!

ಶಿವಮೊಗ್ಗ: ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ಸೇರಿ ಅಮಾಯಕ ವಸಂತ ನಾಯ್ಕ ಅವರನ್ನು ಹ*ತ್ಯೆ ಮಾಡಿರುವ ವಿಚಾರ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇದರ ನಡುವೆ ಈ ಸುಚಿತ್ರಾ ನವರಂಗಿ ಆಟದ ಮತ್ತೊಂದು ವಿಚಾರ ಬಯಲಾಗಿದೆ.

 

Read Full Story

05:43 PM (IST) Feb 08

ಮೈಸೂರು ಹುಡುಗನಿಗೆ ಅದೃಷ್ಟ ತಂದ ಮಹಾರಾಷ್ಟ್ರದ ಮರಾಠಿ ಸುಂದರಿ - ಕಾಲಿಡುತ್ತಿದ್ದಂತೇ ಡಬಲ್​ ಇನ್​ಕಮ್!

Social Media Influencer: ಇಂದು ಸೋಶಿಯಲ್‌ ಮೀಡಿಯಾವನ್ನು ಅನೇಕರು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೋಡಿಯೊಂದು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತ, ಹೊಸ ಆದಾಯದ ಮೂಲವನ್ನು ಕಂಡುಕೊಂಡಿದೆ.

 

Read Full Story

04:56 PM (IST) Feb 08

ರಕ್ಷಿತಾಗೂ ಕಟ್​ ಮಾಡಲು ಬರಲ್ಲ, ಫ್ಯಾನ್​ಗೂ ಬರಲ್ಲ! ಕಾಲ್​ ಕಟ್​ ಆಗದೇ ಲೈವ್​ನಲ್ಲಿ ಗೋಳು - ಫನ್ನಿ ವಿಡಿಯೋ ವೈರಲ್​

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಲೈವ್​ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಕರೆ ಸ್ವೀಕರಿಸಿದ ಅವರಿಗೆ, ಅದನ್ನು ಕಟ್ ಮಾಡಲು ತಿಳಿಯದೆ ತಬ್ಬಿಬ್ಬಾದರು. ಈ ಮೋಜಿನ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗಿದೆ.
Read Full Story

04:23 PM (IST) Feb 08

ಆ 35 ನಿಮಿಷದ ಕರಾಳತೆ ಬಿಚ್ಚಿಟ್ಟ ಸಂತ್ರಸ್ಥೆ; ಆ ಕಾರಣಕ್ಕೆ ಸುಪಾರಿ ಕೊಟ್ಟು ಗ್ಯಾಂಗ್‌ ರೇ*ಪ್‌ ಮಾಡಿಸಿದ್ರಾ?

Women Spa Assault: ಕೇರಳದಲ್ಲಿ ನಡೆದ ಅತ್ಯಾ*ಚಾರವೊಂದು ನಿಜಕ್ಕೂ ಎಲ್ಲರಿಗೂ ಭಯ ಹುಟ್ಟಿಸಿದೆ. ದ್ವೇಷದ ಕಾರಣಕ್ಕೆ ಸುಪಾರಿ ಕೊಟ್ಟು ಸಾಮೂಹಿಕ ಅತ್ಯಾ*ಚಾರ ಮಾಡಿಸಿದರಾ ಎಂಬ ಪ್ರಶ್ನೆ ಮೂಡಿಸಿದೆ. ಹಾಗಾದರೆ ನಿಜಕ್ಕೂ ಏನಾಯ್ತು?

Read Full Story

03:52 PM (IST) Feb 08

ವಿಜಯಪುರದ ಮಂಗಳೂರಿನಲ್ಲಿ ರೆಡ್ ಬರ್ಡ್ ಪ್ರವೇಟ್ ಜೆಟ್ ಪತನ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಲಘು ವಿಮಾನವೊಂದು ಪತನಗೊಂಡಿದೆ. ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಈ ವಿಮಾನ ಇಂಧನ ಖಾಲಿಯಾದ ಕಾರಣ ಅಪಘಾತಕ್ಕೀಡಾಗಿದೆ.

Read Full Story

03:44 PM (IST) Feb 08

Bhagyalakshmi Serial - ಕೊನೆಯಲ್ಲಿ ಆದಿಯೂ ಬೇಡ, ತಾಂಡವ್‌ನೂ ಬೇಡ; ಕಥೆಗೆ ರೋಚಕ ಟ್ವಿಸ್ಟ್ ಕೊಟ್ಟ ಭಾಗ್ಯ!

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಈಗ ಭಾಗ್ಯ ಮನೆಗೆ ಬಂದು ಕ್ಷಮಿಸು ಎಂದು ಭಿಕ್ಷೆ ಬೇಡುತ್ತಿದ್ದಾನೆ. ಎರಡನೇ ಮದುವೆ ಯೋಚನೆಯಲ್ಲಿದ್ದ ಭಾಗ್ಯಗೆ ಈಗ ತಾಂಡವ್‌ನನ್ನು ಕ್ಷಮಿಸಬೇಕಾ? ಆದಿಯನ್ನು ಮದುವೆ ಆಗಬೇಕಾ ಎಂಬ ಪ್ರಶ್ನೆ ಬಂದಿದೆ.

 

Read Full Story

03:38 PM (IST) Feb 08

Bengaluru ಜಿಬಿಎ ‘ಬಿ’ ಖಾತಾ ನಿವೇಶನ ಮಾಲೀಕರಿಗೆ ಸಿಹಿ ಸುದ್ದಿ; ಸಿಗಲಿದೆ 'ಎ' ಖಾತಾದ ಬಲ

'ಭೂಮಿ ಸ್ವಯಂ ಪರಿವರ್ತನೆ' ತಂತ್ರಾಂಶವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿನ ಲಕ್ಷಾಂತರ 'ಬಿ' ಖಾತಾ ನಿವೇಶನಗಳನ್ನು 'ಎ' ಖಾತಾಗೆ ಸುಲಭವಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದ್ದು, ಇದು ಸಮಯ, ವೆಚ್ಚ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲಿದೆ.

Read Full Story

03:18 PM (IST) Feb 08

Bhagyalakshmi Serial - ಅತ್ತು ಕರೆದು, ತಾಂಡವ್ ಕಾಲು ಹಿಡ್ಕೊಂಡ್ರೂ ಇದೇ ಕಾರಣಕ್ಕೆ ಕ್ಷಮಿಸಲ್ಲ ಎಂದ ಭಾಗ್ಯ

Bhagyalakshmi kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಈಗ ಸಂಪೂರ್ಣ ಬದಲಾಗಿದ್ದಾನೆ. ಭಾಗ್ಯಳ ಬಳಿ ಬಂದು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಎರಡನೇ ಮದುವೆ ಆಗೋ ಆಲೋಚನೆಯಲ್ಲಿದ್ದ ಭಾಗ್ಯ ಈಗ ತಾಂಡವ್‌ನನ್ನು ದೂರ ಮಾಡಿದ್ದಾಳೆ.

 

Read Full Story

03:14 PM (IST) Feb 08

Karnataka - ಒಂದು ವರ್ಷದಲ್ಲಿ 42 ಸಾವಿರ ಖಾತೆ ಬಳಸಿ ಬರೋಬ್ಬರಿ ₹100 ಕೋಟಿ ವಂಚನೆ!

ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ 42,000 ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿ ₹100 ಕೋಟಿಗೂ ಅಧಿಕ ಮೊತ್ತದ ಸೈಬರ್ ವಂಚನೆ ನಡೆದಿದೆ. ಈ ಸಂಬಂಧ 14 ಮಂದಿಯನ್ನು ಬಂಧಿಸಲಾಗಿದ್ದು, ಹಣದ ಆಮಿಷವೊಡ್ಡಿ ತೆರೆಯಲಾದ ಖಾತೆಗಳನ್ನು ಆನ್‌ಲೈನ್ ವಂಚನೆ ಮತ್ತು ಬೆಟ್ಟಿಂಗ್‌ಗೆ ಬಳಸಿಕೊಳ್ಳಲಾಗಿದೆ.

Read Full Story

03:02 PM (IST) Feb 08

Aadi Lakshmi Purana - ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು - ಆ ಘಟನೆ ನೆನೆದ ನಟಿ

ಜೀ ಕನ್ನಡದ 'ಆದಿ ಲಕ್ಷ್ಮಿ ಪುರಾಣ' ಧಾರಾವಾಹಿಯಲ್ಲಿ ಆದಿ ಮತ್ತು ಲಕ್ಷ್ಮಿಯ ಅನಿವಾರ್ಯ ಮದುವೆಯ ಕಥೆ ಸಾಗುತ್ತಿದೆ. ಈ ಮದುವೆಯ ಚಿತ್ರೀಕರಣದ ವೇಳೆ, ನಾಯಕಿ ಆಶಾ ಅಯ್ಯನರ್‌ಗೆ ನಾಯಕ ರಜನೀಶ್ ನಿಜವಾಗಿಯೂ ಮೂರು ಗಂಟು ಹಾಕಿಬಿಡುತ್ತಾರೇನೋ ಎಂಬ ಭಯ ಕಾಡಿತ್ತಂತೆ. ಈ ಬಗ್ಗೆ ನಟಿ ಹೇಳಿದ್ದೇನು?

Read Full Story

02:58 PM (IST) Feb 08

Koppal - ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿ 25 ವರ್ಷದ ಯುವಕನ ದುರಂತ ಸಾವು; ಇಬ್ಬರ ಬಂಧನ

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ, ಸಾರಾಯಿ ಎಂದು ಭಾವಿಸಿ ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿದ ಪರಿಣಾಮ ರಮೇಶ್ ಹೊಸಳ್ಳಿ (25) ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಇತರ ಇಬ್ಬರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story

02:38 PM (IST) Feb 08

Tumakuru - ಚೆಂದದ ಮಂಟಪ, ಸುತ್ತಲೂ ಮಂತ್ರಘೋಷ; ತಾಳಿ ಕಟ್ಟುವ ಹೊತ್ತಿಗೆ ವರನಿಗೆ ಬಿಗ್‌ ಶಾಕ್

ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದೆ ಎರಡನೇ ಮದುವೆಗೆ ಸಿದ್ಧನಾಗಿದ್ದ ಹರಿಪ್ರಸಾದ್‌ಗೆ ಆತನ ಮೊದಲ ಪತ್ನಿ ಲೇಪಾಕ್ಷಿ ಶಾಕ್ ನೀಡಿದ್ದಾರೆ. ತಾಳಿ ಕಟ್ಟುವ ಸಮಯದಲ್ಲಿ ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಆಗಮಿಸಿದ ಆಕೆ, ನಡೆಯುತ್ತಿದ್ದ ಮೋಸದ ಮದುವೆಯನ್ನು ತಡೆದಿದ್ದಾರೆ.
Read Full Story

02:10 PM (IST) Feb 08

Karna Serial - ಕುತಂತ್ರಿಗಳ ಅಟ್ಟಹಾಸಕ್ಕೆ ಜಯ; ನಿಧಿ ಬಾಳಿಗೆ ಕೊನೆಗೂ ಕೊಳ್ಳಿ ಇಟ್ಟ ಸಂಜಯ್!‌ ಛೇ...!

ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಬಾಳು ಬಗೆಹರಿಯೋ ಹಾಗೆ ಕಾಣ್ತಿಲ್ಲ. ಇನ್ನೊಂದು ಕಡೆ ನಿಧಿಗೂ ಕಷ್ಟ ತಪ್ಪುತ್ತಿಲ್ಲ. ಹೌದು, ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಬರುತ್ತವೇ ಇವೆ. ಈಗ ನಿಧಿ ಬಾಳಿಗೆ ಕೊಳ್ಳಿ ಇಡೋಕೆ ಸಂಜಯ್‌ ರೆಡಿಯಾಗಿದ್ದಾನೆ.

 

Read Full Story

02:09 PM (IST) Feb 08

ಮೆಟ್ರೋ ದರ ಏರಿಕೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ - Mr. CM Cut the Dram ಎಂದು ಬರೆದ ಕಪ್ಪು ಟೀ ಶರ್ಟ್ ಧರಿಸಿ ವಿನೂತನ ಪ್ರತಿಭಟನೆ!

ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಆರ್‌ವಿ ರೋಡ್ ನಿಲ್ದಾಣದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಪ್ರಯಾಣಿಕರ ಸಂಕಷ್ಟಗಳನ್ನು ಆಲಿಸಿದ ಅವರು, ದರ ಏರಿಕೆ ಮುಂದುವರೆಸಿದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story

01:38 PM (IST) Feb 08

Koppal - ಕುಕನೂರಿನ ಶಾಲೆಯಲ್ಲಿ ಟೀಚರ್ಸ್ ಬಂದಿಲ್ಲ ಅಂದ್ರೆ ಅಡುಗೆಯವರೇ ಪ್ರಭಾರಿ ಶಿಕ್ಷಕರು

ಆಶ್ರಯ ಕಾಲನಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ, ಇಬ್ಬರು ಶಿಕ್ಷಕರೂ ಗೈರಾದಾಗ ಶಾಲೆಯ ಅಡುಗೆಯವರೇ ಮಕ್ಕಳಿಗೆ ಪ್ರಾರ್ಥನೆ ಮಾಡಿಸಿದ ಘಟನೆ ನಡೆದಿದೆ. ಶಿಕ್ಷಕರ ಈ ನಿರಂತರ ಗೈರುಹಾಜರಿ ಮತ್ತು ನಿರ್ಲಕ್ಷ್ಯದಿಂದಾಗಿ ಪಾಲಕರು ಶಾಲೆಯ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.

Read Full Story

01:34 PM (IST) Feb 08

ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​

ನಟಿ ರಾಧಿಕಾ ಪಂಡಿತ್ ತಮ್ಮ ಮಗ ಯಥರ್ವ್ ಜೊತೆಗಿನ ಬಾಲ್ಯದ ಸಿಹಿ ನೆನಪೊಂದನ್ನು ಹಂಚಿಕೊಂಡಿದ್ದಾರೆ.   ಮಗ ಯಥರ್ವ್ ಮೊದಲ ಬಾರಿಗೆ ಖುಷಿಪಟ್ಟ ಕ್ಷಣವನ್ನು ಸೆರೆಹಿಡಿದು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಿಹಿ ತಿಂಡಿಯ ಕ್ರೇಜ್ ಕಾಲ ಬದಲಾದರೂ ಕಡಿಮೆಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

Read Full Story

01:33 PM (IST) Feb 08

Karnataka Politics - ಯಾವ ಯತೀಂದ್ರನೂ ಇಂಪಾರ್ಟೆಂಟ್ ಅಲ್ಲ, ಹೈಕಮಾಂಡ್ ಏನು ಹೇಳುತ್ತೋ ಅದೇ ಫೈನಲ್ - ಎಂಬಿ ಪಾಟೀಲ್

ಸಿಎಂ ಬದಲಾವಣೆ ಚರ್ಚೆಯ ನಡುವೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ, ಡಿಕೆಶಿ ವ್ಯಂಗ್ಯ ಹಾಗೂ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ನಾಯಕತ್ವ ಬದಲಾವಣೆ ವದಂತಿಗಳನ್ನು ಮಾಧ್ಯಮ ಸೃಷ್ಟಿ ಎಂದರು.

Read Full Story

01:10 PM (IST) Feb 08

ಹಾರ್ದಿಕ್ ಪಾಂಡ್ಯ ಹೊಸ ಗರ್ಲ್‌ಫ್ರೆಂಡ್‌ ಮಹಿಕಾ ಶರ್ಮಾ ಮಾಮೂಲಿ ಹುಡುಗಿಯಲ್ಲ! ಈಕೆಯ ತಿಂಗಳ ಆದಾಯ ಎಷ್ಟು ಗೊತ್ತಾ?

ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಆಗಾಗ ಹಾರ್ದಿಕ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಅವರ ಹೊಸ ಗೆಳತಿ ಆದಾಯದ ವಿಷಯದಲ್ಲೂ ಮುಂದಿದ್ದಾರೆ. ಅವರ ಆಸ್ತಿ ಮತ್ತು ಮಾಸಿಕ ಆದಾಯ ಎಷ್ಟು ಗೊತ್ತಾ?

Read Full Story

12:58 PM (IST) Feb 08

ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್​ - Bigg Boss ರಕ್ಷಿತಾ ಶೆಟ್ಟಿ ಫುಲ್​ ಶಾಕ್​- ಆಮೇಲೇನಾಯ್ತು ನೋಡಿ

ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಗೆ, ಸೋಷಿಯಲ್ ಮೀಡಿಯಾ ಇನ್​ಫ್ಲುಯರೆನ್ಸರ್ ಕಿಪ್ಪಿ ಕೀರ್ತಿಯ ಮಾಜಿ ಪ್ರಿಯಕರ ಮುತ್ತು ಏಕಾಏಕಿ ಎದುರಾಗಿ ಶಾಕ್ ನೀಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ರಕ್ಷಿತಾ ಅವರ ವಿಡಿಯೋ ವೈರಲ್ ಆಗಿದೆ.

Read Full Story

12:50 PM (IST) Feb 08

ದೇವರೇ, ಯಾವ ಮಕ್ಕಳೂ ನೋಯದಿರಲಿ - ಪೋಷಕರ ಮದ್ಯ ವ್ಯಸನದಿಂದ ನೊಂದಿದ್ದ ಹೆಣ್ಣುಮಗಳ ಗೆಲುವಿನ ಕತೆ

ಪೋಷಕರ ಮದ್ಯವ್ಯಸನದಿಂದ ನೂರಾರು ಮಕ್ಕಳು ನಲುಗುತ್ತಿದ್ದಾರೆ. ಅಂಥಾ ಮಕ್ಕಳನ್ನು ನೋಯದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದೂ ಇದೆ, ಸಮಾಜದ್ದೂ ಇದೆ. ಇದು ಪೋಷಕರ ಮದ್ಯವ್ಯಸನದಿಂದ ನೊಂದು, ಆಮೇಲೆ ಕಷ್ಟಪಟ್ಟು ಓದಿ ಗೆಲುವು ಪಡೆದು ಹೆಣ್ಣು ಮಗಳ ಅನುಭವ ಕಥನ.

Read Full Story

12:48 PM (IST) Feb 08

ರಾಜನಹಳ್ಳಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಾಲ್ಮೀಕಿ ಜಾತ್ರೆ - ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ

ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಪ್ರಸನ್ನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ 'ಜಾಗೃತಿಗಾಗಿ ಜಾತ್ರೆ' ಘೋಷವಾಕ್ಯದಡಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ಹಾಗೂ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.
Read Full Story

12:07 PM (IST) Feb 08

ಲೀಲಾ..ನೀನು ನನ್ನ ಫ್ಲೇವರ್‌ ಕಣೇ.. ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್‌ ಅಸ್ತ್ರವಾಯ್ತು - ಹಣ ಮಾಡ್ತಿರೋ ಮಂಜು!

Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್‌ ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು.

 

Read Full Story

11:53 AM (IST) Feb 08

ಜೈಲಿನಲ್ಲಿ ಉಗ್ರನ ಸಾವು - ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಸಚಿವ ಜಿ. ಪರಮೇಶ್ವರ್

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನಿಗಮ-ಮಂಡಳಿ ನೇಮಕಾತಿ, ಗೃಹಲಕ್ಷ್ಮಿ ಯೋಜನೆ, ಮತ್ತು ಬಜೆಟ್ ನಿರೀಕ್ಷೆಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ, ದ್ವೇಷ ಭಾಷಣ ತಡೆಗೆ ಎಐ ಸಾಫ್ಟ್‌ವೇರ್ ಖರೀದಿ ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
Read Full Story

11:26 AM (IST) Feb 08

Non Veg Movie Release ಕರಾವಳಿಯಾದ್ಯಂತ ತೆರೆಗೆ ಅಪ್ಪಳಿಸಿದ ತುಳು ಸಿನಿಮಾ ನಾನ್‌ವೆಜ್!

ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ, ಸೂರಜ್ ಶೆಟ್ಟಿ ನಿರ್ದೇಶನದ 'ನಾನ್ ವೆಜ್' ತುಳು ಸಿನಿಮಾ ಮಂಗಳೂರಿನಲ್ಲಿ ಬಿಡುಗಡೆಯಾಗಿದೆ. ಯುವಜನತೆಯ ತಳಮಳವನ್ನು ಹಾಸ್ಯದ ಮೂಲಕ ಕಟ್ಟಿಕೊಡುವ ಈ ಚಿತ್ರವು ಒಂದು ಕೌಟುಂಬಿಕ ಮನರಂಜನೆಯಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ.
Read Full Story

11:01 AM (IST) Feb 08

ಲೀಲಾ..ಬಂದ್ಬಿಡೇ..; ಶಾಂತಂ ಪಾಪಂ ಎಫೆಕ್ಟ್, ನನ್ನ ಹೆಂಡ್ತಿ ನೇಣು ಹಾಕಿಕೊಳ್ಳೋಕೆ ಹೋದ್ಳು - ಮತ್ತೆ ಕಣ್ಣೀರಿಟ್ಟ ಮಂಜು!

Leela Manju: ಲೀಲಾ, ಬಂದ್ಬಿಡು ಲೀಲಾ, ಬಂಗಾರಿ, ಚಿನ್ನಿ ಬಂದ್ಬಿಡೇ. ಲೀಲಾ ನೀನು ನನ್ನ ಫ್ಲೇವರ್‌ ಕಣೇ ಎಂದು ಹೇಳಿದ್ದ ಮಂಜು ಡೈಲಾಗ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೇನು ಸಿನಿಮಾ ಡೈಲಾಗ್‌ ಅಲ್ಲ, ಬದಲಾಗಿ ಲೀಲಾ-ಮಂಜು ಮದುವೆ ಕಥೆ ವ್ಯಥೆ ಆಗಿತ್ತು.ಲೀಲಾ ಮನೆ ಬಿಟ್ಟು ಹೋಗಲು ರೆಡಿ ಆಗಿದ್ದಾರಂತೆ.

 

Read Full Story

10:38 AM (IST) Feb 08

ವಿಧಾನಸಭೆ ಗಲಾಟೆ - ನಾನು ಹಾಗೆ ಮಾತನಾಡಲು ಬಿಜೆಪಿ ಶಾಸಕರ ಪ್ರಚೋದನೆ ಕಾರಣ ಎಂದ ಶಿವಲಿಂಗೇಗೌಡ

ವಿಧಾನಸಭೆಯ ಗಲಾಟೆಗೆ ಬಿಜೆಪಿ ಶಾಸಕರ ಪ್ರಚೋದನೆಯೇ ಕಾರಣ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದ್ದಾರೆ. ಮಾಧ್ಯಮಗಳು ಘಟನೆಯನ್ನು ತಿರುಚಿವೆ ಎಂದು ಹೇಳಿದ ಅವರು, ತಮ್ಮ ಬಳಿಯಿದ್ದ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದರು.

Read Full Story

10:21 AM (IST) Feb 08

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಕಮಲಿ ಧಾರಾವಾಹಿ ನಟ ನಿರಂಜನ್‌ ಬಿಎಸ್

Amulya And Niranjan Bs: ಕಮಲಿ ಧಾರಾವಾಹಿ ನಟ ನಿರಂಜನ್‌ ಬಿಎಸ್‌, ನಟಿ ಅಮೂಲ್ಯ ಗೌಡ ಅವರು ಲವ್‌ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎಂಬ ಮಾತು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಈಗ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿರಂಜನ್‌ ಬಿಎಸ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ.

 

Read Full Story

10:18 AM (IST) Feb 08

ರಾಜ್ಯ ಸರ್ಕಾರದಿಂದ ಜನರಿಗೆ ಸ್ವಾಭಿಮಾನಿ ಬದುಕು - ಸಚಿವ ಪ್ರಿಯಾಂಕ್ ಖರ್ಗೆ

ಕೇಂದ್ರ ಸರ್ಕಾರದ ವರದಿಯಂತೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಹೊನ್ನಾಳಿ ತಾಲೂಕಿನ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿವರಿಸಿದರು.

Read Full Story

10:17 AM (IST) Feb 08

ಈ 4 ರಾಶಿಯವರು ಈ ಬೆರಳಿಗೆ ಮುತ್ತಿನ ಉಂಗುರ ಧರಿಸಿದ್ರೆ, ಅದೃಷ್ಟವೋ ಅದೃಷ್ಟ! ಆದರೆ ಈ ವಿಚಾರ ಗೊತ್ತಿರಲಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುತ್ತು ಚಂದ್ರನ ಸಂಕೇತ. ಇದು ಮನಸ್ಸನ್ನು ಶಾಂತವಾಗಿಡಲು ಮತ್ತು ಭಾವನೆಗಳನ್ನು ನಿಯಂತ್ರಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಮುತ್ತಿನ ಉಂಗುರ ಧರಿಸುವುದರಿಂದ ಯಾವ ರಾಶಿಯವರಿಗೆ ಶುಭ ಫಲ ಇದೆ ನೋಡೋಣ ಬನ್ನಿ

 

Read Full Story

10:06 AM (IST) Feb 08

Special Marriage - ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ - ಹೃದಯದ ಭಾಷೆ, ಮೌನವೇ ಸಂಭಾಷಣೆ

ಬಳ್ಳಾರಿಯ ಸಿರುಗುಪ್ಪದಲ್ಲಿ ಅಪರೂಪದ ವಿವಾಹವೊಂದು ಜರುಗಿದೆ. ಹುಟ್ಟಿನಿಂದಲೇ ಮಾತು ಬಾರದ, ಕಿವಿ ಕೇಳದ ಸಿರುಗುಪ್ಪದ ವೆಂಕಟ್ ಅಯ್ಯಪ್ಪ ಮತ್ತು ಶಿವಮೊಗ್ಗದ ಕೀರ್ತನಾ ಅವರು ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಮೌನ ಹೃದಯಗಳ ಮದುವೆಗೆ ನೂರಾರು ಜನರು ಸಾಕ್ಷಿಯಾಗಿದ್ದಾರೆ.
Read Full Story

09:55 AM (IST) Feb 08

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ - ಗ್ಯಾರಂಟಿ ಯೋಜನೆ ಸದಸ್ಯನಿಂದಲೇ ಆರೋಪ!

ಹೂವಿನಹಡಗಲಿಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಭೆಯಲ್ಲಿ, ಪಡಿತರ ಅಕ್ಕಿ ಮತ್ತು ರಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು. ಇದರೊಂದಿಗೆ, ಅಕ್ರಮ ವಿದ್ಯುತ್ ಸಂಪರ್ಕ, ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಗಳ ನ್ಯೂನತೆಗಳ ಬಗ್ಗೆಯೂ ಅಧಿಕಾರಿಗಳ ಗಮನ ಸೆಳೆಯಲಾಯಿತು. 

Read Full Story

09:47 AM (IST) Feb 08

ಅಯ್ಯೋ.. ಹಾಗೆಲ್ಲ ಮಾಡ್ಬೇಡ, ಕೈ ಮುಗಿಯುವೆ; ನಟಿ ಅಮೂಲ್ಯ ಡ್ರೆಸ್‌ ಬಗ್ಗೆ ಪತಿ ಜಗದೀಶ್‌ಗೆ ಕಂಪ್ಲೆಂಟ್!

Actress Amulya: ನಟಿ ಅಮೂಲ್ಯ ಹಾಗೂ ಆರ ಜಗದೀಶ್‌ ಆರ್‌ ಚಂದ್ರ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ಗೆ ಸಂದರ್ಶನ ನೀಡಿದ್ದಾರೆ. ಆ ವೇಳೆ ಅಮೂಲ್ಯ ಅವರಿಗೆ ಯಾವ ವಿಷಯದಲ್ಲಿ ಕೈ ಮಗಿದು ಕೇಳ್ತೀನಿ ಎಂದು ಹೇಳಿದ್ದಾರೆ. ಹಾಗಾದರೆ ಏನದು?

 

Read Full Story

09:41 AM (IST) Feb 08

Bengaluru - ಅಸಭ್ಯ ಸನ್ನೆ, ಅವಾಚ್ಯ ಪದ; ಕೈಗೆ ಚೈನ್ ಸುತ್ಕೊಂಡು ಯುವತಿಯರಿಂದ ಚಾಲಕನ ಮೇಲೆ ಹಲ್ಲೆ

ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರು ಕುಡಿದ ಮತ್ತಿನಲ್ಲಿ ತಮ್ಮ ಸ್ಕೂಟಿಯಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಶ್ನಿಸಿದ ಕಾರ್ ಚಾಲಕನ ಮೇಲೆ ಚೈನ್‌ನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಹುಳಿಮಾವು ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.

Read Full Story

09:40 AM (IST) Feb 08

Love Failure - ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಬಾಡಿ ಬಿಲ್ಡರ್ ಯುವಕ ನೇಣಿಗೆ ಶರಣು!

ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿದ್ದ 26 ವರ್ಷದ ಕಿರಣ್, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾರೆ.

Read Full Story

More Trending News