- Home
- Entertainment
- TV Talk
- ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್: Bigg Boss ರಕ್ಷಿತಾ ಶೆಟ್ಟಿ ಫುಲ್ ಶಾಕ್- ಆಮೇಲೇನಾಯ್ತು ನೋಡಿ
ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್: Bigg Boss ರಕ್ಷಿತಾ ಶೆಟ್ಟಿ ಫುಲ್ ಶಾಕ್- ಆಮೇಲೇನಾಯ್ತು ನೋಡಿ
ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಗೆ, ಸೋಷಿಯಲ್ ಮೀಡಿಯಾ ಇನ್ಫ್ಲುಯರೆನ್ಸರ್ ಕಿಪ್ಪಿ ಕೀರ್ತಿಯ ಮಾಜಿ ಪ್ರಿಯಕರ ಮುತ್ತು ಏಕಾಏಕಿ ಎದುರಾಗಿ ಶಾಕ್ ನೀಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ರಕ್ಷಿತಾ ಅವರ ವಿಡಿಯೋ ವೈರಲ್ ಆಗಿದೆ.

ರಕ್ಷಿತಾ ಶೆಟ್ಟಿ ಸೆಲೆಬ್ರಿಟಿ
ಬಿಗ್ಬಾಸ್ ರಕ್ಷಿತಾ ಶೆಟ್ಟಿ (Bigg Boss Raskhita Shetty) ಸದ್ಯ ಸೆಲೆಬ್ರಿಟಿ ಆಗಿದ್ದಾರೆ. ಅವರಿಗೆ ಇದೀಗ ಸಕತ್ ಡಿಮಾಂಡ್ ಇದೆ. ಇದೇ ಕಾರಣಕ್ಕೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸೆಲೆಬ್ರಿಟಿ ಆದ ತಕ್ಷಣ ಅಭಿಮಾನಿಗಳನ್ನು ನಿರಾಸೆ ಮಾಡಬಾರದು ಎನ್ನುವುದು ನಿಜವಾದರೂ, ಎಷ್ಟೋ ಸಂದರ್ಭಗಳಲ್ಲಿ ಅವರು ಪೇಚಿಗೆ ಸಿಲುಕುವುದೂ ಇದೆ.
ಕಿಪ್ಪಿ ಕೀರ್ತಿಯ ಕೀರ್ತಿ
ಸೋಷಿಯಲ್ ಮೀಡಿಯಾ ಇನ್ಫ್ಲುಯರೆನ್ಸರ್ ಕಿಪ್ಪಿ ಕೀರ್ತಿ ಎಲ್ಲರಿಗೂ ಗೊತ್ತಿರುವವರೇ. ಹಾಯ್ ಜನರೇ ಎನ್ನುವ ಮೂಲಕ ಇವರು ಸಕತ್ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಇವರು ಕೆಲ ತಿಂಗಳ ಹಿಂದೆ ಸಕತ್ ಸುದ್ದಿ ಮಾಡಿದ್ದು, ಮುತ್ತು ಎನ್ನುವ ಬಾಯ್ಫ್ರೆಂಡ್ ಪರಿಚಯ ಮಾಡಿಸುವ ಮೂಲಕ.
ಕಿಪ್ಪಿ ಕೀರ್ತಿ ಬ್ರೇಕಪ್
ಅದಾದ ಬಳಿಕ, ತಾವು ಬ್ರೇಕಪ್ ಮಾಡಿಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದರು ಕಿಪ್ಪಿ ಕೀರ್ತಿ. ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಎಕ್ಸ್ ಬಾಯ್ಫ್ರೆಂಡ್ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. “ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ . ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ” ಎಂದು ಕಿಪ್ಪಿ ಕೀರ್ತಿ ಪೋಸ್ಟ್ ಹಂಚಿಕೊಂಡಿದ್ದರು.
ರೀಲ್ಸ್ ಮೂಲಕ ಫೇಮಸ್
ಇದಾದ ಬಳಿಕ ಕಿಪ್ಪಿ ಇನ್ನೊಬ್ಬರ ಜೊತೆ ಲವ್ನಲ್ಲಿ ಬಿದ್ದಿದ್ದಾರೆ ಎನ್ನಲಾಗಿತ್ತು. ಕಿಪ್ಪಿ ಕೀರ್ತಿ ಅವರಿಗೆ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿದ್ದ ಕಾರಣದಿಂದಾಗಿ, ಅವರ ಜೊತೆ ರೀಲ್ಸ್ ಮಾಡಿದರೆ ತಾವೂ ಫೇಮಸ್ ಆಗಬಹುದು ಎನ್ನುವ ಕಾರಣಕ್ಕೆ, ಅವರನ್ನು ಬಳಸಿಕೊಂಡವರೂ ಇದ್ದಾರೆ. ತಮ್ಮ ಬಗ್ಗೆ ಏನೇ ನೆಗೆಟಿವ್ ಮಾತನಾಡಿದರೂ, ಬಾಡಿ ಶೇಮಿಂಗ್ ಮಾಡಿದರೂ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಕೀರ್ತಿ ಗಳಿಸುತ್ತಿದ್ದಾರೆ ಕಿಪ್ಪಿ.
ರಕ್ಷಿತಾ ಶೆಟ್ಟಿ ಶಾಕ್
ಆದರೆ, ಇದೀಗ ಅವರ ಎಕ್ಸ್ ಮುತ್ತು, ಏಕಾಏಕಿ ರಕ್ಷಿತಾ ಶೆಟ್ಟಿ ಅವರನ್ನು ಕಂಡು ಶೇಕ್ಹ್ಯಾಂಡ್ ಮಾಡಿದ್ದಾರೆ. ಪಾಪ ರಕ್ಷಿತಾಗೆ ಇವರು ಯಾರು ಎಂದು ತಿಳಿಯದೇ ಶೇಕ್ ಹ್ಯಾಂಡ್ ಮಾಡಿದ್ದು ನೋಡಿ ಕಂಗಾಲಾಗಿದ್ದಾರೆ. ಮುಖದಲ್ಲಿ ಸಕತ್ ಟೆನ್ಷನ್ ಇರುವುದನ್ನು ನೋಡಬಹುದು.
ನೆಟ್ಟಿಗರ ಕ್ಲಾಸ್
ಬಳಿಕ ಮುತ್ತು ತಮ್ಮನ್ನು ತಾವು ಪರಿಚಯಿಸಿಕೊಂಡಾಗ, ರಕ್ಷಿತಾ ಮುಖದಲ್ಲಿ ಸ್ವಲ್ಪ ನಗುವನ್ನು ನೋಡಬಹುದು. ಆದರೂ ಏಕಾಏಕಿ ಬಂದು ಹೀಗೆ ಮಾಡಿದ್ದಕ್ಕೆ, ಮುತ್ತು ಅವರನ್ನು ರಕ್ಷಿತಾ ಫ್ಯಾನ್ ಬೈಯುತ್ತಿದ್ದಾರೆ. ಈಕೆ ಕಿಪ್ಪಿ ಕೀರ್ತಿ ಅಲ್ಲ, ರಕ್ಷಿತಾ. ಏನಾದರೂ ಹೆಚ್ಚೂ ಕಮ್ಮಿ ಮಾಡಿದ್ರೆ ಬಾರಿಸ್ತಾಳೆ ಅಷ್ಟೇ ಎಂದು ಕಮೆಂಟ್ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

