ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಕರೆ ಸ್ವೀಕರಿಸಿದ ಅವರಿಗೆ, ಅದನ್ನು ಕಟ್ ಮಾಡಲು ತಿಳಿಯದೆ ತಬ್ಬಿಬ್ಬಾದರು. ಈ ಮೋಜಿನ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗಿದೆ.
ಬಿಗ್ಬಾಸ್ ರಕ್ಷಿತಾ ಶೆಟ್ಟಿ (Bigg Boss Raskhita Shetty) ಅವರಿಗೆ ಎಲ್ಲ ಕಡೆಯಲ್ಲಿಯೂ ಕರೆಗಳ ಸುರಿಮಳೆಯೇ ಆಗುತ್ತಿದೆ. ಈಚೆಗಷ್ಟೇ ರಕ್ಷಿತಾ ಶೆಟ್ಟಿ ಅವರು, ನೇರಪ್ರಸಾರದಲ್ಲಿ ಅಭಿಮಾನಿಗಳ ಜೊತೆ ಮಾತನಾಡಲು ಬಂದಾಗ ಹಾಸ್ಯದ ಸನ್ನಿವೇಶವೊಂದು ನಡೆದಿದೆ. ಅದನ್ನು chappuz_editz.07 ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಸಾಮಾನ್ಯವಾಗಿ, ಲೈವ್ಗೆ ಬಂದಾಗ, ಅಭಿಮಾನಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಫೋನ್ ಹ್ಯಾಂಡಲ್ ಮಾಡುವುದು ಹೇಗೆ ಎನ್ನುವುದು ಎಷ್ಟೋ ಮಂದಿಗೆ ತಿಳಿದಿರುವುದಿಲ್ಲ. ಯುಟ್ಯೂಬರ್ನಲ್ಲಿ ನೂರಾರು ವಿಡಿಯೋ ಮಾಡಿ, ಸಕ್ಸಸ್ ಕಂಡ ಮಾತ್ರಕ್ಕೆ ನೇರಪ್ರಸಾರದಲ್ಲಿನ ತಾಂತ್ರಿಕತೆಯ ಬಗ್ಗೆ ತಿಳಿಯಬೇಕೆಂದೇನಿಲ್ಲವಲ್ಲ. ಅದೇ ರೀತಿ, ರಕ್ಷಿತಾ ಶೆಟ್ಟಿಗೂ ಆಗಿದ್ದು, ಅದರ ಮೋಜಿನ ವಿಡಿಯೋ ಒಂದು ವೈರಲ್ ಆಗಿದೆ.
ಮಲ್ಲಮ್ಮ ಜೊತೆ ಲೈವ್
ಇದರಲ್ಲಿ ರಕ್ಷಿತಾ ಶೆಟ್ಟಿ ಜೊತೆ ಬಿಗ್ಬಾಸ್ ಮಲ್ಲಮ್ಮ ಕೂಡ ಲೈವ್ಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದರು. ಅಭಿಮಾನಿಯೊಬ್ಬರು ಕರೆ ಮಾಡಿದಾಗ, ಅವರ ಜೊತೆ ಮಾತನಾಡಿ ಮುಗಿದ ಮೇಲೆ ಅದನ್ನು ಕಟ್ ಮಾಡಲು ಇಬ್ಬರಿಗೂ ತಿಳಿಯದೇ ಮೋಜಿನ ಪ್ರಸಂಗ ನಡೆದಿದೆ. ಅದೀಗ ಸಕತ್ ವೈರಲ್ ಆಗುತ್ತಿದೆ.
ನೀವೇ ಕಟ್ ಮಾಡಿ ಎಂದ ರಕ್ಷಿತಾ
ಇದರಲ್ಲಿ ರಕ್ಷಿತಾ ಶೆಟ್ಟಿ, ನೀವೇ ಕಟ್ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ನನಗೆ ಮಾತನಾಡುವುದು ಬಿಟ್ಟರೆ ಮತ್ತೆ ಏನೂ ಬರುವುದಿಲ್ಲ. ವಿಡಿಯೋ ಕಟ್ ಮಾಡಲು ಗೊತ್ತಾಗುತ್ತಿಲ್ಲ. ನೀವೇ ಮಾಡಿ ಎಂದಾಗ, ಪಕ್ಕದಲ್ಲಿ ಇರುವ ಮಲ್ಲಮ್ಮ ಕೂಡ ನಕ್ಕಿದ್ದಾರೆ. ಆದರೆ ರಕ್ಷಿತಾಗಾಗಲೀ, ಮಲ್ಲಮ್ಮ ಅವರಿಗಾಗಲೂ ಅದನ್ನು ಕಟ್ ಮಾಡುವುದು ಹೇಗೆ ಎನ್ನುವುದು ತಿಳಿಯುತ್ತಿಲ್ಲ.
ನನಗೂ ಬರಲ್ಲ!
ಆದರೆ, ಇನ್ನೂ ಕುತೂಹಲದ ವಿಷಯವೆಂದರೆ, ಅತ್ತ ಕಡೆಯಿಂದ ಕಾಲ್ ಮಾಡಿದವರು ಕೂಡ, ನಿಜವಾಗಿ ಹೇಳಬೇಕು ಎಂದರೆ ನಾನು ಇದೇ ಮೊದಲ ಬಾರಿಗೆ ನೇರಪ್ರಸಾರದಲ್ಲಿ ಬಂದಿರೋದು, ನನಗೂ ಇದು ಹೇಗೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಕೊನೆಯಲ್ಲಿ ಯಾರು ಕಟ್ ಮಾಡಿದರು ಎನ್ನುವುದು ತಿಳಿದಿಲ್ಲ. ಆದರೆ ರಕ್ಷಿತಾ ಶೆಟ್ಟಿ ಅವರ ಮುಗ್ಧತೆಗೆ ಮಾತ್ರ ಅಭಿಮಾನಿಗಳು ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ.


