MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru: ಅಸಭ್ಯ ಸನ್ನೆ, ಅವಾಚ್ಯ ಪದ; ಕೈಗೆ ಚೈನ್ ಸುತ್ಕೊಂಡು ಯುವತಿಯರಿಂದ ಚಾಲಕನ ಮೇಲೆ ಹಲ್ಲೆ

Bengaluru: ಅಸಭ್ಯ ಸನ್ನೆ, ಅವಾಚ್ಯ ಪದ; ಕೈಗೆ ಚೈನ್ ಸುತ್ಕೊಂಡು ಯುವತಿಯರಿಂದ ಚಾಲಕನ ಮೇಲೆ ಹಲ್ಲೆ

ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರು ಕುಡಿದ ಮತ್ತಿನಲ್ಲಿ ತಮ್ಮ ಸ್ಕೂಟಿಯಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಶ್ನಿಸಿದ ಕಾರ್ ಚಾಲಕನ ಮೇಲೆ ಚೈನ್‌ನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಹುಳಿಮಾವು ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.

2 Min read
Author : Mahmad Rafik
Published : Feb 08 2026, 09:41 AM IST
Share this Photo Gallery
  • FB
  • TW
  • Linkdin
  • Whatsapp
15
ಯುವತಿಯರಿಬ್ಬರ ಜಗಳ
Image Credit : Asianet News

ಯುವತಿಯರಿಬ್ಬರ ಜಗಳ

ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರಿಬ್ಬರು ನಡುರಸ್ತೆಯಲ್ಲಿ ಕುಡಿದು ರಂಪಾಟ ಮಾಡಿದ್ದಾರೆ. ಕೋರಮಂಗಲದ ಲೀಸಾ ಮತ್ತು ಜೆಪಿ ನಗರದ ಮ್ಯಾಥ್ಯೂ ಎಂಬ ಇಬ್ಬರು ಯುವತಿಯರು ನಶೆಯಲ್ಲಿ ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯಪದಗಳನ್ನು ಬಳಸಿ ನಿಂದಿಸಿದ್ದಾರೆ.

25
ಕಾರ್‌ಗೆ ಡಿಕ್ಕಿ ಹೊಡೆದ ಜಗಳ
Image Credit : Asianet News

ಕಾರ್‌ಗೆ ಡಿಕ್ಕಿ ಹೊಡೆದ ಜಗಳ

ಯುವತಿಯರಿಬ್ಬರು ರಾತ್ರಿ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಬಂದಿದ್ದರು. ಹೋಟೆಲ್‌ನಿಂದ ಹಿಂದಿರುಗಿ ತೆರಳುವಾಗ ಹುಳಿಮಾವು ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಕಾರ್‌ಗೆ ಹಿಂದಿನಿಂದ ತಮ್ಮ ಸ್ಕೂಟಿಯಿಂದ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದ ಕಾರ್ ಚಾಲಕನ ಮೇಲೆಯೇ ಯುವತಿಯರು ಹಲ್ಲೆ ಮಾಡಲು ಮುಂದಾಗಿದ್ದಾರೆ

Related Articles

Related image1
ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್, ಎರಡು ವಿಭಿನ್ನ ಘಟನೆ, ಎರಡು ವಿಭಿನ್ನ ಪ್ರತಿಕ್ರಿಯೆ
Related image2
ಅಮೆರಿಕಾಗೆ ಹೊರಟಿದ್ದ ಹುಬ್ಬಳ್ಳಿ ಮಹಿಳೆಯ ಕೋಟಿಗಟ್ಟಲೆ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಬಳಿಕ ಮಾಯ!
35
ಕೈಗೆ ಚೈನ್ ಸುತ್ತಿಕೊಂಡು ಕಾರ್ ಚಾಲಕನ ಮೇಲೆ ಹಲ್ಲೆ
Image Credit : Asianet News

ಕೈಗೆ ಚೈನ್ ಸುತ್ತಿಕೊಂಡು ಕಾರ್ ಚಾಲಕನ ಮೇಲೆ ಹಲ್ಲೆ

ಓರ್ವ ಯುವತಿ ಕೈಗೆ ಚೈನ್ ಸುತ್ತಿಕೊಂಡು ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಯುವತಿಯರನ್ನು ತಡೆದಿದ್ದಾರೆ. ನಶೆಯ ಮತ್ತಿನಲ್ಲಿದ್ದ ಯುವತಿಯರು, ಚಾಲಕ ಸೇರಿದಂತೆ ಸ್ಥಳೀಯರನ್ನು ಸಹ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಯುವತಿಯರ ಹಾರಾಟ ಹೆಚ್ಚಾದಂತೆ ಸ್ಥಳೀಯರು ಹುಳಿಮಾವು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

45
ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು
Image Credit : Asianet News

ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯುವತಿಯರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಇಬ್ಬರು ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Birth Date: ಈ ದಿನಾಂಕಗಳಲ್ಲಿ ಹುಟ್ಟಿದವರ ಜೊತೆ ಬಾಳೋದು ನರಕಕ್ಕೆ ಸಮಾನ!

55
ದೂರು ದಾಖಲಿಸಿರುವ ಚಾಲಕ
Image Credit : Asianet News

ದೂರು ದಾಖಲಿಸಿರುವ ಚಾಲಕ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕ್ಯಾಬ್ ಚಾಲಕ ಅಹ್ಮದ್, ನಾನು ಗ್ರಾಹಕರನ್ನು ಪಿಕಪ್ ಮಾಡೋದ್ದಕ್ಕೆ ಹೋಗ್ತಿದ್ದೆ. ಹಿಂದಿನಿಂದ ಬಂದು ಬೈಕ್ ನಿಂದ ಕ್ಯಾಬ್‌ಗೆ ಟಚ್ ಮಾಡಿದ್ರು. ಇಬ್ಬರು ಯುವತಿಯರು ಬೈಕ್ ನಲ್ಲಿ ಬರ್ತಾ ಇದ್ರು. ಗಾಡಿಗೆ ಡ್ಯಾಮೇಜ್ ಆಗಿದ್ದನ್ನ ಕಟ್ಟಿಕೊಡಿ ಅಂತ ಕೇಳಿದೆ. ಈ ಸಂದರ್ಭದಲ್ಲಿ ಇಬ್ಬರು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋಗೋಕೆ ನೋಡಿದರು. ಕೂಡಲೇ ಸ್ಥಳೀಯರೆಲ್ಲಾ ಸೇರಿ ಅವರನ್ನ ಹಿಡಿದುಕೊಂಡಿದ್ದರು. ನಾನು ಕೀ ತೆಗೆಯಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ರು ಚೈನ್ ಸುತ್ತಿಕೊಂಡು ಮುಖ, ಕೈ, ಬೆನ್ನಿನ ಮೇಲೆ ಹಲ್ಲೆ ಮಾಡಿದ್ರು. ಆ ಸಂದರ್ಭದಲ್ಲಿ ಸ್ಥಳೀಯರೆಲ್ಲಾ ಸೇರಿ ನನಗೆ ಸಪೋರ್ಟ್ ಮಾಡಿದ್ರು. ಈ ಸಂಬಂಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮನೆಗೆ ಗಂಡ ತಡವಾಗಿ ಬರ್ತಿದ್ದಕ್ಕೆ ನೇಣು ಬಿಗಿದುಕೊಂಡ 22 ವರ್ಷದ ಗೃಹಿಣಿ; ತಬ್ಬಲಿಯಾದ 10 ತಿಂಗಳ ಕಂದಮ್ಮ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ವೈರಲ್ ವಿಡಿಯೋ

Latest Videos
Recommended Stories
Recommended image1
Love Failure: ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಬಾಡಿ ಬಿಲ್ಡರ್ ಯುವಕ ನೇಣಿಗೆ ಶರಣು!
Recommended image2
ಮನೆಗೆ ಗಂಡ ತಡವಾಗಿ ಬರ್ತಿದ್ದಕ್ಕೆ ನೇಣು ಬಿಗಿದುಕೊಂಡ 22 ವರ್ಷದ ಗೃಹಿಣಿ; ತಬ್ಬಲಿಯಾದ 10 ತಿಂಗಳ ಕಂದಮ್ಮ
Recommended image3
ರಾಜ್ಯದಲ್ಲಿರೋದು ಕಾಂಗ್ರೆಸ್ ಅಲ್ಲ, ಎಡಪಂಥೀಯ ಸರ್ಕಾರ: ಬಿಎಲ್ ಸಂತೋಷ್ ವಾಗ್ದಾಳಿ
Related Stories
Recommended image1
ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್, ಎರಡು ವಿಭಿನ್ನ ಘಟನೆ, ಎರಡು ವಿಭಿನ್ನ ಪ್ರತಿಕ್ರಿಯೆ
Recommended image2
ಅಮೆರಿಕಾಗೆ ಹೊರಟಿದ್ದ ಹುಬ್ಬಳ್ಳಿ ಮಹಿಳೆಯ ಕೋಟಿಗಟ್ಟಲೆ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಬಳಿಕ ಮಾಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved