- Home
- Entertainment
- TV Talk
- ಲೀಲಾ..ಬಂದ್ಬಿಡೇ..; ಶಾಂತಂ ಪಾಪಂ ಎಫೆಕ್ಟ್, ನನ್ನ ಹೆಂಡ್ತಿ ನೇಣು ಹಾಕಿಕೊಳ್ಳೋಕೆ ಹೋದ್ಳು: ಮತ್ತೆ ಕಣ್ಣೀರಿಟ್ಟ ಮಂಜು!
ಲೀಲಾ..ಬಂದ್ಬಿಡೇ..; ಶಾಂತಂ ಪಾಪಂ ಎಫೆಕ್ಟ್, ನನ್ನ ಹೆಂಡ್ತಿ ನೇಣು ಹಾಕಿಕೊಳ್ಳೋಕೆ ಹೋದ್ಳು: ಮತ್ತೆ ಕಣ್ಣೀರಿಟ್ಟ ಮಂಜು!
Leela Manju: ಲೀಲಾ, ಬಂದ್ಬಿಡು ಲೀಲಾ, ಬಂಗಾರಿ, ಚಿನ್ನಿ ಬಂದ್ಬಿಡೇ. ಲೀಲಾ ನೀನು ನನ್ನ ಫ್ಲೇವರ್ ಕಣೇ ಎಂದು ಹೇಳಿದ್ದ ಮಂಜು ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇನು ಸಿನಿಮಾ ಡೈಲಾಗ್ ಅಲ್ಲ, ಬದಲಾಗಿ ಲೀಲಾ-ಮಂಜು ಮದುವೆ ಕಥೆ ವ್ಯಥೆ ಆಗಿತ್ತು.ಲೀಲಾ ಮನೆ ಬಿಟ್ಟು ಹೋಗಲು ರೆಡಿ ಆಗಿದ್ದಾರಂತೆ.

ಶಾಂತಂ ಪಾಪಂ ಕಥೆ ಮಾಡಿದ್ದಾರೆ?
ಮಂಜು ಹಾಗೂ ಲೀಲಾ ಕಥೆ ಇಡೀ ನಾಡಿಗೆ ಗೊತ್ತಾಗುವ ರೀತಿ ಆಗಿದೆ. ಇಬ್ಬರು ಮಕ್ಕಳು, ಪತಿಯನ್ನು ಬಿಟ್ಟು ಬೇರೆ ವ್ಯಕ್ತಿಯ ಜೊತೆಗೆ ಹೋಗಿದ್ದ ಲೀಲಾ, ಆಮೇಲೆ ಮತ್ತೆ ಗಂಡನ ಬಳಿಗೆ ಬಂದಿದ್ದರು. ಇವರಿಬ್ಬರ ವೈಯಕ್ತಿಕ ವಿಷಯ ಬೀದಿಯಲ್ಲಿ ಚರ್ಚೆ ಆಗಿತ್ತು. ಆದರೆ ಲೀಲಾಗೆ ಈ ಹಿಂದೆಯೂ ಮದುವೆ ಆಗಿತ್ತು. ಇವರ ವಿಷಯವನ್ನು ಇಟ್ಟುಕೊಂಡು ಶಾಂತಂ ಪಾಪಂ ಕಥೆ ಮಾಡಿದ್ದಾರೆ ಎಂದು ಲೀಲಾ, ಮಂಜು ಆರೋಪ ಮಾಡಿದ್ದಾರೆ.
ಶಾಂತಂ ಪಾಪಂ ಮೇಲೆ ಆರೋಪ
ಹೌದು, ಇತ್ತೀಚೆಗೆ ಶಾಂತಂ ಪಾಪಂ ಸಿರೀಸ್‌ನಲ್ಲಿ ಮಂಜು ಮತ್ತು ಶೀಲಾ ಹೆಸರಿನಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡ ವಿಷಯದ ಬಗ್ಗೆ ಎಪಿಸೋಡ್ ಪ್ರಸಾರ ಆಗಿತ್ತು. ಇವರು ನಮ್ಮ ವಿಷಯವನ್ನು ಇಟ್ಟುಕೊಂಡು ಸಂಸಾರವನ್ನು ಹಾಳು ಮಾಡಿದ್ದಾರೆ ಎಂದು ಮಂಜು ಅವರು ಆರೋಪ ಮಾಡಿ ಹೊಸ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಮಂಜು ವಿಡಿಯೋದಲ್ಲಿ ಹೇಳಿದ್ದೇನು?
ಮಂಜು ಅವರು ವಿಡಿಯೋ ಮಾಡುತ್ತ, “ನನ್ನ ಹೆಂಡ್ತಿ ಮನೆ ಬಿಟ್ಟು ಹೋಗ್ತಿನಿ ಅಂತಾಳೆ, ಮೊನ್ನೆ ನೇ*ಣು ಹಾಕಿಕೊಂಡಿದ್ದಳು. ಏನಿಕ್ಕೆ ಎಂದು ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಲೀಲಾ ದೂರು ಏನು?
ಎಷ್ಟು ಅಂತ ಅನುಭವಿಸೋದು? ಯಾಕೆ ವಿಡಿಯೋ ಮಾಡ್ತಿದ್ಯಾ? ಏನಿಕ್ಕೆ ವಿಡಿಯೋ ಮಾಡ್ತಿದ್ಯಾ? ನೀನು ನನಗೆ ಬೇಡ, ಬೇಡವೇ ಬೇಡ, ಸಾಯೋಕೆ ಆಗೋದಿಲ್ಲ. ಶಾಂತಂ ಪಾಪಂ ಅವರು ಸ್ಟೋರಿ ಎತ್ತುಕೊಂಡು ಮಾಡಿದ್ದರು. ಎಂಥೆಂಥ ಮಾತುಗಳನ್ನು ಆಡುತ್ತಿದ್ದಾರೆ ಗೊತ್ತಾ? ನೀನು ಮೂರು ತಿಂಗಳು ಮಾತ್ರ ಚೆನ್ನಾಗಿ ನೋಡಿಕೊಳ್ಳೋದು ಎಂದು ಎಲ್ಲರೂ ಹೇಳಿದರು. ನೀನು ಹಾಗೆ ಮಾಡ್ತಿದ್ಯಾ. ನನ್ನ ಮಾನ ಮರ್ಯಾದೆ ಎಲ್ಲವೂ ಹೋಗಿದೆ, ಇನ್ನೂ ಹೋಗಲಿ ಎಂದು ಲೀಲಾ ಹೇಳಿದ್ದಾರೆ.
ಹೋಗು ಎಂದ ಮಂಜು
ಕೊನೆಗೆ ಮಂಜು ಅವರು, “ನಾನು ಏನು ಅಂದೆ? ಹೋಗೆ ಸುಮ್ಮನೆ” ಎಂದು ಹೇಳಿದ್ದಾರೆ. ಈ ಮಾತು ಕೇಳಿ ಅವರ ಮಕ್ಕಳು ಕೂಡ ಎಲ್ಲೂ ಹೋಗಬೇಡ, ಅಪ್ಪ ಜೊತೆ ಇರು ಎಂದು ಹೇಳಿದ್ದಾರೆ. ಆ ಮಕ್ಕಳು ಈ ಮಾತು ಹೇಳುವಾಗ ನಕ್ಕಿದ್ದಾರೆ. ಲೀಲಾ ಮಾತು ಕೇಳಿ ಮಂಜು ಅವರು ಹೋಗು ಮತ್ತೆ ಎಂದು ಕೂಗಿದ್ದಾರೆ.
ವೀಕ್ಷಕರು ಹೇಳಿದ್ದೇನು?
ಲೀಲಾ ಹಾಗೂ ಮಂಜು ಅವರ ಈ ವಿಡಿಯೋ ನೋಡಿ ಅನೇಕರು, ಇದೆಲ್ಲವೂ ನಾಟಕ, ಇವರದ್ದು ಇದೇ ಆಯ್ತು ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ವ್ಯೂಸ್ ಬೇಕು, ಲೈಕ್ಸ್ ಬೇಕು, ಫಾಲೋವರ್ಸ್ ಆಗಬೇಕು ಎಂದು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

