- Home
- Entertainment
- TV Talk
- Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ
Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ
ಜೀ ಕನ್ನಡದ 'ಆದಿ ಲಕ್ಷ್ಮಿ ಪುರಾಣ' ಧಾರಾವಾಹಿಯಲ್ಲಿ ಆದಿ ಮತ್ತು ಲಕ್ಷ್ಮಿಯ ಅನಿವಾರ್ಯ ಮದುವೆಯ ಕಥೆ ಸಾಗುತ್ತಿದೆ. ಈ ಮದುವೆಯ ಚಿತ್ರೀಕರಣದ ವೇಳೆ, ನಾಯಕಿ ಆಶಾ ಅಯ್ಯನರ್‌ಗೆ ನಾಯಕ ರಜನೀಶ್ ನಿಜವಾಗಿಯೂ ಮೂರು ಗಂಟು ಹಾಕಿಬಿಡುತ್ತಾರೇನೋ ಎಂಬ ಭಯ ಕಾಡಿತ್ತಂತೆ. ಈ ಬಗ್ಗೆ ನಟಿ ಹೇಳಿದ್ದೇನು?

ಆದಿ-ಲಕ್ಷ್ಮಿ ಸ್ಟೋರಿ
ಜೀ ಕನ್ನಡದಲ್ಲಿ ಆರಂಭವಾಗಿರೋ ಆದಿ ಲಕ್ಷ್ಮಿ ಪುರಾಣ ವೀಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಿದೆ. ಹಳ್ಳಿ ಹುಡುಗಿ ಲಕ್ಷ್ಮೀ, ಸಿಟಿ ಹುಡುಗ ಆದಿ ನಡುವಿನ ಕಥೆ ಇದಾಗಿದೆ. ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ. ಮುಂದೇನು ಕಥೆ ಎನ್ನುವುದೇ ರೋಚಕವಾಗಿದೆ.
ಲಕ್ಷ್ಮಿಗೆ ಆದಿ ಜೊತೆ ಮದುವೆ
ಲಕ್ಷ್ಮಿಯ ಮದುವೆಯ ಸಂದರ್ಭದಲ್ಲಿ, ಹುಡುಗನ ಜೊತೆ ಮನೆಯವರ ಕಿರಿಕ್ ಆದಾಗ, ಆದಿ ಆಕೆಯನ್ನು ಮದುವೆಯಾಗುವ ಅನಿವಾರ್ಯತೆ ಎದುರಾಗುತ್ತದೆ. ಇದಾಗಲೇ ಬ್ರಹ್ಮಗಂಟು ಸೇರಿದಂತೆ ಕೆಲವು ಸೀರಿಯಲ್ಗಳಲ್ಲಿ ಆದಂತೆಯೇ ಇಲ್ಲಿಯೂ ಆಗಿದೆ.
ಮುಂದೇನು ಅನಾಹುತ?
ಆದಿ ಇದಾಗಲೇ ಬೇರೆ ಹುಡುಗಿಯನ್ನು ಲವ್ ಮಾಡುತ್ತಿದ್ದಾನೆ. ಆದರೆ ಈ ಮದುವೆಯಿಂದ ಇಬ್ಬರ ಜೀವನದಲ್ಲಿ ಆಗುವ ಅನಾಹುಗಳು ಏನು ಎನ್ನುವ ಬಗ್ಗೆ ಇದೀಗ ಸ್ಟೋರಿ ಶುರುವಾಗಿದೆ.
ಸೀರಿಯಲ್ ಮದುವೆಗಳು
ಹಿಂದೂ ಸಂಪ್ರದಾಯದಲ್ಲಿ ಮೂರು ಗಂಟು ಹಾಕಿಬಿಟ್ಟರೆ ಮದುವೆ ಆಗುತ್ತದೆ. ಆದರೆ ಸೀರಿಯಲ್, ಸಿನಿಮಾಗಳಲ್ಲಿ ನಟ-ನಟಿಯರು ಅದೆಷ್ಟೋ ಬಾರಿ ಮದುವೆಯಾಗುವುದು ಇದೆ. ಆದರೂ ಮೂರು ಗಂಟು ಹಾಕುವುದನ್ನು ಎಲ್ಲಿಯೂ ತೋರಿಸುವುದಿಲ್ಲ. ತೋರಿಸಿದರೂ ಅದು ಅಸಲಿಯಾಗಿರುವುದಿಲ್ಲ. ಶೂಟಿಂಗ್ನಲ್ಲಿ ಬೇರೆಯದ್ದೇ ನಡೆದಿರುತ್ತದೆ.
ಅಸಲಿ ಮದುವೆಯ ಭಯ!
ಆದರೆ, ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿರೋ ನಟಿ ಆಶಾ ಅಯ್ಯನರ್ ಅವರಿಗೆ ಎಲ್ಲಿ ನಟ ಆದಿ ಅರ್ಥಾತ್ ರಜನೀಶ್ ಮದುವೆಯ ವೇಳೆ ಮೂರು ಗಂಟು ಹಾಕಿಬಿಡುತ್ತಾರೋ ಎನ್ನುವ ಭಯ ಇತ್ತಂತೆ.
ಮೂರು ಗಂಟು
ಏಷ್ಯಾನೆಟ್ ಸುವರ್ಣ ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ನಟಿ ಆಶಾ ಮತ್ತು ರಜನೀಶ್ ರಿವೀಲ್ ಮಾಡಿದ್ದಾರೆ. ಇವರು ಮೊದಲೇ ನನಗೆ ವಾರ್ನ್ ಮಾಡಿದ್ದರು, ಮೂರು ಗಂಟು ಹಾಕಬಾರದು ಎಂದು. ನಾನ್ಯಾಕೆ ಇವರಿಗೆ ಮೂರು ಗಂಟು ಹಾಕಲಿ ಹೇಳಿ ಎಂದು ತಮಾಷೆ ಮಾಡಿದ್ದಾರೆ.
ನಡುಗಿದ ಕೈ
ಇದೇ ವೇಳೆ ತಾಳಿ ಕಟ್ಟುವಾಗ ಕೈ ನಡುಗುತ್ತಿತ್ತು ಎಂದೂ ಹೇಳಿದ್ದಾರೆ. ಆಶಾ ಕೂಡ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸೀರಿಯಲ್ಗೆ ಎಲ್ಲರ ಆಶೀರ್ವಾದ ನೀಡುವಂತೆ ಕೋರಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

