- Home
- Entertainment
- TV Talk
- ಕೇಕ್ ಕಟ್ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ: ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?
ಕೇಕ್ ಕಟ್ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ: ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?
ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ಸ್ನೇಹಿತನಿಗೆ ಕೇಕ್ ತಿನ್ನಿಸುತ್ತಿರುವ ವಿಡಿಯೋ ಪ್ರೇಮಿಗಳ ದಿನದ ಸಂದರ್ಭದಲ್ಲಿ ವೈರಲ್ ಆಗಿದೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಸ್ವತಃ ರಕ್ಷಿತಾ ಅವರೇ ಮಾಹಿತಿ ನೀಡಿದ್ದಾರೆ. ಅವರು ಹೇಳಿದ್ದೇನು?

ರಕ್ಷಿತಾ ಶೆಟ್ಟಿ ವಿಡಿಯೋ
ರಕ್ಷಿತಾ ಶೆಟ್ಟಿ ಬಿಗ್ಬಾಸ್ 12ರ ರನ್ನರ್ ಅಪ್ (Bigg Boss Rakshita Shetty) ಆಗುತ್ತಿದ್ದಂತೆಯೇ ಹೋದಲ್ಲಿ, ಬಂದಲ್ಲಿ ಅವರ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿರುತ್ತದೆ. ಅದರಲ್ಲಿಯೂ ಬಿಗ್ಬಾಸ್ ಮನೆಯಲ್ಲಿ ನನಗೆ ಗಿಲ್ಲಿನಟನಂಥ ಹುಡುಗ ಬೇಕು ಎಂದು ಹೇಳಿ ಸದ್ದು ಮಾಡಿದ ಪುಟ್ಟಿ ಈಕೆ. ಇಂತಿಪ್ಪ ರಕ್ಷಿತಾ ಶೆಟ್ಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಕಾರಣ ಸ್ನೇಹಿತನಿಗೆ ಕೇಕ್ ತಿನ್ನಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ (Valentine's day) ಬರುತ್ತದೆ. ಇದಾಗಲೇ ಆ ಡೇ, ಈ ಡೇ ಎಂದೆಲ್ಲಾ ಶುರುವಾಗಿದೆ. ಈ ಸಂದರ್ಭದಲ್ಲಿ ಈ ವಿಡಿಯೋ ಹಲವಾರು ರೀತಿಯಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ.
ಸ್ನೇಹಿತನಿಗೆ ಕೇಕ್ ತಿನ್ನಿಸಿದ ಪುಟ್ಟಿ
ಸಾಮಾನ್ಯವಾಗಿ ಇಂಥ ದಿನಗಳಲ್ಲಿ ಒಬ್ಬ ಹುಡುಗ, ಹುಡುಗಿಗೆ ಅದರಲ್ಲಿಯೂ ಈ ರೀತಿ ಹೂವಿನ ವಿನ್ಯಾಸದೊಂದಿಗೆ ಕೇಕ್ ಕಟ್ ಮಾಡಿ ತಿನ್ನಿಸಿದರೆ, ಅದು ಪ್ರೇಮಿಗೆ ತಿನ್ನಿಸುವುದು ಅಂದುಕೊಳ್ಳುವುದು ಉಂಟು. ಇದೇ ಕಾರಣಕ್ಕೆ ರಕ್ಷಿತಾ ಶೆಟ್ಟಿ ವಿಡಿಯೋ ಸಕತ್ ವೈರಲ್ ಆಗ್ತಿದೆ.
ರಕ್ಷಿತಾ ಶೆಟ್ಟಿ ಸ್ಪಷ್ಟನೆ
ಇದರ ಬಗ್ಗೆ ವಿಡಿಯೋ ವೈರಲ್ ಆಗುತ್ತಲೇ ರಕ್ಷಿತಾ ಶೆಟ್ಟಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಅದೇನೆಂದರೆ, ಹೀಗೆ ಕೇಕ್ ತಿನ್ನಿಸುತ್ತಿರುವುದು ನನ್ನ ಸ್ನೇಹಿತನೇ. ಆತನ ಹೆಸರು ಅನೀಶ್ ಎಂದಿರುವ ರಕ್ಷಿತಾ ಶೆಟ್ಟಿ ಆದರೆ ನೀವು ಅಂದುಕೊಂಡಂತೆ ಅಲ್ಲ ಎಂದಿದ್ದಾರೆ.
ಹೋದ ವರ್ಷದ ಪ್ರೇಮಿಗಳ ದಿನದ್ದು
ಅಷ್ಟಕ್ಕೂ ಇದು ಒಂದು ವರ್ಷದ ಹಳೆಯ ವಿಡಿಯೋ. ಬಿಗ್ಬಾಸ್ಗೆ ಬರುವ ಮುಂಚೆಯೂ ರಕ್ಷಿತಾ ಶೆಟ್ಟಿ ಅವರಿಗೆ ಯುಟ್ಯೂಬ್ನಲ್ಲಿ ಪ್ರಮೋಷನ್ ಜಾಹೀರಾತುಗಳು ಬರುತ್ತಿದ್ದವು. ಅದೇ ರೀತಿ ಕಳೆದ ವರ್ಷ ಪ್ರೇಮಿಗಳ ದಿನದ ಸಂದರ್ಭದಲ್ಲಿ ಫುಡ್‌ನ ಬ್ರ್ಯಾಂಡ್‌ವೊಂದನ್ನ ಪ್ರಮೋಷನ್ಗಾಗಿ ಈ ರೀತಿಯ ಸೆಟ್ಅಪ್ ಮಾಡಲಾಗಿತ್ತು ಎಂದಿದ್ದಾರೆ.
ವ್ಯಾಲೆಂಟೈನ್ಸ್ ಡೇ ರೀತಿ ಪ್ರಮೋಷನ್
ವ್ಯಾಲೆಂಟೈನ್ಸ್ ಡೇ ರೀತಿ ಪ್ರಮೋಟ್ ಮಾಡಬೇಕಿತ್ತು. ಆದ್ದರಿಂದ ಈ ರೀತಿ ಅನೀಶ್ ಮತ್ತು ನನ್ನನ್ನು ಸೆಲೆಕ್ಟ್ ಮಾಡಿದ್ದರು. ಪ್ರೇಮಿಗಳ ದಿನವನ್ನು ಒಬ್ಬರೇ ಆಚರಿಸಲು ಆಗಲ್ಲವಲ್ಲ, ಅದಕ್ಕಾಗಿಯೇ ನನ್ನ ಫ್ರೆಂಡ್ ಅನೀಶ್ ಬಂದಿದ್ದ. ಅವನು ನನ್ನ ತಮ್ಮನ ಹಾಗೆ. ಆದರೆ ಈ ಪ್ರಮೋಷನ್ಗೆ ಬೇಕಿದ್ದ ಹಿನ್ನೆಲೆಯಲ್ಲಿ, ಅವನನ್ನು ಕರೆದುಕೊಂಡೆ ಎಂದಿದ್ದಾರೆ.
ಕಾಂಟ್ರವರ್ಸಿ ಮಂದಿ
ಒಟ್ಟಿನಲ್ಲಿ ರಕ್ಷಿತಾ ಶೆಟ್ಟಿ ಬಿಗ್ಬಾಸ್ನಿಂದ ಸೆಲೆಬ್ರಿಟಿ ಆಗುತ್ತಿದ್ದಂತೆಯೇ ಅವರ ಹಳೆಯ ವಿಡಿಯೋಗಳೆಲ್ಲಾ ಮತ್ತೆ ಮತ್ತೆ ಮೇಲಕ್ಕೆ ಬರುತ್ತಿವೆ. ಜೊತೆಗೆ ಒಂದಿಷ್ಟು ಕಾಂಟ್ರವರ್ಸಿ ಮಾಡುವುದಕ್ಕೂ ಅದಕ್ಕೆಂದೇ ಇರುವ ಜನರೂ ಕಾಯುತ್ತಿರುತ್ತಾರೆ. ಅವರು ಸ್ಪಷ್ಟನೆ ಕೊಡುವ ಹೊತ್ತಿಗೆ, ಅದು ರೆಕ್ಕೆ ಪುಕ್ಕ ಎಲ್ಲಾ ಸೇರಿ ಬಾಯಿಯಿಂದ ಬಾಯಿಗೆ ಹೋಗಿ ಏನೇನೋ ಆಗಿಬಿಟ್ಟಿರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

