ಮದುವೆ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಕಮಲಿ ಧಾರಾವಾಹಿ ನಟ ನಿರಂಜನ್ ಬಿಎಸ್
Amulya And Niranjan Bs: ಕಮಲಿ ಧಾರಾವಾಹಿ ನಟ ನಿರಂಜನ್ ಬಿಎಸ್, ನಟಿ ಅಮೂಲ್ಯ ಗೌಡ ಅವರು ಲವ್ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎಂಬ ಮಾತು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಈಗ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿರಂಜನ್ ಬಿಎಸ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ನನಗೆ ಮದುವೆ ಆಗಿದೆ ಅಂತಾರೆ!
ನಾನು ಯಾವ ಧಾರಾವಾಹಿಗಳಲ್ಲಿ ನಟಿಸಿದ್ದೀನೋ, ಆ ಸೀರಿಯಲ್ ನಟಿಯ ಜೊತೆ ನನ್ನ ಜೋಡಿ ಮಾಡ್ತಾರೆ, ಮದುವೆ ಆಗಿದೆ, ಮಗು ಆಗಿದೆ ಎಂದು ಯುಟ್ಯೂಬ್‌ನಲ್ಲಿ ರಾಜಾರೋಷವಾಗಿ ಹೇಳುತ್ತಾರೆ. ಈ ರೀತಿ ಸುಳ್ಳು ಮಾಹಿತಿ ಕೊಟ್ಟರೆ ಏನು ಮಾಡೋಣ? ಎಂದಿದ್ದಾರೆ ನಿರಂಜನ್.
ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ
ನಾನು ಕಮಲಿ ಧಾರಾವಾಹಿ ನಟಿ ಅಮೂಲ್ಯ ಗೌಡ ಜೊತೆ ಒಳ್ಳೆಯ ಸ್ನೇಹ ಹೊಂದಿದ್ದೇನೆ. ನಾವು ಆಗಾಗ ಭೇಟಿ ಆಗ್ತೀವಿ, ಫೋನ್‌ನಲ್ಲಿ ಮಾತಾಡ್ತೀವಿ. ನಮ್ಮಿಬ್ಬರಿಗೂ ಸ್ಪಷ್ಟತೆ ಇದೆ. ಅಧಿಕೃತ ಆಗುವವರೆಗೂ ಏನೂ ಹೇಳೋದು ಬೇಡ, ಎಲ್ಲರ ಪ್ರೀತಿ ಹಾಗೆ ಇರಲಿ ಎಂದು ನಿರಂಜನ್ ಹೇಳಿದ್ದಾರೆ.
ಅಮೂಲ್ಯ ಜೊತೆ ನಟಿಸಲು ಇಷ್ಟ
ನನಗೆ ಅಮೂಲ್ಯ ಜೊತೆ ಇರಲು, ನಟಿಸಲು ತುಂಬ ಆಸೆ ಇದೆ. ಆದರೆ ಸದ್ಯ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದೇವೆ. ಮುಂದೆ ಅವಕಾಶ ಬರತ್ತಾ ಅಂತ ನೋಡೋಣ ಎಂದು ನಿರಂಜನ್ ಹೇಳಿದ್ದಾರೆ.
ಅಮೂಲ್ಯ ಅಂಥವರು ಸಿಗೋದು ಅಪರೂಪ
ನನ್ನ ಲೈಫ್‌ನಲ್ಲಿ ಏನೂ ಇಲ್ಲ ಅಂದಾಗ ನನ್ನ ಮೇಲೆ ನಂಬಿಕೆ ಇಡುವ ವ್ಯಕ್ತಿ ಸಿಗೋದು ಅಪರೂಪ. ಅಮೂಲ್ಯ ಕೂಡ ನಾನು ಏನೂ ಇಲ್ಲ ಎಂದಾಗ, ಸಾಧನೆ ಮಾಡದಿದ್ದ ಟೈಮ್‌ನಲ್ಲಿ ನನ್ನ ಜೊತೆ ನಿಂತರು ಎಂದು ನಿರಂಜನ್ ಬಿಎಸ್ ಅವರು ಹೇಳಿದ್ದಾರೆ.
ತೆಲುಗು ಶೋನಲ್ಲಿ ನಡೆದಿದ್ದೇನು?
ಈ ಹಿಂದೆ ತೆಲುಗು ಶೋವೊಂದರಲ್ಲಿ ಅಮೂಲ್ಯ ಅವರು ನಿರಂಜನ್‌ಗೆ ಫೋನ್ ಮಾಡಬೇಕು ಎಂದು ಹೇಳಿದ್ದರು. ಆಗ ನಿರಂಜನ್ ಫೋಸ್ ರಿಸೀವ್ ಮಾಡಿದಕೂಡಲೇ, ಅಮೂಲ್ಯ ಅವರು ನನ್ನ ಫೋನ್ ಸ್ಪೀಕರ್‌ನಲ್ಲಿದೆ ಎಂದು ಹೇಳಿದ್ದರು. ಅಮೂಲ್ಯ ನಿರಂಜನ್ ಅವರಿಗೆ ನನ್ನಾ ಎಂದು ಕರೆಯುತ್ತಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

