Women Spa Assault: ಕೇರಳದಲ್ಲಿ ನಡೆದ ಅತ್ಯಾ*ಚಾರವೊಂದು ನಿಜಕ್ಕೂ ಎಲ್ಲರಿಗೂ ಭಯ ಹುಟ್ಟಿಸಿದೆ. ದ್ವೇಷದ ಕಾರಣಕ್ಕೆ ಸುಪಾರಿ ಕೊಟ್ಟು ಸಾಮೂಹಿಕ ಅತ್ಯಾ*ಚಾರ ಮಾಡಿಸಿದರಾ ಎಂಬ ಪ್ರಶ್ನೆ ಮೂಡಿಸಿದೆ. ಹಾಗಾದರೆ ನಿಜಕ್ಕೂ ಏನಾಯ್ತು?

ದೇಶದಲ್ಲಿ ಅತ್ಯಾ*ಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇರಳದ ತಿರುವಲ್ಲಾದಲ್ಲಿ ಸ್ಪಾ ಉದ್ಯೋಗಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿತ್ತು. ಈ ಪ್ರಕರಣ ನಿಜಕ್ಕೂ ದೇಶದೆಲ್ಲೆಡೆ ತಲ್ಲಣ ಮೂಡಿಸಿದೆ.

ಘಟನೆಯ ಬಗ್ಗೆ ವಿವರ ಇಲ್ಲಿದೆ

ಸುಮಾರು 10 ಜನರ ಗುಂಪೊಂದು ಸ್ಪಾ ಶಾಪ್ ಒಳಗೆ ನುಗ್ಗಿದೆ. ಯಾರೋ ಸುಪಾರಿ ನೀಡಿದ್ದಾರೆ ಎಂದು ಆ ಗುಂಪು ಹೇಳಿದೆ. ನಂತರ ಆ ರೂಮ್‌ನ್ನು ಲಾಕ್ ಮಾಡಿದ್ದಾರೆ. ಆ ಹುಡುಗಿಯ ಕುತ್ತಿಗೆಗೆ ಚಾಕು ಹಿಡಿದು, ಬೆದರಿಕೆ ಹಾಕಿ ಸುಮಾರು 35 ನಿಮಿಷಗಳ ಕಾಲ ಸಾಮೂಹಿಕ ಅತ್ಯಾ*ಚಾರ ಮಾಡಿದ್ದಾರೆ. ಒಂದು ಸ್ಪಾ ಒಳಗಡೆ ಹೋಗಿ ಏಕಾಏಕಿ ಅತ್ಯಾ*ಚಾರ ಮಾಡೋದು ಅಂದ್ರೆ ಏನರ್ಥ?

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 'ಮರಣ ಸುಬಿನ್' ಎಂದು ಕರೆಸಿಕೊಳ್ಳುವ ಸುಬಿನ್ ಅಲೆಕ್ಸಾಂಡರ್ ಚಾಕೊ (27), ಬರ್ಲಿನ್ ದಾಸ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ನಾಲ್ವರು ಆರೋಪಿಗಳು ಎಸ್ಕೇಪ್‌ ಆಗಿದ್ದಾರೆ. ಆದರೆ ಆ ಪೊಲೀಸರು ಇವರನ್ನು ಹುಡುಕುತ್ತಿದ್ದಾರೆ.

ಪೊಲೀಸರು ಹೇಳಿದ್ದೇನು?

ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಆನಂದ್ ಅವರು ಈ ಘಟನೆಯ ಬಗ್ಗೆ ಮಾತನಾಡಿದ್ದು, “ನಾವು ಅರೆಸ್ಟ್‌ ಮಾಡಿರುವ ಸುಬಿನ್ ವಿರುದ್ಧ 'ಕಾಪಾ' (KAAPA) ಕಾಯ್ದೆಯನ್ನು ಹೇರಲಾಗುವುದು. ಈತ ಇದಕ್ಕೂ ಮೊದಲು ಆರು ತಿಂಗಳ ಕಾಲ ಇದೇ ಕಾಯ್ದೆಯಡಿ ಜೈಲಿನಲ್ಲಿದ್ದನು. ಆಮೇಲೆ ಮಾರ್ಚ್ 2025ರಲ್ಲಿ ಬಿಡುಗಡೆಯಾಗಿದ್ದನು” ಎಂದು ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಸ್ಪಾ ಮಾಲೀಕರು ಯಾವುದೇ ದೂರು ನೀಡಿಲ್ಲ. ಆದರೆ ಸ್ಪೆಷಲ್ ಬ್ರಾಂಚ್ ಮಾಹಿತಿಯ ಮೇರೆಗೆ ಪೊಲೀಸರೇ ಈ ಸ್ಥಳಕ್ಕೆ ಬಂದು, ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತನಿಖೆ ಮಾಡುತ್ತಿದ್ದಾರೆ. ಸ್ಪಾ ಮಾಲೀಕರ ನಡುವೆ ದ್ವೇಷ ಇರಬಹುದು, ಹೀಗಾಗಿ ಈ ರೀತಿ ಮಾಡಿರಬಹುದು ಎಂದು ಅನುಮಾನ ಇದೆಯಂತೆ.

ಸ್ಪಾ ಮಾಲೀಕ ಡಾ. ಸಂಜಯ್ ಅವರು, “ನನ್ನ ಬ್ಯುಸಿನೆಸ್ ಹಾಳು ಮಾಡಬೇಕು ಎಂದು ಮತ್ತೊಬ್ಬ ಸ್ಪಾ ಮಾಲೀಕ ಈ ರೀತಿ ಸುಪಾರಿ ನೀಡಿದ್ದಾನೆ. ಪೊಲೀಸ್, ರೌಡಿಗಳ ನಡುವಿನ ಅಪವಿತ್ರ ಮೈತ್ರಿ ಇದೆ ” ಎಂದು ಹೇಳಿದ್ದಾರೆ.