Actress Amulya: ನಟಿ ಅಮೂಲ್ಯ ಹಾಗೂ ಆರ ಜಗದೀಶ್‌ ಆರ್‌ ಚಂದ್ರ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ಗೆ ಸಂದರ್ಶನ ನೀಡಿದ್ದಾರೆ. ಆ ವೇಳೆ ಅಮೂಲ್ಯ ಅವರಿಗೆ ಯಾವ ವಿಷಯದಲ್ಲಿ ಕೈ ಮಗಿದು ಕೇಳ್ತೀನಿ ಎಂದು ಹೇಳಿದ್ದಾರೆ. ಹಾಗಾದರೆ ಏನದು? 

ನಟಿ ಅಮೂಲ್ಯ ( Actress Amulya ) ಹಾಗೂ ಆರ್‌ ಜಗದೀಶ್‌ ಅವರು ಮುದ್ದಾದ ಎರಡು ಗಂಡು ಮಕ್ಕಳ ಪಾಲಕರಾಗಿದ್ದಾರೆ. ಅಮೂಲ್ಯ ಹೀಗೆ ಮಾಡೋದು ಜಗದೀಶ್‌ ಅವರಿಗೆ ಇಷ್ಟವೇ ಆಗೋದಿಲ್ವಂತೆ. ಈ ಬಗ್ಗೆ ಎಷಿಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಮೂಲ್ಯ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೂಲ್ಯ ಬೇಗ ಇರಿಟೇಟ್‌ ಆಗ್ತಾರೆ!

ಸಿಟ್ಟು ಬಂದಾಗ ಅಥವಾ ಮೂಡ್‌ಗೆ ತಕ್ಕಂತೆ ಇವರಿಬ್ಬರು ಫೋನ್‌ ನಂಬರ್‌ ಸೇವ್‌ ಮಾಡಿಕೊಳ್ಳುತ್ತಾರಂತೆ. ಅಮೂಲ್ಯ ಅವರು ಬೇಗ ಇರಿಟೇಟ್‌ ಆಗುತ್ತಾರೆ. ಅಂದುಕೊಂಡಿದ್ದು ಬೇಗ ಆಗಿಲ್ಲ ಎಂದರೆ ಇರಿಟೇಟ್‌ ಆಗುತ್ತಾರೆ. ಅಮೂಲ್ಯ ಶೂಟಿಂಗ್‌ ಹೋದಾಗ ನನಗೆ ಅರ್ಧ ದಿನ ಮಕ್ಕಳನ್ನು ನೋಡಿಕೊಳ್ಳೋದು ಕಷ್ಟ. ಅಷ್ಟು ಇರಿಟೇಟ್‌ ಆಗ್ತೀನಿ. ಆಗ ಅಮೂಲ್ಯ ಎಷ್ಟು ಕಷ್ಟಪಡ್ತಾರೆ ಎಂದು ಆಗ ಗೊತ್ತಾಗಿದೆ ಎಂದಿದ್ದಾರೆ ಜಗದೀಶ್‌ ಆರ್‌ ಚಂದ್ರ.

ತಂದೆ ಬಿಟ್ಟು ಬೇರೆ ಯಾರ ಬಳಿಯೂ ಹಣ ಕೇಳೋಕೆ ಆಗಲ್ಲ!

“ಶಾಪಿಂಗ್‌ ವಿಚಾರಕ್ಕೆ ಗಂಡನನ್ನು ಒಪ್ಪಿಸುವ ಪ್ರಶ್ನೆಯೇ ಇಲ್ಲ. ನಾನು ಕಳೆದ ಎಂಟು ವರ್ಷ ಕೆಲಸವನ್ನೇ ಮಾಡಿಲ್ಲ. ಹೀಗಾಗಿ ಜಗದೀಶ್‌ ಅವರೇ ದುಡ್ಡು ಬೇಕಾ ಎಂದು ಕೇಳುತ್ತಾರೆ. ನನಗೆ ಆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನನ್ನ ತಂದೆ ಬಳಿ ನಾನು ಆರಾಮಾಗಿ ದುಡ್ಡು ಕೇಳುತ್ತಿದ್ದೆ, ಈಗ ಬೇರೆಯವರ ಬಳಿ ಹಣ ಕೇಳೋಕೆ ನನಗೆ ಅಷ್ಟು ಇಷ್ಟ ಆಗಿಲ್ಲ” ಎಂದಿದ್ದಾರೆ ನಟಿ ಅಮೂಲ್ಯ

ಅಮೂಲ್ಯ ಹಣ ಕೇಳಲ್ಲ

“ಟ್ರಾವೆಲಿಂಗ್‌ ವಿಚಾರ ಬಿಟ್ಟು, ಬೇರೆ ಯಾವುದೇ ವಿಷಯಕ್ಕೆ ಹಣ ಬೇಕು ಅಂತ ಅಂತಿದ್ದರೆ ನಾನು ಕೊಡ್ತೀನಿ, ಅಥವಾ ಕೆಲವೊಂದಕ್ಕೆ ನಾನು ಮುಂದೆ ಬಂದು ಹಣ ಕೊಡಬೇಕು, ಅವರು ಕೇಳೋದಿಲ್ಲ” ಎಂದು ಜಗದೀಶ್‌ ಆರ್‌ ಚಂದ್ರ ಅವರು ಹೇಳಿದ್ದಾರೆ.

ಗ್ರ್ಯಾಂಡ್‌ ಡ್ರೆಸ್‌ ಹಾಕು

“ನಾನು ಸಾಮಾನ್ಯವಾಗಿ ಇರೋ ಬಟ್ಟೆಗಳನ್ನು ಹಾಕಿಕೊಳ್ತೀನಿ. ಆಗ ಜಗದೀಶ್‌ ಅವರೇ ಈ ರೀತಿ ಬಟ್ಟೆ ಹಾಕಬೇಡ, ಗ್ರ್ಯಾಂಡ್‌ ಆಗಿ ರೆಡಿ ಆಗು” ಎಂದು ಜಗದೀಶ್‌ ಹೇಳ್ತಾರೆ ಎಂದಿದ್ದಾರೆ ಅಮೂಲ್ಯ.

ಅಮೂಲ್ಯ ಯಾಕೆ ಸಿಂಪಲ್‌ ಆಗಿ ಇರಬಾರದು?

“ಅಮೂಲ್ಯ ಅವರು ಸಾಮಾನ್ಯರಂತೆ ಜೀವನ ಮಾಡುತ್ತಿದ್ದರೂ ಕೂಡ ಅವರು ಸೆಲೆಬ್ರಿಟಿ. ಜನರು ಅವರನ್ನು ನೋಡುತ್ತಾರೆ, ಹೀಗಾಗಿ ರೆಡಿ ಆಗು ಎಂದು ಹೇಳುತ್ತೇನೆ” ಎಂದಿದ್ದಾರೆ ಜಗದೀಶ್.‌

ಒಂದೇ ದಿನ ಅದೇ ಬಟ್ಟೆ ಹಾಕ್ತೀನಿ

“ನಾನು ಯಾವುದೇ ಇವೆಂಟ್‌ಗೆ ಹೋದರೂ ಕೂಡ ಬೆಳಿಗ್ಗೆ ಹಾಕಿದ ಡ್ರೆಸ್‌ ಸಂಜೆ ಕೂಡ ಅದೇ ಹಾಕ್ತೀನಿ. ಆಗ ಜಗದೀಶ್‌ ಅವರು ಕೈ ಮುಗಿದು ನಾನೇ ಹಣ ಕೊಡ್ತೀನಿ, ಬೇರೆ ಡ್ರೆಸ್‌ ತಗೋ ಎಂದು ಹೇಳುತ್ತಾರೆ” ಎಂದಿದ್ದಾರೆ ಅಮೂಲ್ಯ.