Published : Jul 07, 2026, 07:00 AM ISTUpdated : Jul 07, 2026, 10:00 PM IST

Karnataka News Live: 'ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್ - 'ಕನ್ನಡತಿ' ನಟಿಯ ಫೋಟೋಗಳು ವೈರಲ್!

ಸಾರಾಂಶ

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕಲಬುರಗಿಯಲ್ಲಿ ವಿಭಾಗ ಮಟ್ಟದ ಸಭೆ ಕರೆದಿದ್ದು, ಬರ ಪರಿಸ್ಥಿತಿ ಕುರಿತು ಸಮಗ್ರ ಚರ್ಚೆ ನಡೆಸುತ್ತೇವೆ. ಅಲ್ಲದೆ, ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಿಕೊಂಡು, ಪರಿಶೀಲನೆ ನಡೆಸಿದ ಬಳಿಕ ‘ಬರಗಾಲ ಘೋಷಣೆ’ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬರ ಘೋಷಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ಕೊರತೆಯ ಆತಂಕ ಎದುರಾಗಿದ್ದರೂ ಬರ ಘೋಷಣೆ ಮಾಡುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದೇ ದಿನದಲ್ಲಿ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯದ ಮಾರ್ಗಸೂಚಿಗಳ ಪ್ರಕಾರ ಸಮೀಕ್ಷೆ ನಡೆಸಿ, ಬೆಳೆ ಹಾನಿ ಹಾಗೂ ನೀರಿನ ಕೊರತೆಯ ವರದಿ ಆಧರಿಸಿ ಬರ ಘೋಷಣೆ ಮಾಡಬೇಕಾಗುತ್ತದೆ. ಅದಕ್ಕೆ ಕಾಲಾವಕಾಶ ಬೇಕು. ಉತ್ತರ ಕರ್ನಾಟಕ ಭಾಗದ ಬರ ಕುರಿತಂತೆ ಕಲಬುರಗಿಯಲ್ಲಿ ಮಂಗಳವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

10:00 PM (IST) Jul 07

'ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್ - 'ಕನ್ನಡತಿ' ನಟಿಯ ಫೋಟೋಗಳು ವೈರಲ್!

Ranjani Raghavan: ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ.

Read Full Story

09:04 PM (IST) Jul 07

'ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು' - ಪತಿ ರಿಷಬ್‌ಗೆ ಪತ್ನಿ ಪ್ರಗತಿ ಶೆಟ್ಟಿ ಹೃದಯಸ್ಪರ್ಶಿ ಶುಭಾಶಯ

ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Read Full Story

09:00 PM (IST) Jul 07

Rishab Shetty - 'ಜೈಹನುಮಾನ್' ತೆಲುಗು ಅಲ್ಲ, ಕನ್ನಡ ಸಿನಿಮಾ; ಮಾರ್ಮಿಕ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!

'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು.

Read Full Story

08:56 PM (IST) Jul 07

ಬೆಂಗಳೂರಿನ ಮಂತ್ರಿಮಾಲ್‌ ಹಿಂಭಾಗದಲ್ಲಿ 5.5 ಕೋಟಿ ವೆಚ್ಚದಲ್ಲಿ ಪಾದಾಚಾರಿ ಸಬ್‌ವೇ ನಿರ್ಮಾಣ!

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಲ್ಲೇಶ್ವರಂನಲ್ಲಿ ₹5.5 ಕೋಟಿ ವೆಚ್ಚದ ಪಾದಚಾರಿ ಸುರಂಗ ಮಾರ್ಗ ನಿರ್ಮಾಣವನ್ನು ಘೋಷಿಸಿದ್ದಾರೆ. ಇದರೊಂದಿಗೆ, ರಾಮೋಹಳ್ಳಿ ಗೇಟ್ ಅಂಡರ್‌ಬ್ರಿಡ್ಜ್, ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದ್ದಾರೆ.

Read Full Story

08:33 PM (IST) Jul 07

Rent Me for a Day - ದಿನಕ್ಕೆ ಬಾಡಿಗೆಗೆ ಸಿಗ್ತೀನಿ ಎಂದ ಯುವತಿ! ಕಾಫಿ, ಸಿನಿಮಾಗೆ ಇಷ್ಟೊಂದಾ ರೇಟು?

ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು 'ನನ್ನನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆಯಿರಿ' ಅಂತ ಹಾಕಿದ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಫಿ ಕುಡಿಯೋಕೆ, ಸಿನಿಮಾ ನೋಡೋಕೆ ಹೀಗೆ ಬೇರೆ ಬೇರೆ ಕೆಲಸಗಳಿಗೆ ತನ್ನ ಜೊತೆ ಬರಲು ಆಕೆ ರೇಟ್ ಕಾರ್ಡ್ ಕೂಡ ಹಾಕಿದ್ದು, ಇದು ನೆಟ್ಟಿಗರ ನಡುವೆ ದೊಡ್ಡ ಚರ್ಚೆ ಮತ್ತು ತಮಾಷೆಗೆ ಕಾರಣವಾಗಿದೆ.
Read Full Story

08:31 PM (IST) Jul 07

64 ದಿನಗಳಲ್ಲಿ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ₹71.77 ಲಕ್ಷ ಕಾಣಿಕೆ - ವಿದೇಶಿ ಕರೆನ್ಸಿಯೂ ಪತ್ತೆ

ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ತೆರೆಯುವ ಕಾರ್ಯ ಶುಕ್ರವಾರ (ಜುಲೈ 3) ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನ ನಡುವೆ ನಡೆಯಿತು.

Read Full Story

08:11 PM (IST) Jul 07

ಪ್ರಜ್ವಲ್‌ ದೇವರಾಜ್‌ ಒಳ್ಳೆಯವರು ಅಂತಾ ಯಾರಾದ್ರೂ ಆಸ್ಕರ್‌ ಅವಾರ್ಡ್‌ ಕೊಟ್ಟಿದ್ದೀರಾ?.. ಕರಾವಳಿ ಚಿತ್ರತಂಡದ ವಿರುದ್ಧ ಫ್ಯಾನ್ಸ್ ಆಕ್ರೋಶ

'ಕರಾವಳಿ' ಚಿತ್ರದ ಟ್ರೈಲರ್‌ನಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲದಿರುವುದು ಮತ್ತು ಕಳಪೆ ಸ್ಕ್ರೀನ್ ಪ್ರೆಸೆನ್ಸ್‌ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಬೇಜವಾಬ್ದಾರಿತನದಿಂದ ಅಭಿಮಾನಿಗಳು ನೊಂದಿದ್ದಾರೆ.

Read Full Story

07:42 PM (IST) Jul 07

₹35 ಲಕ್ಷ ಸಂಬಳ... ಆದರೆ ಬ್ಯಾಂಕ್ ಖಾತೆಗೆ ಮಾತ್ರ ಇಷ್ಟು! SBI ಮ್ಯಾನೇಜರ್ ಸ್ಯಾಲರಿ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಎಸ್‌ಬಿಐ ಮ್ಯಾನೇಜರ್ ಅವರ ₹35.24 ಲಕ್ಷ ವಾರ್ಷಿಕ ಗ್ರಾಸ್ ಸಂಬಳವು, ಕೈಗೆ ಸಿಗುವ ನಿಜವಾದ ಆದಾಯವಲ್ಲ. ಇದರಲ್ಲಿ ಲೀವ್ ಎನ್‌ಕ್ಯಾಶ್‌ಮೆಂಟ್‌ನಂತಹ ಒಂದು ಬಾರಿ ಸಿಗುವ ಭತ್ಯೆಗಳು ಸೇರಿವೆ. ಆದಾಯ ತೆರಿಗೆ, ಇಪಿಎಫ್, ಎನ್‌ಪಿಎಸ್ ಮತ್ತು ಸಾಲದ ಕಡಿತಗಳ ನಂತರ ಅಂತಿಮ ಸಂಬಳ ಖಾತೆಗೆ ಜಮೆಯಾಗುವುದರಿಂದ, ಕೈಗೆ ಸಿಗುವ ಮೊತ್ತ ಗಣನೀಯವಾಗಿ ಕಡಿಮೆಯಿರುತ್ತದೆ.

Read Full Story

07:29 PM (IST) Jul 07

'ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ಧ್ವನಿಯೇ ಇರಲಿಲ್ಲ' - ಕರಾವಳಿ ವಿವಾದದ ಸತ್ಯ ಬಿಚ್ಚಿಟ್ಟ ಪ್ರಜ್ವಲ್ ದೇವರಾಜ್!

'ಕರಾವಳಿ' ಚಿತ್ರದ ಟ್ರೈಲರ್ ವಿವಾದದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ಚಿತ್ರತಂಡ ಸಂಭಾವನೆ ಬಾಕಿ ಉಳಿಸಿಕೊಂಡಿದ್ದರಿಂದ ಡಬ್ಬಿಂಗ್ ಮಾಡಿರಲಿಲ್ಲ ಮತ್ತು ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. 

Read Full Story

07:22 PM (IST) Jul 07

ವಾರಕ್ಕೆ 20 ಸಲನಾ? ಲವ್‌ನಲ್ಲಿ ನೀವು ಯಾವ ಟೈಪ್? ಹೊಸ ಅಧ್ಯಯನ ಹೇಳಿದ ಸೀಕ್ರೆಟ್ ಏನು?

ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ (ANU) ಸಂಶೋಧಕ ಆಡಮ್ ಬೋಡ್ ಮತ್ತು ಅವರ ತಂಡ ಈ ಅಧ್ಯಯನ ನಡೆಸಿದೆ. ಪ್ರಪಂಚದಾದ್ಯಂತ ಪ್ರೀತಿಯಲ್ಲಿರುವ 1,556 ಜನರಿಂದ ಡೇಟಾ ಸಂಗ್ರಹಿಸಿದೆ. 

Read Full Story

07:20 PM (IST) Jul 07

ಕೊಡಗು ಶಾಲೆಗಳಿಗೆ ನಾಳೆ ರಜೆ, ಭಾರಿ ಮಳೆಯಿಂದ ಆರೇಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಕೊಡಗು ಶಾಲೆಗಳಿಗೆ ನಾಳೆ (ಜು.08) ರಜೆ ಘೋಷಿಸಲಾಗಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.

 

Read Full Story

07:08 PM (IST) Jul 07

'ನಮ್‌ ಇಂಡಸ್ಟ್ರಿ ಯಾಕೆ ಉದ್ದಾರ ಆಗಲ್ಲ ಅಂದ್ರೆ ಇದೇ ಕಾರಣ..' ಕರಾವಳಿ ವೇದಿಕೆಯಲ್ಲೇ ರಾಜ್‌ ಬಿ ಶೆಟ್ಟಿ ಕಿಡಿಕಿಡಿ

'ಕರಾವಳಿ' ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಪ್ರತಿಭಟನೆಯಿಂದ ವಿವಾದ ಭುಗಿಲೆದ್ದಿದೆ. ಈ ಕುರಿತು ಮಾತನಾಡಿದ ನಟ ರಾಜ್ ಬಿ. ಶೆಟ್ಟಿ, ಚಿತ್ರತಂಡದ ವಿರುದ್ಧದ ಪಿತೂರಿ ಹಾಗೂ ಪ್ರಜ್ವಲ್ ದೇವರಾಜ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

06:51 PM (IST) Jul 07

ಬಳ್ಳಾರಿಯಲ್ಲಿ ಡಬಲ್ ಮರ್ಡರ್ - ಪತ್ನಿ-ಮಾವನನ್ನು ಚಾಕುವಿನಿಂದ ಕೊಂದ ಪತಿರಾಯ!

ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ನಡೆದಿದೆ.

Read Full Story

06:46 PM (IST) Jul 07

ಸ್ಯಾಂಡಲ್‌ವುಡ್‌ ಕರಾವಳಿಯಲ್ಲಿ ಫುಲ್‌ 'ವರಿ', ಪ್ರಜ್ವಲ್‌ ದೇವರಾಜ್‌ ವೈಮನಸ್ಯಕ್ಕೆ ಹಣವೊಂದೇ ಕಾರಣವೇ?

'ಕರಾವಳಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಂಭಾವನೆ ವಿಚಾರವಾಗಿ ನಾಯಕ ಪ್ರಜ್ವಲ್ ದೇವರಾಜ್ ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಈ ಒಳಜಗಳವು ಚಿತ್ರದ ಡಬ್ಬಿಂಗ್ ಮತ್ತು ನಿಗದಿತ ಬಿಡುಗಡೆಯ ಮೇಲೆ ಪರಿಣಾಮ ಬೀರಿದ್ದು, ಚಿತ್ರದ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ.

Read Full Story

05:52 PM (IST) Jul 07

ಪಾಕಿಸ್ತಾನಿ ಬ್ಯೂಟಿ ಕ್ರೀಮ್ ಬಳಸಿದ ಪುಣೆಯ 18 ಮಹಿಳೆಯರ ಕಿಡ್ನಿ ವೈಫಲ್ಯ! ಲ್ಯಾಬ್ ಪರೀಕ್ಷೆ ವೇಳೆ ವೈದ್ಯರಿಗೆ ಶಾಕ್

 ಪಾಕಿಸ್ತಾನ ಮೂಲದ 'ಗೋರಿ ಬ್ಯೂಟಿ ಕ್ರೀಮ್' ಬಳಸಿ 18 ಮಹಿಳೆಯರು ತೀವ್ರ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಕ್ರೀಮ್‌ನಲ್ಲಿ ಕಾನೂನು ಮಿತಿಗಿಂತ 752 ಪಟ್ಟು ಹೆಚ್ಚು ಪಾದರಸ ಪತ್ತೆಯಾಗಿದ್ದು, ಮಹಾರಾಷ್ಟ್ರ ಎಫ್‌ಡಿಎ ಇದನ್ನು ಅಸುರಕ್ಷಿತ ಎಂದು ಘೋಷಿಸಿ ನಿಷೇಧಿಸಿದೆ.

Read Full Story

05:52 PM (IST) Jul 07

ಹುಟ್ಟುಹಬ್ಬದ ದಿನವೇ ಹ*ತ್ಯೆಯಾದ ಪುತ್ರ, ಕಣ್ಣೀರಿಟ್ಟು ತಾಯಿಯ ಗೋಳಾಟ - ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ

ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್‌ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದಾನೆ. 

Read Full Story

05:48 PM (IST) Jul 07

ಸರ್ಕಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ಮಲ್ಲೇಶ್ವರದ ಫುಟ್‌ಪಾತ್‌ ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿ!

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆದಿದ್ದು, ಸಂತ್ರಸ್ತ ಬೀದಿ ಬದಿ ವ್ಯಾಪಾರಿಗಳು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಹೋರಾಟದ ವೆಚ್ಚಕ್ಕಾಗಿ ಹಣ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. 

Read Full Story

05:35 PM (IST) Jul 07

'ಕೋಪವೇ ವಿರಾಟ್ ಕೊಹ್ಲಿಯ ಟೆಸ್ಟ್ ವಿದಾಯಕ್ಕೆ ಕಾರಣ?' ಕಪಿಲ್ ದೇವ್ ಶಾಕಿಂಗ್ ಹೇಳಿಕೆ

Kapil Dev on Virat Kohli's Test Retirement: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಬೇಗ ನಿವೃತ್ತಿ ಘೋಷಿಸಿದ್ದಾರೆ ಎಂದು ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಕೋಪದಲ್ಲಿ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದ ಅವರು, ಕೊಹ್ಲಿ ಇನ್ನೂ ಕೆಲವು ವರ್ಷ ಭಾರತಕ್ಕಾಗಿ ಟೆಸ್ಟ್ ಆಡಬಹುದಿತ್ತು ಎಂದಿದ್ದಾರೆ.

Read Full Story

05:30 PM (IST) Jul 07

'ಭರವಸೆ ಕಳೆದುಕೊಳ್ಳಬೇಡ, ನಾನಿದ್ದೇನೆ' - ಕೃಷಿ ತಾಪಂಡಗೆ ಧೈರ್ಯ ತುಂಬಿದ ರಾಧಾ ರಮಣ ನಟಿ

ಇತ್ತೀಚೆಗೆ ಕೃಷಿ ತಾಪಂಡ, "ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ" ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು.

Read Full Story

05:02 PM (IST) Jul 07

ರಿಷಬ್ ಶೆಟ್ಟಿ ನೆರವಿನಿಂದ ಬದಲಾದ ಬದುಕು - ಗ್ರಾಮಸ್ಥರಿಂದ ಕಣ್ಣೀರಿನ ಕೃತಜ್ಞತೆ, ವಿಡಿಯೋ ವೈರಲ್

ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Read Full Story

05:01 PM (IST) Jul 07

ಬಿಟ್‌ಕಾಯಿನ್ ಹಗರಣ - ಶ್ರೀಕಿ ಸೇರಿ ಮೂವರ ವಿರುದ್ಧ 3,500 ಪುಟಗಳ ಚಾರ್ಜ್‌ಶೀಟ್! ಹ್ಯಾಕರ್‌ಗಳಿಗೆ ಬಿಗಿಯಾದ ಇಡಿ ಪಾಶ

ಬಹುಕೋಟಿ ಮೌಲ್ಯದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇ.ಡಿ) ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರ ವಿರುದ್ಧ 3,500 ಪುಟಗಳ ಬೃಹತ್ ದೋಷಾರೋಪಪಟ್ಟಿ ಸಲ್ಲಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಹೈಟೆಕ್ ಹ್ಯಾಕಿಂಗ್, ಡಾರ್ಕ್‌ನೆಟ್ ಕಾರ್ಯಾಚರಣೆ, ಮತ್ತು ಅಕ್ರಮ ಹಣ ವರ್ಗಾವಣೆಯ ಸಂಪೂರ್ಣ ಜಾಲವನ್ನು ವಿವರಿಸಲಾಗಿದೆ.
Read Full Story

04:41 PM (IST) Jul 07

Indian Cricketers - ಭಾರತದ ಈ ಸ್ಟಾರ್ ಕ್ರಿಕೆಟಿಗರು ಈಗ ವಿದೇಶದಲ್ಲಿ! ಯಾವ ದೇಶದಲ್ಲಿ ನೆಲೆಸಿದ್ದಾರೆ ಗೊತ್ತಾ?

ಭಾರತದ ಪರ ಆಡಿದ ಕೆಲ ಕ್ರಿಕೆಟಿಗರು ನಿವೃತ್ತಿಯ ಬಳಿಕ ಅಥವಾ ಉತ್ತಮ ಅವಕಾಶಗಳಿಗಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಉದ್ಯೋಗ, ಮಕ್ಕಳ ಶಿಕ್ಷಣ, ಕುಟುಂಬದ ಭವಿಷ್ಯ ಹಾಗೂ ಕ್ರಿಕೆಟ್ ವೃತ್ತಿಯನ್ನು ಮುಂದುವರಿಸುವ ಉದ್ದೇಶದಿಂದ ಹೊಸ ದೇಶವನ್ನು ಆಯ್ಕೆ ಮಾಡಿಕೊಂಡ ಐವರು ಭಾರತೀಯ ಕ್ರಿಕೆಟಿಗರ ಪರಿಚಯ ಇಲ್ಲಿದೆ.

Read Full Story

04:32 PM (IST) Jul 07

ಹಸಿವು, ಅವಮಾನ, ಬಡತನ... ತಾಯಿಯ ಒಂದು ಮಾತು ನನ್ನ ಬದುಕು ಬದಲಿಸಿತು - ಜಗ್ಗೇಶ್ ಭಾವುಕ ಪೋಸ್ಟ್!

ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ.

Read Full Story

04:07 PM (IST) Jul 07

'ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ' - ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಮನವಿಯೇನು?

ಶಿವರಾಜ್‌ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.

Read Full Story

03:48 PM (IST) Jul 07

Agnisakshi Serial Chandrika Maya - ವಿದೇಶದಿಂದ ಕರ್ನಾಟಕಕ್ಕೆ ಬರ್ತಿದ್ದಂತೆ 'ಅಗ್ನಿಸಾಕ್ಷಿ' ಅಕ್ಕ ತಂಗಿ ಭೇಟಿ

Agnisakshi Serial: 2013 ರಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರಸಾರ ಆಗಿತ್ತು. ಇದು ಕನ್ನಡದ ಸೂಪರ್‌ ಹಿಟ್‌ ಧಾರಾವಾಹಿಗಳಲ್ಲಿ ಒಂದಾಗಿತ್ತು. ಸಿದ್ದಾರ್ಥ್‌, ಸನ್ನಿಧಿ, ಮಾಯಾ, ಚಂದ್ರಿಕಾ ಪಾತ್ರಗಳು ವೀಕ್ಷಕರಿಗೆ ಇಷ್ಟ ಆಗಿತ್ತು. ಈಗ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿ, ಇಷಿತಾ ವರ್ಷ ಭೇಟಿ ಆಗಿದ್ದಾರೆ.

Read Full Story

03:30 PM (IST) Jul 07

KSR Bengaluru ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆ, ಬರೋಬ್ಬರಿ ₹1370 ಕೋಟಿ ವೆಚ್ಚದಲ್ಲಿ ನಿಲ್ದಾಣ ವಿಶ್ವದರ್ಜೆಗೆ!

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರಿನ ಕೆಎಸ್‌ಆರ್‌, ಕಂಟೋನ್ಮೆಂಟ್, ಮತ್ತು ಯಶವಂತಪುರ ರೈಲು ನಿಲ್ದಾಣಗಳನ್ನು ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಘೋಷಿಸಿದ್ದಾರೆ. ಇದರೊಂದಿಗೆ, ಮಲ್ಲೇಶ್ವರದಲ್ಲಿ ನೂತನ ಪಾದಚಾರಿ ಸುರಂಗ ಮಾರ್ಗಕ್ಕೂ ಶಂಕುಸ್ಥಾಪನೆ ನೆರವೇರಿಸಲಾಗಿದೆ.

Read Full Story

03:05 PM (IST) Jul 07

ಅರ್ಜೆಂಟೀನಾದ ರಕ್ಷಣಾ ಸಾಮರ್ಥ್ಯದ ಮೇಲೆ ಜಿಂಗನ್ ವಿಶ್ವಾಸ; ಈಜಿಪ್ಟ್‌ಗೆ ಕಠಿಣ ಪರೀಕ್ಷೆ

ಫಿಫಾ ವಿಶ್ವಕಪ್‌ನ ರೌಂಡ್ ಆಫ್ 16ರ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ಈಜಿಪ್ಟ್ ಅನ್ನು ಎದುರಿಸಲಿದೆ. ಟೀಮ್ ಇಂಡಿಯಾ ಡಿಫೆಂಡರ್ ಸಂದೇಶ್ ಜಿಂಗನ್, ಅರ್ಜೆಂಟೀನಾದ ರಕ್ಷಣಾತ್ಮಕ ಸಾಮರ್ಥ್ಯದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ಈಜಿಪ್ಟ್‌ನ ಕೌಂಟರ್-ಅಟ್ಯಾಕ್ ತಂತ್ರದ ಬಗ್ಗೆಯೂ ವಿಶ್ಲೇಷಿಸಿದ್ದಾರೆ.
Read Full Story

01:48 PM (IST) Jul 07

IWF Child safety rules - ಪೋಷಕರೇ, ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ಮಕ್ಕಳ ಫೋಟೋ, ವಿಡಿಯೋ ಹಂಚಿಕೊಂಡಿದ್ದರೆ ಈಗಲೇ ಡಿಲಿಟ್ ಮಾಡಿ!

Parents TIps: ಪೋಷಕರೇ, ಸೋಷಿಯಲ್ ಮೀಡಿಯಾಗಳಲ್ಲಿ ಫಾಲೋವರ್ಸ್ ಮೆಚ್ಚಿಸಲೋ, ಲೈಕ್ಸ್, ಕಾಮೆಂಟ್ಸ್‌ಗಾಗಿಯೋ ಮಕ್ಕಳ ಫೋಟೋ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ, ಮಕ್ಕಳ ರಕ್ಷಣೆಗಾಗಿ NCE ಮತ್ತು ICW ಪೋಷಕರಿಗೆ ಎಚ್ಚರಿಕೆ ನೀಡಿದ್ದೇನು?

 

Read Full Story

01:29 PM (IST) Jul 07

ಅನ್ನದಾತರಿಗೆ ಡಿಕೆಶಿಯಿಂದ ಗುಡ್‌ನ್ಯೂಸ್.. ಸಾಲ ಮನ್ನದ ಬಗ್ಗೆ ಮಹತ್ವದ ಸುಳಿವು ನೀಡಿದ ಸಿಎಂ

ರಾಜ್ಯದ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಕಲಬುರಗಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಸಿಎಂ ಡಿಕೆ ಶಿವಕುಮಾರ್ ಅವರು ಮಾತನ್ನಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದಷ್ಟೇ ಹೇಳಿದ್ದರೂ, ಅನ್ನದಾತರಿಗೆ ಸರ್ಕಾರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. 

Read Full Story

12:08 PM (IST) Jul 07

ಸಂಭಾವನೆ, ಜನಪ್ರಿಯತೆ ವಿಷ್ಯದಲ್ಲಿ Cristiano Ronaldo ಮುಂದೆ Virat Kohli, MS Dhoni ನಗಣ್ಯ!

cristiano ronaldo remuneration: ಇಂದು ವಿಶ್ವದ ಅತ್ಯಂತ ಜನಪ್ರಿಯ ಆಟಗಳಲ್ಲಿ ಕ್ರಿಕೆಟ್, ಫುಟ್‌ಬಾಲ್ ಅಗ್ರಗಣ್ಯ ಸ್ಥಾನದಲ್ಲಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕ್ರಿಕೆಟ್ ಆಟಗಾರರನ್ನು ದೇವರೆಂದು ಆರಾಧನೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಹೆಚ್ಚು ಸಂಭಾವನೆ ಕೊಡುತ್ತಾರೆ.

 

Read Full Story

11:51 AM (IST) Jul 07

ದೆವ್ವಗಳಿಗೂ ಶಿಕ್ಷೆ ನೀಡಲು ಇದೆ ದೇಗುಲ.. ಪ್ರೇತಾತ್ಮಗಳಿಗೆ ಮುಕ್ತಿ ಕಲ್ಪಿಸುವ ಇಲ್ಲಿನ ನಿಯಮಗಳೇ ವಿಚಿತ್ರ

ದೆವ್ವ, ಭೂತ, ಪ್ರೇತಗಳ ಕಾಟ ಅನ್ನೋದೆಲ್ಲ ಮೂಢನಂಬಿಕೆ ಅನ್ನೋದು ಹಲವರ ವಾದ. ಆದರೆ ಇಲ್ಲೊಂದು ದೇಗುಲ ಇದೆ. ಅದು ದೆವ್ವಗಳ ಬಿಡಿಸೋದಕ್ಕೇ ಫೇಮಸ್. ಭಾರತದಲ್ಲಿರುವ ಪ್ರಸಿದ್ಧ ದೇಗುಲದ ವಿಶೇಷತೆ ಈ ಸ್ಟೋರಿಯಲ್ಲಿದೆ..  

Read Full Story

11:32 AM (IST) Jul 07

ಜಿಂಬಾಬ್ವೆ ಸರಣಿಗೆ ಮತ್ತೆ ಆರ್‌ಸಿಬಿ ಆಟಗಾರರನ್ನು ಕಡೆಗಣಿಸಿದ ಗಂಭೀರ್-ಅಗರ್ಕರ್ ಜೋಡಿ! ಈ ನಾಲ್ವರು ಮಾಡಿದ ತಪ್ಪೇನು?

ಜುಲೈ 23 ರಿಂದ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ, ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡದ ಪ್ರಮುಖ ಆಟಗಾರರನ್ನು ಕಡೆಗಣಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಆಯ್ಕೆ ಸಮಿತಿಯ ನಿರ್ಧಾರಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
Read Full Story

11:12 AM (IST) Jul 07

ಅಯ್ಯೋ ದೇವರೇ...! ಇದೇನು ಸರ್ಕಾರಿ ಶಾಲೆಯೋ, ಮದ್ಯದ ಬಾಟಲಿ ಗೋಡನ್ನೋ....!

ಶಾಲೆಯ ಕೊಠಡಿಯನ್ನೇ ಗೋಡಾನ್ ರೀತಿ ಬಳಸಿಕೊಂಡು ಅದರಲ್ಲಿ ಮದ್ಯದ ಬಾಟಲಿಗಳ ರಾಶಿ ರಾಶಿ ಚೀಲಗಳನ್ನ ತುಂಬಿದ ಘಟನೆ ಚಿಕ್ಕಮಗಳೂರು ತಾಲೂಕಿನ  ಹುಯಿಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

11:07 AM (IST) Jul 07

ಬೆಳಗಾವಿ ಕಸದ ತಿಪ್ಪೆಯಿಂದ ಕೇಳಿಬಂತು ಹಸುಗೂಸು ಅರ್ತನಾದ! ಕುರಿಗಾಹಿಯಿಂದ ಗಂಡು ಮಗುವಿನ ರಕ್ಷಣೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ, ಹೆತ್ತ ತಾಯಿಯೇ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದ ಅಮಾನವೀಯ ಘಟನೆ ನಡೆದಿದೆ. ಕುರಿಗಾಹಿಯೊಬ್ಬರು ಮಗುವನ್ನು ರಕ್ಷಿಸಿದ್ದು, ಸದ್ಯ ಮಗು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದೆ. ಪೊಲೀಸರು ನಿರ್ದಯಿ ತಾಯಿಗಾಗಿ ತನಿಖೆ ನಡೆಸುತ್ತಿದ್ದಾರೆ.
Read Full Story

11:05 AM (IST) Jul 07

Rishab Shetty Birthday - ಗ್ರಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ

ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ತಮ್ಮ  ಹುಟ್ಟುಹಬ್ಬವನ್ನು ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನ 'ಕಿಂಗ್ಸ್‌ ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತಬಳಗದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

Read Full Story

10:37 AM (IST) Jul 07

ಅಂತೂ, ಇಂತೂ ಜಲಾಶಯಗಳಿಗೆ ಬಂತು ಜೀವಕಳೆ.. KRS, ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ

ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಿಗೆ ಜಲಾಭಿಷೇಕ ಆಗಿದೆ. ಹೊಸ ಜೀವಕಳೆಯೊಂದಿಗೆ ಮೈದುಂಬಿ ನಿಂತಿವೆ. ಕೆಆರ್‍‌ಎಸ್, ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಇಂದಿನ ಸ್ಥಿತಿ ಹೇಗಿದೆ ಅನ್ನೋದ್ರ ವಿವರ ಇಲ್ಲಿದೆ. 

Read Full Story

10:17 AM (IST) Jul 07

ಇದು ರಾಜ್ಯದಲ್ಲೇ ಮೊದಲು! ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ RFID ಟ್ಯಾಗ್‌! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಬಂಟ್ವಾಳದ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ರಾಜ್ಯದಲ್ಲೇ ಮೊದಲ ಬಾರಿಗೆ ಆರ್‌ಎಫ್‌ಐಡಿ ಆಧಾರಿತ ಡಿಜಿಟಲ್ ವಿದ್ಯಾರ್ಥಿ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಡಿ, ವಿದ್ಯಾರ್ಥಿಗಳು ಶಾಲೆಗೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಪೋಷಕರಿಗೆ ಎಸ್‌ಎಂಎಸ್ ರವಾನೆಯಾಗುತ್ತೆ

Read Full Story

10:10 AM (IST) Jul 07

ಮೆಸ್ಸಿ-ಎಂಬಾಪೆ ಜತೆ ಗೋಲ್ಡನ್ ಬೂಟ್ ರೇಸ್‌ಗಿಳಿದ ಹಾಲ್ಯಾಂಡ್! ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ಹೋರಾಟ ಅಂತ್ಯ

ಯುವ ತಾರೆ ಎರ್ಲಿಂಗ್‌ ಹಾಲ್ಯಾಂಡ್‌ ಅವರ ಎರಡು ಗೋಲುಗಳ ನೆರವಿನಿಂದ ನಾರ್ವೆ ತಂಡವು ಫಿಫಾ ವಿಶ್ವಕಪ್‌ನಲ್ಲಿ ಐತಿಹಾಸಿಕವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಈ ಸೋಲಿನೊಂದಿಗೆ, 5 ಬಾರಿಯ ಚಾಂಪಿಯನ್‌ ಬ್ರೆಜಿಲ್‌ ಟೂರ್ನಿಯಿಂದ ಹೊರಬಿದ್ದಿದ್ದು, ತಂಡದ ತಾರೆ ನೇಯ್ಮರ್‌ ನಿವೃತ್ತಿಯ ಸುಳಿವು ನೀಡಿದ್ದಾರೆ.
Read Full Story

09:46 AM (IST) Jul 07

ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದು ಸಹಿಸಲ್ಲ - ಹೈಕೋರ್ಟ್‌ ಎಚ್ಚರಿಕೆ! ಏನಿದು ಪ್ರಕರಣ?

ಯುಕೆಜಿ ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದ ಆರೋಪ ಎದುರಿಸುತ್ತಿರುವ ಶಿಕ್ಷಕಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಪೀಠ ಕಟುವಾಗಿ ಹೇಳಿದ್ದು, ಶಿಕ್ಷಕಿ ವಿರುದ್ಧ ಮುಂದುವರಿದ ವಿಚಾರಣೆ.

Read Full Story

09:20 AM (IST) Jul 07

ಬೆಂಗಳೂರಲ್ಲಿ ರಕ್ತಪಾತ - ಬಾರ್‌ನಲ್ಲಿ ಗುರಾಯಿಸಿದ್ದೇ ತಪ್ಪಾಯ್ತು, ಯುವಕನ ಎದೆಗೆ ಬಾಟಲಿ ಚುಚ್ಚಿ ಹತ್ಯೆ

ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ರಕ್ತಪಾತ ನಡೆದಿದೆ. ಬಾರ್‍‌ನಲ್ಲಿ ಕೂತು ಗುರಾಯಿಸಿದ ಎಂಬ ಕಾರಣಕ್ಕೆ ವ್ಯಕ್ತಿಗೆ ಬೀರ್ ಬಾಟಲ್‌ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Read Full Story

More Trending News