- Home
- Entertainment
- TV Talk
- Agnisakshi Serial Chandrika Maya: ವಿದೇಶದಿಂದ ಕರ್ನಾಟಕಕ್ಕೆ ಬರ್ತಿದ್ದಂತೆ 'ಅಗ್ನಿಸಾಕ್ಷಿ' ಅಕ್ಕ ತಂಗಿ ಭೇಟಿ
Agnisakshi Serial Chandrika Maya: ವಿದೇಶದಿಂದ ಕರ್ನಾಟಕಕ್ಕೆ ಬರ್ತಿದ್ದಂತೆ 'ಅಗ್ನಿಸಾಕ್ಷಿ' ಅಕ್ಕ ತಂಗಿ ಭೇಟಿ
Agnisakshi Serial: 2013 ರಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರಸಾರ ಆಗಿತ್ತು. ಇದು ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾಗಿತ್ತು. ಸಿದ್ದಾರ್ಥ್, ಸನ್ನಿಧಿ, ಮಾಯಾ, ಚಂದ್ರಿಕಾ ಪಾತ್ರಗಳು ವೀಕ್ಷಕರಿಗೆ ಇಷ್ಟ ಆಗಿತ್ತು. ಈಗ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿ, ಇಷಿತಾ ವರ್ಷ ಭೇಟಿ ಆಗಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿ ನಟಿಯರು
2013ರ ಸೂಪರ್ ಹಿಟ್ ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದರು ಭೇಟಿ ಆಗಿದ್ದಾರೆ.
ಸೀರಿಯಲ್‌ನಲ್ಲಿ ಅಕ್ಕ ತಂಗಿ
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಈ ಜೋಡಿ ಅಕ್ಕ ಚಂದ್ರಿಕಾ- ತಂಗಿ ಮಾಯಾ ಆಗಿ ನಟಿಸಿತ್ತು. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದರು.
ರಿಯಲ್ ಆಗಿಯೂ ಅದೇ ಆತ್ಮೀಯತೆ
ಧಾರಾವಾಹಿ, ನಟನೆಯಿಂದಾಚೆ ಕೂಡ ಇವರಿಬ್ಬರು ಸ್ನೇಹಿತೆಯರು. ಬೇರೆ ಬೇರೆ ದೇಶದಲ್ಲಿ ಬದುಕುತ್ತಿದ್ದರೂ ಕೂಡ ಒಂದೇ ಬಾಂಧವ್ಯ ಹೊಂದಿದ್ದಾರೆ.
ವಿದೇಶದಲ್ಲಿ ರಾಜೇಶ್ವರಿ ಪಾರ್ಥಸಾರಥಿ
ಚಂದ್ರಿಕಾ ಪಾತ್ರಧಾರಿ ನಟಿ ರಾಜೇಶ್ವರಿ ಪಾರ್ಥಸಾರಥಿ ಅವರು ವಿದೇಶದಲ್ಲಿದ್ದಾರೆ. ಕಲ್ಯಾಣ್ ಕ್ರಿಶ್ ಅವರನ್ನು ಮದುವೆಯಾದ ಬಳಿಕ ಅವರು ವಿದೇಶದಲ್ಲಿ ನೆಲೆಸಿದ್ದಾರೆ. 2016ರಲ್ಲಿ ಇವರ ಮದುವೆ ಆಗಿತ್ತು.
ಮಗಳು ಕೂಡ ಇದ್ದಾಳೆ
ರಾಜೇಶ್ವರಿ ಪಾರ್ಥಸಾರಥಿ ಅವರಿಗೆ ಓರ್ವ ಮಗಳು ಕೂಡ ಇದ್ದಾಳೆ. ಮಗಳು ವಿದೇಶದಲ್ಲಿ ಬೆಳೆದರೂ ಕೂಡ, ಭಾರತ, ಕರ್ನಾಟಕದ ಸಂಪ್ರದಾಯವನ್ನು ಕಲಿಸುತ್ತಿದ್ದಾರೆ.
ಮೀಟ್ ಆಗೋದು ಮಿಸ್ ಆಗಲ್ಲ
ರಾಜೇಶ್ವರಿ ಅವರು ಭಾರತಕ್ಕೆ ಬಂದಾಗ ಇಷಿತಾ ವರ್ಷಾ ಸೇರಿದಂತೆ ಸ್ನೇಹಿತರನ್ನು ಭೇಟಿ ಆಗುತ್ತಾರೆ. ಈ ಬಾರಿ ರಾಜೇಶ್ವರಿ, ಇಷಿತಾ ಅವರು ಒಂದಿಷ್ಟು ಜಾಗಗಳಿಗೆ ಭೇಟಿ ಕೊಟ್ಟಿದ್ದರು.
ದೇವಸ್ಥಾನಕ್ಕೆ ಭೇಟಿ
ಈ ಜೋಡಿ ಕೆಲ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದೆ.
ಫೋಟೋಗ್ರಫಿ
ಇಷಿತಾ ವರ್ಷ ಅವರು ಫೋಟೋಗ್ರಾಫರ್ ಕೂಡ ಹೌದು. ವನ್ಯಜೀವಿಗಳ ಫೋಟೋಗ್ರಫಿ ಆರಂಭಿಸಿರುವ ಅವರು ಈ ಬಾರಿ ರಾಜೇಶ್ವರಿಗೂ ಕೂಡ ಕಾಡು, ವನ್ಯಜೀವಿಗಳ ಪರಿಚಯ ಮಾಡಿಸಿದ್ದಾರೆ.
ಖುಷಿಯೋ ಖುಷಿ
ಕಾಡು, ವನ್ಯಜೀವಿಗಳನ್ನು ನೋಡಿ ರಾಜೇಶ್ವರಿ ಅವರಿಗೆ ಖುಷಿ ಆಗಿದೆ. ಇದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

