ಮೈಸೂರು: ತಾನೇ ಸೇದಿ ಬಿಸಾಡಿದ ಬೀಡಿಯ ಬೆಂಕಿ ತಗಲಿ ಇಡೀ ಮನೆಯೇ ಸುಟ್ಟು ಗುಜರಿ ವ್ಯಾಪಾರಿ ಸಜೀವ ದಹನಗೊಂಡಿರುವ ದುರ್ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಸರ್ ಖಾಜಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸಿದ್ದನಾಯ್ಕ (60) ಮೃತ ವೃದ್ಧ. ಬುಧವಾರ ಸಿದ್ದನಾಯ್ಕ ಅವರ ಪತ್ನಿ ಸಿದ್ದಮ್ಮ ಕೂಲಿ ಕೆಲಸಕ್ಕೆ ತೆರಳಿದ್ದು, ಮೊಮ್ಮಗಳು ಕಾಲೇಜಿಗೆ ಹೋಗಿದ್ದಳು. ಈ ವೇಳೆ ಮನೆಯಲ್ಲಿದ್ದ ಸಿದ್ದನಾಯ್ಕ ಬೀಡಿ ಸೇದಿದ ಬಳಿಕ ಮನೆಯಲ್ಲಿಯೇ ಎಸೆದಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ ಹಳೆಯ ವಸ್ತುಗಳಿಗೆ ಬೆಂಕಿ ತಗುಲಿ, ದಟ್ಟ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಸಿದ್ದನಾಯ್ಕ ಅವರು ಮನೆಯಿಂದ ಹೊರ ಬರಲು ಯತ್ನಿಸಿದರೂ ಸಾಧ್ಯವಾಗದೇ ಸಜೀವವಾಗಿ ದಹನವಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11:53 PM (IST) Sep 04
11:29 PM (IST) Sep 04
10:29 PM (IST) Sep 04
ಜಿಎಸ್ಟಿ ದರ ಪರಿಷ್ಕರಣೆಯಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
10:25 PM (IST) Sep 04
ಸೌಜನ್ಯ ಕೇಸ್ಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ತಮ್ಮ ವಿಡಿಯೋ ಮಿಸ್ಯೂಸ್ ಮಾಡಿ ರೇ*ಪ್ ಬೆದರಿಕೆ ಹಾಕಿದ್ದರ ವಿಚಿತ್ರ ಘಟನೆ ಸುವರ್ಣ ಪಾಡ್ಕಾಸ್ಟ್ನಲ್ಲಿ ವಿವರಿಸಿದ್ದಾರೆ.
10:15 PM (IST) Sep 04
ಭಾರತದಲ್ಲಿ ಜೀವನ ಅಗ್ಗವಾಗಿದೆ ಎಂದು ಕೆಲವರು ಹೇಳುತ್ತಾರೆ, ಆದರೆ ಗುರುಗ್ರಾಮದಲ್ಲಿ ಒಂದು ತಿಂಗಳಲ್ಲಿ ಒಂದು ಲಕ್ಷ ಖರ್ಚು ಮಾಡುವ ಹಣ ಇಷ್ಟೇ ಎಂದು ರಷ್ಯನ್ ಮೂಲದ ಮಹಿಳೆಯ ವಿಡಿಯೋ ವೈರಲ್ ಆಗಿದೆ.
09:23 PM (IST) Sep 04
ಬೆಂಗಳೂರಿನಲ್ಲಿ 'ತೇಜಸ್ವಿ' ಎಂಬ ಮೊದಲ ರಾಷ್ಟ್ರೀಯ ಮಹಿಳಾ ಸಮಾವೇಶವನ್ನು ಎಚ್ಎಎಲ್ ಮತ್ತು ಫೋರಮ್ ಆಫ್ ವಿಮೆನ್ ಇನ್ ಪಬ್ಲಿಕ್ ಸೆಕ್ಟರ್ ಆಯೋಜಿಸಿದ್ದವು. ಮನೆ ಮತ್ತು ಕೆಲಸದಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲಾಯಿತು. ಕಾರ್ಯಕ್ರಮದ ಪೂರ್ಣ ವರದಿ ಇಲ್ಲಿದೆ
09:00 PM (IST) Sep 04
08:44 PM (IST) Sep 04
08:05 PM (IST) Sep 04
07:51 PM (IST) Sep 04
07:40 PM (IST) Sep 04
ಮೈಸೂರಿನ ಹಿನಕಲ್ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಸ್.ಮಧುಸೂದನ್ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೀನ ಬೋಧನಾ ವಿಧಾನ ಮತ್ತು ತಂತ್ರಜ್ಞಾನದ ಸದ್ಬಳಕೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕರೆಂಬ ಹೆಗ್ಗಳಿಕೆ ಅವರದು.
07:27 PM (IST) Sep 04
07:23 PM (IST) Sep 04
ಚಿನ್ನಾಭರಣ ಖರೀದಿ ಸಲಹೆಗಳು: GST ಕೌನ್ಸಿಲ್ ಹಲವು ವಸ್ತುಗಳ ಮೇಲಿನ GST ಕಡಿಮೆ ಮಾಡಿದೆ, ಆದರೆ ಚಿನ್ನ ಮತ್ತು ಬೆಳ್ಳಿ GSTಯಲ್ಲಿ ಯಾವುದೇ ಬದಲಾವಣೆ ಇಲ್ಲ. ಚಿನ್ನದ ಮೇಲೆ 3% ಮತ್ತು ಆಭರಣ ತಯಾರಿಕಾ ಶುಲ್ಕದ ಮೇಲೆ 5% GST ಈಗಲೂ ಅನ್ವಯವಾಗುತ್ತದೆ. ಹಣ ಉಳಿಸಲು ಈ 5 ಸಲಹೆಗಳನ್ನು ತಿಳಿದುಕೊಳ್ಳಿ.
07:01 PM (IST) Sep 04
06:55 PM (IST) Sep 04
06:27 PM (IST) Sep 04
06:12 PM (IST) Sep 04
ಮಳೆಗಾಲದಲ್ಲಿ ಹಣ್ಣು ತರಕಾರಿಗಳ ಮೇಲೆ ಕೀಟಗಳು ಮುತ್ತುವುದು ಸಾಮಾನ್ಯ. ಇದರಿಂದ ಮನೆಯಲ್ಲಿಯೂ ಕೊಳಕಾಗುತ್ತದೆ. ಹಣ್ಣು ತರಕಾರಿಗಳನ್ನು ಹೇಗೆ ಕೀಟ ಮುಕ್ತವಾಗಿಡುವುದು ಎಂಬುದನ್ನು ತಿಳಿಯಿರಿ.
06:09 PM (IST) Sep 04
ಹಿರಿಯ ನಟ ಅನಂತ್‌ನಾಗ್ ಅವರು ಇಂದು ತಮ್ಮ 77ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ. 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್‌ಗೆ ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವ ಸಲ್ಲಿಸಿತ್ತು.
05:53 PM (IST) Sep 04
ಬೆಂಗಳೂರಿನಲ್ಲಿ ಮುಂಬೈ ಮೂಲದ ವ್ಯಕ್ತಿ ತನಗೆ ಕನ್ನಡ ಬರುತ್ತೆ ನಾನು ಕನ್ನಡ ಕಲಿತಿದ್ದೀನಿ ಎಂದಾಗ ಅಲ್ಲಿ ಸೇರಿದ ಕನ್ನಡಿಗರು ಏನು ಮಾಡಿದರು ಎಂಬುದನ್ನು ಆ ವ್ಯಕ್ತಿಯ ಕನ್ನಡ ಸ್ನೇಹಿತನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ
05:50 PM (IST) Sep 04
05:38 PM (IST) Sep 04
ಈದ್-ಎ-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಂದು ಸಂಚಾರ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಕೆ.ಜಿ.ಹಳ್ಳಿ, ಪುಲಿಕೇಶಿನಗರ, ಶಿವಾಜಿನಗರ ಭಾಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
04:29 PM (IST) Sep 04
04:18 PM (IST) Sep 04
ಕೃತಕ ಬುದ್ಧಿಮತ್ತೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಮನೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ ಸರ್ಚ್ ವಾರಂಟ್‌ನೊಂದಿಗೆ ಪೊಲೀಸರು ಕಂಪ್ಯೂಟರ್, ಮೊಬೈಲ್‌ಗಳನ್ನು ಪರಿಶೀಲಿಸಿದ್ದಾರೆ. ಸಮೀರ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
04:12 PM (IST) Sep 04
ಜಿಎಸ್ಟಿ 2.0 ಕುರಿತು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರ ವಿಶ್ಲೇಷಣೆ. ಈ ಸರಳೀಕರಣ ಕ್ರಮವು 'ಒಂದು ದೇಶ - ಒಂದು ಮಾರುಕಟ್ಟೆ' ದೃಷ್ಟಿಕೋನಕ್ಕೆ ಪೂರಕವಾಗಿದ್ದು, ರಾಜ್ಯದ ಆರ್ಥಿಕತೆಗೆ ದೀರ್ಘಾವಧಿಯ ಲಾಭ ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
03:22 PM (IST) Sep 04
ಹೊಸ AICPI ಇಂಡೆಕ್ಸ್ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಡಿಎ 55% ಇಂದ 58% ಕ್ಕೆ ಏರಿಕೆಯಾಗಿದೆ. ಪ್ರತಿ ಹಬ್ಬದ ಸೀಸನ್‌ನಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಬ್ಬದ ಉಡುಗೊರೆಯಾಗಿದೆ.
03:11 PM (IST) Sep 04
02:43 PM (IST) Sep 04
ಸಿನಿಮಾ ರಂಗದಲ್ಲಿ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿದ್ದುಕೊಂಡು ವಿಷ್ಣುವರ್ಧನ್, ಅಂಬರೀಶ್ ಅವರೊಂದಿಗೆಲ್ಲ ಕೆಲಸ ಮಾಡಿದೆ. ಸಿನಿಮಾರಂಗಕ್ಕೆ ಬಂದು ಇಷ್ಟು ಕಾಲವಾದರೂ ಸ್ವತಂತ್ರ ಸಿನಿಮಾ ಮಾಡಲು ಇದೀಗ ಸಾಧ್ಯವಾಗಿದೆ ಎನ್ನುತ್ತಾರೆ ನಿರ್ದೇಶಕ ವಿರೇನ್.
02:33 PM (IST) Sep 04
ಅಥಣಿಯ ತ್ರೀಮೂರ್ತಿ ಜ್ಯುವೆಲರ್ಸ್‌ನಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. CCTV ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.
01:56 PM (IST) Sep 04
ಭಾರತ ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಜಪಾನ್ ಮತ್ತು ಚೀನಾ ದೇಶಗಳ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
01:32 PM (IST) Sep 04
ದೇಶದಲ್ಲಿ ನಿನ್ನೆ ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಸ್ಲ್ಯಾಬ್ ಅನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಚಿನ್ನದ ಬೆಲೆಯಲ್ಲಿಯೂ ಭಾರೀ ಕುಸಿತವಾಗಿದೆ. ಇಂದು 22ಕ್ಯಾರೆಟ್ ಚಿನ್ನದ ಬೆಲೆ ರೂ.9,795ಗೆ ಮಾರಾಟವಾಗುತ್ತಿದೆ.
01:31 PM (IST) Sep 04
ರಾಜ್ಯದ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಸವಾಲು, ಸರ್ಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು, ಜಿಎಸ್‌ಟಿ ಸರಳೀಕರಣದಿಂದ ಕೈಗಾರಿಕೆಗಳಿಗಾಗುವ ಲಾಭ ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಲು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
01:07 PM (IST) Sep 04
ಚಾಮರಾಜನಗರದಲ್ಲಿ 10 ವರ್ಷದ ಬಾಲಕನೊಬ್ಬ ಟ್ಯೂಷನ್‌ಗೆ ಹೋಗುವ ಬದಲು ಗೋಬಿ ತಿನ್ನಲು ಹೋಗಿ, ಮನೆಯವರಿಗೆ ಮತ್ತು ಪೊಲೀಸರಿಗೆ ಸುಳ್ಳು ಕಿಡ್ನಾಪ್ ಕಥೆ ಹೇಳಿದ್ದಾನೆ. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ.
01:02 PM (IST) Sep 04
ಆ ಹೆಣ್ಣುಮಗಳಿಗೂ ಏನಾದರೂ ಮಾನ, ಮರ್ಯಾದೆ ಇರಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಬಾನು ಮುಷ್ತಾಕ್ ಅವರಿಗೆ ಏನು ಕೆಲಸ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
12:38 PM (IST) Sep 04
12:28 PM (IST) Sep 04
ಕೆಲ ನಗರ ಪ್ರದೇಶದ ಶಾಲೆಗಳಲ್ಲಿ ಇಸ್ಕಾನ್, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಕ್ಕಳಿಗೆ ಬಿಸಿಯೂಟ ಪೂರೈಸಲಾಗುತ್ತಿರುವುದು ಬಿಟ್ಟರೆ ಬಹುತೇಕ ಗ್ರಾಮೀಣ ಭಾಗದ ಎಲ್ಲಾ ಶಾಲೆಗಳಲ್ಲೂ ಆಯಾ ಶಾಲೆಗಳಲ್ಲೇ ಬಿಸಿಯೂಟ ತಯಾರಿಸಲಾಗುತ್ತದೆ.
11:54 AM (IST) Sep 04
ಆಫ್ರಿಕಾದ ನಾಲ್ವರು ವಿದ್ಯಾರ್ಥಿನಿಯರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅನ್ನು ಕಂಡುಹಿಡಿದಿದ್ದಾರೆ. ವಿದ್ಯುತ್ ಸಂಪರ್ಕ ಕಷ್ಟಕರ ಎನಿಸುವ ಹಳ್ಳಿಗಳಲ್ಲಿ ಇದು ಅತ್ಯಂತ ಉಪಕಾರಿ ಆಗಬಲ್ಲುದು
11:33 AM (IST) Sep 04
ದರ್ಶನ್ ಜೈಲಿಗೆ ಹೋಗುವ ಎರಡು ದಿನಗಳ ಹಿಂದೆಯೇ ಅವರನ್ನು ಭೇಟಿ ಮಾಡಿದ್ದೆ. ಸಾಕಷ್ಟು ಮಾತುಕತೆ ಮಾಡಿದ್ದೇವೆ. ದರ್ಶನ್ ಕಷ್ಟ ಮತ್ತು ನೋವುಗಳೇನು ಅಂತ ಅವರಿಗೇ ಗೊತ್ತು. ಆದರೆ ಕೆಲ ಸ್ಯಾಡಿಸ್ಟ್‌ಗಳು ಇರುತ್ತಾರೆ.
11:22 AM (IST) Sep 04
11:06 AM (IST) Sep 04
ಯಶ್ ನಿರ್ದೇಶಕಿಯ ಮಾತು ಕೇಳುತ್ತಿಲ್ಲ, ಯಶ್ ನಡವಳಿಕೆಯಿಂದ ಗೀತು ರೋಗಿಹೋಗಿದ್ದಾರೆ, ಪದೇ ಪದೇ ರೀಶೂಟ್ ಆಗಿ ಬಜೆಟ್ 600 ಕೋಟಿ ಮೀರಿದೆ ಎಂಬಿತ್ಯಾದಿ ವಾದಗಳು ಇತ್ತೀಚೆಗೆ ಕೇಳಿಬಂದಿದ್ದವು.
10:53 AM (IST) Sep 04
ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದಲ್ಲಿ 10 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡುವಂತೆ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ್ ವಿಷ್ಣುವರ್ಧನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.