- Home
- Business
- ಹೊರ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆ ನಂದಿನಿಗೆ ಎಲ್ಲಿಲ್ಲದ ಬೇಡಿಕೆ, ಗಲ್ಫ್ ಮಾತ್ರವಲ್ಲ ಅಮೆರಿಕಾಕ್ಕೂ ರಫ್ತು!
ಹೊರ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆ ನಂದಿನಿಗೆ ಎಲ್ಲಿಲ್ಲದ ಬೇಡಿಕೆ, ಗಲ್ಫ್ ಮಾತ್ರವಲ್ಲ ಅಮೆರಿಕಾಕ್ಕೂ ರಫ್ತು!
ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ಈಗ ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ. ನೆರೆ ರಾಜ್ಯಗಳ ಜೊತೆಗೆ ಆಸ್ಟ್ರೇಲಿಯಾ, ಫ್ರಾನ್ಸ್, ಯುಕೆ ಸೇರಿದಂತೆ ಹಲವು ದೇಶಗಳಿಗೆ ನಂದಿನಿ ಉತ್ಪನ್ನಗಳ ರಫ್ತು ಆರಂಭವಾಗಲಿದೆ. ಸಿಹಿತಿಂಡಿಗಳ ಮೂಲಕವೂ ಜಾಗತಿಕ ಮಾರುಕಟ್ಟೆಯಲ್ಲಿ ನಂದಿನಿ ಹೆಸರು ಮಾಡುತ್ತಿದೆ.
- FB
- TW
- Linkdin

ಕರ್ನಾಟಕದ ಹೆಮ್ಮೆ, ಕೆಎಂಎಫ್‌ನ ನಂದಿನಿ ಹಾಲು ಇದೀಗ ರಾಜ್ಯದ ಗಡಿಗಳನ್ನು ದಾಟಿ ದೇಶ–ವಿದೇಶಗಳ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ. ನಂದಿನಿ ಬ್ರ್ಯಾಂಡ್ ರಾಜ್ಯದ ಜನತೆಗೆ ಮಾತ್ರವಲ್ಲದೆ ಈಗ ನೆರೆ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಭಾರೀ ಬೇಡಿಕೆ ಪಡೆಯುತ್ತಿದೆ. ಪ್ರತಿದಿನ ಕರ್ನಾಟಕದಲ್ಲಿ ಸರಾಸರಿ 1 ಕೋಟಿ 15 ಲಕ್ಷ ಲೀಟರ್ ಹಾಲು ಉತ್ಪಾದನೆ ನಡೆಯುತ್ತಿದ್ದು, ಇದರಿಂದ ಹೆಚ್ಚುವರಿ ಹಾಲು ಉತ್ಪಾದನೆಗೆ ಸಮರ್ಪಕವಾದ ಮಾರುಕಟ್ಟೆ ಹುಡುಕುವ ಕಾರ್ಯ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳನ್ನು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿದೆ.
ಈಗಾಗಲೇ ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಮುಂತಾದ ನೆರೆ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳು ಲಭ್ಯವಾಗುತ್ತಿವೆ. ಮುಂದಿನ ಹಂತದಲ್ಲಿ ಜಾರ್ಖಂಡ್, ಪಂಜಾಬ್, ಒಡಿಸ್ಸಾ, ಮಣಿಪುರ, ಮೇಘಾಲಯ ಮತ್ತು ಸಿಕ್ಕಿಂ ರಾಜ್ಯಗಳಿಗೂ ನಂದಿನಿ ಪೂರೈಕೆ ಪ್ರಾರಂಭಿಸುವ ಉದ್ದೇಶವನ್ನು ಕೆಎಂಎಫ್ ಹೊಂದಿದೆ. ಅದರ ಜೊತೆಗೆ ವಿದೇಶಿ ಮಾರುಕಟ್ಟೆಯತ್ತಲೂ ನಂದಿನಿಯ ಕಾಲಿಡುವ ಹೆಜ್ಜೆ ಶೀಘ್ರದಲ್ಲೇ ಜಾರಿಯಾಗಲಿದೆ. ಆಸ್ಟ್ರೇಲಿಯಾ, ಫ್ರಾನ್ಸ್, ಯುಕೆ, ಜರ್ಮನಿ, ಸೌದಿ ಅರೇಬಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಪರಿಚಯಿಸುವ ಪ್ರಯತ್ನ ಪ್ರಗತಿಯಲ್ಲಿದೆ.
ಹಾಲಿನ ಜೊತೆಗೆ ನಂದಿನಿ ಬ್ರ್ಯಾಂಡ್ ತನ್ನ ಸಿಹಿತಿಂಡಿಗಳ ಮೂಲಕವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಪ್ರಸ್ತುತ ದುಬೈ, ಕತಾರ್ ಮತ್ತು ಅಮೆರಿಕಾದಲ್ಲಿ ನಂದಿನಿ ಸಿಹಿತಿಂಡಿಗಳು ಗ್ರಾಹಕರ ಮೆಚ್ಚುಗೆ ಗಳಿಸುತ್ತಿವೆ. ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ಸ್ಪೇನ್, ಪೋಲೆಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಕನಿಷ್ಠ ಹತ್ತುಕ್ಕೂ ಹೆಚ್ಚು ದೇಶಗಳಲ್ಲಿ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಕೆಎಂಎಫ್ ಮುಂದಿಟ್ಟುಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಮ್ಮ ಹೆಮ್ಮೆಯ ನಂದಿನಿ ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ.
ಕೆಎಂಎಫ್ ನಂದಿನಿ ಬ್ರ್ಯಾಂಡ್ ಅನ್ನು ವಿದೇಶಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದ್ದು, ಹಾಲು ಆಧಾರಿತ ಸಿಹಿತಿಂಡಿಗಳನ್ನು ಕನಿಷ್ಠ 10 ದೇಶಗಳಿಗೆ ರಫ್ತು ಮಾಡುವ ಗುರಿ ಹೊಂದಿದೆ. ಪ್ರಸ್ತುತ, ನಂದಿನಿ ಸಿಹಿತಿಂಡಿಗಳು ದುಬೈ, ಕತಾರ್ ಮತ್ತು… pic.twitter.com/oBNOk9aA2M— IYC Karnataka (@IYCKarnataka) September 3, 2025
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕೆಎಂಎಫ್ ತನ್ನ ಕಾರ್ಯತಂತ್ರವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುತ್ತಿದ್ದು, ನಮ್ಮ ಹೆಮ್ಮೆಯ ನಂದಿನಿ ಈಗ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿಯೂ ತನ್ನ ಶಕ್ತಿ ತೋರಿಸಲು ಸಜ್ಜಾಗಿದೆ ಎಂದು ಕಾಂಗ್ರೆಸ್ , ಡಿಕೆ ಸುರೇಶ್ ಸೇರಿದಂತೆ ಹಲವು ನಾಯಕರಿ ಟ್ವೀಟ್ ಮಾಡಿದ್ದಾರೆ.
ಕರುನಾಡಿನ ನಂದಿನಿ ದೇಶ ವಿದೇಶದಲ್ಲಿಯೂ ಪ್ರಖ್ಯಾತಿ
ನಮ್ಮ ನಾಡಿನ ಹೆಮ್ಮೆಯ ಪ್ರತೀಕ ಮತ್ತು ರೈತರ ಜೀವನಾಡಿಯಾಗಿರುವ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) 'ನಂದಿನಿ' ಬ್ರ್ಯಾಂಡ್, ಇದೀಗ ಅಮೆರಿಕಾದ ಮಾರುಕಟ್ಟೆಯಲ್ಲಿ ಕೂಡ ಸಿಗುತ್ತಿದೆ. ಗುಣಮಟ್ಟ ಮತ್ತು ಪರಿಶುದ್ಧತೆಗೆ ಹೆಸರುವಾಸಿಯಾಗಿರುವ ಕರುನಾಡಿನ 'ನಮ್ಮ ನಂದಿನಿ ಉತ್ಪನ್ನ'ಗಳ ಘಮಲು ಜಗದಗಲ… pic.twitter.com/CcW4YlakxU— DK Suresh (@DKSureshINC) September 2, 2025
ಕೆಎಂಎಫ್ ನಂದಿನಿ ಸಂಸ್ಥೆಯು 1974 ರಲ್ಲಿ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ (KDDC) ಆಗಿ ಸ್ಥಾಪನೆಯಾಯಿತು, 1984 ರಲ್ಲಿ ಅದರ ಹೆಸರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (KMF) ಎಂದು ಬದಲಾಯಿತು, ಮತ್ತು 1983 ರಲ್ಲಿ "ನಂದಿನಿ" ಬ್ರಾಂಡ್ ಅನ್ನು ಪರಿಚಯಿಸಲಾಯಿತು. wholesalers (ಪ್ರಮುಖವಾಗಿ ರೈತರು) ಮತ್ತು ಅಮುಲ್ ನಂತರ ಭಾರತದ ಎರಡನೇ ಅತಿದೊಡ್ಡ ಡೈರಿ ಸಹಕಾರಿಯಾಗಿದೆ. ಕೆಎಂಎಫ್ ನಂದಿನಿ ಬ್ರಾಂಡ್ ಅಡಿಯಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚಾಕೊಲೇಟ್‌ಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.