ಆಫ್ರಿಕಾದ ನಾಲ್ವರು ವಿದ್ಯಾರ್ಥಿನಿಯರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅನ್ನು ಕಂಡುಹಿಡಿದಿದ್ದಾರೆ. ವಿದ್ಯುತ್ ಸಂಪರ್ಕ ಕಷ್ಟಕರ ಎನಿಸುವ ಹಳ್ಳಿಗಳಲ್ಲಿ ಇದು ಅತ್ಯಂತ ಉಪಕಾರಿ ಆಗಬಲ್ಲುದು
ಮಕ್ಕಳ ಬುದ್ಧಿವಂತಿಕೆ ಕುತೂಹಲ, ಸೃಜನಶೀಲತೆಗೆ ಕೊನೆ ಇಲ್ಲ. ಸರಿಯಾದ ಮಾರ್ಗದರ್ಶನ ಮಾಡಿದರೆ ಮಕ್ಕಳು ಅದ್ಭುತವಾದುದನ್ನು ಸಾಧಿಸುತ್ತಾರೆ. ಕೆಲ ದಿನಗಳ ಹಿಂದೆ ಚೀನಾದ ಮಕ್ಕಳು ಸೋಡಾ ಬಾಟಲ್‌ನಿಂದ ಎರಡು ಹಂತದ ರಾಕೆಟ್ ಲಾಂಚರ್ ಮಾಡಿ ಅದನ್ನು ಯಶಸ್ವಿಯಾಗಿ ಲಾಂಚ್ ಮಾಡಿದ ವೀಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಈಗ ಆಫ್ರಿಕನ್ ಮಕ್ಕಳು ಹೊಸದೊಂದು ಅವಿಷ್ಕಾರ ಮಾಡಿದ್ದು, ಇದು ಯೋಚನೆಗೆ ಹಾಗೂ ಅವಿಷ್ಕಾರಗಳಿಗೆ ಹೊಸ ಅವಕಾಶವೊಂದನ್ನು ತೆರೆದಿಟ್ಟಿದೆ ಎಂದರೆ ತಪ್ಪಾಗಲಾರದು.
ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದನೆ:
ಮುಂದಿನ ಪೀಳಿಗೆಯವರಿಗೆ ಕೊರತೆಯಾಗಿ ಕಾಡಬಹುದಾದ ವಸ್ತುಗಳಲ್ಲಿ ಇಂಧನ ಕೂಡ ಒಂದು ಇದಕ್ಕಾಗಿ ಹಲವು ದೇಶಗಳ ಸರ್ಕಾರಗಳು ಸೋಲಾರ್ ಶಕ್ತಿಯ ಉತ್ಪಾದನೆ ಮಾಡುವುದಕ್ಕಾಗಿ ಕೋಟ್ಯಾಂತರ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ಹೀಗಿರುವಾಗ ಆಫ್ರಿಕಾದ ಮೂವರು ವಿದ್ಯಾರ್ಥಿನಿಯರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರೊಂದನ್ನು ಆವಿಷ್ಕರಿಸಿದ್ದಾರೆ. ಈ ಮಕ್ಕಳು ಕಂಡು ಹಿಡಿದ ಈ ಜನರೇಟರ್ ಯಂತ್ರವೂ ಒಂದು ಲೀಟರ್ ಮೂತ್ರದಿಂದ 6 ಗಂಟೆಗಳಿಗೆ ಸಾಕಾಗುವಷ್ಟು ವಿದ್ಯುತ್‌ನ್ನು ಉತ್ಪಾದಿಸಿದೆ ಎಂದು ವರದಿಯಾಗಿದೆ.
1 ಲೀಟರ್ ಮೂತ್ರದಲ್ಲಿ 4 ಗಂಟೆಗೆ ಬೇಕಾಗುವ ವಿದ್ಯುತ್ ಉತ್ಪಾದನೆ:
ಅಂದಹಾಗೆ ದಕ್ಷಿಣ ಆಫ್ರಿಕಾದ ನೈಜೀರಿಯಾದ ನಾಲ್ವರು ಹದಿಹರೆಯದ ಹುಡುಗಿಯರು ಈ ಸಾಧನೆ ಮಾಡಿದ್ದಾರೆ. ಈ ಪ್ರಕ್ರಿಯೆಯು ಮೂತ್ರದಿಂದ ಹೈಡ್ರೋಜನ್ ಅನ್ನು ಹೊರತೆಗೆಯುವ ಮೂಲಕ ಕಾರ್ಯನಿರ್ವಹಿಸುತ್ತದೆ, ನಂತರ ಅದನ್ನು ಜನರೇಟರ್‌ಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಈ ಆವಿಷ್ಕಾರವನ್ನು ಕಾರ್ಯರೂಪಕ್ಕೆ ಅಧಿಕ ವೆಚ್ಚವಿಲ್ಲ, ಮಾತ್ರವಲ್ಲದೆ ಪರಿಸರ ಸ್ನೇಹಿಯೂ ಆಗಿದೆ. ಸೀಮಿತ ವಿದ್ಯುತ್ ಸೌಲಭ್ಯವಿರುವ ಪ್ರದೇಶಗಳಿಗೆ ಇದು ನವೀಕರಿಸಬಹುದಾದ ಇಂಧನ ಪರಿಹಾರವನ್ನು ನೀಡುತ್ತದೆ. ವಿದ್ಯಾರ್ಥಿಗಳ ಈ ಆವಿಷ್ಕಾರವು ಸೃಜನಶೀಲತೆ, ವಿಜ್ಞಾನ ಮತ್ತು ನಿರ್ಣಯವು ತ್ಯಾಜ್ಯವನ್ನು ಸಂಪತ್ತಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಶಕ್ತಿಯ ಭವಿಷ್ಯವು ಅತ್ಯಂತ ಅನಿರೀಕ್ಷಿತ ಸ್ಥಳಗಳಿಂದ ಬರಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.
ಆಫ್ರಿಕನ್ ವಿದ್ಯಾರ್ಥಿಗಳ ಈ ಸಾಧನೆಗೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಡುರೊ-ಐನಾ ಅಡೆಬೋಲಾ, ಅಕಿಂಡೆಲೆ ಅಬಿಯೋಲಾ, ಮತ್ತು ಫಲೆಕೆ ಒಲುವಾಟೊಯಿನ್, ಮತ್ತು ಬೆಲ್ಲೊ ಎನಿಯೋಲಾ ಈ ಅವಿಷ್ಕಾರದ ಹಿಂದಿರುವ ಆಫ್ರಿಕನ್ ಮಕ್ಕಳು. ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮವಾದ 'ಮೇಕರ್ ಫೇರ್ ಆಫ್ರಿಕಾ'ದಲ್ಲಿ ಈ ಆವಿಷ್ಕಾರವನ್ನು ಪ್ರದರ್ಶಿಸಲಾಯಿತು, ಇದು ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮವಾಗಿದೆ. .ಮೂತ್ರವನ್ನು ಇಂಧನವಾಗಿ ಬಳಸುವ ಕಲ್ಪನೆಯು ಹೊಸದಲ್ಲ ಆದರೆ ಬೋಲಾ, ಬಯೋಲಾ, ಟೊಯಿನ್ ಮತ್ತು ಎನಿಯೋಲಾ ಈ ಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಪ್ರಾಯೋಗಿಕ ಮಾರ್ಗ ಕಂಡುಕೊಂಡಿದ್ದಾರೆ.
ಇದು ಹೇಗೆ ಕೆಲಸ ಮಾಡುತ್ತದೆ
makerfaireafrica.com ವೆಬ್‌ಸೈಟ್‌ನ ಬ್ಲಾಗ್‌ನಲ್ಲಿ ವಿವರಿಸಿದಂತೆ ಅದರ ಪ್ರಕ್ರಿಯೆ ಹೀಗಿದೆ.
ಮೂತ್ರವನ್ನು ವಿದ್ಯುದ್ವಿಚ್ಛೇದನ ಕೋಶಕ್ಕೆ ಹಾಕಲಾಗುತ್ತದೆ, ಇದು ಹೈಡ್ರೋಜನ್ ಅನ್ನು ಬೇರ್ಪಡಿಸುತ್ತದೆ.
ಮೂತ್ರವೂ ಹೈಡ್ರೋಜನ್ ಶುದ್ಧೀಕರಣಕ್ಕಾಗಿ ನೀರಿನ ಫಿಲ್ಟರ್‌ಗೆ ಹೋಗುತ್ತದೆ ಮತ್ತು ನಂತರ ಗ್ಯಾಸ್ ಸಿಲಿಂಡರ್‌ಗೆ ಹೋಗುತ್ತದೆ, ಇದು ಹೊರಾಂಗಣ ಬಾರ್ಬೆಕ್ಯೂ ಗ್ರಿಲ್‌ಗಳಿಗೆ ಬಳಸುವ ರೀತಿಯಂತೆಯೇ ಕಾಣುತ್ತದೆ.
ಇದನ್ನೂ ಓದಿ: ಅಯ್ಯೋ ಕಂದಾ.. ಪೋಷಕರು ತೊರೆದ ಮಗುವಿಗೆ ಆಸ್ಪತ್ರೆಯಲ್ಲಿ ಇಲ್ಲಿ ಕಚ್ಚಿ ಸಾವು
ಇದನ್ನೂ ಓದಿ: ವಿಮಾನದಲ್ಲಿ ಬಂದ ತನ್ನ ಪೋಷಕರ ಭಾವುಕವಾಗಿ ಸ್ವಾಗತಿಸಿದ ಪೈಲಟ್ ಮಗಳು: ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ..!
