ಸರ್ಕಾರಿ ನೌಕರರಿಗೆ 3% ಡಿಎ ಏರಿಕೆ: ದಸರಾ, ದೀಪಾವಳಿಗೆ ಡಬಲ್ ಖುಷಿ
ಹೊಸ AICPI ಇಂಡೆಕ್ಸ್ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಡಿಎ 55% ಇಂದ 58% ಕ್ಕೆ ಏರಿಕೆಯಾಗಿದೆ. ಪ್ರತಿ ಹಬ್ಬದ ಸೀಸನ್‌ನಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಬ್ಬದ ಉಡುಗೊರೆಯಾಗಿದೆ.

ಹಬ್ಬದ ಗಿಫ್ಟ್
ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ ಏರಿಕೆ ಕುರಿತು ದೀರ್ಘ ಕಾಲದ ನಿರೀಕ್ಷೆ ಈಗ ಅಂತ್ಯಗೊಂಡಿದೆ. ಹೊಸ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಪ್ರಕಾರ, ಕೇಂದ್ರ ನೌಕರರ ಡಿಎ 55% ಇಂದ 58% ಕ್ಕೆ ಏರಿಕೆಯಾಗಲಿದೆ. ಈ ಏರಿಕೆ ಜುಲೈ 1, 2025 ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರಿ ನೌಕರರು
ಭಾರತದಲ್ಲಿ 1ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಪ್ರತಿ ಹಬ್ಬದ ಸೀಸನ್‌ನಲ್ಲಿ 'ಡಿಎ ಏರಿಕೆಯಾಗಿದೆಯೇ? ಎಂಬ ವಿಚಾರಕ್ಕಾಗಿ ಕಾಯುತ್ತಿರುತ್ತಾರೆ. ಎಲ್ಲರ ಬಾಯಲ್ಲಿಯೂ ಇದೇ ಪ್ರಶ್ನೆ ಕೇಳಿಬರುತ್ತದೆ.
ಇದಕ್ಕೆ ಕಾರಣ ಎಲ್ಲ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶಿಕ್ಷಣ, ಮನೆ ಬಜೆಟ್, ಭವಿಷ್ಯದ ಯೋಜನೆ ಹೀಗೆ ಡಿಎ ಏರಿಕೆ ಅವರ ದೈನಂದಿನ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈಗ, ಮುಂಬರುವ ಹಬ್ಬದ ಸೀಸನ್‌ನಲ್ಲಿ ಅವರಿಗೆ ನಿರಾಳತೆ ನೀಡುವಂತೆ 3% ಏರಿಕೆ ಖಚಿತವಾಗಿದೆ.
7ನೇ ವೇತನ ಆಯೋಗ
ಸರ್ಕಾರಿ ಮೂಲಗಳ ಪ್ರಕಾರ, ಈ 3% ಏರಿಕೆಗೆ ಸಂಬಂಧಿಸಿದ ಅಧಿಕೃತ ಘೋಷಣೆ ಅಕ್ಟೋಬರ್‌ನಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಹೊರಬೀಳಲಿದೆ. ಆದರೆ, ಈ ಏರಿಕೆ ಜುಲೈ 1 ರಿಂದ ಜಾರಿಗೆ ಬರುವುದರಿಂದ, ನೌಕರರು ಜುಲೈ, ಆಗಸ್ಟ್, ಸೆಪ್ಟೆಂಬರ್ (ಮತ್ತು ಘೋಷಣೆ ತಡವಾದರೆ ಅಕ್ಟೋಬರ್) ತಿಂಗಳ ಬಾಕಿ ಹಣವನ್ನು ಒಂದೇ ಬಾರಿಗೆ ಪಡೆಯುತ್ತಾರೆ.
ತುಟ್ಟಿ ಭತ್ಯೆ
ಈ ಏರಿಕೆ ಹೇಗೆ ಬಂತು?
AICPI ಇಂಡೆಕ್ಸ್ ಸಂಖ್ಯೆಗಳು ಜನವರಿಯಿಂದ ಜೂನ್ 2025 ರವರೆಗೆ ಕ್ರಮೇಣ ಏರಿಕೆಯಾಗಿದೆ. ಜೂನ್ 2025 ರಲ್ಲಿ ಇಂಡೆಕ್ಸ್ 145.0 ಕ್ಕೆ ಏರಿದ್ದರಿಂದ, ಒಟ್ಟು ಡಿಎ 58.18% ಆಗಿದೆ. ನಿಯಮಗಳ ಪ್ರಕಾರ, ದಶಮಾಂಶ ಸಂಖ್ಯೆಗಳನ್ನು ಪರಿಗಣಿಸುವುದಿಲ್ಲ. ಹಾಗಾಗಿ, ಡಿಎ ಅನ್ನು 58% ಎಂದು ನಿಗದಿಪಡಿಸಲಾಗಿದೆ. ಉದಾಹರಣೆಗೆ, ರೂ.18,000 ಮೂಲ ವೇತನ ಇರುವವರಿಗೆ ತಿಂಗಳಿಗೆ ರೂ.540 ಹೆಚ್ಚುವರಿ ಆದಾಯ, ವರ್ಷಕ್ಕೆ ರೂ.6,480 ಏರಿಕೆ ಸಿಗಲಿದೆ.
ಪಿಂಚಣಿದಾರರಿಗೆ ಲಾಭ
ಲೆವೆಲ್ -1 ರಲ್ಲಿ ರೂ.56,900 ಮೂಲ ವೇತನ ಇರುವವರಿಗೆ ತಿಂಗಳಿಗೆ ರೂ.1,707 ಮತ್ತು ವರ್ಷಕ್ಕೆ ರೂ.20,484 ಹೆಚ್ಚಾಗುತ್ತದೆ. ಒಟ್ಟಾರೆಯಾಗಿ, ಈ 3% ಡಿಎ ಏರಿಕೆ ಕೇವಲ ಒಂದು ಸಂಖ್ಯೆಯಲ್ಲ. ಕೋಟ್ಯಾಂತರ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಭರವಸೆ. ಹೆಚ್ಚುತ್ತಿರುವ ಆರ್ಥಿಕ ಹೊರೆಯಲ್ಲಿ ಈ ಘೋಷಣೆ ಅಕ್ಟೋಬರ್‌ನಲ್ಲಿ ಹೊರಬಂದರೆ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.