ದರ್ಶನ್ ಜೈಲಿಗೆ ಹೋಗುವ ಎರಡು ದಿನಗಳ ಹಿಂದೆಯೇ ಅವರನ್ನು ಭೇಟಿ ಮಾಡಿದ್ದೆ. ಸಾಕಷ್ಟು ಮಾತುಕತೆ ಮಾಡಿದ್ದೇವೆ. ದರ್ಶನ್ ಕಷ್ಟ ಮತ್ತು ನೋವುಗಳೇನು ಅಂತ ಅವರಿಗೇ ಗೊತ್ತು. ಆದರೆ ಕೆಲ ಸ್ಯಾಡಿಸ್ಟ್‌ಗಳು ಇರುತ್ತಾರೆ.
‘ದರ್ಶನ್ ಅವರು ಜೈಲಿನಿಂದ ಹೊರ ಬಂದ ಮೇಲೆ ಮೊದಲು ನಾನೇ ಅವರ ನಟನೆಯ ಚಿತ್ರವನ್ನು ನಿರ್ದೇಶನ ಮಾಡುತ್ತೇನೆ.’ಹೀಗೆ ಹೇಳಿದ್ದು ನಿರ್ದೇಶಕ ಜೋಗಿ ಪ್ರೇಮ್. ‘ಲೈಫ್ ಟುಡೇ’ ಚಿತ್ರಕ್ಕಾಗಿ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಹಾಡೊಂದನ್ನು ಹಾಡಿದ ನಂತರ ಜೋಗಿ ಪ್ರೇಮ್ ಮಾಧ್ಯಮಗಳ ಮುಂದೆ ಹಾಜರಾದರು.
‘ದರ್ಶನ್ ಜೈಲಿಗೆ ಹೋಗುವ ಎರಡು ದಿನಗಳ ಹಿಂದೆಯೇ ಅವರನ್ನು ಭೇಟಿ ಮಾಡಿದ್ದೆ. ಸಾಕಷ್ಟು ಮಾತುಕತೆ ಮಾಡಿದ್ದೇವೆ. ದರ್ಶನ್ ಕಷ್ಟ ಮತ್ತು ನೋವುಗಳೇನು ಅಂತ ಅವರಿಗೇ ಗೊತ್ತು. ಆದರೆ ಕೆಲ ಸ್ಯಾಡಿಸ್ಟ್‌ಗಳು ಇರುತ್ತಾರೆ. ಒಳಗೆ ಹೋದ್ನಾ, ಒಳಗೆ ಕೂತ್ನಾ. ಇನ್ನು ಸಿಗಲ್ಲ ಅಂತ ಖುಷಿ ಪಡುತ್ತಾರೆ. ಅಂಥವರನ್ನು ಬದಲಾಯಿಸಕ್ಕೆ ಯಾರಿಂದಲೂ ಆಗಲ್ಲ.
ದೇವರೇ ಬರಬೇಕು. ಟ್ರೋಲ್ ಮಾಡೋದು, ವ್ಯಂಗ್ಯ ಮಾಡೋದು. ಆ ಮೂಲಕ ಹೊಟ್ಟೆ ತುಂಬಿಸಿಕೊಳ್ಳುವವರಿಗೆ ನಾವು ಏನು ಹೇಳಕ್ಕಾಗಲ್ಲ. ಅದರಿಂದ ಅವರಿಗೆ ನಾಲ್ಕು ಕಾಸು ಬರುತ್ತದೆ, ನಾವು ಯಾಕೆ ವಿರೋಧ ಮಾಡಬೇಕು? ಆದರೆ, ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಟ್ರೋಲ್ ಮಾಡಬೇಡಿ. ಸಾಮಾಜಿಕ ಜಾಲತಾಣಗಳು ಒಳ್ಳೆಯ ರೀತಿಯಲ್ಲಿ ಬಳಕೆ ಆಗಬೇಕು’ ಎಂದು ಪ್ರೇಮ್ ಕಿವಿ ಮಾತು ಹೇಳಿದರು.
ದೀಪಾವಳಿಗೆ ಕೆಡಿ ಸಿನಿಮಾ ತೆರೆಗೆ: ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರ ದೀಪಾವಳಿಗೆ ತೆರೆಗೆ ಬರಲಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಜೋಗಿ ಪ್ರೇಮ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ಈ ವರ್ಷ ಬರೋದು ಪಕ್ಕಾ. ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ನಾವು ಯಾವುದಾದರೂ ಒಂದು ಗ್ಯಾಪ್‌ನಲ್ಲಿ ಬರುತ್ತೇವೆ. ಅಂದರೆ ದೀಪಾವಳಿಗೆ ಚಿತ್ರವನ್ನು ಬಿಡುಗಡೆ ಮಾಡೋದು ಸತ್ಯ’ ಎಂದಿದ್ದಾರೆ ಪ್ರೇಮ್. ಚಿತ್ರದಲ್ಲಿ 1 ಗಂಟೆ 31 ನಿಮಿಷ ಸಿಜಿ ಕೆಲಸ ಇದೆ. 9 ತಂಡಗಳು ಇದಕ್ಕಾಗಿ ಕೆಲಸ ಮಾಡುತ್ತಿವೆ. ಪ್ರೇಮ್ ಅವರ ಕಂಪನಿಯಲ್ಲೇ ಸಿಜಿ ವರ್ಕ್ ನಡೆಯುತ್ತಿದೆ.
