ಸೌಜನ್ಯ ಕೇಸ್​ಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ತಮ್ಮ ವಿಡಿಯೋ ಮಿಸ್​ಯೂಸ್​ ಮಾಡಿ ರೇ*ಪ್​ ಬೆದರಿಕೆ ಹಾಕಿದ್ದರ ವಿಚಿತ್ರ ಘಟನೆ ಸುವರ್ಣ ಪಾಡ್​ಕಾಸ್ಟ್​ನಲ್ಲಿ ವಿವರಿಸಿದ್ದಾರೆ. 

ಧರ್ಮಸ್ಥಳದಲ್ಲಿ ಬರ್ಬರವಾಗಿ ಸಾವಿಗೀಡಾದ ಯುವತಿ ಸೌಜನ್ಯಳಿಗೆ ನ್ಯಾಯ ಕೊಡಿಸುವುದಾಗಿ ಹೇಳುವ ನೆಪದಲ್ಲಿ ಒಂದೆರಡು ತಿಂಗಳುಗಳಿಂದ ಆಗುತ್ತಿರುವ ಆತಂಕಕಾರಿ ಘಟನೆಗಳ ಬಗ್ಗೆ ಬಹುತೇಕರಿಗೆ ತಿಳಿದದ್ದೇ. ಸೌಜನ್ಯಳಿಗೆ ನ್ಯಾಯ (Justice to Soujanya) ಕೊಡಿಸುವುದನ್ನು ಬಿಟ್ಟು, ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲಾಯಿತು. ಒಂದು ಪಕ್ಷದ ಮೇಲೆ ಗೂಬೆ ಕೂಡಿಸುವುದು, ಹಿಂದೂಗಳ ಧಾರ್ಮಿಕ ಸ್ಥಳವಾಗಿರುವ ಧರ್ಮಸ್ಥಳದ (Dharmasthala case) ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವ ಸಲುವಾಗಿ ಯಾವ್ಯಾವುದೋ ಸಾಕ್ಷಿಗಳನ್ನು ಸೃಷ್ಟಿ ಮಾಡಿ, ಎಐ ವಿಡಿಯೋ ಮೂಲಕ ಒಂದಷ್ಟು ಜನರನ್ನು ನಂಬಿಸಿರುವವರೆಲ್ಲರೂ ಈಗ ಕೇಸ್​ ಎದುರಿಸುತ್ತಿದ್ದಾರೆ. ಇವರ ಈ ಹೇಯ ಕೃತ್ಯದ ನಡುವೆ ಸೌಜನ್ಯಳಿಗೆ ನ್ಯಾಯ ಕೊಡಿಸಲು ನಿಜವಾಗಿ ಹೋರಾಟ ಮಾಡುತ್ತಿರುವವರಿಗೇ ಸದ್ಯದ ಮಟ್ಟಿಗೆ ಹಿನ್ನಡೆಯಾದಂಥ ಪರಿಸ್ಥಿತಿಯೂ ನಿರ್ಮಾಣವಾಗಿ ಬಿಟ್ಟಿದೆ.

ಈ ಕೇಸ್​ ಬಗ್ಗೆ ರಾಜ್ಯ ಮಹಿಳಾ ಆಯೋಗದ ವಿರುದ್ಧವೂ ಒಂದಷ್ಟು ಮಂದಿ ಕಿಡಿ ಕಾರಿದ್ದು ಇದೆ. ರಾಜ್ಯ ಮಹಿಳಾ ಆಯೋಗವು ಸೌಜನ್ಯ ಪ್ರಕರಣದ ತನಿಖೆಯನ್ನು ಮೊದಲು ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ನಂತರ SIT ತನಿಖೆ ಆರಂಭವಾಯಿತು. ಆದರೆ ಇದರ ನಡುವೆಯೇ, ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ (Dr. Nagalakshmi Choudhary) ಅವರ ವಿಡಿಯೋ ಮಿಸ್​ಯೂಸ್​ ಆಗಿದ್ದು, ಅದರಲ್ಲಿ ಒಂದು ಕಮೆಂಟ್​ನಲ್ಲಿ ನಿಮ್ಮನ್ನು ರೇ*ಪ್ ಮಾಡಲಾಗುವುದು ಎಂದು ಹೇಳಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: Prajwal Revanna ಪೆನ್​ಡ್ರೈವ್​ನಲ್ಲಿ ಏನೇನಿತ್ತು? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ

ಆತನಲ್ಲ… ಆಕೆ…

ಕೊನೆಗೆ ಆ ಇನ್​ಸ್ಟಾಗ್ರಾಮ್​ ಅಕೌಂಟ್​ ಆಧಾರದ ಮೇಲೆ ಪೊಲೀಸರಲ್ಲಿ ದೂರು ದಾಖಲಾದಾಗ, ಅವರು ತನಿಖೆ ನಡೆಸಿ ಒಬ್ಬರನ್ನು ಅರೆಸ್ಟ್​ ಮಾಡಿದ್ರು. ಆದರೆ ಆಶ್ಚರ್ಯ ಏನು ಗೊತ್ತಾ ಎನ್ನುತ್ತಲೇ ಅಚ್ಚರಿಯ ವಿಷಯವನ್ನು ರಿವೀಲ್​ ಮಾಡಿದ್ದಾರೆ ​ಡಾ. ನಾಗಲಕ್ಷ್ಮಿ ಚೌಧರಿ. ಅದೇನೆಂದರೆ ಎಲ್ಲರಿಗೂ ತಿಳಿದಿರುವಂತೆ ಅದು ಫೇಕ್​ ಅಕೌಂಟ್​ ಆಗಿತ್ತು. ಅಂದರೆ ಬೇರೆಯವರ ಹೆಸರಿನಲ್ಲಿ ತೆರೆದ ಅಕೌಂಟ್​ ಆಗಿತ್ತು. ಆದರೆ ವಿಷಯ ಅದಲ್ಲ. ಆ ಅಕೌಂಟ್​ ಒಬ್ಬ ಲೇಡಿಗೆ ಸೇರಿದ್ದಾಗಿತ್ತು ಎನ್ನುವ ಶಾಕಿಂಗ್​ ಸುದ್ದಿಯನ್ನು ಹೇಳಿದ್ದಾರೆ.

ಆಕೆ ಎಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿದ್ದಳು. ನಾನೇನಾದರೂ ಸ್ವಲ್ಪ ಮುಂದೆ ಹೋಗಿದ್ದರೆ ಆಕೆ ಅರೆಸ್ಟ್​ ಕೂಡ ಆಗುತ್ತಿದ್ದಳು ಎನ್ನುತ್ತಲೇ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿ ಇಂಥ ಅಸಭ್ಯ ಕಮೆಂಟ್ಸ್​ ಹಾಕಿದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಬಗ್ಗೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ಅಂದಹಾಗೆ ಅವರು ಈ ವಿಷಯವನ್ನು ಸುವರ್ಣ ಟಿವಿ ಬೆಂಗಳೂರು ಬಜ್​ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ವಿಷಯ ತಿಳಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ...

ಇದನ್ನೂ ಓದಿ: ಸುಳ್ಳು ವರದಕ್ಷಿಣೆ ಕೇಸ್​ ಹಾಕುವವರೇ ಹುಷಾರ್​! ಮಹಿಳೆಗೆ 1.8 ಕೋಟಿ ದಂಡ ವಿಧಿಸಿದ ಕೋರ್ಟ್​

View post on Instagram