ಕೊಪ್ಪಳ: ಮದುವೆಗೂ ಮುನ್ನವೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಮಧ್ಯರಾತ್ರಿ ಕೊರೆಯುವ ಚಳಿಯಲ್ಲಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಳಿ ಮುಳ್ಳು ಬೇಲಿಯಲ್ಲಿ ಬಿಸಾಡಲಾಗಿದ್ದು, ಭದ್ರತಾ ಸಿಬ್ಬಂದಿ ಆ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಆರೋಗ್ಯವಾಗಿದೆ.
ಸೋಮವಾರ ಮಧ್ಯರಾತ್ರಿ 1.10ರ ಸಮಯದಲ್ಲಿ ಹುಲಿಗೆಮ್ಮ ದೇವಸ್ಥಾನದ ಹಿಂಭಾಗದಲ್ಲಿ ಭದ್ರತಾ ಸಿಬ್ಬಂದಿ ಶಿವರಾಜ ಹಿಟ್ನಾಳ ಹಾಗೂ ಮಂಜುನಾಥ ಅಗಳಿಕೇರಿ ಅವರಿಗೆ ಮಗು ಅಳುತ್ತಿರುವ ಧ್ವನಿ ಕೇಳಿಸಿತು. ತಕ್ಷಣ ಮಕ್ಕಳ ಸಹಾಯವಾಣಿ ಮತ್ತು ವೈದ್ಯರು ಹಾಗೂ ದೇವಸ್ಥಾನ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಮಾಹಿತಿ ನೀಡಿದರು. ತಕ್ಷಣ ಮಗುವಿಗೆ ಪಕ್ಕದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆಗ ತಾನೆ ಜನಿಸಿದ್ದ ಮಗುವನ್ನು ಬೇಲಿಯಲ್ಲಿ ಎಸೆದಿದ್ದರಿಂದ ತರಚಿದ ಗಾಯಗಳಾಗಿವೆ. ಅಲ್ಲದೆ ಮಗುವಿನ ಮೈಗೆ ಮಣ್ಣು, ಹುಲ್ಲು, ಕಡ್ಡಿ ಮೆತ್ತಿಕೊಂಡಿದೆ. ಅದೆಲ್ಲವನ್ನು ಸ್ವಚ್ಛಗೊಳಿಸಲಾಗಿದೆ. ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಆರೈಕೆಯಲ್ಲಿ ಮಗು ಆರೋಗ್ಯವಾಗಿದೆ.
12:02 AM (IST) Jan 01
11:36 PM (IST) Dec 31
ಹೊಸವರ್ಷ ಅಮಲಿನಲ್ಲಿ ಮಹಿಳಾ ಪೊಲೀಸ್, ಯುವತಿಯರ ಜೊತೆ ಅನುಚಿತ ವರ್ತನೆ, ನಾಲ್ವರು ವಶಕ್ಕೆ, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಸಿಸಿಬಿ ಪೊಲೀಸರುು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
11:07 PM (IST) Dec 31
10:40 PM (IST) Dec 31
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಹೊಸ ವರ್ಷದ ಮುನ್ನಾದಿನದಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮಯೂರ ಬೇಕರಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯು ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ.
10:25 PM (IST) Dec 31
ಬೆಂಗಳೂರು ಹೊಸವರ್ಷ ಸಂಭ್ರಮದಲ್ಲಿ ನಶೆ ಏರಿದ ಮಹಿಳೆಯರಿಗೆ ರಾತ್ರಿ ಇಡಿ ಉಚಿತ ಡ್ರಾಪ್, ಬೆಂಗಳೂರು ಪೊಲೀಸರು ಜೊತೆ ಆಟೋ ಚಾಲಕರು ಕೈಜೋಡಿಸಿದ್ದಾರೆ. ಈ ಮೂಲಕ ಮಹಿಳೆಯರಿಗೆ ಆಟೋ ಸೇವೆ ನೀಡಲಿದ್ದಾರೆ.
10:00 PM (IST) Dec 31
09:23 PM (IST) Dec 31
09:21 PM (IST) Dec 31
2025ನೇ ವರ್ಷವು ಮಂಡ್ಯ ಜಿಲ್ಲೆಯ ಪಾಲಿಗೆ ಹಲವು ಏರಿಳಿತಗಳಿಗೆ ಸಾಕ್ಷಿಯಾಯಿತು. ಮದ್ದೂರಿನಲ್ಲಿ ನಡೆದ ಕೋಮುಗಲಭೆ, ರೈತರ ಆತ್ಮಹತ್ಯೆ, ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ, ಮತ್ತು 'ತಿಥಿ' ಖ್ಯಾತಿಯ ಗಡ್ಡಪ್ಪನವರ ನಿಧನದಂತಹ ಪ್ರಮುಖ ಘಟನೆಗಳು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದವು.
09:18 PM (IST) Dec 31
ಹೊಸ ವರ್ಷ ಪಾರ್ಟಿ ಮೂಡ್‌ನಲ್ಲಿದ್ದವರಿಗೆ ಶಾಕ್, ಬೆಂಗಳೂರಿನ ಕೆಲವೆಡೆ ಭಾರಿ ಮಳೆ, ಸಂಭ್ರಮಾಚರಣೆ ಮಾಡುತ್ತಿದ್ದವರು ಕಾರ್ಯಕ್ರಮ ಸ್ಥಗಿತಗೊಳಿಸಿದ್ದಾರೆ. ಕೆಲ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವರು ನಿರಾಸೆಗೊಂಡಿದ್ದಾರೆ.
08:30 PM (IST) Dec 31
ಕರ್ನಾಟಕ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಒಟ್ಟು 20 ಸಾರ್ವತ್ರಿಕ ರಜೆಗಳು ಮತ್ತು 21 ಪರಿಮಿತ ರಜೆಗಳಿದ್ದು, ಕೊಡಗು ಜಿಲ್ಲೆಗೆ ವಿಶೇಷ ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ.
07:40 PM (IST) Dec 31
2025ರಲ್ಲಿ ರಾಮನಗರ ಜಿಲ್ಲೆಯು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾಯಿತು. ಬಿಡದಿ ಟೌನ್ ಶಿಪ್ ಯೋಜನೆ, ರಾಜಕೀಯ ಮೇಲಾಟ, ಮಾನವ-ವನ್ಯಜೀವಿ ಸಂಘರ್ಷ, ಅಪಘಾತಗಳು ಮತ್ತು ಸಾವು-ನೋವುಗಳು ವರ್ಷವಿಡೀ ಸುದ್ದಿಯಲ್ಲಿದ್ದವು. ಇದೇ ವರ್ಷ ನಟಿ ಬಿ. ಸರೋಜಾದೇವಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಮ್ಮನ್ನಗಲಿದರು.
07:23 PM (IST) Dec 31
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಂತಹ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಫ್ಲೈ ಓವರ್‌ಗಳನ್ನು ಮುಚ್ಚಲಾಗಿದ್ದು, ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ಕಠಿಣ ತಪಾಸಣೆ ನಡೆಸಲಾಗುತ್ತಿದೆ.
06:50 PM (IST) Dec 31
06:46 PM (IST) Dec 31
06:18 PM (IST) Dec 31
ಕೋಲಾರ ನಗರದ ಆರ್‌ಟಿಒ ಕಚೇರಿ ಬಳಿ ಬೀದಿನಾಯಿಯೊಂದು ಏಕಾಏಕಿ ದಾಳಿ ನಡೆಸಿ, ಒಂದೇ ದಿನದಲ್ಲಿ 21 ಜನರನ್ನು ಕಚ್ಚಿ ಗಾಯಗೊಳಿಸಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಸ್ಥಳೀಯರೇ ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.
05:59 PM (IST) Dec 31
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 4 ತಿಂಗಳ ಜೈಲುವಾಸದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಜೈಲಿನಲ್ಲಿದ್ದಾಗ ನಟ ದರ್ಶನ್ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಡಿಸಿಎಂ ಡಿ.ಕೆ. ಶಿವಕುಮಾರ್ ಆತ್ಮಸ್ಥೈರ್ಯ ತುಂಬಿದ್ದ ಬಗ್ಗೆ ತಿಳಿಸಿದರು.
05:33 PM (IST) Dec 31
05:29 PM (IST) Dec 31
ಪ್ರಖ್ಯಾತ ಕನ್ನಡ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ ಅವರು ತುಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ 'ಬನ' ಎಂಬ ಚಿತ್ರದಲ್ಲಿ ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದು, ನಾಗಬನದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
05:05 PM (IST) Dec 31
04:54 PM (IST) Dec 31
04:32 PM (IST) Dec 31
ಹೊಸ ವರ್ಷಾಚರಣೆಗಾಗಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತವು ರೇವ್ ಪಾರ್ಟಿ ನಿಷೇಧದಂತಹ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಈ ಬಾರಿ ವಾರದ ಮಧ್ಯದಲ್ಲಿ ಹೊಸ ವರ್ಷ ಬಂದಿರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
04:14 PM (IST) Dec 31
04:02 PM (IST) Dec 31
ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜಿಲ್ಲಾಡಳಿತದ ನಿರ್ಬಂಧಗಳು ಮತ್ತು ವಾರದ ಮಧ್ಯದಲ್ಲಿ ಹೊಸ ವರ್ಷ ಬಂದಿರುವುದರಿಂದ, ಹೋಂ ಸ್ಟೇಗಳು ಹಾಗೂ ರೆಸಾರ್ಟ್‌ಗಳು ಖಾಲಿಯಾಗಿದ್ದು, ಪ್ರಮುಖ ಪ್ರವಾಸಿ ತಾಣಗಳು ನಿಶ್ಶಬ್ದವಾಗಿವೆ.
03:59 PM (IST) Dec 31
03:25 PM (IST) Dec 31
ನನ್ನ ಜೀವನದಲ್ಲಿ ನಾನು ಯಾವತ್ತೂ ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಏನಿದ್ದರೂ ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ' ಎಂದು ಹೇಳುವ ಮೂಲಕ ವಿಜಯಲಕ್ಷ್ಮಿ ದೂರು ಕುರಿತ ವಿಚಾರಕ್ಕೆ ಕಿಚ್ಚ ಸುದೀಪ್ ಮೌನದ ಪ್ರತಿಕ್ರಿಯೆ ನೀಡಿದರು.
03:14 PM (IST) Dec 31
ಓಡಿ ಹೋದರೂ, ಲವ್ ಮ್ಯಾರೇಜ್‌ಗೂ ಬೇಕು ಅನುಮತಿ, ಹೊಸ ಮದುವೆ ನೀತಿ ಮಸೂದೆ, ಪೋಷಕರ ಅನುಮತಿ ಸಿಗದಿದ್ದರೆ, ಲೆವಲ್ 2 ಆಫೀಸ್ ಪರಿಶೀಲನೆ ನಡೆಸಲಿದ್ದಾರೆ. ಆಫೀಸರ್ ಅಪ್ರೋವ್ ನೀಡಿದರೆ ಮಾತ್ರ ಮದುವೆ ಸಾಧ್ಯ.
03:02 PM (IST) Dec 31
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆರೋಪಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ತನಿಖೆ ವಿಳಂಬವಾಗಿಲ್ಲ, ತಾಂತ್ರಿಕ ಕಾರಣಗಳಿಂದ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದು, ವಿಳಂಬ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
02:57 PM (IST) Dec 31
02:51 PM (IST) Dec 31
ಒಂದು ಕಾಲದಲ್ಲಿ ಭಾರತೀಯ ಜವಳಿ ಮಾರುಕಟ್ಟೆಯನ್ನು ಆಳಿದ 'ಓನ್ಲಿ ವಿಮಲ್' ಬ್ರ್ಯಾಂಡ್‌ಗೆ ಸ್ಫೂರ್ತಿಯಾದವರು ವಿಮಲ್ ಅಂಬಾನಿ. ಧೀರೂಭಾಯಿ ಅಂಬಾನಿಯವರ ಅಣ್ಣನ ಮಗನಾದ ಇವರು, ಬ್ರ್ಯಾಂಡ್‌ನ ಅಪಾರ ಖ್ಯಾತಿಯ ಹೊರತಾಗಿಯೂ ಸಾರ್ವಜನಿಕ ಜೀವನದಿಂದ ದೂರ ಉಳಿದು, ಖಾಸಗಿ ಬದುಕು ನಡೆಸುತ್ತಿದ್ದಾರೆ.
02:36 PM (IST) Dec 31
01:13 PM (IST) Dec 31
2026ರ ಆರಂಭವು ಧನು ರಾಶಿಯಲ್ಲಿ ಸೂರ್ಯ, ಮಂಗಳ, ಶುಕ್ರ ಮತ್ತು ಬುಧರ ನಾಲ್ಕು ಗ್ರಹಗಳ ಸಂಯೋಗದೊಂದಿಗೆ ಪ್ರಾರಂಭವಾಗುತ್ತದೆ, ಇದು ಕೆಲವು ರಾಶಿಗಳಿಗೆ ಅತ್ಯಂತ ಶುಭಕರವಾಗಿರುತ್ತದೆ. ಈ ಲೇಖನವು ಜನವರಿ 2026ರ ಮಾಸಿಕ ಜಾತಕವನ್ನು ವಿವರಿಸುತ್ತದೆ.
01:03 PM (IST) Dec 31
ಮಿಲಿಯನೇರ್ ಆಗ್ಬೇಕು, ಆಮೇಲೆ ಬಿಲಿಯನೇರ್ ಆಗ್ಬೇಕು ಅನ್ನೋದು ಅನೇಕರ ಆಸೆ. ಆದರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇತ್ತೀಚೆಗೆ ಚಾಲ್ತಿಯಲ್ಲಿರುವ ಪದವೊಂದು ಇಂಟರ್‌ನೆಟ್‌ನಲ್ಲಿ ಬಹಳ ಸಂಚಲನ ಸೃಷ್ಟಿಸುತ್ತಿದೆ. ಅದುವೇ ನಿಲಿಯನೇರ್ ಹಾಗಿದ್ರ ನಿಲಿಯನೇರ್ ಅಂದ್ರೆ ಏನು
01:01 PM (IST) Dec 31
ಭಾರತೀಯ ರೈಲ್ವೆಯು ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದ ವಿದ್ಯುದ್ದೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮಹತ್ವದ ಮೈಲಿಗಲ್ಲಿನಿಂದಾಗಿ, ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ಸೇರಿದಂತೆ ಆಧುನಿಕ ಎಲೆಕ್ಟ್ರಿಕ್ ಸೂಪರ್‌ಫಾಸ್ಟ್ ರೈಲುಗಳ ಸಂಚಾರಕ್ಕೆ ದಾರಿ ಸುಗಮವಾಗಿದೆ.
12:48 PM (IST) Dec 31
ಕಾರವಾರದಿಂದ ಅಂಕೋಲಾಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ನಿದ್ದೆಯಲ್ಲಿದ್ದಾಗ, ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಧೈರ್ಯಗೆಡದ ಯುವತಿ ಆತನ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
12:40 PM (IST) Dec 31
ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರು, ಡಿಸಿಎಂ ಮಲಗುವ ಜಾಗದಲ್ಲಿ ತಮ್ಮ ನಾಯಿ ಮಲಗಿತ್ತು ಮತ್ತು ತಮಗೆ ಸಿಎಂ ಮಲಗುವ ಜಾಗವನ್ನು ನೀಡಲಾಗಿತ್ತು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಅವರು ಹೇಳಿದ್ದೇನು ಕೇಳಿ…
12:20 PM (IST) Dec 31
ಬಿಗ್ ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ, ಫ್ಲೋರಿಡಾದಲ್ಲಿ ಒಂಟಿ ಪ್ರವಾಸ ಕೈಗೊಂಡಿದ್ದಾರೆ. ಡಿಸ್ನಿ ವರ್ಲ್ಡ್‌ನಂತಹ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ತಮ್ಮ ಪ್ರವಾಸದ ಸುಂದರ ಕ್ಷಣಗಳನ್ನು ಮತ್ತು ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
12:11 PM (IST) Dec 31
11:01 AM (IST) Dec 31
ಹೊಸ ವರ್ಷದ ಟೈಮ್‌ನಲ್ಲಿ ಹೈದ್ರಾಬಾದ್ ಯುವತಿಯ ಪೋಸ್ಟ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಹಿನ್ನಲೆಯಲ್ಲಿ ಬೆಂಗಳೂರನ್ನು ತೊರೆಯುತ್ತಿರೋದು ಈ ವರ್ಷದ ನನ್ನ ಬೆಸ್ಟ್ ನಿರ್ಧಾರ ಎಂದಿರೋದು ಆಕ್ರೋಶಕ್ಕೆ ಕಾರಣವಾಗಿದೆ.
10:54 AM (IST) Dec 31
ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಪೊಲೀಸರೇ ಅಪರಾಧ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಮೇಲೆ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 650ಕ್ಕೂ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ
10:12 AM (IST) Dec 31
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಧನುಷ್ ತಮ್ಮ ಆಟದ ತಂತ್ರಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ. ಧನುಷ್ ಅವರ ಈ ಲೆಕ್ಕಾಚಾರದ ಆಟವನ್ನು ಗಮನಿಸಿದ ಅಶ್ವಿನಿ ಗೌಡ ಮತ್ತು ಧ್ರುವಂತ್, ಅವರ ಅಸಲಿ ಆಟದ ಬಗ್ಗೆ ಚರ್ಚೆ ನಡೆಸಿದ್ದಾರೆ.