BBK 12: ಹೇಳಿದ್ದೊಂದು ಮಾಡ್ತಿರೋದು ಮತ್ತೊಂದು; WWE ಆಟಗಾರರಾದ ಸ್ಪಂದನಾ-ರಾಶಿಕಾ
ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಸ್ಪಂದನಾ ಸೋಮಣ್ಣ ಮತ್ತು ರಾಶಿಕಾ ಶೆಟ್ಟಿ ನಡುವೆ ತೀವ್ರ ಸ್ಪರ್ಧೆ ನಡೆದಿದೆ. ಬಿಲ್ಲೆಗಳನ್ನು ಜೋಡಿಸುವ ಆಟವು ದೈಹಿಕ ಜಟಾಪಟಿಗೆ ತಿರುಗಿದ್ದು, ಇಬ್ಬರೂ ಕುಸ್ತಿಯಾಡಿದಂತೆ ಒಬ್ಬರನ್ನೊಬ್ಬರು ಲಾಕ್ ಮಾಡಿಕೊಂಡಿದ್ದಾರೆ.

ಟಾಸ್ಕ್
ಬಿಗ್‌ಬಾಸ್ ಮನೆಯಲ್ಲಿ ನಿನ್ನೆಯ ಟಾಸ್ಕ್‌ನಿಂದ ಕಾವ್ಯಾ ಮತ್ತು ರಕ್ಷಿತಾ ಶೆಟ್ಟಿ ಹೊರಗೆ ಬಿದ್ದಿದ್ದಾರೆ. ಅಶ್ವಿನಿ ಗೌಡ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿರುವ ಕಾರಣ ಸ್ಪಂದನಾ ಸೋಮಣ್ಣ ಮತ್ತು ರಾಶಿಕಾ ಶೆಟ್ಟಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಬಿಗ್‌ಬಾಸ್ ಪ್ರೋಮೋ
ಇಬ್ಬರು ಸ್ಪರ್ಧಿಗಳು ತಮಗೆ ನೀಡಲಾಗಿರುವ ಬಿಲ್ಲೆಗಳನ್ನು ಸಾಲಿನಲ್ಲಿ ಜೋಡಿಸಬೇಕು. ಬಿಲ್ಲೆಗಳನ್ನು ಅಧಿಕವಾಗಿ ಬೀಳಿಸುವ ಸ್ಪರ್ಧಿ ಆಟದಲ್ಲಿ ಗೆಲ್ಲುತ್ತಾರೆ. ಬಿಲ್ಲೆಗಳನ್ನು ಸಾಲಿನಲ್ಲಿ ಜೋಡಿಸಿದ ನಂತರ ಅವುಗಳನ್ನು ಕಾಪಾಡಿಕೊಳ್ಳಬೇಕು. ಎದುರಾಳಿ ಸ್ಪರ್ಧಿಯ ಬಿಲ್ಲೆ ಬೀಳಿಸಲು ಪ್ರಯತ್ನಿಸಬೇಕು ಎಂದು ಪ್ರೋಮೋದಲ್ಲಿ ತೋರಿಸಲಾಗಿದ್ದು, ಆಟದ ಬಗ್ಗೆ ಸ್ಪಷ್ಟತೆ ಇಲ್ಲ.
ರಾಶಿಕಾ-ಸ್ಪಂದನಾ
ರಾಶಿಕಾ ಅಡುಗೆಮನೆ ಮತ್ತು ಸ್ಪಂದನಾ ಬಾತ್‌ರೂಮ್‌ನಲ್ಲಿ ತಮ್ಮ ಬಿಲ್ಲೆಗಳನ್ನು ಜೋಡಿಸಿದ್ದಾರೆ. ನಂತರ ಬಿಲ್ಲೆಗಳನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಇಬ್ಬರ ನಡುವೆ ಒಂದು ರೀತಿ ಕುಸ್ತಿಯೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಒಬ್ಬರೊಬ್ಬರನ್ನು ಲಾಕ್ ಮಾಡಿಕೊಂಡಿದ್ದಾರೆ. ಆಟ ಅಂತ ಬಂದಾಗ ರಾಶಿಕಾ ದೈಹಿಕವಾಗಿ ತುಂಬಾ ಫಿಟ್ ಆಗಿದ್ದು, ಸ್ಪಂದನಾ ಅವರನ್ನು ಲಾಕ್ ಮಾಡಿದ್ದಾರೆ.
ಏನು ಆಟ ಎಂದ ಧ್ರುವಂತ್?
ಇವರಿಬ್ಬರ ಆಟ ನೋಡಿದ ಧ್ರುವಂತ್, ಬಿಗ್‌ಬಾಸ್ ನೀವು ಹೇಳಿದ ಟಾಸ್ಕ್ ಯಾವುದು? ಬಿಲ್ಲೆಗಳದ್ದಾ ಅಥವಾ ಕುಸ್ತಿ ಆಡೋದಾ ಎಂದು ಕೇಳುತ್ತಾರೆ. ಸ್ಪಂದನಾ ಇಷ್ಟು ದಿನ ನಿಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಶಕ್ತಿಯನ್ನು ತೋರಿಸಬೇಕು ಎಂದು ಧ್ರುವಂತ್ ಹುರಿದುಂಬಿಸಿದ್ದಾರೆ. ಇತ್ತ ಸ್ಪಂದನಾ ನೀವು ಇಷ್ಟೊಂದು ವೀಕ್ ಆಗಿದ್ದೀರಾ ಎಂದು ಅಶ್ವಿನಿ ಗೌಡ ಹೇಳುತ್ತಾರೆ.
ಇದನ್ನೂ ಓದಿ: BBK 12: ಧನುಷ್ ತಂತ್ರಗಾರಿಕೆ ಕಂಡು ಬೆಕ್ಕಸ ಬೆರಗಾದ ಅಶ್ವಿನಿ ಗೌಡ & ಧ್ರುವಂತ್; ಅದು ನಾಲ್ವರ ಗ್ಯಾಂಗ್?
ವೀಕ್ಷಕರು ಹೇಳಿದ್ದೇನು?
ಈ ಪ್ರೋಮೋ ನೋಡಿದ ನೆಟ್ಟಿಗರು, ಸ್ಪಂದನ ಅವರೇ ನೀವು ಆಟ ಆಡೋದೇ ಬೇಡ ಯಾಕಂದ್ರೆ ನೀವು ಕೋಟಾದಡಿ ಸೇವ್ ಆಗ್ತೀರಿ. ರಾಶಿಕ ದೊಡ್ಡ WWF ಪ್ಲೇಯರ್ ಡಬಲ್ ಗೇಮ್ ಆಟ. ಧ್ರುವಂತ್ ಇಬ್ಬರ ಆಟಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾನೆ. ಆತನನ್ನು ದೂರ ಕಳುಹಿಸಿ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BBK 12: ಬಿಗ್‌ಬಾಸ್ ಕೊಟ್ಟ ಚೆಕ್‌ಮೆಟ್‌ಗೆ ಮಕ್ಕರ್ ಆದ ಗಿಲ್ಲಿ; ಚಮಕ್ ಕೊಟ್ಟ ರಕ್ಷಿತಾ, ಇತ್ತ ಕಾವ್ಯಾಗೆ ತಳಮಳ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

