ಬೆಂಗಳೂರು: 'ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಒಂದು ವೇಳೆ ಅನಿ ವಾರ್ಯತೆ ಸೃಷ್ಟಿಯಾದರೆ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಮುಖ್ಯಮಂತ್ರಿಯಾಗಬೇಕು" ಎನ್ನುವ ಮೂಲಕ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ಸಿಎಂ ಆಗಬಾರದೆಂದು ಆಶಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತಾರಕಕ್ಕೇರಿರುವ ಈ ಹಂತದಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ವರಿಷ್ಠ ರಾಹುಲ್ ಗಾಂಧಿ ಗುರುವಾರ ನೇರ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಅವರ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ.
11:57 PM (IST) Nov 27
ನೆಲಮಂಗಲದಲ್ಲಿ, ಬೆಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಗೋವುಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಪೊಲೀಸರು ಜಂಟಿಯಾಗಿ ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಾಹನ ತಡೆದು, ಗೋವುಗಳನ್ನು ರಕ್ಷಿಸಲಾಗಿದ್ದು, ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
11:41 PM (IST) Nov 27
ಚೆನ್ನೈ ಅಪೋಲೋ ಆಸ್ಪತ್ರೆ ದಾಖಲಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣಿನ ಚಿಕಿತ್ಸೆ ನೀಡಲಾಗುತ್ತದೆ. ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ದಾಖಲಾಗಿದ್ದಾರೆ. ಕುಮಾರಸ್ವಾಮಿ ಹೆಲ್ತ್ ಅಪ್‌ಡೇಟ್ ಇಲ್ಲಿದೆ.
11:36 PM (IST) Nov 27
ಚಾಮರಾಜನಗರದ ಬಾಲಕಿಯರ ಹಾಸ್ಟೆಲ್‌ಗೆ ಉಪ ಲೋಕಾಯುಕ್ತ ಫಣೀಂದ್ರ ಅವರು ದಿಢೀರ್ ಭೇಟಿ ನೀಡಿ, ಅಲ್ಲಿನ ಕಳಪೆ ನಿರ್ವಹಣೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
11:04 PM (IST) Nov 27
ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ರಾಯಚೂರಿನಲ್ಲಿ ರಸ್ತೆ ಕಾಮಗಾರಿ ವಿಳಂಬದ ಕಾರಣಕ್ಕೆ ಕೆಆರ್ಐಡಿಎಲ್ ಅಧಿಕಾರಿಗೆ 'ಕಟ್ಟಿ ಹಾಕಿ ಒದೀತಿನಿ' ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಯಿಂದ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
09:37 PM (IST) Nov 27
ಕೃತಕ ಬುದ್ಧಿಮತ್ತೆ (AI) ಸುತ್ತಲಿನ ಅತಿಯಾದ ಉತ್ಸಾಹ ಮತ್ತು ಹೂಡಿಕೆಯು 'ಗುಳ್ಳೆ'ಯನ್ನು ಸೃಷ್ಟಿಸಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ತಂತ್ರಜ್ಞಾನ ದಿಗ್ಗಜರು ಎಚ್ಚರಿಸಿದ್ದಾರೆ. ಈ ಎಐ ಗುಳ್ಳೆ ಒಡೆದರೆ, ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಆತಂಕ
09:35 PM (IST) Nov 27
ಬಿಗ್ ಬಾಸ್ ಸ್ಪರ್ಧಿ ರಂಜಿತ್ ಮತ್ತೊಂದು ಎಡವಟ್ಟು, ಶಾಸಕರ ಪಾಸ್ ಹಾಕಿ ಕಾರು ಚಾಲನೆ, ಇತ್ತೀಚೆಗಷ್ಟೇ ಆಸ್ತಿ ವಿಚಾರವಾಗಿ ಕುಟುಂಬ ರಂಪಾಟದ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ರಂಜಿತ್ ಶಾಸಕರ ಸ್ಟಿಕ್ಕರ್ ಹಾಕಿ ಕಾರು ಚಾಲನೆ ಮಾಡಿರುವ ಆರೋಪ ಕೇಳಿಬಂದಿದೆ.
09:02 PM (IST) Nov 27
07:16 PM (IST) Nov 27
ಬಿಗ್‌ಬಾಸ್ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ಮದುವೆ ಬಗ್ಗೆ ಚರ್ಚೆ ಜೋರಾಗಿದೆ. ಹಳೆಯ ಸಂದರ್ಶನವೊಂದರಲ್ಲಿ, ತಾವು ಸದ್ಯಕ್ಕೆ ಮದುವೆಯಾಗುವುದಿಲ್ಲ, ಆರ್ಥಿಕವಾಗಿ ಸಬಲರಾಗಿ ಜವಾಬ್ದಾರಿ ಹೊರಲು ಸಿದ್ಧರಾದ ನಂತರವೇ ಮದುವೆ ಎಂದು ಸ್ಪಷ್ಟಪಡಿಸಿದ್ದಾರೆ.
06:29 PM (IST) Nov 27
ಕೊಪ್ಪಳ ಜಿಲ್ಲೆಯ ಕುಕನೂರು ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅತ್ಯಾ*ಚಾರ ಆರೋಪಿ ಸೇರಿದಂತೆ ನಿರ್ಲಕ್ಷ್ಯ ತೋರಿದ ವಸತಿ ನಿಲಯದ ಸಿಬ್ಬಂದಿ ಸೇರಿ ಒಟ್ಟು 6 ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
06:10 PM (IST) Nov 27
Teachers beat students Chamarajanagar:ಚಾಮರಾಜನಗರದ ಹೊಂಡರಬಾಳು ನವೋದಯ ಶಾಲೆಯಲ್ಲಿ, ಸ್ಮಾರ್ಟ್ ಬೋರ್ಡ್‌ನಲ್ಲಿ ಪಾಠ ಪುನರಾವರ್ತಿಸಿದ್ದಕ್ಕೆ ನಾಲ್ವರು ವಿದ್ಯಾರ್ಥಿಗಳ ಮೇಲೆ ಶಿಕ್ಷಕರು, ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
05:10 PM (IST) Nov 27
04:47 PM (IST) Nov 27
04:45 PM (IST) Nov 27
ಈಗ ನೋಡಿದ್ರೆ ಉಮಾಪತಿ, ಸುದೀಪ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ರಕ್ಷಿತಾ ಸೋದರನ ಪಬ್ನಲ್ಲಿ ಕಿಚ್ಚನ ಜೊತೆ ಕುಳಿತು ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ದಾಸನ ಬಳಗ , ಕಿಚ್ಚನ ಗ್ಯಾಂಗ್ನಲ್ಲಿ ಮಿಂಚ್ತಾ ಇದೆ. ಇದೆನ್ನೆಲ್ಲಾ ನೋಡ್ತಾ ಕಾಲಾಯ ತಸ್ಮೈನಮಃ ಅಂತಿದ್ದಾರೆ ಗಾಂಧಿನಗರ ಮಂದಿ..! ಮುಂದೇನು?
04:38 PM (IST) Nov 27
ಡಿಕೆ ಶಿವಕುಮಾರ ಹೆಳಿಕೆ ಕುರಿತು ಸಚಿವ ಸತೀಶ್ ಜಾರಕಿಹೊಳಿ, 'ಕೂಲಿ ಸಿಗದವರು' ಬಹಳ ಮಂದಿ ಇದ್ದಾರೆ ಎನ್ನುವ ಮೂಲಕ ಪಕ್ಷದಲ್ಲಿನ ಅಸಮಾಧಾನ ಪರೋಕ್ಷ ವ್ಯಕ್ತಪಡಿಸಿದ್ದಾರೆ. ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ಬಂದಿಲ್ಲ. ತಮ್ಮ ಸಿಎಂ ಆಗುವ ಆಸೆ 2028ಕ್ಕೆ ಮೀಸಲು ಎಂದಿದ್ದಾರೆ.
04:37 PM (IST) Nov 27
ಭಾರತ: ಗುವಾಹಟಿ ಟೆಸ್ಟ್‌ನಲ್ಲಿ ಭಾರತ 408 ರನ್‌ಗಳ ಹೀನಾಯ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಕುಸಿತ, ಬೌಲಿಂಗ್ ದೋಷಗಳು ಮತ್ತು ಎರಡನೇ ಇನ್ನಿಂಗ್ಸ್ ವೈಫಲ್ಯ ಹೀಗೆ ಭಾರತ ತಂಡದ ಸೋಲಿಗೆ ಹಲವು ಕಾರಣಗಳಿವೆ. ಆ ವಿವರಗಳನ್ನು ಇಲ್ಲಿ ತಿಳಿಯೋಣ.
03:51 PM (IST) Nov 27
ಹಿರಿಯ ನಟಿ ಮುಮ್ತಾಜ್, ಆಸ್ಪತ್ರೆಯಲ್ಲಿದ್ದ ಧರ್ಮೇಂದ್ರ ಅವರ ಆರೋಗ್ಯ ಗಂಭೀರವಾಗಿದ್ದಾಗ ಭೇಟಿಯಾಗಲು ಹೋಗಿದ್ದೆ ಎಂದು ಹೇಳಿದ್ದಾರೆ. ಆದರೆ, ಅರ್ಧ ಗಂಟೆ ಕಾದರೂ ಅವರಿಗೆ ಅನುಮತಿ ಸಿಗಲಿಲ್ಲ. 2021ರಲ್ಲಿ ಕೊನೆಯ ಬಾರಿಗೆ ಈ ನಟಿ ನಟ ಧಮೇಂದ್ರರನ್ನು ಭೇಟಿಯಾಗಿದ್ದರು. ಈ ಸ್ಟೋರಿ ನೋಡಿ..
03:39 PM (IST) Nov 27
03:35 PM (IST) Nov 27
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿಗಳು ಈ ಹಿಂದೆ ಚಿತ್ರರಂಗಕ್ಕೆ ಬರುವ ಮುನ್ನ ಬೇರೆ ಬೇರೆ ಕ್ಷೇತ್ರಗಳಲ್ಲಿ ಬ್ಯುಸಿ ಆಗಿದ್ದರು. ನಟನೆ ಮೇಲಿನ ಒಲವಿನಿಂದ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸುವರ್ಣಾವಕಾಶವನ್ನು ಕೂಡ ಬೇಡ ಎಂದಿದ್ದರು.
02:59 PM (IST) Nov 27
ಕರ್ನಾಟಕ ಸಿಎಂ ಕುರ್ಚಿ ಗೊಂದಲದ ಕುರಿತು ಆದಿಚುಂಚನಗಿರಿ ಮಠದ ನಂಜಾವಧೂತ ಸ್ವಾಮೀಜಿಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಮತ್ತು ಒಕ್ಕಲಿಗ ಸಮುದಾಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ.
02:58 PM (IST) Nov 27
BBK 12 Updates: ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇತ್ತೀಚೆಗೆ ತ್ರಿವಿಕ್ರಮ್ ಅವರು ರಕ್ಷಿತಾ ಬಳಿ, ಮದುವೆ ಆಗ್ತೀಯಾ ಎಂದು ಕೇಳಿದ್ದರು. ಈಗ ಅವರು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
02:37 PM (IST) Nov 27
ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಚರ್ಚೆ ತೀವ್ರಗೊಂಡಿದ್ದು, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಧ್ಯೆ, ಅಹಿಂದ ಸಚಿವರು ಸಿಎಂ ಜೊತೆ ದಿಢೀರ್ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಬಾರದು ಎಂದು ಸಲಹೆ ನೀಡಿದ್ದಾರೆ.
02:26 PM (IST) Nov 27
ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದರಾದ ಶಿವಕುಮಾರ್ ಮತ್ತು ಮಾನಸಾ ಗುರುಸ್ವಾಮಿ ಜೋಡಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
02:16 PM (IST) Nov 27
ಲುಲು ಮಾಲ್ ಶೌಚಾಲಯದಲ್ಲಿ ಬಾಂಬ್ ಹಾಕಿ ಸ್ಪೋಟಿಸುವ ಪತ್ರ ಲಭ್ಯವಾದ ಕೂಡಲೇ, ಮಾಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಮಾಲ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಿತು. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ.
01:58 PM (IST) Nov 27
ಬಹಳ ದಿನಗಳಿಂದ ಒಂದೊಳ್ಳೆ ಹಿಟ್ ಇಲ್ಲದೆ ಕಷ್ಟಪಡುತ್ತಿದ್ದ ರಾಮ್ ಪೋತಿನೇನಿ, ಮಾಸ್ ಇಮೇಜ್‌ಗಾಗಿ ಪ್ರಯತ್ನಿಸಿ ಸೋತಿದ್ದರು. ಇದೀಗ ತಮ್ಮದೇ ಶೈಲಿಯ ಮ್ಯಾಜಿಕ್ ತೋರಿಸಲು 'ಆಂಧ್ರ ಕಿಂಗ್ ತಾಲೂಕಾ' ಚಿತ್ರದೊಂದಿಗೆ ಬಂದಿದ್ದಾರೆ.
01:44 PM (IST) Nov 27
Actress Meghana Raj: ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಚಿರು ನಿಧನದ ಬಳಿಕ ಮೇಘನಾ ಅವರು ಎರಡನೇ ಮದುವೆ ಆಗ್ತಾರಾ ಎನ್ನುವ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ ತಂದೆ ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ.
01:39 PM (IST) Nov 27
01:28 PM (IST) Nov 27
ರಾಮ್ ಚರಣ್ ಅವರ ಮುಂದಿನ ಸಿನಿಮಾ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರಲಿದೆ. ಈ ಚಿತ್ರದ ಕಥಾಹಂದರದ ಬಗ್ಗೆ ವಿವರಗಳು ವೈರಲ್ ಆಗುತ್ತಿವೆ. ಈ ಹಿಂದೆ ಇವರಿಬ್ಬರ ಕಾಂಬೋದಲ್ಲಿ ಬಂದಿದ್ದ 'ರಂಗಸ್ಥಳಂ' ಸಿನಿಮಾ ಹಳ್ಳಿಯ ಹಿನ್ನೆಲೆಯಲ್ಲಿತ್ತು.
01:21 PM (IST) Nov 27
ರಾಮನಗರ ಜಿಲ್ಲೆಯ ಕಗ್ಗಲೀಪುರ ಸಮೀಪದ ಬೋಳರೆ ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಶೌಚಕ್ಕೆಂದು ಹೋದವಳು ಶವವಾಗಿ ಪತ್ತೆಯಾಗಿದ್ದು, ಅತ್ಯಾ*ಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
01:18 PM (IST) Nov 27
12:56 PM (IST) Nov 27
ನಿರ್ದೇಶಕ ರಾಜಮೌಳಿ ಮತ್ತು ಹೀರೋ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರ 'ವಾರಣಾಸಿ'. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಟೀಸರ್ ನೆಟ್ಟಿಗರನ್ನು ಸಖತ್ ಆಗಿ ಸೆಳೆದಿದೆ.
12:38 PM (IST) Nov 27
12:36 PM (IST) Nov 27
ಬೆಂಗಳೂರಿನ 7.11 ಕೋಟಿ ರುಪಾಯಿ CMS ವಾಹನ ದರೋಡೆ ಪ್ರಕರಣದ ಮುಖ್ಯ ಆರೋಪಿಗಳು, ತಮ್ಮ ಗರ್ಭಿಣಿ ಪತ್ನಿಯರ ಬಗ್ಗೆ ಚಿಂತಿತರಾಗಿ ಮಾಡಿದ ಒಂದು ಫೋನ್ ಕರೆಯಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕ್ಯಾಬ್ ಚಾಲಕನ ಫೋನ್ ಬಳಸಿ ಕರೆ ಮಾಡಿದ್ದರು.
12:09 PM (IST) Nov 27
ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಯಿತು. ಮೂರು ವರ್ಷ ರಾತ್ರಿ ಹಗಲು ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ ಎಂದೂ ಸತೀಶ್ ನೀನಾಸಂ ಹೇಳಿದ್ದಾರೆ.
11:38 AM (IST) Nov 27
ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಸೂತ್ರದ ಗೊಂದಲ ನಿವಾರಿಸಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ.
11:37 AM (IST) Nov 27
‘ಕಾಂತಾರ ಚಾಪ್ಟರ್ 1’ ಓಟಿಟಿಯಲ್ಲೂ ಉತ್ತಮ ಗಳಿಕೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈವರೆಗೆ ಸುಮಾರು 22.54 ಕೋಟಿ ರು.ಗೂ ಹೆಚ್ಚು ಕಲೆಕ್ಷನ್ ಅನ್ನು ಓಟಿಟಿಯಲ್ಲಿ ಮಾಡಿದೆ. ಕನ್ನಡ ಭಾಷೆಯಲ್ಲಿ ಸುಮಾರು 7 ಕೋಟಿ ರು.ಗಳಷ್ಟು ಕಲೆಕ್ಷನ್ ಆಗಿದೆ.
11:15 AM (IST) Nov 27
ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಬಂದಿರುವ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಬಾಯ್ತಪ್ಪಿ ಸತ್ಯವನ್ನು ಹೇಳಿದ್ದಾರೆ. ಈ ಸೀಕ್ರೆಟ್ ಟಾಸ್ಕ್‌ನ ಭಾಗವಾಗಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರನ್ನು ಗುರಿ ಮಾಡಲಾಗಿದ್ದು, ಮನೆಯಲ್ಲಿ ಹೊಸ ಸಂಘರ್ಷಗಳು ಹುಟ್ಟಿಕೊಂಡಿವೆ.
11:14 AM (IST) Nov 27
Best Ott Movies List: ವೀಕೆಂಡ್‌ನಲ್ಲಿ ಹೊರಗಡೆ ಹೋಗೋಕೆ ಬೋರ್, ಮನೆಯಲ್ಲಿ ಇರೋಕೆ ಬೋರ್ ಎಂದು ಯೋಚನೆ ಮಾಡುತ್ತಿದ್ದೀರಾ? ಇಲ್ಲಿ ಒಂದಿಷ್ಟು ಥ್ರಿಲ್ಲರ್ ಸಿನಿಮಾಗಳಿವೆ. ಆರಂಭದಿಂದ ಕೊನೆಯವರೆಗೂ ನಿಮ್ಮ ಬುದ್ಧಿವಂತಿಕೆಯನ್ನು ಟೆಸ್ಟ್ ಮಾಡುತ್ತ, ಕುರ್ಚಿಯ ತುತ್ತ ತುದಿಯಲ್ಲಿ ಇರುವ ಹಾಗೆ ಮಾಡುತ್ತದೆ.
11:08 AM (IST) Nov 27
ಅಸಲಿಗೆ ಸಲ್ಮಾನ್ ಖಾನ್ ಈದ್ ಹಬ್ಬದ ಸಮಯದಲ್ಲಿ ತಮ್ಮ ಸಿನಿಮಾವನ್ನ ರಿಲೀಸ್ ಮಾಡೋದು ಕಾಮನ್. 2026ರಲ್ಲಿ ಮಾರ್ಚ್ 19ರಂದೇ ಈದ್ ಇದ್ದು, ಅದೇ ದಿನ ಸಲ್ಲು ಸಿನಿಮಾ ಬರೋದು ಬಹುತೇಕ ಫಿಕ್ಸ್. ಯಶ್ ಸಿನಿಮಾ ಅದೇ ದಿನ ರಿಲೀಸ್ ಆಗೋದು ಫಿಕ್ಸ್ ಆಗಿ ಬಹಳಷ್ಟು ಕಾಲವಾಯ್ತು? ಸೋ, ಏನಾಗಲಿದೆ ರಿಸಲ್ಟ್?
11:04 AM (IST) Nov 27
ಸಚಿವ ಸ್ಥಾನ ನೀಡುವಂತೆ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಕೇಳಿದ್ದೇನೆ. ನಾನೇನು ಸನ್ಯಾಸಿಯಲ್ಲ. ನನ್ನ ಹಕ್ಕು ಕೇಳುತ್ತಿದ್ದೇನೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
10:42 AM (IST) Nov 27
ಭಗವಾನ್ ಸತ್ಯಸಾಯಿ ಅವರ 100ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸ್ವತಃ ಸತ್ಯಸಾಯಿ ಬಾಬಾ ಅವರಿಂದ ನಾಮಕರಣಗೊಂಡ ಟಾಲಿವುಡ್ ಸ್ಟಾರ್ ಹೀರೋ, ಜಯಂತಿಯಂದು ಸ್ವಾಮಿಯನ್ನು ಸ್ಮರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಹೀರೋ ಯಾರು ಗೊತ್ತಾ?