- Home
- Entertainment
- TV Talk
- ಹುಡುಗಿಯರ ಬ*ಲಿ ಕೊಡೋ ನಿಂಗೆ ಯೋಗ್ಯತೆ ಇದ್ಯಾ? Bigg Boss ಗಿಲ್ಲಿ ನಟನ ವಿರುದ್ಧ ಉಗ್ರಂ ಮಂಜು ಭಾವಿ ಪತ್ನಿ ಗರಂ
ಹುಡುಗಿಯರ ಬ*ಲಿ ಕೊಡೋ ನಿಂಗೆ ಯೋಗ್ಯತೆ ಇದ್ಯಾ? Bigg Boss ಗಿಲ್ಲಿ ನಟನ ವಿರುದ್ಧ ಉಗ್ರಂ ಮಂಜು ಭಾವಿ ಪತ್ನಿ ಗರಂ
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ಮಾಡಿದ ಕಾಮಿಡಿಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರ ಮದುವೆಯ ಬಗ್ಗೆ ಅಸಭ್ಯವಾಗಿ ಪ್ರಶ್ನಿಸಿದ್ದಕ್ಕೆ, ಅವರ ಭಾವಿ ಪತ್ನಿ ಸಂಧ್ಯಾ ಖುಷಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸ್ಯವೂ ಕೆಲವೊಮ್ಮೆ ಮುಳುವಾಗತ್ತೆ!
ಕಾಮಿಡಿ ಎನ್ನುವುದು ಎಲ್ಲಾ ಸಂದರ್ಭಗಳಲ್ಲಿಯೂ, ಎಲ್ಲ ಸನ್ನಿವೇಶಕ್ಕೂ ತಕ್ಕಂತೆ ಸರಿಬರುವುದಿಲ್ಲ. ತಮಾಷೆ, ತಮಾಷೆಯ ಟೈಮ್ನಲ್ಲಿ ಇದ್ದರೆ ಮಾತ್ರ ಅದು ತಮಾಷೆಯಾಗಿರುತ್ತದೆ. ಕೆಲವೊಮ್ಮೆ ತಮಾಷೆ ಮಾಡುವ ಭರದಲ್ಲಿ ಬೇರೆಯವರ ಸೆಂಟಿಮೆಂಟ್ಗೆ ಅದೆಷ್ಟು ನೋವು ಮಾಡಿರುತ್ತೇವೆ ಎನ್ನುವ ಅರಿವು ಕೆಲವರಿಗೆ ಆಗುವುದೇ ಇಲ್ಲ. ಇದೀಗ ಅಂಥದ್ದೇ ಒಂದು ತಮಾಷೆ ಮಾಡಿರುವ ಬಿಗ್ಬಾಸ್ ಗಿಲ್ಲಿ ನಟನ ವಿರುದ್ಧ ಇದಾಗಲೇ ಅಸಮಾಧಾನದ ಹೊಗೆ ಆಡುತ್ತಿದೆ.
ಕಾಮಿಡಿಯಿಂದ ಹರ್ಟ್
ಬಿಗ್ಬಾಸ್ 12ರ ವಿನ್ನರ್ ಎಂದೇ ಇದಾಗಲೇ ಹಲವಾರು ಮಂದಿ ಘೋಷಿಸಿ ಆಗಿರೋ ಗಿಲ್ಲಿ ನಟ (Bigg Boss 12 Winner) ಕಾಮಿಡಿ ಮೂಲಕವೇ ಜನಪ್ರಿಯರಾಗಿರುವುದು ನಿಜವೇ. ಆದರೆ ಕೆಲವೊಮ್ಮೆ ಇವರ ಕಾಮಿಡಿಯಿಂದ ಇತರ ಸ್ಪರ್ಧಿಗಳು ಹರ್ಟ್ ಆಗಿರುವ ಘಟನೆಗಳೂ ನಡೆದಿವೆ.
ಗಿಲ್ಲಿ ನಟನ ವಿರುದ್ಧ ಗರಂ
ಬಿಗ್ಬಾಸ್ನಲ್ಲಿ ಮಾಜಿ ಸ್ಪರ್ಧಿಗಳ ಎಂಟ್ರಿಯಾಗಿದೆ. ಈ ಸಮಯದಲ್ಲಿ ಗಿಲ್ಲಿ ನಟ (Gilli Nata) ಉಗ್ರಂ ಮಂಜು ಅವರ ಬಗ್ಗೆ ಮಾಡಿರುವ ಕಾಮಿಡಿ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನಕ್ಕೆ ಗುರಿಯಾಗಿದ್ದರೂ, ಇದೀಗ ಉಗ್ರಂ ಮಂಜು (Ugram Manju) ಅವರ ಭಾವಿ ಪತ್ನಿ ಸಂಧ್ಯಾ ಖುಷಿ ಕೂಡ ಗರಂ ಆಗಿ ಮೆಸೇಜ್ ಒಂದನ್ನು ಶೇರ್ ಮಾಡಿದ್ದಾರೆ.
ಬಿಬಿಕೆ 11ರ ಸ್ಪರ್ಧಿಗಳ ಎಂಟ್ರಿ
ಅಷ್ಟಕ್ಕೂ ಆಗಿದ್ದೇನೆಂದರೆ, ಮಾಜಿ ಸ್ಪರ್ಧಿಗಳಾಗಿರುವ ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಬಿಗ್ಬಾಸ್ ಘೋಷಿಸಿದರು.
ಬಾಯಿ ಹಾಕಿದ ಗಿಲ್ಲಿ ನಟ
ಅಷ್ಟಕ್ಕೂ ಉಗ್ರಂ ಮಂಜು ಅವರ ಮದುವೆ ಸಂಧ್ಯಾ ಖುಷಿ ಅವರ ಜೊತೆ ನೆರವೇರಲಿದೆ. ಈ ಬಗ್ಗೆ ಬಿಗ್ಬಾಸ್ ಹೇಳಿದಾಗ, ಎಲ್ಲರೂ ಸೂಪರ್ ಎಂದು ಸಂತಸ ವ್ಯಕ್ತಪಡಿಸಿದರು. ಆದರೆ ಗಿಲ್ಲಿ ನಟ ಏಕಾಏಕಿ ‘ಎರಡನೇಯದ್ದಾ?’, ‘ಮೂರನೇಯದ್ದಾ?’ ಎಂದರು. ಇದರಿಂದ ಮಂಜು ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದು ಮಾತಿನ ಚಕಮಕಿಯೂ ಅಲ್ಲಿ ನಡೆಯಿತು.
ಜಾಲತಾಣದಲ್ಲಿ ಅಸಮಾಧಾನ
ಇವುಗಳ ನಡುವೆಯೇ ಇನ್ನೊಂದು ಜೋಕ್ ಮಾಡಲು ಹೋದ ಗಿಲ್ಲಿ ನಟ, ‘ನೀವೆಲ್ಲಾ ಬಿಟ್ಟಿ ಊಟಕ್ಕೆ ಬಂದಿದ್ದೀರಾ’ ಎಂದೂ ಹೇಳಿದಾಗ, ಮಾಜಿ ಸ್ಪರ್ಧಿಗಳೂ ಕೋಪಗೊಂಡರು. ಇದರ ಬಗ್ಗೆ ಜಾಲತಾಣದಲ್ಲಿಯೂ ಗಿಲ್ಲಿ ನಟನ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಬಿಟ್ಟಿ ಊಟ
ಇದರಿಂದ ಸಿಕ್ಕಾಪಟ್ಟೆ ಕೋಪಗೊಂಡಿರುವ ಉಗ್ರಂ ಮಂಜು ಅವರ ಭಾವಿ ಪತ್ನಿ ಸಂಧ್ಯಾ ಅವರು, ‘ಎಲ್ಲರ ಹತ್ತಿರ ಪರ್ಸನಲ್ ವಿಷಯಗಳನ್ನು ಇಟ್ಟುಕೊಂಡು ಕೆಟ್ಟ ಜೋಕ್ಸ್ ಮಾಡೋದು ಕಾಮಿಡಿನಾ? ಎಲ್ಲಾ ಶೋಗಳಲ್ಲೂ ಒಂದೊಂದು ಹುಡುಗಿ ಬ*ಲಿಕೊಟ್ಟು ಗೆಲ್ಲೋ ಗಿಲ್ಲಿ, ಬೇರೆ ಅವರಿಗೆ ಎಷ್ಟನೆಯದ್ದು ಅಂತ ಕೇಳ್ತಿದ್ದಾನಾ? ಬಿಟ್ಟಿ ಊಟ ಕೊಡೋ ಅಂಥ ಯೋಗ್ಯತೆ ಇದ್ಯಾ ನಿನಗೆ ಗಿಲ್ಲಿ? ನಿನಗೇ ಬಿಟ್ಟಿ ಊಟ ಹಾಕ್ತಿರೋದು ‘ಬಿಗ್ ಬಾಸ್’ ಮತ್ತು ಕಲರ್ಸ್ ಕನ್ನಡ ಅನ್ನೋದು ನೆನಪಿರಲಿ' ಎಂದಿದ್ದಾರೆ.
ಇದು ತಪ್ಪು
ಈ ಮಾತನ್ನು ನೇರವಾಗಿ ಸಂಧ್ಯಾ ಹೇಳಲಿಲ್ಲ. ಬದಲಿಗೆ ಅಖಿಲ್ ಅಜ್ಜರ್ ಎಂಬುವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದರು. ಅದನ್ನೇ ಉಗ್ರಂ ಮಂಜು ಅವರ ಭಾವಿ ಪತ್ನಿ ಸಂಧ್ಯಾ ಖುಷಿ ಶೇರ್ ಮಾಡಿದ್ದಾರೆ. ಗಿಲ್ಲಿ ಮಾಡಿರುವುದು ತಪ್ಪು ಎನಿಸುತ್ತದೆ ಎಂದು ಬರೆದುಕೊಂಡು ಸಂಧ್ಯಾ ಅವರು ಇದನ್ನು ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

