- Home
- Entertainment
- Sandalwood
- ಶೂಟಿಂಗ್ ಮಾಡ್ಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮ*ಹತ್ಯೆ ಮಾಡ್ಕೊಂಡಿದ್ರು: ಸತೀಶ್ ನೀನಾಸಂ
ಶೂಟಿಂಗ್ ಮಾಡ್ಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮ*ಹತ್ಯೆ ಮಾಡ್ಕೊಂಡಿದ್ರು: ಸತೀಶ್ ನೀನಾಸಂ
ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಯಿತು. ಮೂರು ವರ್ಷ ರಾತ್ರಿ ಹಗಲು ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ ಎಂದೂ ಸತೀಶ್ ನೀನಾಸಂ ಹೇಳಿದ್ದಾರೆ.

ನಿರ್ದೇಶಕ ಆತ್ಮ*ಹತ್ಯೆ ಮಾಡ್ಕೊಂಡಿದ್ರು
ಈ ಸಿನಿಮಾಕ್ಕಾಗಿ ನಾನು ಒಂದು ರೂಪಾಯಿಯೂ ಅಡ್ವಾನ್ಸ್ ತಗೊಂಡಿಲ್ಲ. ಇದನ್ನು ಕೆಜಿಎಫ್, ಕಾಂತಾರ ರೇಂಜ್‌ಗೆ ಬೆಳೆಸುವ ಆಸೆ ಇತ್ತು. ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮ*ಹತ್ಯೆ ಮಾಡ್ಕೊಂಡಿದ್ರು.
ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಯಿತು
ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು. ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಯಿತು. ಮೂರು ವರ್ಷ ರಾತ್ರಿ ಹಗಲು ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ.
ಸಿನಿಮಾದ ಆಡಿಯೋ ಲಾಂಚ್
ಬೆಂಗಳೂರಿನ ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ ನಡೆದ ‘ರೈಸ್ ಆಫ್ ಅಶೋಕ’ ಸಿನಿಮಾದ ಆಡಿಯೋ ಲಾಂಚ್‌ನಲ್ಲಿ ಸತೀಶ್ ನೀನಾಸಂ ಆಡಿರುವ ಭಾವುಕ ಮಾತುಗಳಿವು. ಈ ಚಿತ್ರದ ಏಳೋ ಏಳೋ ಮಹಾದೇವ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ನಮಗೆ ಸರ್ವಸ್ವವೂ ಆಗಿತ್ತು
ನನ್ನ ಶತ್ರುಗಳೂ ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಇದರ ಕೆಲಸ ಮಾಡುವ ಮೂರು ವರ್ಷಗಳಲ್ಲಿ 50 ಲಕ್ಷ ರೂ. ತಗೊಂಡು 6 ಸಿನಿಮಾ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಅಂದರೆ ರೈಸ್ ಆಫ್ ಅಶೋಕ ಸಿನಿಮಾವೇ ನಮಗೆ ಸರ್ವಸ್ವವೂ ಆಗಿತ್ತು ಎಂದೂ ಸತೀಶ್ ಹೇಳಿದ್ದಾರೆ.
ಹೂ ಮಾರುವ ಹುಡುಗಿ ಅಂಬಿಕಾ
ನಾಯಕಿ ಸಪ್ತಮಿ ಗೌಡ ಮಾತನಾಡಿ, ಈ ಸಿನಿಮಾ ತಂಡಕ್ಕೆ ನಾನು ಕೊನೆಯ ಕಲಾವಿದೆಯಾಗಿ ಸೇರ್ಪಡೆಗೊಂಡಿದ್ದು. ಇದರಲ್ಲಿ ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ ಎಂದರು.
ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ
ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಖೇರ್, ಸಾಧ್ವಿನಿ ಕೊಪ್ಪ , ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ವರ್ಧನ್ ನರಹರಿ, ಜೈಷ್ಣವಿ ಹಾಗೂ ಸತೀಶ್ ನೀನಾಸಂ ನಿರ್ಮಾಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

