- Home
- Entertainment
- Cine World
- ರಿಷಬ್ ಶೆಟ್ಟಿ ಅಬ್ಬರ ಬಲು ಜೋರು.. ಓಟಿಟಿಯಲ್ಲಿ ಕಾಂತಾರ ಚಾಪ್ಟರ್ 1 ಕಲೆಕ್ಷನ್ ಮಾಡಿದ್ದೆಷ್ಟು?
ರಿಷಬ್ ಶೆಟ್ಟಿ ಅಬ್ಬರ ಬಲು ಜೋರು.. ಓಟಿಟಿಯಲ್ಲಿ ಕಾಂತಾರ ಚಾಪ್ಟರ್ 1 ಕಲೆಕ್ಷನ್ ಮಾಡಿದ್ದೆಷ್ಟು?
‘ಕಾಂತಾರ ಚಾಪ್ಟರ್ 1’ ಓಟಿಟಿಯಲ್ಲೂ ಉತ್ತಮ ಗಳಿಕೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈವರೆಗೆ ಸುಮಾರು 22.54 ಕೋಟಿ ರು.ಗೂ ಹೆಚ್ಚು ಕಲೆಕ್ಷನ್ ಅನ್ನು ಓಟಿಟಿಯಲ್ಲಿ ಮಾಡಿದೆ. ಕನ್ನಡ ಭಾಷೆಯಲ್ಲಿ ಸುಮಾರು 7 ಕೋಟಿ ರು.ಗಳಷ್ಟು ಕಲೆಕ್ಷನ್ ಆಗಿದೆ.

ಓಟಿಟಿಯಲ್ಲೂ ಉತ್ತಮ ಗಳಿಕೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಓಟಿಟಿಯಲ್ಲೂ ಉತ್ತಮ ಗಳಿಕೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈವರೆಗೆ ಸುಮಾರು 22.54 ಕೋಟಿ ರು.ಗೂ ಹೆಚ್ಚು ಕಲೆಕ್ಷನ್ ಅನ್ನು ಓಟಿಟಿಯಲ್ಲಿ ಮಾಡಿದೆ.
ಮತ್ತೆ ಮತ್ತೆ ಸಿನಿಮಾವನ್ನು ನೋಡುತ್ತಿದ್ದಾರೆ!
ಕನ್ನಡ ಭಾಷೆಯಲ್ಲಿ ಸುಮಾರು 7 ಕೋಟಿ ರು.ಗಳಷ್ಟು ಕಲೆಕ್ಷನ್ ಆಗಿದ್ದರೆ ಹಿಂದಿ ಡಬ್ಬಿಂಗ್ ವರ್ಶನ್‌ನಲ್ಲಿ 13.32 ಕೋಟಿ ರು. ಗಳಿಕೆ ಆಗಿದೆ. ತಮಿಳಿನಲ್ಲಿ 1.64 ಕೋಟಿಗಳಷ್ಟು ಕಲೆಕ್ಷನ್ ದಾಖಲಾಗಿದೆ. ನೋಡಿದ ಪ್ರೇಕ್ಷಕರೇ ಈ ಸಿನಿಮಾವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ.
ಸಿನಿಮಾದ ಗಳಿಕೆ 880 ಕೋಟಿ
ಓಟಿಟಿಗೆ ರಿಲೀಸ್ ಆಗಿದ್ದರೂ ಥೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರಿದಿದೆ. ವೀಕೆಂಡ್, ಹಬ್ಬದ ಸಮಯ ಥೇಟರ್‌ನಲ್ಲೂ ಜನ ಮತ್ತೆ ಮತ್ತೆ ಈ ಸಿನಿಮಾ ನೋಡುತ್ತಿದ್ದಾರೆ. ಓಟಿಟಿ ಕಲೆಕ್ಷನ್ನೂ ಸೇರಿ ವಿಶ್ವಾದ್ಯಂತ ಈ ಸಿನಿಮಾದ ಗಳಿಕೆ 880 ಕೋಟಿ ರು.ಗೂ ಹೆಚ್ಚಾಗಿದೆ.
ಪ್ರಮುಖ ಪಾತ್ರದಲ್ಲಿ ರುಕ್ಮಿಣಿ ವಸಂತ್
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಷನ್ ದೇವಯ್ಯ, ಜಯರಾಮ್ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
ಸಿನಿಮಾಗೆ ದೈವದ ಅನುಮತಿ ಪಡೆದಿದ್ದೇವೆ
ನಾನು ದೈವವನ್ನು ನಂಬುವವನು, ಆರಾಧಿಸುವವನು. ನನ್ನ ಸಿನಿಮಾಗೆ ದೈವದ ಅನುಮತಿ ಪಡೆದಿದ್ದೇವೆ. ಸಿನಿಮಾದಲ್ಲಿ ದೈವವನ್ನು ತೋರಿಸಿರುವ ರೀತಿಯಲ್ಲಿ ಹೆಚ್ಚು ಕಮ್ಮಿ ಆಗಬಾರದು, ತಪ್ಪುಗಳಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ರಿಷಬ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

