- Home
- Entertainment
- Cine World
- OTT Thriller Movies: ಬುದ್ಧಿವಂತಿಕೆ ಟೆಸ್ಟ್ ಮಾಡಿ, ಕುತೂಹಲದಿಂದ ಕೊನೆವರೆಗೂ ಕಾಡುವ ಸಿನಿಮಾಗಳಿವು
OTT Thriller Movies: ಬುದ್ಧಿವಂತಿಕೆ ಟೆಸ್ಟ್ ಮಾಡಿ, ಕುತೂಹಲದಿಂದ ಕೊನೆವರೆಗೂ ಕಾಡುವ ಸಿನಿಮಾಗಳಿವು
Best Ott Movies List: ವೀಕೆಂಡ್‌ನಲ್ಲಿ ಹೊರಗಡೆ ಹೋಗೋಕೆ ಬೋರ್, ಮನೆಯಲ್ಲಿ ಇರೋಕೆ ಬೋರ್ ಎಂದು ಯೋಚನೆ ಮಾಡುತ್ತಿದ್ದೀರಾ? ಇಲ್ಲಿ ಒಂದಿಷ್ಟು ಥ್ರಿಲ್ಲರ್ ಸಿನಿಮಾಗಳಿವೆ. ಆರಂಭದಿಂದ ಕೊನೆಯವರೆಗೂ ನಿಮ್ಮ ಬುದ್ಧಿವಂತಿಕೆಯನ್ನು ಟೆಸ್ಟ್ ಮಾಡುತ್ತ, ಕುರ್ಚಿಯ ತುತ್ತ ತುದಿಯಲ್ಲಿ ಇರುವ ಹಾಗೆ ಮಾಡುತ್ತದೆ.

5 ಕ್ರೈಂ ಥ್ರಿಲ್ಲರ್‌ಗಳು
ಈ ಐದು OTT ಥ್ರಿಲ್ಲರ್ ಸಿನಿಮಾಗಳು ಆರಂಭದಿಂದ ಕೊನೆಯವರೆಗೂ ಏನಾಗಬಹುದು ಎಂಬ ಕುತೂಹಲದ ಜೊತೆಯಲ್ಲಿ ನಿರಂತರವಾಗಿ ಟೆನ್ಶನ್ ನೀಡುತ್ತವೆ. ಪದೇ ಪದೇ ಟ್ವಿಸ್ಟ್, ಸುಂದರವಾದ ನಿರೂಪಣೆ ಜೊತೆಯಲ್ಲಿ ಉತ್ತಮ ಮನರಂಜನೆಯನ್ನು ನೀಡುತ್ತವೆ.
ದೆಹಲಿ ಕ್ರೈಮ್ ಸೀಸನ್ 2 - ನೆಟ್‌ಫ್ಲಿಕ್ಸ್
ಸೀಸನ್ 1ಕ್ಕಿಂತ ಚಿಕ್ಕದಾದ, ವೇಗವಾಗಿ ಸಾಗುವ ಈ ಸೀಸನ್‌ನಲ್ಲಿ, ದೆಹಲಿ ಪೊಲೀಸರು ಕಚ್ಚಾ ಬನಿಯನ್ ಗ್ಯಾಂಗ್ ಜೊತೆ ಹೋರಾಡಬೇಕಿದೆ. ಇದು ವಾಸ್ತವಿಕ ಕಥೆಯಾಗಿದೆ, ಬಲಿಷ್ಠ ತಾರಾಗಣ, ಬಿಗಿಯಾದ ನಿರೂಪಣೆಯಿಂದಾಗಿ ಇದು ಹೆಚ್ಚು ಸಸ್ಪೆನ್ಸ್ ನೀಡುತ್ತದೆ. ಸೀಸನ್ 3 ಕೂಡ ಈಗ ನೆಟ್‌ಫ್ಲಿಕ್ಸ್‌ನಲ್ಲಿದೆ.
The Night Manager India – Disney Plus Hotstar
ಬ್ರಿಟಿಷ್ ಸರಣಿಯ ರಿಮೇಕ್ ಇದಾಗಿದೆ. ಐಷಾರಾಮಿ ಹೋಟೆಲ್‌ಗಳು, ಅಂಡರ್‌ಕವರ್ ಮಿಷನ್‌ಗಳು, ಮಾರಣಾಂತಿಕ ಶಸ್ತ್ರಾಸ್ತ್ರ ವ್ಯಾಪಾರಿಯ ಕಥೆ ಇದಾಗಿದೆ. ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಅವರ ನಟನೆ, ಸ್ಟೈಲಿಶ್ ಆಕ್ಷನ್‌ಗಳು, ಟ್ವಿಸ್ಟ್ ಮಾತ್ರ ಸಖತ್ ಆಗಿವೆ.
Aranyak – Netflix
ಹಿಮಾಲಯದ ಸಿರೋನಾ ಪಟ್ಟಣದಲ್ಲಿ ಈ ಥ್ರಿಲ್ಲರ್ ನಡೆಯುತ್ತದೆ. ನಿಗೂಢ ಕೊಲೆಯ ತನಿಖೆ ಮಾಡುವ ಪೋಲೀಸರ ಕಥೆ ಇದಾಗಿದೆ. ಭಯಾನಕ ಕಾಡುಗಳು, ಸ್ಥಳೀಯ ದಂತಕಥೆಗಳು, ಎಲ್ಲ ಪಾತ್ರಗಳ ರಹಸ್ಯಗಳು ಮೊದಲಿನಿಂದ ಕೊನೆಯವರೆಗೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ.
Criminal Justice – Disney Plus Hotstar
ಈ ಕೋರ್ಟ್‌ರೂಮ್ ಥ್ರಿಲ್ಲರ್‌ನಲ್ಲಿ ಪ್ರಖ್ಯಾತಿ ಬ್ರಿಟಿಷ್ ಶೋನ ವಿಷಯಗಳಿವೆ. ಅಪರಾಧ, ಸೀಕ್ರೇಟ್, ಮಾನಸಿಕ ಒತ್ತಡವನ್ನು ಒಟ್ಟಿಗೆ ಸೇರಿಸಲಾಗಿದೆ. ಒಬ್ಬ ಯುವಕ ತನ್ನ ತಪ್ಪು ಇಲ್ಲ ಎಂದು ಸಾಬೀತುಪಡಿಸಲು ಹೋರಾಡುವ ಕಥೆಯಾಗಿದೆ. ಇದರ ಸಂಕ್ಷಿಪ್ತ ಕಥೆ, ನಟನೆ, ನಿರಂತರ ನೈತಿಕ ದ್ವಂದ್ವಗಳು ಸಾಕಷ್ಟು ಮನರಂಜನೆ ನೀಡುವುದು.
Dahaad – Amazon Prime Video
ಸೋನಾಕ್ಷಿ ಸಿನ್ಹಾ ನಟನೆಯ ಈ ಕ್ರೈಂ ಥ್ರಿಲ್ಲರ್, ಎಲ್ಲರ ಕಣ್ಣೆದುರೇ ಇರುವ ಸೀರಿಯಲ್ ಕಿಲ್ಲರ್‌ನ ಬೇಟೆಯಾಡುತ್ತದೆ. ರಾಜಸ್ಥಾನದ ಗ್ರಾಮೀಣ ಹಿನ್ನೆಲೆ, ನಿಧಾನವಾಗಿ ಶುರುವಾಗುವ ಟೆನ್ಶನ್, ಕುತೂಹಲದ ಜೊತೆಯಲ್ಲಿ ಆಘಾತಕಾರಿ ವಿಷಯಗಳು ರಿವೀಲ್ ಆಗುತ್ತ ಹೋಗುತ್ತವೆ. ಪ್ರಸಿದ್ಧ ಬ್ರಿಟಿಷ್ ಶೋನಿಂದ ಈ ಥ್ರಿಲ್ಲರ್‌ಗೆ ಒಂದಿಷ್ಟು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದೊಂದು ಕೋರ್ಟ್‌ರೂಮ್ ಥ್ರಿಲ್ಲರ್ ಆಗಿದ್ದು ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಹೋರಾಡುವ ಯುವಕನ ಕಥೆ. ಕಥೆ, ನಟನೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

