ಬೆಂಗಳೂರು (ಆ.23): 2028ರ ಮುಂದಿನ ಚುನಾವಣೆಯಲ್ಲೂ ನಮ್ಮ ಪಕ್ಷವೇ ಗೆಲುವು ಸಾಧಿಸುತ್ತದೆ. ಇದರಲ್ಲಿ ಅನುಮಾನವೇ ಇಲ್ಲ. ಆದರೆ, ಆಗ ನಾನು ಸಿಎಂ ಆಗೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‌ಗೆ ಮುಂದಿನ ಚುನಾವಣೆಯಲ್ಲಿ 2-3 ಸ್ಥಾನ ಬಂದರೆ ಹೆಚ್ಚು, ಹಾಗಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಲಿ ಎಂದು ಶುಕ್ರವಾರ ಹೇಳಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
10:32 PM (IST) Aug 23
10:04 PM (IST) Aug 23
09:22 PM (IST) Aug 23
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ದೇವರೇ ಬಂದು ಹೇಳಿದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮ ರಾಜಕೀಯ ಜೀವನದ ಹೆಜ್ಜೆಗುರುತು ಎಂದು ಬಣ್ಣಿಸಿದ್ದಾರೆ.
08:46 PM (IST) Aug 23
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿರುವ ವಸಂತ್ ಗಿಳಿಯಾರ್, ಸಂಸದ ಸಸಿಕಾಂತ್ ಸೆಂಥಿಲ್ ಮತ್ತು ನಜ್ಮಾ ನಜೀರ್ ಚಿಕ್ಕನೇರಳೆ ಕೈವಾಡದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
07:57 PM (IST) Aug 23
07:43 PM (IST) Aug 23
07:24 PM (IST) Aug 23
ಧರ್ಮಸ್ಥಳದ ವಿರುದ್ಧ ಸುಳ್ಳು ದೂರು ನೀಡಿದ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಚಿನ್ನಯ್ಯನನ್ನು ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಸಂಪೂರ್ಣ ಷಡ್ಯಂತ್ರವನ್ನು ಬಾಯ್ಬಿಟ್ಟಿದ್ದು, ಹಲವರ ಹೆಸರು ಬಹಿರಂಗವಾಗಿದೆ. ದುಡ್ಡು ಮತ್ತು ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ.
06:57 PM (IST) Aug 23
ಕೆಲವರು ನಿಂಬೆ ನೀರು ಕುಡಿಯೋದನ್ನ ಇಷ್ಟಪಟ್ಟರೆ, ಇನ್ನು ಕೆಲವರು ತೆಂಗಿನಕಾಯಿ ಎಳನೀರು ಕುಡಿಯೋದನ್ನ ಇಷ್ಟಪಡ್ತಾರೆ. ಹಾಗಾದ್ರೆ ಆರೋಗ್ಯಕ್ಕೆ ಯಾವುದು ಒಳ್ಳೇದು ಅಂತ ಈಗ ನೋಡೋಣ.
06:39 PM (IST) Aug 23
ವಸಂತಿಯ ಸಹೋದರ ವಿಜಯ್, ಸುಜಾತ ಭಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಸಂತಿಯ ಡೆತ್ ಸರ್ಟಿಫಿಕೇಟ್ ಅನ್ನು ಸುಜಾತ ಭಟ್ ಪಡೆದಿರುವುದು ಮತ್ತು ಅವರ ಸಾವಿನಲ್ಲಿ ಸುಜಾತ ಭಟ್ ಕೈವಾಡವ ಶಂಕೆ ವ್ಯಕ್ತಪಡಿಸಿದ್ದಾರೆ. ಸುಜಾತ ಭಟ್ ಅವರ ವರ್ತನೆಯಿಂದ ತಮ್ಮ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ ಎಂದಿದ್ದಾರೆ.
05:44 PM (IST) Aug 23
05:03 PM (IST) Aug 23
ಇಳಯರಾಜಾ ಅವರು ಒಂದೇ ಸಂಗೀತವನ್ನು ಬಳಸಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಚಿತ್ರಗಳಿಗೆ ಎರಡು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಈ ವಿಷಯ ತಿಳಿದ ನೆಟ್ಟಿಗರು ಒಂದು ಮ್ಯೂಸಿಕ್‌ಗೆ ಡಬಲ್ ಪೇಮೆಂಟ್ ಎಂದು ಕಮೆಂಟ್ ಮಾಡಿದ್ದಾರೆ.
04:49 PM (IST) Aug 23
ಆಗಸ್ಟ್ ತಿಂಗ್ಳ ಮೂರನೇ ವಾರ ಕೂಡಾ ತುಂಬಾ ಹ್ಯಾಪನಿಂಗ್ ವಾರವಾಗಿತ್ತು. ಸಮಾಜ, ರಾಜಕಾರಣ, ದೇಶ- ವಿದೇಶಗಳಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯ್ತು. ರಾಜ್ಯದಲ್ಲಂತೂ ಈ ವಾರ ಅತೀ ಹೆಚ್ಚು ಸಂಚಲನ ಸೃಷ್ಟಿಸಿದ್ದ ವಾರವಾಗಿತ್ತು. ಬನ್ನಿ ಏನೇನಾಯ್ತು ನೋಡ್ಕೊಂಡು ಬರೋಣ... ಕರ್ನಾಟಕ ಪಲ್ಸ್‌ನಲ್ಲಿ.
04:48 PM (IST) Aug 23
04:18 PM (IST) Aug 23
Astrologer prakash ammannaya On Dharmasthala Temple: ಧರ್ಮಸ್ಥಳದ ಮೇಲೆ ಪದೇ ಪದೇ ಒಂದಿಲ್ಲೊಂದು ಅಪವಾದ ಬರುತ್ತಿದೆ. ಇದಕ್ಕೆ ಕಾರಣ ಏನು? ಇದಕ್ಕೆ ಪರಿಹಾರ ಏನು ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಹೇಳಿದ್ದಾರೆ.
03:54 PM (IST) Aug 23
ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕಡಿಮೆ ಹಣ ಹೂಡಿಕೆಯಲ್ಲಿ ಉತ್ತಮ ಆದಾಯ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅನೇಕ ಉದ್ಯೋಗಿಗಳು ಸೈಡ್ ಬಿಸಿನೆಸ್ ಮಾಡಬೇಕೆಂಬ ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಒಂದು ಬಿಸಿನೆಸ್ ಐಡಿಯಾ ಬಗ್ಗೆ ಈಗ ತಿಳಿದುಕೊಳ್ಳೋಣ.
03:21 PM (IST) Aug 23
03:08 PM (IST) Aug 23
ಮಾಸ್ಕ್ ಮ್ಯಾನ್ ಚಿನ್ನಯ್ಯನ ಬಂಧನದ ನಂತರ ಬುರುಡೆಗ್ಯಾಂಗ್‌ನ ಒಂದೊಂದೇ ಬಣ್ಣ ಬಯಲಾಗ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
02:20 PM (IST) Aug 23
ಬುರುಡೆ ಪ್ರಕರಣದಲ್ಲಿ ಮಾಸ್ಕ್‌ಮ್ಯಾನ್ ಚಿನ್ನಯ್ಯ ತನ್ನ ಅಣ್ಣ ತಾನಾಸಿ ಹೆಸರು ಪ್ರಸ್ತಾಪಿಸಿದ್ದರಿಂದ ಪೊಲೀಸರು ತಾನಾಸಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
02:01 PM (IST) Aug 23
ಸತ್ಯ ಎಷ್ಟೇ ಕಹಿಯಾಗಿದ್ದರು ಕೊನೆಗೆ ಅದು ಗೆಲ್ಲುತ್ತದೆ ಎಂದು ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಬಂಧನ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
01:30 PM (IST) Aug 23
ಬುರುಡೆ ಗ್ಯಾಂಗ್‌ನ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದೆ.
01:16 PM (IST) Aug 23
01:02 PM (IST) Aug 23
ಚಿತ್ರದಲ್ಲಿ ಬರುವ ವಿಲನ್ ಪಾತ್ರವೂ ಸೇರಿದಂತೆ ಗಡ್ಡ ಬಿಟ್ಟ ಎಲ್ಲಾ ರೌಡಿಗಳ ಪಾತ್ರಗಳು ‘ಕೆಜಿಎಫ್’, ಉಗ್ರಂ ಚಿತ್ರಗಳ ಡಾರ್ಕ್ ಮೋಡ್ ನೆನಪಿಸುತ್ತಾರೆ. ಮೇಕಿಂಗ್ ಕೂಡ ಅದೇ ರೀತಿ ಮಾಡುವುದಕ್ಕೆ ಪ್ರಯತ್ನಿಸಿರುವುದು ‘ಹಚ್ಚೆ’ ಚಿತ್ರದ ಮತ್ತೊಂದು ಹೈಲೈಟ್.
12:40 PM (IST) Aug 23
ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಪ್ ಅವರಿಂದ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರ ನಿರ್ಧರಿಸಿದೆ. ಕೆಲವು ಸಂಘಟನೆಗಳು ಮುಸ್ಲಿಂ ಮಹಿಳೆಯಿಂದ ಉದ್ಘಾಟನೆ ಬೇಡ ಎಂದು ವಿರೋಧಿಸಿ, ರಾಜ್ಯಪಾಲರಿಗೆ ದೂರು ನೀಡಲಿವೆ. ಗೋಮಾಂಸ ಸೇವನೆ, ಧಾರ್ಮಿಕ ಆಚರಣೆಗಳ ಬಗ್ಗೆ ಭಾನು ಅವರಿಗೆ ತಿಳಿವಳಿಕೆ ಇಲ್ಲ ಎಂದಿದ್ದಾರೆ.
12:37 PM (IST) Aug 23
12:21 PM (IST) Aug 23
ನಿರ್ದೇಶಕಿ ಈ ಸಿನಿಮಾವನ್ನು ಬದುಕಿನಂತೆ ಚಿತ್ರಿಸುತ್ತ ಹೋಗಿದ್ದಾರೆ, ಬದುಕಿನಲ್ಲಿ ಅನಿರೀಕ್ಷಿತಗಳಿಗೆ, ಕೆಲವು ಸಂಗತಿಗಳಿಗೆ ಹೇಗೆ ಲಾಜಿಕ್ ಇರುವುದಿಲ್ಲವೋ ಹಾಗೆ ಇಲ್ಲಿ ಲಿಂಕ್ ಸಿಗದ ಕೆಲವು ವಿಚಾರಗಳಿವೆ.
12:05 PM (IST) Aug 23
12:03 PM (IST) Aug 23
11:51 AM (IST) Aug 23
ಜುಲೈ 11ರಂದು ನ್ಯಾಯಾಲಯದ ಮುಂದೆ ಪ್ರತ್ಯಕ್ಷನಾದ ಆಗಂತುಕ ವ್ಯಕ್ತಿಯೊರ್ವ ತಾನು ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಿರುವ ಹೇಳಿಕೆಯನ್ನು ದಾಖಲಿಸುತ್ತಾನೆ.
11:03 AM (IST) Aug 23
ತುಮಕೂರು ಜಿಲ್ಲೆಯಲ್ಲಿ ಅತಿವೇಗದ ಚಾಲನೆ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆದಿದ್ದು, ನಂತರ ಆತನ ಸಹೋದರನಿಗೆ ಚಾಕುವಿನಿಂದ ಇರಿಯಲಾಗಿದೆ. ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
11:01 AM (IST) Aug 23
10:49 AM (IST) Aug 23
ಈ ವರ್ಷದ ಬಾಹ್ಯಾಕಾಶ ದಿನವನ್ನು 'ಭೂತ ಮತ್ತು ಭವಿಷ್ಯದ ಸೇತುವೆ: ಸಾಂಪ್ರದಾಯಿಕ ಖಗೋಳಶಾಸ್ತ್ರವನ್ನು ಗೌರವಿಸುತ್ತಾ, ಆಧುನಿಕ ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತದೆ.
10:45 AM (IST) Aug 23
10:37 AM (IST) Aug 23
10:28 AM (IST) Aug 23
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರದಲ್ಲಿ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
10:17 AM (IST) Aug 23
10:09 AM (IST) Aug 23
09:55 AM (IST) Aug 23
ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಕಾಲ್ತುಳಿತ ಸಂಭವಿಸಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಮುಖ್ಯಮಂತ್ರಿ ಅವರು ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ.
09:54 AM (IST) Aug 23
ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ ಅನಾಮಿಕ ದೂರುದಾರನನ್ನು ಎಸ್‌ಐಟಿ ಬಂಧಿಸಿದೆ. ದೂರಿನಲ್ಲಿ ಸುಳ್ಳು ಮಾಹಿತಿ ಮತ್ತು ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಾಗಿದೆ. ಸಮಾಧಿ ಸ್ಥಳಗಳಲ್ಲಿ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಬಂಧಿತನ ವಿಚಾರಣೆ ಮುಂದುವರೆದಿದೆ.
09:49 AM (IST) Aug 23
08:46 AM (IST) Aug 23