ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದ ಗ್ಯಾಂಗ್‌ನ ಕುತಂತ್ರ ಬಯಲಾಗುತ್ತಿದೆ. ಅನಾಮಿಕ ಸಾಕ್ಷಿ ನೀಡಿದ್ದ ವ್ಯಕ್ತಿಯ ಹಿಂದಿನ ಸೂತ್ರಧಾರಿಗಳು ಯಾರು ಎಂಬುದು ಬಹಿರಂಗವಾಗಿದ್ದು, ತನಿಖೆ ಮುಂದುವರೆದಿದೆ.
ಬೆಂಗಳೂರು (ಆ.23): ಹಿಂದೂಗಳ ಶ್ರದ್ಧಾಕೇಂದ್ರ ಧರ್ಮಸ್ಥಳ ವಿರುದ್ಧವಾಗಿ ಪುಂಖಾನುಪುಂಖವಾಗಿ ಸುಳ್ಳುಗಳ ಸರಮಾಲೆಯನ್ನೇ ಕಟ್ಟಿ, ಧಾರ್ಮಿಕ ಕೇಂದ್ರದ ಮೇಲೆ ಅಪಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದ ವಿರೋಧಿ ಗ್ಯಾಂಗ್‌ನ ಒಂದೊಂದೇ ಕಳ್ಳಾಟಗಳು ಬಯಲಾಗುತ್ತಿವೆ. ಅನಾಮಿಕ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ತಾನು ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎನ್ನುವ ಭಾರೀ ಆರೋಪದ ಮೂಲಕ ಆರಂಭವಾಗಿದ್ದ ಈ ಸುಳ್ಳಿನ ಸರಮಾಲೆಗೆ ಈಗ ಅಂತ್ಯಬೀಳುವ ಕಾಲ ಸನ್ನಿಹಿತವಾಗಿದೆ. ಧರ್ಮಸ್ಥಳ ವಿರೋಧಿ ಗ್ಯಾಂಗ್‌ನ ಪ್ರಮುಖ ಸದಸ್ಯರಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಎಂಡಿ ಸಮೀರ್, ಸುಜಾತಾ ಭಟ್ ಹಾಗೂ ಅನಾಮಿಕ ಅಲಿಯಾಸ್ ಸಿ ಎನ್ ಚಿನ್ನಯ್ಯ ಅಲಿಯಾಸ್ ಚೆನ್ನನಿಗೆ ಕಾನೂನು ತನ್ನ ಪ್ರಶ್ನೆಗಳನ್ನು ಕೇಳಿದ ಬೆನ್ನಲ್ಲಿಯೇ ಅವರ ಮುಖ ಸಾರ್ವಜನಿಕರ ಎದುರು ಬೆತ್ತಲಾಗಿದೆ.
ಸಾಕ್ಷಿ ಸಂರಕ್ಷಣಾ ಕಾಯ್ದೆಯಿಂದ ಅನಾಮಿಕನನ್ನು ತೆರವು ಮಾಡಿದ ಬೆನ್ನಲ್ಲಿಯೇ ಆತನ ಗುರುತು ಪತ್ತೆಯಾಗಿದೆ. ಸಿಎನ್ ಚೆನ್ನಯ್ಯ ಅಲಿಯಾಸ್ ಚೆನ್ನ ಎನ್ನುವ ವ್ಯಕ್ತಿ ಇಷ್ಟು ದಿನ ಧರ್ಮಸ್ಥಳದ ಕೇಸ್‌ನಲ್ಲಿ ಅನಾಮಿಕನಾಗಿ ಎಸ್‌ಐಟಿ ಜೊತೆ ಸೇರಿ ಶವ ಇರುವ ಸ್ಥಳಗಳನ್ನು ಗುರುತಿಸಿದ್ದ. ಆದರೆ, ಆತ ತೋರಿದ 2 ಸ್ಥಳ ಬಿಟ್ಟು ಉಳಿದ ಎಲ್ಲಾ ಸ್ಥಳದಲ್ಲಿ ಎಸ್‌ಐಟಿಗೆ ಏನೂ ಸಿಕ್ಕಿರಲಿಲ್ಲ.
ಇದರ ಬೆನ್ನಲ್ಲಿಯೇ ಅನಾಮಿಕನನ್ನೇ ಎಸ್‌ಐಟಿ ವಿಚಾರಣೆ ಮಾಡಿದ್ದು, ಆತನ ಹಿಂದಿರುವ ವ್ಯಕ್ತಿಗಳು ಯಾರು ಅನ್ನೋದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಅದರೊಂದಿಗೆ ಆತ ಆರಂಭದಲ್ಲಿ ತಂದಿದ್ದ ಬುರುಡೆ ಎಲ್ಲಿಯದು ಎಂದು ಪ್ರಶ್ನೆ ಮಾಡಿದೆ.
ಇದೆಲ್ಲದರ ನಡುವೆ ಸಿಎನ್ ಚೆನ್ನಯ್ಯ ಅಲಿಯಾಸ್ ಚೆನ್ನ ಆಮಿಷಗಳಿಗೆ ಒಳಗಾಗಿ ಸುಳ್ಳು ಹೇಳಿದ್ದ ಅನ್ನೋದು ಬಹುತೇಕ ಗೊತ್ತಾಗಿದೆ. ನಾನು ಪಾತ್ರಧಾರಿ ಮಾತ್ರ. ಸೂತ್ರಧಾರಿಗಳು ಬೇರೆಯವರು ಇದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾನೆ.
ನನಗೆ ಈ ರೀತಿ ಹೇಳಲು ಹೇಳಿದ್ದರು. ಅದಕ್ಕಾಗಿ ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಹೋಗಿ ಕೋರ್ಟ್‌ಗೆ ಒಪ್ಪಿಸು ಎಂದಿದ್ದರು. ಅದರಂತೆ ನಾನು ಕೋರ್ಟ್‌ಗೆ ಒಪ್ಪಿಸಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.
ತಾನು ತಂದಿದ್ದ ಬುರುಡೆ ಕುರಿತು ಎಷ್ಟೇ ವಿಚಾರಣೆ ನಡೆಸಿದರೂ ಅದು ಎಲ್ಲಿಂದ ಬಂತು ಅನ್ನೋದನ್ನು ಚೆನ್ನ ಪೊಲೀಸರಿಗೆ ತಿಳಿಸಲು ನಿರಾಕರಿಸಿದ್ದಾರೆ. ಮೊದಲು ನಾನು ತೋರಿಸಿದ ಜಾಗದಲ್ಲಿ ಉತ್ಖನನ ನಡೆಸಿ ಎಂದು ಆತ ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ. ಅನುಮಾನಕ್ಕೊಳಗಾದ ಎಸ್ ಐ ಟಿಯಿಂದ ತೀವ್ರ ಡ್ರಿಲ್ ಮಾಡಲಾಗಿದೆ. ಈ ವೇಳೆ ಎಲ್ಲಾ ಆತ ಎಲ್ಲಾ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

