ಮಾಸ್ಕ್ ಮ್ಯಾನ್ ಚಿನ್ನಯ್ಯನ ಬಂಧನದ ನಂತರ ಬುರುಡೆಗ್ಯಾಂಗ್‌ನ ಒಂದೊಂದೇ ಬಣ್ಣ ಬಯಲಾಗ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಸ್ಕ್ ಮ್ಯಾನ್ ಚಿನ್ನಯ್ಯನ ವಿಚಾರಣೆಯ ನಂತರ ಬುರುಡೆ ಗ್ಯಾಂಗ್‌ನ ಬಣ್ಣ ಬಯಲಾಗುತ್ತಿದೆ. ಚಿನ್ನಯ್ಯನ ಬಂಧನಕ್ಕೆ ಸಂಬಂಧಿಸಿದಂತೆ ಇದೇ ಪ್ರಥಮ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು, ಈ ಬಗ್ಗೆ ಹೆಚ್ಚು ಮಾತನಾಡಲ್ಲ, ಎಸ್ಐಟಿ ತನಿಖೆ ಹಂತದಲ್ಲಿರುವುದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.
ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸೋ ಎಲ್ಲರಿಗೂ ಧನ್ಯವಾದಗಳು. ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ, ಕ್ಷೇತ್ರದ ಮೇಲಿನ ಜನರ ಭಕ್ತರ ಅಭಿಮಾನ ಹೀಗೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ನಾನು ಆಶಿಸ್ತೇನೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಿಮರೋಡಿಯೂ ಕಸ್ಟಡಿಗೆ ಸಾಧ್ಯತೆ:
ಹಾಗೆಯೇ ಈ ಬುರುಡೆ ಗ್ಯಾಂಗ್‌ನ ಮತ್ತೋರ್ವ ಸದಸ್ಯ ಮಹೇಶ್ ತಿಮ್ಮರೋಡಿಯ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಯ್ತು ವಿಚಾರಣೆ ವೇಳೆ ಪೊಲೀಸರು ಆತನನ್ನು ಕಸ್ಟಡಿಗೆ ನೀಡುವಂತೆ ಕೇಳಿದ್ದರು. ಈ ವೇಳೆ ನ್ಯಾಯಾಧೀಶರು ಮೊನ್ನೆಯೇ ಏಕೆ ಕಸ್ಟಡಿಗೆ ಕೇಳಲಿಲ್ಲ ಎಂದು ಪ್ರಶ್ನೆ ಮಾಡಿದರು. ವಶಕ್ಕೆ ಬೇಕಿದ್ದರೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಈ ಬಗ್ಗೆ 2 ಗಂಟೆಯಲ್ಲಿ ತೀರ್ಮಾನಿಸುವಂತೆ ಕೋರ್ಟ್ ಪೊಲೀಸರಿಗೆ ತಾಕೀತು ಮಾಡಿದೆ. ಹೀಗಾಗಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮಹೇಶ್ ತಿಮರೋಡಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಮಹೇಶ್ ತಿಮರೋಡಿಗೆ ರಕ್ತದೊತ್ತಡ ಸಮಸ್ಯೆ ಇರುವುದರಿಂದ ಆತನಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಪಾತ್ರಧಾರಿ ಬಂಧನ ಆಯ್ತು ಸೂತ್ರಧಾರಿಗಳಿಗೆ ತೀವ್ರ ತನಿಖೆ
ಮತ್ತೊಂದೆಡೆ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ಇದಾಗಿತ್ತು ಎಂಬುದು ವಿಚಾರಣೆ ವೇಳೆ ಬಯಲಾಗಿದ್ದು, ಆರೋಪಿಗಳ ವಿರುದ್ಧ ಈಗ ಎಸ್‌ಐಟಿ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ. ಈ ಷಡ್ಯಂತ್ರದ ಪಾತ್ರಧಾರಿ ಮಾಸ್ಕ್‌ಮ್ಯಾನ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಸೂತ್ರಧಾರಿಗಳಿಗಾಗಿ ಈಗ ಎಸ್‌ಐಟಿ ತೀವ್ರ ತನಿಖೆ ನಡೆಸುತ್ತಿದೆ. ಎಐ ವೀಡಿಯೋ ಮಾಡಿ ಜನರ ದಿಕ್ಕು ತಪ್ಪಿಸಿದ ಯುಟ್ಯೂಬರ್ ಸಮೀರ್ ಎಂಡಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ಜಯಂತ್ ಬಂಧನ ಸಾಧ್ಯತೆ ಇದೆ.
