ಧರ್ಮಸ್ಥಳ ಪ್ರಕರಣದಲ್ಲಿ ಎಂಡಿ ಸಮೀರ್ ಮತ್ತು ಆತನ ಬೆಂಬಲಿಗ ಯೂಟ್ಯೂಬರ್‌ಗಳ ಸುಳ್ಳುಗಳನ್ನು ಬಯಲು ಮಾಡಲಾಗಿದೆ. ಸತ್ಯಾನ್ವೇಷಣೆಯ ಅಗತ್ಯತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಯ ಅಪಾಯಗಳ ಬಗ್ಗೆ ಚರ್ಚಿಸಲಾಗಿದೆ.

ಬೆಂಗಳೂರು (ಆ.23): 1980ರಲ್ಲಿ ರಾಮ ಲಕ್ಷ್ಮಣ ಅನ್ನೋ ಸಿನಿಮಾದಲ್ಲಿ ಅದ್ಭುತ ಹಾಡೊಂದಿತ್ತು.'ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು.ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು..' ಬಹುಶಃ ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಈ ಮಾತು ಎಲ್ಲರಿಗೂ ತಾಗುವಂಥದ್ದು. ಒಬ್ಬ ಎಂಡಿ ಸಮೀರ್‌. ಆತನ ಜೊತೆಗಿದ್ದ ಅಸಂಖ್ಯ ಪಟಾಲಂ ಹಿಂದೂಗಳ ಶ್ರದ್ಧಾಕೇಂದ್ರವಾದ ಧರ್ಮಸ್ಥಳದ ವಿಚಾರದಲ್ಲಿ ಕೆಲವೊಂದು ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದಿತ್ತು. ಆದರೆ, ಇದರ ಸತ್ಯಾಸತ್ಯತೆಯನ್ನು ಅರಿಯದ ಯೂಟ್ಯೂಬರ್‌ಗಳು, ಆತ ಕಿಂದರಿಜೋಗಿಯಂತೆ ಕಥೆ ಹೇಳಲು ಆರಂಭಿಸಿದರೆ, ಇವರುಗಳು ಇಲಿಗಳಂತೆ ಆತನನ್ನು ಹಿಂಬಾಲಿಸುತ್ತಿದ್ದರು.

ಧರ್ಮಸ್ಥಳ ಕೇಸ್‌ನಲ್ಲಿ ಮಾಧ್ಯಮಗಳು ಮಾತೇ ಆಡುತ್ತಿಲ್ಲ, ಧರ್ಮಸ್ಥಳದಿಂದ ಮಾಧ್ಯಮಗಳಿಗೆ ದುಡ್ಡು ಬಂದಿದೆ ಎನ್ನುವ ಅರ್ಥದಲ್ಲಿ ಈ ಯೂಟ್ಯೂಬ್‌ ಚಾನೆಲ್‌ಗಳು ನೇರವಾಗಿ ದಾಳಿಗೆ ಇಳಿದಿದ್ದವು. ಆದರೆ, ಯೂಟ್ಯೂಬ್‌ ಚಾನೆಲ್‌ಗಳು ನಿರ್ವಹಣೆ ಆಗೋ ರೀತಿಯೇ ಬೇರೆ, ಮಾಧ್ಯಮಗಳು ನಿವರ್ಹಣೆ ಆಗೋ ರೀತಿಯೇ ಬೇರೆ ಅನ್ನೋದು ಈಗ ಜನರಿಗೂ ಅರ್ಥವಾಗಿದೆ. ಒಮ್ಮೆ ಮಾಧ್ಯಮಗಳು ವಿಚಾರದ ಆಳಕ್ಕೆ ಇಳಿದು ಸತ್ಯಶೋಧನೆ ಮಾಡಲು ಹೊರಟರೆ, ಎಂಡಿ ಸಮೀರ್‌ ಹಾಗೂ ಆತನ ಪಟಾಲಂನಂಥ ಅನೇಕ ರೀಲ್ಸ್‌ ಸ್ಟಾರ್‌ಗಳು ಸಮಾಜದ ಮುಂದೆ ಬೆತ್ತಲಾಗುತ್ತಾರೆ.

ಧರ್ಮಸ್ಥಳ ಕೇಸ್ ವಿಚಾರದಲ್ಲಿ ಎಂಡಿ ಸಮೀರ್‌ ಮಾಡಿದ್ದ ವಿಡಿಯೋಗಳು ಖಂಡಿತವಾಗಿ ಹೊಸ ತಲೆಮಾರಿನ ಯುವಜನಾಂಗದ ತಲೆಯಲ್ಲಿ ಧರ್ಮಸ್ಥಳದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿತ್ತು. ಎಂಡಿ ಸಮೀರ್‌ನ ಎಐ ರೀಲ್‌ ವಿಡಿಯೋಗಳಿಗೆ ಸಾಥ್‌ ಕೊಟ್ಟವರು ನಾಡಿನ ಯೂಟ್ಯೂಬರ್‌ಗಳು. ಅವನ ಜೊತೆ ನಾವು ಸೈನಿಕನ ರೀತಿ ನಿಲ್ಲುತ್ತೇವೆ ಎಂದು ದೊಡ್ಡ ಪೋಸ್‌ ಕೊಟ್ಟು ಬಂದಿದ್ದರು. ಆದರೆ, ನಮ್ಮ ಸೈನಿಕನೇ ನಕಲಿ ಎಂದು ಗೊತ್ತಾದ ಬಳಿಕ ಆತನ ಬೆಂಬಲಕ್ಕೆ ನಿಂತ ಯೂಟ್ಯೂಬರ್‌ಗಳಿಗೆ ಸಮಾಜದಲ್ಲಿ ಮುಖ ತೋರಿಸದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

'ಯುದ್ಧ ಮಾಡೋಕೆ ನಿಂತ ಮೇಲೆ, ಸೈನಿಕರ ಲೆಕ್ಕ ಹಾಕ್ಬಾರ್ದು..' ಅಂತಾ ಡೈಲಾಗ್‌ ಬಿಟ್ಟಿದ್ದ ಇದೇ ಯೂಟ್ಯೂಬರ್‌ಗಳು ಎಂಡಿ ಸಮೀರನ ಬಣ್ಣ ಬಯಲಾಗುತ್ತಿದ್ಧಂತೆ ನಾವು ಹೇಳಿರೋದು ಸುಳ್ಳು ಅಥವಾ ನಮ್ಮನ್ನು ದಾರಿ ತಪ್ಪಿಸಲಾಗಿದೆ ಎನ್ನುವ ಜನರ ಕ್ಷಮೆ ಕೇಳುವ ಸಣ್ಣ ಪೋಸ್ಟ್‌ಕೂಡ ಹಾಕಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಈತನ ಬೆಂಬಲಕ್ಕೆ ನಿಂತ ಎಲ್ಲರನ್ನೂ ಸಾಲು ಸಾಲಾಗಿ ಟ್ರೋಲ್‌ ಮಾಡಲಾಗುತ್ತದೆ. ಧರ್ಮಸ್ಥಳ ಕೇಸ್‌ನ ಹೆಸರನಲ್ಲಿ ಲಕ್ಷ ಲಕ್ಷ ವೀವ್ಸ್‌, ಕಾಮೆಂಟ್‌ಗಳನ್ನು ಪಡೆದುಕೊಂಡ 'ಸೈನಿಕ' ಯೂಟ್ಯೂಬರ್‌ಗಳು ಈಗ ಅಕ್ಷರಶಃ ಬಿಲ ಸೇರಿದ್ದಾರೆ.

'ಸತ್ಯಮೇವ ಜಯತೇ, ಅಧರ್ಮ ಅಳಿಯಿತು ಧರ್ಮ ಉಳಿಯಿತು. ಆದರೂ ಸೆಕ್ಯುಲರ್ ಹಿಂದೂಗಳಿಗೆ ತಮ್ಮ ಸ್ವಂತ ಅನುಭವಕ್ಕೆ ಬರುವವರೆಗೂ ಬುದ್ಧಿ ಬರುವುದಿಲ್ಲ..' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 'ನೋಡು ಸುಜಾತಾ ನೋಡು... ಒಂದೊಂದು ಮುಖಗಳೂ ಒಂದೊಂದು ಮುತ್ತುಗಳು' ಎಂದು ಯೂಟ್ಯೂಬರ್‌ಗಳನ್ನ ಟ್ರೋಲ್‌ ಮಾಡಿದ್ದಾರೆ.

ಎಂಡಿ ಸಮೀರನ ಎಐ ರೀಲ್‌ಗಳನ್ನು ನಂಬಿಕೊಂಡು ನಾವು ಆತನ ಜೊತೆ ಸೈನಿಕನ ಜೊತೆ ನಿಲ್ತೇವೆ ಎಂದು ಡೈಲಾಗ್‌ ಹೊಡೆದಿದ್ದ @ursteajuice, @nimma_smr, @Name_is_madhu, @deepu.vlogs ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. 'ಹಿಂದುಗಳು ಇವಾಗಾದ್ರು ಅರ್ಥ ಮಾಡ್ಕೊಳ್ಳಿ, ಯಾವನ್ ಯಾವನ್ ಮಾತೊ ಕೇಳ್ತೀರಲ್ಲ. ನಮ್ಮಲ್ಲಿ ಒಗ್ಗಟೀಲ್ಲ ಗುರು..' ಎಂದು ಬರೆದಿದ್ದಾರೆ.

'ಸಮೀರ್ md ತನ್ನದೇ ಧರ್ಮದಲ್ಲಿ ಲವ್ ಜಿಹಾದ್ ಸಾವಿರ ಹೆಣ್ಣುಮಕ್ಕಳ ಹತ್ಯಾ ಬಗ್ಗೆ ಜನರಲ್ಲಿ ಜಾಗ್ರತೆ ವೀಡಿಯೋಸ್ ಇಲ್ಲಾ,. ನಮ್ಮ್ ಪವಿತ್ರ ಹಿಂದೂ ಧರ್ಮ ಹಾಳ್ ಮಾಡಲು ಹೋರಾಟದ್ದಾನೆ ರಾಕ್ಷಸ,... ಎಚ್ಚರ ಹಿಂದೂ' ಎಂದು ಮತ್ತೊಬ್ಬರು ಬರೆದಿದ್ದಾರೆ.