Published : Oct 19, 2025, 06:56 AM ISTUpdated : Oct 19, 2025, 11:49 PM IST

Karnataka News Live: ಕಾರವಾರ - ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣ ಸಾವು!

ಸಾರಾಂಶ

ಕೋಲಾರ/ತುಮಕೂರು: ಆರ್‌ಎಸ್‌ಎಸ್‌ ನೂರು ವರ್ಷ ಹಿನ್ನೆಲೆ ಕೋಲಾರದ ಶ್ರೀನಿವಾಸಪುರದಲ್ಲಿ ಶನಿವಾರ ಆರ್‌ಎಸ್‌ಎಸ್ ಪಂಥ ಸಂಚಲನ ನಡೆದಿದ್ದು, ಈ ವೇಳೆ 'ಅಲ್ಲಾಹು ಅಕ್ಟರ್' ಘೋಷಣೆ ಮೊಳಗಿದೆ. ಪಥ ಸಂಚಲನ ಟಿಪ್ಪು ಸರ್ಕಲ್ ನ ಮಸೀದಿ ಬಳಿಗೆ ಬರುತ್ತಿದ್ದಂತೆಯೇ ಕೆಲ ಅನ್ಯಕೋಮಿನ ಜನ 'ಅಲ್ಲಾಹು ಅಕ್ಟರ್' ಎಂದು ಪ್ರತಿಘೋಷಣೆ ಕೂಗಿದರು. ಅಲ್ಲದೆ ಆಝಾನ್ ಕೂಗುವ ವೇಳೆ ಪಥ ಸಂಚಲನಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಘ್ನ ವಾತಾವರಣ ಉಂಟಾಯಿತು. ಪೊಲೀಸರು, ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು.

ಈ ಮಧ್ಯೆ, ತುಮಕೂರಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿತು. ನಗರದ 2 ಮಾರ್ಗದಲ್ಲಿ ಪಥ ಸಂಚಲನ ನಡೆಯಿತು. ಮೊದಲನೇ ಪಥ ಸಂಚಲನ ಹಳೆ ಡಿಡಿಪಿಐ ಕಚೇರಿ ಮುಂಭಾಗದಿಂದ ಪ್ರಾರಂಭವಾಗಿ ಹೊರಪೇಟೆ ರಸ್ತೆವರೆಗೆ ಸಾಗಿತು. ಎರಡನೇ ಪಥ ಸಂಚಲನ, ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಜೂನಿಯರ್‌ಕಾಲೇಜಿನಲ್ಲಿ ಮುಕ್ತಾಯವಾಯಿತು. ಪಥ ಸಂಚಲನದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಸುರೇಶ್ ಗೌಡ ಸೇರಿ ಸ್ವಯಂ ಸೇವಕರು, ಸಂಘ ಪರಿವಾರದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು

11:49 PM (IST) Oct 19

ಕಾರವಾರ - ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣ ಸಾವು!

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ, ಮನೆಯ ಮುಂದೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಂತೋಷ ಗೌಡ ಮತ್ತು ಸೀತಾ ಗೌಡ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪತಿಯನ್ನು ರಕ್ಷಿಸಲು ಹೋದ ಪತ್ನಿಗೂ ವಿದ್ಯುತ್ ತಗುಲಿದ್ದು, ಈ ಘಟನೆಗೆ ಹೆಸ್ಕಾಂನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ

Read Full Story

11:24 PM (IST) Oct 19

ದೀಪಾವಳಿ ಹುಡುಗರು ಉಳಿದ್ರು, ದಿವಾಳಿ ಹುಡುಗರು ಹೋದ್ರು.. ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ!

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳಿದ್ದರಿಂದ, ಬೆಂಗಳೂರಿನ ರಸ್ತೆಗಳು ಅನಿರೀಕ್ಷಿತವಾಗಿ ಖಾಲಿಯಾಗಿವೆ. ಹಿಂದೆ ಟ್ರಾಫಿಕ್ ಜಾಮ್‌ನಿಂದ ತುಂಬಿರುತ್ತಿದ್ದ ನಗರದ ಬೀದಿಗಳು ಈಗ ಶಾಂತವಾಗಿದ್ದು, ಪ್ರಯಾಣಿಕರು ಈ ಬದಲಾವಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ!

Read Full Story

10:51 PM (IST) Oct 19

ಬೆಳಗಾವಿ - ವಾಲ್ಮೀಕಿ ಸಮಾಜದ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ, ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್!

ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಈ ಹೇಳಿಕೆಯನ್ನು ಖಂಡಿಸಿ ವಾಲ್ಮೀಕಿ ಸಮಾಜ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

Read Full Story

09:54 PM (IST) Oct 19

ಚಾಮರಾಜನಗರದಲ್ಲಿ ಮಣ್ಣುಮುಕ್ಕ ಹಾವು ಕಳ್ಳಸಾಗಣೆ - ಇಬ್ಬರು ಆರೋಪಿಗಳ ಬಂಧನ

ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ, ಮಣ್ಣುಮುಕ್ಕ ಹಾವುಗಳನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಂಚಾರಿ ದಳ ಬಂಧಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಂಭೀರ ಅಪರಾಧವಾಗಿರುವ ಈ ಕೃತ್ಯ, ಜೈವಿಕ ವೈವಿಧ್ಯತೆಗೆ ಧಕ್ಕೆ ತರುತ್ತದೆ ಎಂದು ವರದಿಯಾಗಿದೆ.
Read Full Story

09:33 PM (IST) Oct 19

ಶಾಲೆಯಲ್ಲಿ ಹಾರರ್ ಸಿನಿಮಾ ನೋಡಿ ಮಾನಸಿಕ ಅಸ್ವಸ್ಥನಾದ ವಿದ್ಯಾರ್ಥಿ, ಶಾಲೆಗೆ ಬಿತ್ತು ದಂಡ!

ಭಯಾನಕ ಸಿನಿಮಾಗಳು ಮಕ್ಕಳಿಗೆ ಎಷ್ಟು ಅಪಾಯಕಾರಿ ಅನ್ನೋದಕ್ಕೆ ಚೀನಾದ ಈ ಘಟನೆಯೇ ಸಾಕ್ಷಿ. ಶಾಲೆಯಲ್ಲಿ ಹಾರರ್ ಸಿನಿಮಾ ನೋಡಿದ ವಿದ್ಯಾರ್ಥಿಯೊಬ್ಬ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಈ ಘಟನೆ ನಂತರ, ನ್ಯಾಯಾಲಯವು ಶಾಲೆಗೆ ದೊಡ್ಡ ಮೊತ್ತದ ದಂಡ ವಿಧಿಸಿದೆ. 

Read Full Story

09:29 PM (IST) Oct 19

ದೀಪಾವಳಿಗೆ ಬೆಂಗಳೂರು ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲೆವೆಡೆ ಭಾರಿ ಮಳೆ

ದೀಪಾವಳಿಗೆ ಬೆಂಗಳೂರು ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲೆವೆಡೆ ಭಾರಿ ಮಳೆ, ವಾಯುಭಾರ ಕುಸಿತದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಎರಡೂ ದಿನ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Read Full Story

08:33 PM (IST) Oct 19

ರಾಜ್ಯದ ಅತಿದೊಡ್ಡ ರಸಗೊಬ್ಬರ ಉತ್ಪಾದನಾ ಘಟಕ ಮಂಗಳೂರಿನ ಎಂಸಿಎಫ್ ಯುಗಾಂತ್ಯ, ಇನ್ನು ಮುಂದೆ ಪಿಪಿಎಲ್!

ಮಂಗಳೂರು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (ಎಂಸಿಎಫ್) ಕಂಪನಿಯು ಜುವಾರಿ ಗ್ರೂಪ್‌ನ ಪಾರಾದೀಪ್ ಫಾಸ್ಟೇಟ್ ಲಿಮಿಟೆಡ್ (ಪಿಪಿಎಲ್) ಜೊತೆ ವಿಲೀನಗೊಂಡಿದೆ. ಈ ಮೂಲಕ ಎಂಸಿಎಫ್ ಹೆಸರು ಅಧಿಕೃತವಾಗಿ ಪಿಪಿಎಲ್ ಎಂದು ಬದಲಾಗಿದೆ. 

Read Full Story

08:24 PM (IST) Oct 19

ಗುಬ್ಬಿ ಪಟ್ಟಣದಲ್ಲಿ ಪಥಸಂಚಲನ - ಮಳೆಗೂ ಜಗ್ಗದ ಆರೆಸ್ಸೆಸ್ ಶಿಸ್ತು!

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ, ಭಾರೀ ಮಳೆಯ ನಡುವೆಯೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಶಿಸ್ತುಬದ್ಧ ಪಥ ಸಂಚಲನ ನಡೆಸಿದರು. ಸುಮಾರು 400ಕ್ಕೂ ಹೆಚ್ಚು ಗಣವೇಶಧಾರಿಗಳು ಈ ಮಾರ್ಚ್‌ಫಾಸ್ಟ್‌ನಲ್ಲಿ ಭಾಗವಹಿಸಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದರು.
Read Full Story

08:06 PM (IST) Oct 19

ವಿಶ್ವಪ್ರಸಿದ್ಧ ಫ್ರಾನ್ಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಕಳ್ಳತನ - ಕೇವಲ 7 ನಿಮಿಷದಲ್ಲಿ ಕಳ್ಳರ ಕೈಚಳಕ, ನೆಪೋಲಿಯನ್ ಕಾಲದ ಅಮೂಲ್ಯ ಆಭರಣ ದರೋಡೆ!

ಪ್ಯಾರಿಸ್‌ನ ಪ್ರಸಿದ್ಧ ಲೌವ್ರ್ ವಸ್ತುಸಂಗ್ರಹಾಲಯದಲ್ಲಿ ಭಾನುವಾರ ಬೆಳಿಗ್ಗೆ ದೊಡ್ಡ ದರೋಡೆ ನಡೆದಿದೆ. ಶಸ್ತ್ರಸಜ್ಜಿತ ಕಳ್ಳರು ಕೇವಲ ಏಳು ನಿಮಿಷಗಳಲ್ಲಿ ಅಪೊಲೊ ಗ್ಯಾಲರಿಗೆ ನುಗ್ಗಿ, ನೆಪೋಲಿಯನ್ ಮತ್ತು ಸಾಮ್ರಾಜ್ಞಿಯ ಅಮೂಲ್ಯ ಆಭರಣಗಳನ್ನು ದೋಚಿದ್ದಾರೆ. 

Read Full Story

08:04 PM (IST) Oct 19

Israel hamas war - ಹಮಾಸ್ ಕದನವಿರಾಮ ಉಲ್ಲಂಘನೆ, ಗಾಝಾ ಮೇಲೆ ದಾಳಿಗೆ ನೆತನ್ಯಾಹು ಆದೇಶ!

Israel hamas war: ಕದನ ವಿರಾಮ ಉಲ್ಲಂಘನೆ ಆರೋಪದ ಮೇಲೆ ಇಸ್ರೇಲ್ ಗಾಝಾ ಮೇಲೆ ದಾಳಿ ನಡೆಸಿದೆ. ಪ್ರಧಾನಿ ನೇತನ್ಯಾಹು ಆದೇಶದ ನಂತರ ಇಸ್ರೇಲಿ ಪಡೆಗಳು ಈ ಕ್ರಮ ಕೈಗೊಂಡಿವೆ. ಅದೇ ಸಮಯದಲ್ಲಿ, ಈ ದಾಳಿಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಕದನ ವಿರಾಮದ ನಿಯಮ ಪಾಲಿಸುತ್ತಿರುವುದಾಗಿ ಹಮಾಸ್ ಹೇಳಿದೆ. 

Read Full Story

07:59 PM (IST) Oct 19

ತಿಂಗಳ ಸ್ಯಾಲರಿ ₹1.9 ಲಕ್ಷ ಇದ್ರೂ ಬೆಂಗಳೂರಲ್ಲಿ ಮನೆ ಖರೀದಿಸಲು ಆಗುತ್ತಿಲ್ಲ, ನೋವು ತೋಡಿಕೊಂಡ ಟೆಕ್ಕಿ

ತಿಂಗಳ ಸ್ಯಾಲರಿ ₹1.9 ಲಕ್ಷ ಇದ್ರೂ ಬೆಂಗಳೂರಲ್ಲಿ ಮನೆ ಖರೀದಿಸಲು ಆಗುತ್ತಿಲ್ಲ, ನೋವು ತೋಡಿಕೊಂಡ ಟೆಕ್ಕಿ, ಇದೀಗ ಬೆಂಗಳೂರಲ್ಲಿ ಮನೆ ಖರೀದಿಗೆ ಎಷ್ಟು ಸ್ಯಾಲರಿ ಇರಬೇಕು ಅನ್ನೋ ಚರ್ಚೆ ಶುರುವಾಗಿದೆ.

Read Full Story

07:35 PM (IST) Oct 19

ಸಚಿವ ಪ್ರಿಯಾಂಕ್ ಸುದ್ದಿಗೋಷ್ಠಿ - 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಥಸಂಚಲನ ಮಾಡಿ..

ತಮಗೆ ಬಂದ ಬೆದರಿಕೆ ಕರೆಗಳ ನಂತರ, ತಮ್ಮ ಮತಕ್ಷೇತ್ರವಾದ ಚಿತ್ತಾಪುರದಲ್ಲಿ ಆರೆಸ್ಸೆಸ್ ಯೋಜಿಸಿರುವ ಪಥಸಂಚಲನವು ಉದ್ದೇಶಪೂರ್ವಕ ರಾಜಕೀಯ ಕುತಂತ್ರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಪಥಸಂಚಲನಕ್ಕೆ ಸರಿಯಾದ ಅನುಮತಿ ಪಡೆಯದಿರುವುದನ್ನು ಪ್ರಶ್ನಿಸಿದ್ದಾರೆ.

Read Full Story

07:25 PM (IST) Oct 19

ಕೃಷ್ಣಾದಲ್ಲಿ ಜಿಬಿಎ ಸಮೀಕ್ಷೆ ಮೀಟಿಂಗ್ - ಡಿಕೆಶಿ ಬರೋ ಮುನ್ನವೇ ಸಭೆ ಮುಗಿಸಿದ ಸಿಎಂ, ಒಳ ಬಂದ ಡಿಸಿಎಂ!

ಸಿಎಂ  ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಮೀಕ್ಷಾ ಸಭೆಯಲ್ಲಿ, ಬೆಂಗಳೂರಿನಲ್ಲಿ ಸಮೀಕ್ಷೆಯ ನಿಧಾನಗತಿಯನ್ನು ಚರ್ಚಿಸಲಾಯಿತು. ಸಭೆಯ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್  ಬೆಂಗಳೂರು ನಗರಕ್ಕೆ ಮಾತ್ರ ಅಕ್ಟೋಬರ್ 31 ರವರೆಗೆ ಸಮೀಕ್ಷೆಯ ಗಡುವು ಎಂದಿದ್ದಾರೆ

Read Full Story

07:11 PM (IST) Oct 19

ಚನ್ನಪಟ್ಟಣ ಆರ್‌ಎಸ್ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕನ ಬೆಂಬಲಿಗರು ಭಾಗಿ

ಚನ್ನಪಟ್ಟಣ ಆರ್‌ಎಸ್ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕನ ಬೆಂಬಲಿಗರು ಭಾಗಿ, ಒಂದೆಡೆ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ವಿರುದ್ದ ಮುಗಿಬೀಳುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕ ಬೆಂಬಲಿಗರು ಗಣವೇಷ ತೊಟ್ಟು ಭಾಗಿಯಾಗಿದ್ದಾರೆ.

Read Full Story

06:43 PM (IST) Oct 19

ಉತ್ತರಕನ್ನಡ - ಚಿನ್ನ ಖರೀದಿಗೆ ಬಂದಿದ್ದ ಯುವಕ ನಿಗೂಢವಾಗಿ ನಾಪತ್ತೆ!

Jakeer Baig missing case: ಮದುವೆ ಸಿದ್ಧತೆಗಾಗಿ ವಿದೇಶದಿಂದ ಬಂದಿದ್ದ ಜಾಕೀರ್ ಬೇಗ್ ಎಂಬ ಯುವಕ, ಭಟ್ಕಳದಲ್ಲಿ ಚಿನ್ನಾಭರಣ ಖರೀದಿಗೆ ತೆರಳಿದ್ದಾಗ ನಿಗೂಢವಾಗಿ ನಾಪತ್ತೆ. ನಮಾಜ್ ಮುಗಿಸಿ ಹೊರಬಂದ ನಂತರ ಕಾಣೆಯಾಗಿದ್ದು, ಆತನ ಪತ್ತೆಗಾಗಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

06:41 PM (IST) Oct 19

Bigg Boss ಫಿನಾಲೆಗೆ ಯಾರು ಅರ್ಹರು ಕೇಳಿದಾಗ ಮಂಜು ಭಾಷಿಣಿ- ಅಶ್ವಿನಿ ಒಟ್ಟಿಗೇ ಹೇಳಿದ್ದು ಒಬ್ಬರದ್ದೇ ಹೆಸರು!

ಬಿಗ್ ಬಾಸ್ ಮಿಡ್ ಸೀಸನ್ ಫಿನಾಲೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್.ಎಸ್. ಮನೆಯಿಂದ ಹೊರಬಂದಿದ್ದಾರೆ. ಮನೆಯಿಂದ ಹೊರಹೋಗುವಾಗ ಇಬ್ಬರೂ ಸ್ಪರ್ಧಿಗಳು,   ಫಿನಾಲೆ ತಲುಪಲು ಅರ್ಹರು ಯಾರು ಎಂದಾಗ ಒಬ್ಬರದ್ದೇ ಹೆಸರು ಹೇಳಿದ್ದಾರೆ. ಅವರು ಯಾರು?

Read Full Story

06:31 PM (IST) Oct 19

ಹಾವೇರಿಯಲ್ಲೋಂದು ಶಾಕಿಂಗ್ ಘಟನೆ, ಪಿಂಚಣಿ ಹಣಕ್ಕಾಗಿ ಸಹೋದರಿಯನ್ನೇ ಗೃಹಬಂಧನದಲ್ಲಿಟ್ಟ ಅಣ್ಣಂದಿರು!

ಹಾವೇರಿ ಜಿಲ್ಲೆಯ ಯಲವಿಗಿ ಗ್ರಾಮದಲ್ಲಿ, ಪಿಂಚಣಿ ಹಣಕ್ಕಾಗಿ ಸಹೋದರರೇ ಮಹಿಳೆಯೊಬ್ಬರನ್ನು ನಾಲ್ಕು ತಿಂಗಳ ಕಾಲ ಗೃಹಬಂಧನದಲ್ಲಿಟ್ಟ ಅಮಾನುಷ ಘಟನೆ ನಡೆದಿದೆ. ಬಂಧನದಿಂದ ತಪ್ಪಿಸಿಕೊಂಡು ಬಂದ ಮಹಿಳೆ, ತನ್ನ ಮೊಬೈಲ್, ಎಟಿಎಂ ಕಾರ್ಡ್ ಕಿತ್ತುಕೊಂಡು ನರಕ ತೋರಿಸಿದ್ದ ಅಣ್ಣಂದಿರ ವಿರುದ್ಧ ದೂರು ದಾಖಲಿಸಿದ್ದಾರೆ.

Read Full Story

06:17 PM (IST) Oct 19

ಅನಗತ್ಯ ಶಾಪಿಂಗ್ ಇಲ್ಲ, ಐಷಾರಾಮಿ ಇಲ್ಲ, ಖರ್ಚಿಲ್ಲ, ಏನಿದು 'ಮಿನಿಮಲಿಸಂ' ಲೈಫ್‌ಸ್ಟೈಲ್?

Minimalism Life: ಅನಗತ್ಯ ಶಾಪಿಂಗ್ ಇಲ್ಲ, ಐಷಾರಾಮಿ ಇಲ್ಲ, ಖರ್ಚಿಲ್ಲ, ಏನಿದು 'ಮಿನಿಮಲಿಸಂ' ಲೈಫ್‌ಸ್ಟೈಲ್? ಎಲ್ಲವೂ ಬೇಕು ಅನ್ನೋದಕ್ಕಿಂತ, ನಿಜವಾಗ್ಲೂ ನಮಗೆ ಏನೆಲ್ಲಾ ಬೇಕು ಅಂತ ಯೋಚಿಸೋದು ಇಲ್ಲಿ ಮುಖ್ಯ. ಬೇಕಾದ ಬಟ್ಟೆಗಳು ಮಾತ್ರ, ಮನೆಗೆ ಬೇಕಾದ ವಸ್ತುಗಳು ಮಾತ್ರ ಸಾಕು ಅಂತ ತಿಳ್ಕೊಳ್ಳೋದು.

Read Full Story

05:59 PM (IST) Oct 19

ಬೆಂಗಳೂರು ಜೈಲಿನಿಂದ ಬಂದವನಿಗೆ ಮತ್ತೆ ಪೊಲೀಸ್ ಕಾಟ? ಮನೆಗೆ ನುಗ್ಗಿದ ಖಾಕಿ, ಕುಟುಂಬದಿಂದ ವಿರೋಧ

ಡಕಾಯಿತಿ ಪ್ರಕರಣದಲ್ಲಿ  2 ವರ್ಷ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ಪ್ರಸಾದ್ ಎಂಬ ವ್ಯಕ್ತಿಗೆ ವಿದ್ಯಾರಣ್ಯಪುರ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೀಟರ್ ಸೀನಾ ಎಂಬಾತನ ವಿರುದ್ಧ ದಾಖಲಿಸಿದ್ದ ಅಟ್ರಾಸಿಟಿ ಕೇಸ್ ಹಿಂಪಡೆಯಲು ಒತ್ತಡ ಹೇರಲು ಪೊಲೀಸರು ಈ ಕೃತ್ಯ ಎಸಗಿದ್ದಾರಂತೆ.  

Read Full Story

05:50 PM (IST) Oct 19

ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್

ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್, ಅನುಮತಿ ಇಲ್ಲದೆ ಆರ್‌ಎಸ್ಎಸ್ ಕಾರ್ಯಕರ್ತರು ಪಥಸಂಚಲನ ಮಾಡಲಾಗುತ್ತಿದೆ ಎಂದು ಪೊಲೀಸರು ಸಂಘದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. 

Read Full Story

05:46 PM (IST) Oct 19

Bhagyalakshmi Serial ಬಿಡುತ್ತಿದ್ದಂತೆಯೇ ನಟಿ ಆಶಾ ಭರ್ಜರಿ ಫೋಟೋಶೂಟ್​! ಸಿನಿಮಾಕ್ಕೆ ರೆಡಿನಾ?

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪೂಜಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಆಶಾ ಅಯ್ಯನಾರ್ ಸೀರಿಯಲ್ ತೊರೆದಿದ್ದಾರೆ. ಅನಿವಾರ್ಯ ಕಾರಣಗಳಿಂದ ನಿರ್ಗಮಿಸುತ್ತಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಅವರ ಮುಂದಿನ ನಡೆ ಬಿಗ್ ಬಾಸ್ ಅಥವಾ ಸಿನಿಮಾ ಇರಬಹುದೆಂಬ ಕುತೂಹಲ ಮೂಡಿದೆ.  

Read Full Story

05:44 PM (IST) Oct 19

ಮಂಗಳೂರು - ಯುವತಿಯರ ಬಟ್ಟೆ ಬದಲಿಸುವ ವಿಡಿಯೋ ವೈರಲ್ ಮಾಡಿದವಳ ಬಂಧನ, ಏನಿದು ಪ್ರಕರಣ?

ಮಂಗಳೂರಿನಲ್ಲಿ ಇಬ್ಬರು ಯುವತಿಯರ ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಅವರ ರೂಂಮೇಟ್ ನಿರೀಕ್ಷಾ ಎಂಬ ಯುವತಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋವನ್ನು ಪಡೆದಿದ್ದ ಅಭಿಷೇಕ್ ಎಂಬ ಯುವಕ ಆತ್ಮ೧ಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್‌ನಲ್ಲಿಬರೆದಿದ್ದ.

Read Full Story

05:07 PM (IST) Oct 19

ಬೆಂಗಳೂರು ರೋಡ್‌ ಕುರಿತು ಉದ್ಯಮಿಗಳು vs ಸರ್ಕಾರದ ವಾಕ್ಸಮರ, ನೀವು ಬೆಳೆದಿದ್ದು ಹೇಗೆ? ಪ್ರಿಯಾಂಕ್ ಖರ್ಗೆ ಖಡಕ್ ಪ್ರಶ್ನೆ!

ಬೆಂಗಳೂರಿನ ರಸ್ತೆಗುಂಡಿ, ಟ್ರಾಫಿಕ್ ಮುಂತಾದ ಸಮಸ್ಯೆಗಳ ಕುರಿತು ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಸಚಿವರಾದ ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. 

Read Full Story

05:05 PM (IST) Oct 19

ಮಂಡ್ಯ - ಮೂರು KSRTC ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ!

ಮಂಡ್ಯ ಜಿಲ್ಲೆಯ ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿಯಲ್ಲಿ ಮೂರು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಭೇಟಿ, ಸ್ಥಳ ಪರಿಶೀಲನೆ.

Read Full Story

04:55 PM (IST) Oct 19

ಆಸೀಸ್ ಎದುರು ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು!

ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯದಿಂದ ಹೀನಾಯ ಸೋಲು ಕಂಡಿದೆ. ಡೆಕ್ವರ್ತ್ ಲೂಯಿಸ್ ನಿಯಮದನ್ವಯ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್‌ಗಳ ಜಯ ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
Read Full Story

04:46 PM (IST) Oct 19

1990ರಲ್ಲಿ ಇನ್‌ಪೋಸಿಸ್ ಕ್ಯಾಂಪಸ್ ಹೇಗಿತ್ತು ಅಲ್ಲಿ ಉದ್ಯೋಗಿಗಳು ಹೇಗಿದ್ದರು? 35 ವರ್ಷ ಹಳೇ ವಿಡಿಯೋ ವೈರಲ್

Infosys in 1990 : ಸುಮಾರು 35 ವರ್ಷಗಳ ಹಿಂದಿನ ಇನ್‌ಫೋಸಿಸ್ ಕ್ಯಾಂಪಸ್‌ನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಮಾರ್ಟ್‌ಫೋನ್‌ಗಳಿಲ್ಲದ ಆ ಕಾಲದಲ್ಲಿ ಉದ್ಯೋಗಿಗಳು ಕ್ಯಾಂಟೀನ್‌ನಲ್ಲಿ ಸಂತೋಷದಿಂದ ಹರಟೆ ಹೊಡೆಯುವ ದೃಶ್ಯಗಳು, ಇಂದಿನ ಪೀಳಿಗೆಯಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.

Read Full Story

04:38 PM (IST) Oct 19

ನಾನು ಹೀಗೆ ಸಾಯಬೇಕಾ, ನನಗೆ ಯಾಕೆ ಈ ಶಿಕ್ಷೆ? ಜೈಲಿನಲ್ಲಿ ಕೂಗಾಡಿದ ನಟ ದರ್ಶನ್

ನಾನು ಹೀಗೆ ಸಾಯಬೇಕಾ, ನನಗೆ ಯಾಕೆ ಈ ಶಿಕ್ಷೆ? ಜೈಲಿನಲ್ಲಿ ಕೂಗಾಡಿದ ನಟ ದರ್ಶನ್, ನಾನು ಯಾರಿಗೆ ಅನ್ಯಾಯ ಮಾಡಿದೆ? ಎಂದು ನಟ ದರ್ಶನ್ ಕಿರುಚಾಡಿದ ಘಟನೆ ನಡೆದಿದೆ. ಸೌಲಭ್ಯ ವರದಿ ಕೇಳಿದ ಬಳಿಕ ಈ ಘಟನೆ ನಡೆದಿದೆ. ಅಷ್ಟಕ್ಕೂ ಇಂದು ಜೈಲಿನಲ್ಲಿ ನಡೆದಿದ್ದೇನು?

Read Full Story

04:36 PM (IST) Oct 19

ಪ್ರಿಯಾಂಕ್ ಖರ್ಗೆ ಅಹಂಕಾರದಿಂದ ರಾಜ್ಯದಲ್ಲಿ ಅಶಾಂತಿ - ಜಗದೀಶ್ ಶೆಟ್ಟರ್

ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ವೈಫಲ್ಯ, ಆರ್ಥಿಕ ಸಂಕಷ್ಟವನ್ನು ಮರೆಮಾಚಲು ಸರ್ಕಾರ ಆರೆಸ್ಸೆಸ್ ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು, ಆರ್‌ಎಸ್‌ಎಸ್‌ ಅನ್ನು ಕೆಣಕಿದರೆ ಸರ್ಕಾರವೇ ಭಸ್ಮವಾಗಲಿದೆ ಎಂದು ಎಚ್ಚರಿಸಿದರು.

Read Full Story

04:16 PM (IST) Oct 19

ಎಲ್ಲಾ ಭಾಷೆಗಳ Bigg Bossನಲ್ಲಿ ನಂ.1 ಪಟ್ಟ ಯಾರಿಗೆ? TVR ರಿವೀಲ್​- ಕನ್ನಡಕ್ಕೆ ಎಷ್ಟನೇ ಸ್ಥಾನ?

ಭಾರತದ ಜನಪ್ರಿಯ ಶೋ ಬಿಗ್​ಬಾಸ್​ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಟಿವಿಆರ್ ರೇಟಿಂಗ್​ನಲ್ಲಿ ಮಲಯಾಳಂ ಆವೃತ್ತಿ ಮೊದಲ ಸ್ಥಾನದಲ್ಲಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್​ಬಾಸ್ ಎರಡನೇ ಸ್ಥಾನ ಪಡೆದಿದ್ದು, ಹಿಂದಿ ಆವೃತ್ತಿ ಜನಪ್ರಿಯತೆ ಕಳೆದುಕೊಂಡಿದೆ.
Read Full Story

04:10 PM (IST) Oct 19

'ಕಾಂತಾರ 1' ಬಗ್ಗೆ ಅಮಿತಾಭ್ ಮಗಳು ಪದೇ ಪದೇ ಕೇಳಿರೋ ಇದು.. ರಿಷಬ್ ಬಳಿ ಸೀಕ್ರೆಟ್ ಹಂಚಿಕೊಂಡ ಬಿಗ್ ಬಿ!

'ಕೌನ್ ಬನೇಗಾ ಕರೋಡ್‌ಪತಿ' ಶೋದಲ್ಲಿ ಸಹ ಭಾಗವಹಿಸಿ ಅಮಿತಾಭ್ ಜೊತೆ ಮಾತನ್ನಾಡಿದ್ದಾರೆ ರಿಷಬ್ ಶೆಟ್ಟಿ. 'ಕಾಂತಾರ 1' ಸಿನಿಮಾ ಇನ್ನೂ ನೋಡಿಲ್ಲ, ಬ್ಯುಸಿ ಶೆಡ್ಯೂಲ್ ನಡುವೆ ತಮಗೆ ಈ ಸಿನಿಮಾವನ್ನೂ ಇನ್ನೂ ನೋಡಲು ಸಾಧ್ಯವಾಗಿಲ್ಲ ಎಂದಿರುವ ಬಿಗ್ ಬಿ ಈ ವೇಳೆ ಸೀಕ್ರೆಟ್ ಒಂದನ್ನು ಬಹಿರಂಗಪಡಿಸಿದ್ದಾರೆ.

Read Full Story

04:06 PM (IST) Oct 19

ಮೃತ ಗಗನಸಖಿ ಬಳಿ ಸಿಕ್ ಲೀವ್ ಪ್ರೂಫ್ ಕೇಳಿದ ವಿಮಾನಯಾನ ಕಂಪನಿ, ಭಾರಿ ಆಕ್ರೋಶದ ಬಳಿಕ ಕ್ಷಮೆ

ಮೃತ ಗಗನಸಖಿ ಬಳಿ ಸಿಕ್ ಲೀವ್ ಪ್ರೂಫ್ ಕೇಳಿದ ವಿಮಾನಯಾನ ಕಂಪನಿ, ಭಾರಿ ಆಕ್ರೋಶದ ಬಳಿಕ ಕ್ಷಮೆ, ಮೃತಳ ಫೋನ್‌ಗೆ ಸಿಕ್ ಲೀಪ್ ಆಪ್ಲಿಕೇಶನ್ ನೀಡಲು ಸೂಚಿಸಲಾಗಿದೆ. ಕುಟುಂಬಸ್ಥರು ನೋವಿನಲ್ಲೂ ಆಕೆಯ ಡೆತ್ ಸರ್ಟಿಫಿಕೇಟ್ ಕಳುಹಿಸಿಕೊಟ್ಟ ಘಟನೆ ನಡೆದಿದೆ.

Read Full Story

03:42 PM (IST) Oct 19

ಮಗನಿಂದ ನಿದ್ದೆಗೆಟ್ಟು ಮಧ್ಯರಾತ್ರಿ ಪ್ರಾಜೆಕ್ಟ್ - ಶಿಕ್ಷಣ ವ್ಯವಸ್ಥೆಯ ಕರಾಳ ಮುಖ ತೆರೆದಿಟ್ಟ ಅಪ್ಪ!

ಪುಣೆಯ ಪೋಷಕರೊಬ್ಬರು ತಮ್ಮ 8ನೇ ತರಗತಿಯ ಮಗ ಮಧ್ಯರಾತ್ರಿ ಶಾಲಾ ಪ್ರಾಜೆಕ್ಟ್ ಮಾಡುವುದನ್ನು ವೀಡಿಯೊ ಮಾಡಿ ಹಂಚಿಕೊಂಡಿದ್ದಾರೆ. ಈ ಘಟನೆಯು ಶಾಲಾ ಕಾರ್ಯಗಳ ಅತಿಯಾದ ಒತ್ತಡ, ಮಕ್ಕಳ ಮಾನಸಿಕ ಆರೋಗ್ಯದ ಮೇಲಿನ ಪರಿಣಾಮ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

03:40 PM (IST) Oct 19

Naa Ninna Bidalaare ಶಂಭುಗೆ ಬೆಸ್ಟ್​ ಅಪ್ಪ ಅವಾರ್ಡ್​ - ಅಸಲಿ ವೇಷದಲ್ಲಿ ಜನ ಗುರುತಿಸಿಲ್ಲ, ಶಂಭು ವೇಷದಲ್ಲಿ ಎದ್ದೂ ಬಿದ್ದೂ ಓಡಿದ್ರು!

'ನಾ ನಿನ್ನ ಬಿಡಲಾರೆ' ಧಾರಾವಾಹಿಯ ವಿಚಿತ್ರ ಪಾತ್ರ ಶಂಭುವನ್ನು ನಿರ್ವಹಿಸುವ ನಟ ಸಂತೋಷ್ ಕರ್ಕಿ, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಶಂಭುವಿನ ವೇಷಭೂಷಣವಿಲ್ಲದೆ ನಿಜ ಜೀವನದಲ್ಲಿ ಜನರು ಅವರನ್ನು ಗುರುತಿಸಲು ವಿಫಲರಾಗುತ್ತಾರೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

03:27 PM (IST) Oct 19

ಕರ್ನಾಟಕದ ಈ ದೇವಸ್ಥಾನದಲ್ಲಿ ಹೇಳಿದಂತೆ ಕ್ರಿಕೆಟರ್ ಸೂರ್ಯ ಕುಮಾರ್‌ ಯಾದವ್ ಜೀವನದಲ್ಲಿ ಆ ಘಟನೆ ನಡೀತು!

Powerful Temple In Karnataka: ಮಂಗಳೂರಿನಲ್ಲಿ ಸಾಕಷ್ಟು ಶಕ್ತಿಶಾಲಿ ದೇಗುಲಗಳಿವೆ. ಕ್ರಿಕೆಟರ್‌ ಸೂರ್ಯ ಕುಮಾರ್‌ ಯಾದವ್‌ ಅವರಿಗೆ ಕರ್ನಾಟಕದ ಈ ದೇವಸ್ಥಾನದಲ್ಲಿ ನುಡಿದ ಭವಿಷ್ಯ ನಿಜವಾಯ್ತು. ಹಾಗಾದರೆ ಆ ದೇವಸ್ಥಾನ ಯಾವುದು? ಎಲ್ಲಿದೆ?

 

Read Full Story

03:15 PM (IST) Oct 19

ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಇವರೇ ಮುಂದಿನ ಸಿಎಂ, ಭವಿಷ್ಯ ನುಡಿದ ಸಚಿವ ತಿಮ್ಮಪೂರ

ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಇವರೇ ಮುಂದಿನ ಸಿಎಂ, ಭವಿಷ್ಯ ನುಡಿದ ಸಚಿವ ತಿಮ್ಮಪೂರ, ಈ ನಾಯಕ ಸಿಎಂ ಆಗೇ ಆಗುತ್ತಾರೆ ಎಂದು ಖಡಕ್ ಭವಿಷ್ಯ ನುಡಿದಿದ್ದಾರೆ. ಅಧಿಕಾರ ಬದಲಾವಣೆ ಗುಮಾನಿ ನಡುವೆ ತಿಮ್ಮಾಪೂರ ಮಾತು ಭಾರಿ ಸಂಚಲನ ಸೃಷ್ಟಿಸಿದೆ

Read Full Story

02:58 PM (IST) Oct 19

ಭಾರತ 136 ರನ್ ಬಾರಿಸಿದರೂ ಆಸೀಸ್‌ಗೆ ಗೆಲ್ಲಲು ಕೇವಲ 131 ರನ್ ಟಾರ್ಗೆಟ್!

ಪರ್ತ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, ಅಗ್ರಕ್ರಮಾಂಕದ ವೈಫಲ್ಯದಿಂದ 9 ವಿಕೆಟ್‌ಗೆ 136 ರನ್ ಗಳಿಸಿತು. ಮಳೆಯಿಂದಾಗಿ ಆಸ್ಟ್ರೇಲಿಯಾಗೆ ಡೆಕ್ವರ್ತ್ ಲೂಯಿಸ್ ನಿಯಮದಡಿ 26 ಓವರ್‌ಗಳಲ್ಲಿ 131 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿದೆ.
Read Full Story

02:34 PM (IST) Oct 19

ಉದ್ಯೋಗ ಸೃಷ್ಟಿಯಲ್ಲಿ ಹೊಸ ದಾಖಲೆ ಬರೆದ ಐಐಎಂ ಬೆಂಗಳೂರು! ಪ್ಲೇಸ್‌ಮೆಂಟ್ ನಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಫರ್

ಐಐಎಂ ಬೆಂಗಳೂರಿನಲ್ಲಿ 2025-27ರ ಪಿಜಿಪಿ ಮತ್ತು ಪಿಜಿಪಿಬಿಎ ಬ್ಯಾಚ್‌ನ ಸಮ್ಮರ್ ಪ್ಲೇಸ್‌ಮೆಂಟ್ ಯಶಸ್ವಿಯಾಗಿ ನಡೆದಿದ್ದು, 601 ವಿದ್ಯಾರ್ಥಿಗಳು 137 ಸಂಸ್ಥೆಗಳಿಂದ ಉದ್ಯೋಗಾವಕಾಶ ಪಡೆದಿದ್ದಾರೆ. ಈ ಬಾರಿ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ವಿಭಾಗವು ದಾಖಲೆಯ 46% ನೇಮಕಾತಿಗಳನ್ನು ಕಂಡಿದೆ.

Read Full Story

02:33 PM (IST) Oct 19

ಹಾಸನಾಂಬೆ ದೇವಿ ದರ್ಶನ ಪಡೆದು ಧನ್ಯೋಸ್ಮಿ ಎಂದ 'ಕಾಂತಾರ 1' ಖ್ಯಾತಿಯ ರಿಷಬ್ ಶೆಟ್ಟಿ!

ಹಾಸನಾಂಬ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಹಿಂದೂ ದೇವಾಲಯವಾಗಿದೆ , ಇದನ್ನು ಶಕ್ತಿ ದೇವತೆಗೆ ಸಮರ್ಪಿಸಲಾಗಿದೆ, ಇದನ್ನು ಅಂಬಾ ಅಥವಾ ಅಂಬೆ ಎಂದೂ ಕರೆಯುತ್ತಾರೆ, ಇದರರ್ಥ ತಾಯಿ. ಇಂದು ರಿಷಬ್ ಶೆಟ್ಟಿಯವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

Read Full Story

02:23 PM (IST) Oct 19

26850 ಕೋಟಿಗೆ ಭಾರತದ ಖಾಸಗಿ ಬ್ಯಾಂಕ್‌ನ ಶೇ.60 ಪಾಲು ಸ್ವಾಧೀನಪಡಿಸಿಕೊಂಡ ದುಬೈನ ಎನ್‌ಬಿಡಿ

ಯುಎಇಯ ಎಮಿರೇಟ್ಸ್ ಎನ್‌ಬಿಡಿ ಬ್ಯಾಂಕ್, ಭಾರತದ ಖಾಸಗಿ ಬ್ಯಾಂಕಿನ ಶೇ. 60ರಷ್ಟು ಪಾಲನ್ನು ಸುಮಾರು 26,850 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುತ್ತಿದೆ. ಭಾರತದ ಖಾಸಗಿ ಬ್ಯಾಂಕಿಂಗ್ ವಲಯದ ಈ ಅತಿದೊಡ್ಡ ಒಪ್ಪಂದವು ನಿಯಂತ್ರಕ ಅನುಮೋದನೆಗೆ ಒಳಪಟ್ಟಿದೆ.

Read Full Story

02:15 PM (IST) Oct 19

Bigg Boss Wild Card entry - ಕುತೂಹಲಕ್ಕೆ ಕೊನೆಗೂ ತೆರೆ- ವೈಲ್ಡ್​ ಕಾರ್ಡ್​ ಎಂಟ್ರಿ ಪ್ರೊಮೋ ರಿಲೀಸ್​ - ಯಾರಿವರು?

ಬಿಗ್ ಬಾಸ್ ಮನೆಯಲ್ಲಿ ಮಾಸ್ ಎಲಿಮಿನೇಷನ್ ನಡೆದಿದ್ದು, ಐವರು ಸ್ಪರ್ಧಿಗಳು ಹೊರಬಂದಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯ ಚರ್ಚೆ ಜೋರಾಗಿದ್ದು, 'ಕಾಂತಾರ' ನಟ ರಾಘವೇಂದ್ರ, ಶ್ವೇತಾ ಪ್ರಸಾದ್ ಹಾಗೂ ರಿಷಾ ಗೌಡ ಅವರ ಹೆಸರುಗಳು ಕೇಳಿಬರುತ್ತಿವೆ.
Read Full Story

More Trending News