'ಕೌನ್ ಬನೇಗಾ ಕರೋಡ್‌ಪತಿ' ಶೋದಲ್ಲಿ ಸಹ ಭಾಗವಹಿಸಿ ಅಮಿತಾಭ್ ಜೊತೆ ಮಾತನ್ನಾಡಿದ್ದಾರೆ ರಿಷಬ್ ಶೆಟ್ಟಿ. 'ಕಾಂತಾರ 1' ಸಿನಿಮಾ ಇನ್ನೂ ನೋಡಿಲ್ಲ, ಬ್ಯುಸಿ ಶೆಡ್ಯೂಲ್ ನಡುವೆ ತಮಗೆ ಈ ಸಿನಿಮಾವನ್ನೂ ಇನ್ನೂ ನೋಡಲು ಸಾಧ್ಯವಾಗಿಲ್ಲ ಎಂದಿರುವ ಬಿಗ್ ಬಿ ಈ ವೇಳೆ ಸೀಕ್ರೆಟ್ ಒಂದನ್ನು ಬಹಿರಂಗಪಡಿಸಿದ್ದಾರೆ.
ಅಮಿತಾಭ್ ಮಗಳು ಶ್ವೇತಾ ನಂದಾ ಕಾಂತಾರದ ಬಗ್ಗೆ ಹೇಳಿದ್ದೇನು?
ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾವೊಂದು ದೇಶ-ವಿದೇಶಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಈ ಹೊತ್ತಲ್ಲಿ ರಿಷಬ್ ಶೆಟ್ಟಿಯವರು ದೇಶದ ಬಹಳಷ್ಟು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ದೇವಿ, ಬಿಹಾರದ ಮುಂಡೇಶ್ವರಿ ದೇವಿ, ಕಾಶಿ ವಿಶ್ವನಾಥನ ಸನ್ನಿಧಿ, ರಾಮೇಶ್ವರ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ರಿಷಬ್ ಶೆಟ್ಟಿ. ಇಂದು, 19 ಅಕ್ಟೋಬರ್ 2025ರಂದು ಹಾಸನದ ಹಾಸನಾಂಬಾ ದೇವಿ ದರ್ಶನ ಪಡೆದು ಧನ್ಯರಾಗಿದ್ದಾರೆ ರಿಷಬ್.
ಅಷ್ಟೇಅಲ್ಲ, ಬಾಲಿವುಡ್ ಸೂಪರ್ ಸ್ಟಾರ್ 'ಬಿಗ್ ಬಿ' ಖ್ಯಾತಿಯ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್‌ಪತಿ' ಶೋದಲ್ಲಿ ಸಹ ಭಾಗವಹಿಸಿ ಅಮಿತಾಭ್ ಜೊತೆ ಸಾಕಷ್ಟು ಸಮಯ ಮಾತನ್ನಾಡಿದ್ದಾರೆ ರಿಷಬ್ ಶೆಟ್ಟಿ. ಅಲ್ಲಿ ಶೋದಲ್ಲಿ, ಅಮಿತಾಭ್ ಜೊತೆ ಮಾತನ್ನಾಡುತ್ತಿದ್ದಾಗ, ಬಾಲಿವುಡ್ ಸ್ಟಾರ್ ಅಮಿತಾಭ್ ಅವರು ತಾವು 'ಕಾಂತಾರ 1' ಸಿನಿಮಾ ಇನ್ನೂ ನೋಡಿಲ್ಲ, ಬ್ಯುಸಿ ಶೆಡ್ಯೂಲ್ ನಡುವೆ ತಮಗೆ ಈ ಸಿನಿಮಾವನ್ನೂ ಇನ್ನೂ ನೋಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಆದರೆ, ಈ ವೇಳೆ ಸೀಕ್ರೆಟ್ ಒಂದನ್ನು ಬಹಿರಂಗಪಡಿಸಿದ್ದಾರೆ.
ಅಮಿತಾಭ್ ಬಚ್ಚನ್ ಬಿಚ್ಚಿಟ್ಟ ಸೀಕ್ರೆಟ್ ಅದೇನು ಗೊತ್ತಾ? ಅವರ ಮಗಳು ಶ್ವೇತಾ ನಂದಾ ಅವರು 'ಕಾಂತಾರ 1' ಸಿನಿಮಾ ನೋಡಿದ್ದಾರೆ. ಆದರೆ, ನೋಡಿದವರು ಒಂದು ವಾರ ನಿದ್ದೆನೇ ಮಾಡಿಲ್ವಂತೆ. ಆ ಸಿನಿಮಾದಲ್ಲಿ ರಿಷಬ್ ಶೆಟ್ಟಿಯವರು ಅಮೋಘವಾಗಿ ನಟಿಸಿದ್ದಾರೆ. ಅದು ಹೇಗೆ ಹಾಗೆ ನಟಿಸಿದ್ದಾರೋ ಏನೋ ಎಂದಿದ್ದಾರಂತೆ ಅಮಿತಾಭ್ ಬಚ್ಚನ್ ಮಗಳು ಶ್ವೇತಾ ನಂದಾ. ಅಷ್ಟೇ ಅಲ್ಲ, ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ 'ರಿಷಬ್ ಆ ದೈವದ ಝೋನ್‌ಗೆ ಹೇಗೆ ಬಂದರು' ಎಂಬ ಪ್ರಶ್ನೆಯನ್ನು ಪದೇಪದೇ ಕೇಳುತ್ತಿದ್ದರು ಎಂದಿದ್ದಾರೆ ಅಮಿತಾಭ್ ಬಚ್ಚನ್.
ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ರಿಷಬ್ ಶೆಟ್ಟಿ!
'ಕಾಂತಾರ 1' ಸಿನಿಮಾ ಇನ್ನೂ ನೋಡದಿರುವುದಕ್ಕೆ ರಿಷಬ್ ಶೆಟ್ಟಿಯವರ ಬಳಿ ಕ್ಷಮೆ ಕೋರಿದ ಅಮಿತಾಭ್ ಬಚ್ಚನ್ ಅವರು, ಅದಕ್ಕೆ ಸಕಾರಣವನ್ನೂ ನೀಡಿದ್ದಾರೆ. ನಿರಂತರ ಕೆಲಸದ ಒತ್ತಡದ ನಡುವೆ ತಮಗೆ ಈ ಸಿನಿಮಾ ನೋಡಲು ಸಾಧ್ಯವಾಗಿಲ್ಲ ಎಂದ ಅಮಿತಾಭ್ ಅವರು ರಿಷಬ್ ಶೆಟ್ಟಿಯವರು ಲುಂಗಿ ಧರಿಸುವ ಸ್ಟೈಲ್ ಅನ್ನು ಮೆಚ್ಚಿಕೊಂಡಿದ್ದಾರೆ. 'ನಿಮ್ಮ ಲುಂಗಿ ಉಡುವ ಕಲೆಗೆ ನಾನು ಸಂಪೂರ್ಣವಾಗಿ ಮರುಳಾಗಿದ್ದೇನೆ' ಎಂದಿದ್ದಾರೆ.
ಕಾಂತಾರ ಸೃಷ್ಟಿಕರ್ತ, ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕೌನ್ ಬನೇಗಾ ಕರೋಡ್‌ಪತಿ' ಶೋದಲ್ಲಿ ವಿಶೇಷ ಆಹ್ವಾನದ ಮೇರೆಗೆ ಭಾಗಿಯಾಗಿದ್ದರು. ಎಂದಿನಂತೆ ರಿಷಬ್ ಶೆಟ್ಟಿ ಅವರು ಅಲ್ಲೂ ಕೂಡ ಲುಂಗಿ-ಶರ್ಟ್ ಧರಿಸಿ ಹೋಗಿದ್ದಾರೆ. ಅಲ್ಲಿ ಅವರು ಶೋಗೆ ಎಂಟ್ರಿಕೊಟ್ಟ ತಕ್ಷಣ ಅಮಿತಾಭ್ ಅವರು ಅದನ್ನು ಗಮನಿಸಿದ್ದಾರೆ. ಅದನ್ನು ನೋಡಿ ನಟ, ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರು ಈ ವೇಳೆ ರಿಷಬ್ ಅವರು ಅಮಿತಾಭ್ ಅವರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ
ಅಮಿತಾಭ್ ಅವರು 'ರಿಷಬ್ ಅವರೇ, ನೀವು ಉಟ್ಟಿರುವಂಥೇ ನಾನೂ ಕೂಡ ಲುಂಗಿಯನ್ನು ಧರಿಸಲು ಬಯಸುತ್ತೇನೆ. ಆದರೆ, ಅದನ್ನು ಧರಿಸುವುದಕ್ಕೂ ಮುನ್ನ ಅದನ್ನು ಹೇಗೆ ಉಡುವುದು ಎಂಬುದನ್ನು ಸರಿಯಾಗಿ ಕಲಿಯಬೇಕು. ಇಲ್ಲದೇ ಹೋದರೆ ಕ್ಯಾಮೆರಾ ಎದುರೇ ಏನಾದರೂ ಕಳಚಿ ಹೋದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ’ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಡಿವೈನ್ ಸ್ಟಾರ್ ಅವರು ಎಂದಿನಂತೆ ಸಿಂಪಲ್ ಆಗಿ ನಕ್ಕಿದ್ದಾರೆ, ಬಾಲಿವುಡ್‌ನ ದೊಡ್ಡ ಸ್ಟಾರ್ ಅಮಿತಾಭ್ ಎದುರು ವಿನಯವಂತಿಕೆ ಮೆರೆದಿದ್ದಾರೆ.
