ಮೃತ ಗಗನಸಖಿ ಬಳಿ ಸಿಕ್ ಲೀವ್ ಪ್ರೂಫ್ ಕೇಳಿದ ವಿಮಾನಯಾನ ಕಂಪನಿ, ಭಾರಿ ಆಕ್ರೋಶದ ಬಳಿಕ ಕ್ಷಮೆ, ಮೃತಳ ಫೋನ್‌ಗೆ ಸಿಕ್ ಲೀಪ್ ಆಪ್ಲಿಕೇಶನ್ ನೀಡಲು ಸೂಚಿಸಲಾಗಿದೆ. ಕುಟುಂಬಸ್ಥರು ನೋವಿನಲ್ಲೂ ಆಕೆಯ ಡೆತ್ ಸರ್ಟಿಫಿಕೇಟ್ ಕಳುಹಿಸಿಕೊಟ್ಟ ಘಟನೆ ನಡೆದಿದೆ.
ತೈವಾನ್ (ಅ.19) ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳು ಟಾರ್ಗೆಟ್, ಒತ್ತಡ ಬದುಕಿನಲ್ಲಿ ಮಶಿನ್‌ಗಳಾಗುತ್ತಿದ್ದಾರೆ ಅನ್ನೋ ಆರೋಪ, ವಾದ ಇದೆ. ಇದೀಗ ಕೆಲ ಘಟನೆಗಳ ಈ ಆರೋಪವನ್ನು ಪುಷ್ಠೀಕರಿಸುತ್ತಿದೆ. ವಿಮಾನಯಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿ ಮೃತಪಟ್ಟಿದ್ದಾಳೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕೆಲ ದಿನಗಳಲ್ಲಿ ಹೆಚ್ಆರ್ ವಿಭಾಗದಿಂದ ಚಿಕಿತ್ಸೆಗಾಗಿ ರಜೆ ಪಡೆದಿರುವುದಕ್ಕೆ ಮೆಡಿಕಲ್ ಸರ್ಟಿಫಿಕೇಟ್, ಪ್ರಿಸ್ಕ್ರಿಪ್ಶನ್ ದಾಖಲೆ ನೀಡಿ ಎಂದು ಮೃತ ಗಗನಸಖಿಗೆ ಫೋನ್‌ಗೆ ಮೆಸೇಜ್ ಮಾಡಿದ ಘಟನೆ ತೈವಾನ್‌ನಲ್ಲಿ ನಡೆದಿದೆ. ದುಃಖದಲ್ಲಿದ್ದ ಕುಟುಂಬ ಆಕೆಯ ಡೆತ್‌ಸರ್ಟಿಫಿಕೇಟ್ ಕಳುಹಿಸಿಕೊಟ್ಟಿದ್ದಾರೆ. ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ವಿಮಾನಯಾನ ಸಂಸ್ಥೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಸಂಸ್ಥೆ, ಕ್ಷಮೆ ಕೇಳಿದೆ.
ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ
ತೈವಾನೀಸ್ (EVA ) ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ 34 ವರ್ಷದ ಯುವತಿ, ತೈವಾನ್‌ನ ಮಿಲನ್‌ನಿಂದ ತವೋಯುಆನ್‌ಗೆ ಸಂಚರಿಸು ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುದೀರ್ಘ ಪ್ರಯಾಣದ ಈ ಪ್ರಯಾಣದ ವೇಳೆ ಗಗನಸಖಿ ಆರೋಗ್ಯ ಏರುಪೇರಾಗಿದೆ. ಅಸ್ವಸ್ಥಗೊಂಡ ಗಗನಸಖಿ ಆರೋಗ್ಯ ಹದಗೆಡುತ್ತಾ ಹೋಗಿದೆ. ಹೀಗಾಗಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಗಗನಸಖಿಯನ್ನು ವಿಮಾನ ನಿಲ್ದಾಣಧ ಕ್ಲಿನಿಕ್‌ಗೆ ದಾಖಲಿಸಲಾಗಿತ್ತು.
ಸೆಪ್ಟೆಂಬರ್ 24ರಂದು ಕ್ಲಿನಿಕ್‌ಗೆ ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯ ಸಂಪೂರ್ಣ ಹದಗೆಟ್ಟ ಕಾರಣ ಸೆಪ್ಟೆಂಬರ್ 26ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಅಕ್ಟೋಬರ್ 10 ರಂದು ಗಗನಸಖಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಗಗನಸಖಿ ಮೊಬೈಲ್‌ಗೆ ಸಂದೇಶ
ಗಗನಸಖಿ ಮೃತಪಟ್ಟ ಕೆಲವೇ ದಿನಗಳಲ್ಲಿ EVA ಏರ್‌ಲೈನ್ಸ್ ಸಂಸ್ಥೆಯ ಹೆಚ್ಆರ್ ವಿಭಾಗದಿಂದ ಮೃತ ಗಗನಸಖಿ ಮೊಬೈಲ್ ಫೋನ್‌ಗೆ ದೊಡ್ಡ ಸಂದೇಶ ಕಳುಹಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಂದೇಶ ಮಾಡುತ್ತಿದ್ದೇವೆ, ಕಾರಣ ದಾಖಲೆ ಇಲ್ಲದೆ ಇಲ್ಲಿ ನಿಮ್ಮ ಫೈನಲ್ ಪ್ರೊಸೆಸ್ ಮಾಡಲು ಸಾಧ್ಯವಾಗುದಿಲ್ಲ. ಕಳೆದ ಕೆಲ ದಿನಗಳ ಹಿಂದೆ ತೆಗೆದುಕೊಂಡ ಸಿಕ್ ಲೀವ್‌ಗೆ ಯಾವುದೇ ದಾಖಲೆ ಸಲ್ಲಿಕೆ ಮಾಡಿಲ್ಲ. ಮೆಡಿಕಲ್ ಸರ್ಟಿಫಿಕೇಟ್, ವೈದ್ಯರು ನೀಡಿದ ಪ್ರಿಸ್ಕ್ರಿಪ್ಶನ್ ಸಲ್ಲಿಕೆ ಮಾಡಬೇಕು. ತಕ್ಷಣವೇ ಸಿಕ್ ಲೀವ್ ಪ್ರೂಫ್ ಸಲ್ಲಿಕೆ ಮಾಡಿ ಎಂದು ಸಿಬ್ಬಂದಿ ಮೆಸೇಜ್ ಮಾಡಿದ್ದಾರೆ.
ಡೆತ್ ಸರ್ಟಿಫಿಕೇಟ್ ನೀಡಿದ ಕುಟುಂಬ
ನೋವಿನಲ್ಲಿದ್ದ ಕುಟುಂಬಸ್ಥರು ಈ ಮೆಸೇಜ್ ನೋಡಿ ಮತ್ತ ನೋವು ಅನುಭವಿಸಿದ್ದಾರೆ. ಯಾವ ಮೆಡಿಕಲ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಬೇಕು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಆಕೆಯ ಡೆತ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಿದ್ದಾರೆ. ಈ ಕುರಿತ ಮಾಹಿತಿ ಮಾಧ್ಯಮದಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಸಾರ್ವಜನಿಕವಾಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಗಗನಸಖಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೃತಪಟ್ಟಿರುವು ಮಾಹಿತಿ ಕಂಪನಿಗೆ ತಿಳಿದಿದೆ. ಆದರೆ ಹಳೇ ಸಿಕ್ ಲೀವ್ ಪ್ರೂಫ್ ಬೇಕು ಎಂದು ಕೇಳುತ್ತಿದ್ದೀರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಸಿಬ್ಬಂದಿ ಕಣ್ತಪ್ಪಿನಿಂದ ಈ ರೀತಿ ಪ್ರೂಫ್ ಕೇಳಿದ್ದಾರೆ. ಗಗನಸಖಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕುಟುಂಬದ ಜೊತೆಗೆ ನಿಲ್ಲುತ್ತೇವೆ. ಸಿಬ್ಬಂದಿ ಮಾಡಿರುವ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇವೆ ಎಂದಿದೆ.
