ಬೆಂಗಳೂರು:ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವಂತೆ ಕೋರಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಹಾಸನದ ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ಸಿಐಡಿ ಸೈಬರ್‌ಕ್ರೈಂ ಪೊಲೀಸರು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹಾಲಿ ಸಂಸದ ಶ್ರೇಯಸ್ ಪ್ರ ಶ್ರೇಯಸ್ ಪಟೇಲ್, ವಕೀಲ ದೇವರಾಜೇಗೌಡ ಹಾಗೂ ಇತರರ ವಿರುದ್ಧ ಐಟಿ ಕಾಯ್ದೆ ಹಾಗೂ ಇತರೆ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ತನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ. ಪೆನ್‌ಡ್ರೈವ್ ವೈರಲ್ ಕುರಿತು ನನಗೆ ತಿಳಿದಿಲ್ಲ. ನನ್ನ ವಿರುದ್ದ ಸಂತ್ರಸ್ತೆ ಮಾಡಿರುವ ಆರೋಪ ಈ ಸುಳ್ಳು. ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಆರೋಪ ಮುಕ್ತಗೊಳಿಸುವಂತೆ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ಹಾಗೂ ಸಾಕ್ಷ್ಯಗಳು ಸಾಕ್ಷ್ಯಗಳ ಹೇಳಿಕೆ ಕುರಿತು ವಿಚಾರಣೆ ನಡೆಸದೆಯೇ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ. ಡಿಸ್ಟಾಜರ್
11:34 PM (IST) Oct 16
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾಕ್ರೋಚ್ ಸುಧಿ ಅವರು ಫೈನಲಿಸ್ಟ್ ಆಗಿದ್ದಾರೆ. ಉಳಿದಂತೆ ಎಲ್ಲರೂ ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದರು.
11:24 PM (IST) Oct 16
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೊದಲ ಬಾರಿಗೆ ಹಾಸನಾಂಬ ದೇವಿಯ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, ಗೃಹ ಲಕ್ಷ್ಮಿ ಯೋಜನೆಯ ಆಗಸ್ಟ್ ತಿಂಗಳ ಹಣವು ದೀಪಾವಳಿಯ ಮುನ್ನವೇ ಎರಡು-ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಿಹಿ ಸುದ್ದಿ ನೀಡಿದರು.
11:01 PM (IST) Oct 16
ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರ ಐಷಾರಾಮಿ ಜೀವನ ಮತ್ತು ವಿದೇಶಿ ಪ್ರವಾಸಗಳು ಚರ್ಚೆಗೆ ಗ್ರಾಸವಾಗಿವೆ. ತಮ್ಮ ದುಬಾರಿ ಜೀವನಶೈಲಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗಳಿಗೆ ನಿವೇದಿತಾ ಉತ್ತರಿಸಿದ್ದಾರೆ.
10:59 PM (IST) Oct 16
Low interest loan scam :ಬೆಂಗಳೂರಿನಲ್ಲಿ 'ಸುಬ್ಬಲಕ್ಷ್ಮಿ ಚಿಟ್ಸ್' ಕಂಪನಿ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ನಂಬಿಸಿ, ಮುಂಗಡ ಇಎಂಐ ಪಡೆದು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ನಯನಾ ಎಂಬ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
10:41 PM (IST) Oct 16
ABVP Workers Arrested for Filming Girl Students Changing Clothes in MP College ಮಧ್ಯಪ್ರದೇಶದ ಕಾಲೇಜಿನಲ್ಲಿ ಯುವಜನೋತ್ಸವದ ವೇಳೆ, ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದ ಕೋಣೆಯ ವೀಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಮೂವರು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
10:26 PM (IST) Oct 16
Chikkamagaluru provocative post case: ಚಿಕ್ಕಮಗಳೂರಿನಲ್ಲಿ ಗೋಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ, 'ಗೋ ಹಂತಕರೆದೆಯ ಸೀಳಿರಿ' ಎಂಬ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
10:25 PM (IST) Oct 16
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ಬಾಲಕಿಯ ಗೆಜ್ಜೆಗಾಗಿ ದುರ್ಗಾ ಹುಡುಕಾಟ ನಡೆಸುತ್ತಾಳೆ. ಈ ವೇಳೆ ನದಿಗೆ ಹಾರಿದರೂ ಆಕೆಯ ಸೀರೆ ಒದ್ದೆಯಾಗದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ ಕಾರಣವಾಗಿದ್ದು, ನೆಟ್ಟಿಗರು ಈ ಸೀರೆ ಎಲ್ಲಿ ಸಿಗುತ್ತದೆ ಎಂದು ತಮಾಷೆಯಾಗಿ ಪ್ರಶ್ನಿಸುತ್ತಿದ್ದಾರೆ.
10:05 PM (IST) Oct 16
Darshan New Bail Plan ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್, ಜಾಮೀನು ಪಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ತಮ್ಮ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯದ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
09:42 PM (IST) Oct 16
Wife Shocked by Husbands Sextortion Videos ಬೆಂಗಳೂರಿನಲ್ಲಿ 20 ವರ್ಷಗಳ ದಾಂಪತ್ಯ ನಡೆಸುತ್ತಿದ್ದ ನಾರಾಯಣ್ ಎಂಬಾತನ ರಾಸಲೀಲೆ ಬಯಲಾಗಿದೆ. ಪತ್ನಿ ಅನ್ನಪೂರ್ಣ, ಆಕಸ್ಮಿಕವಾಗಿ ಪತಿಯ ಮೊಬೈಲ್‌ನಲ್ಲಿ ಪರಸ್ತ್ರೀಯರೊಂದಿಗಿನ ಖಾಸಗಿ ವಿಡಿಯೋಗಳನ್ನು ಕಂಡಿದ್ದಾರೆ.
09:28 PM (IST) Oct 16
Danappa Narone arrested by Bengaluru police: ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಾರಾಷ್ಟ್ರ ಸೋಲಾಪುರ ನಿವಾಸಿ ದಾನಪ್ಪ ನಾರೋನೆಯನ್ನು ಬೆಂಗಳೂರು ಪೊಲೀಸರು ಬಂಧಿಸಿ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
09:19 PM (IST) Oct 16
09:17 PM (IST) Oct 16
Priyank Kharge Calls Andhra Pradeshs Google AI Package an Economic Disaster ಈ ಯೋಜನೆಯ ಬಗ್ಗೆ ಗೂಗಲ್ ಕರ್ನಾಟಕದೊಂದಿಗೆ ಚರ್ಚಿಸಿಲ್ಲ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು.
09:08 PM (IST) Oct 16
ಎಚ್‌ಡಿಕೆ ನೇತೃತ್ವದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ, ಮುಂಬರುವ ಚುನಾವಣೆಗಳಿಗೆ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಪಕ್ಷದ ಸಂಘಟನೆ ಬೆಳ್ಳಿ ಮಹೋತ್ಸವ ಆಚರಣೆ ಹಾಗೂ ರೈತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
09:01 PM (IST) Oct 16
ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕುರಿಗಳೊಂದಿಗೆ ಆಟವಾಡುವಾಗ ಆಯತಪ್ಪಿ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಇಡೀ ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.
08:55 PM (IST) Oct 16
08:44 PM (IST) Oct 16
08:36 PM (IST) Oct 16
Talakaveri Kodagu festival: ಕೊಡಗಿನ ತಲಕಾವೇರಿಯಲ್ಲಿ ವಾರ್ಷಿಕ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಮಾತೆ ಜಲರೂಪಿಣಿಯಾಗಿ ದರ್ಶನ ನೀಡಲಿದ್ದು, ಸಹಸ್ರಾರು ಭಕ್ತರ ಆಗಮನದ ನಿರೀಕ್ಷೆಯಲ್ಲಿ ಜಿಲ್ಲಾಡಳಿತವು ಪೊಲೀಸ್ ಬಂದೋಬಸ್ತ್
08:15 PM (IST) Oct 16
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯು ನವೆಂಬರ್ 7 ರಿಂದ 10, 2025 ರವರೆಗೆ ಬೃಹತ್ ಕೃಷಿ-ತೋಟಗಾರಿಕೆ ಮೇಳ ಆಯೋಜಿಸಿದೆ. 'ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ' ಎಂಬ ಧ್ಯೇಯದೊಂದಿಗೆ, ಈ ಮೇಳವು ರೈತರಿಗೆ ನೂತನ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿಗಳು ಮತ್ತು ಮೌಲ್ಯವರ್ಧನೆಯ ಬಗ್ಗೆ ಮಾಹಿತಿ ನೀಡಲಿದೆ.
08:12 PM (IST) Oct 16
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಯಚೂರಿನ ಜವಳಗೇರಾದಲ್ಲಿ ಕೃಷಿ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ತೊಗರಿ, ಕಡಲೆಯಂತಹ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಸಂಸ್ಕರಿಸಿ ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗಲಿದೆ ಎಂದು ರೈತರಿಗೆ ಸಲಹೆ ನೀಡಿದರು.
07:56 PM (IST) Oct 16
ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ, ನಿವೇದಿತಾ ಗೌಡ ತಮ್ಮ ತುಂಡುಡುಗೆಯ ರೀಲ್ಸ್‌ಗಳಿಂದ ಟ್ರೋಲ್ ಆಗುತ್ತಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮಗೆ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.
07:52 PM (IST) Oct 16
ನೈಸ್ ಯೋಜನೆ ಕುರಿತ ಸಂಪುಟ ಉಪಸಮಿತಿ ಸಭೆಯ ನಂತರ, ತಮ್ಮ ಜಮೀನುಗಳಿಗೆ ನಿವೇಶನ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ರೈತರು ಅಶೋಕ್ ಖೇಣಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಖೇಣಿ, ರೈತರಿಗೆ ನಿವೇಶನ ಹಂಚಿಕೆ ಮಾಡಲು ಲೇಔಟ್ ಸಿದ್ಧವಿದೆ ಎಂದರು.
07:39 PM (IST) Oct 16
ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬದಿಗೊತ್ತಿ, ಸಚಿವ ಪ್ರಿಯಾಂಕ್ ಖರ್ಗೆಯನ್ನು ಉತ್ತರಾಧಿಕಾರಿಯನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಖರ್ಗೆಯವರ RSS ವಿರೋಧಿ ನಿಲುವನ್ನು ಬಳಸಿ ಡಿಕೆಶಿಯನ್ನು ಮೂಲೆಗುಂಪು ಮಾಡುವ ತಂತ್ರ ಎಂದಿದ್ದಾರೆ.
07:20 PM (IST) Oct 16
Suhana Syed Nitin Shivansh Mantra Mangalya 'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ. ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ.
07:19 PM (IST) Oct 16
Caste census data privacy: ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜಾತಿ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸ್ವತಃ ಭಾಗವಹಿಸಿ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಪಪ್ರಚಾರಕ್ಕೆ ಕಿವಿಗೊಡದೆ, ವೈಯಕ್ತಿಕ ಮಾಹಿತಿ ಸುರಕ್ಷತೆಯ ಭರವಸೆ ನೀಡಿದರು.
06:58 PM (IST) Oct 16
ಭಟ್ಕಳ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗುತ್ತಿದ್ದ ಮೊಹಮ್ಮದ್ ಎಂಬ ಯುವಕನಿಗೆ ಹಿಂಬದಿಯಿಂದ ಬಂದ ಕೇರಳ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕೆಳಬಿದ್ದ ಮೊಹಮ್ಮದ್ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪೊಲೀಸರಿಂದ ಚಾಲಕ ಬಂಧನ.
06:58 PM (IST) Oct 16
Trump Trolled for New Leader Every Year Comment Calls India Iran ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತದ ಬಗ್ಗೆ ನೀಡಿದ ಹೇಳಿಕೆಗಳು ಗೊಂದಲ ಸೃಷ್ಟಿಸಿವೆ. ಭಾರತವು ಪ್ರತಿ ವರ್ಷ ಹೊಸ ನಾಯಕನನ್ನು ಪಡೆಯುತ್ತದೆ ಎಂದು ಅವರು ಹೇಳಿದ್ದಾರೆ.
06:46 PM (IST) Oct 16
last WhatsApp message:ಯುವತಿಯೊಬ್ಬಳು ತಮ್ಮ ತಾಯಿಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಅಮ್ಮನಿಗೆ ತಾವು ಕಳುಹಿಸಿದ್ದ, ಕೊನೆಯ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಈ ಮನಕಲಕುವ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಆಕೆಗೆ ಸಾಂತ್ವನ ಹೇಳಿದ್ದಾರೆ.
06:38 PM (IST) Oct 16
ರಾಷ್ಟ್ರೀಯ ಸ್ವಯಂ ಸೇವಕರ ಸಂಘವು (RSS) ದೇಶದ ಸಂಪತ್ತು ಮತ್ತು ಬೆನ್ನೆಲುಬು ಎಂದು ಸಂಸದ ವಿ. ಸೋಮಣ್ಣ ಬಣ್ಣಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರಲ್ಲದೇ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂಥ ನಿರ್ಧಾರ ಎಂದು ಆರೋಪಿಸಿದರು.
06:29 PM (IST) Oct 16
ಬೆಂಗಳೂರಿನ ಮಂತ್ರಿ ಮಾಲ್ ಬಳಿಯ ರೈಲ್ವೆ ಹಳಿಯಲ್ಲಿ, ಪ್ರೀತಿ ನಿರಾಕರಿಸಿದ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಖಾರದಪುಡಿ ಎರಚಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.
06:25 PM (IST) Oct 16
ಡಿಜಿಟಲ್ ಲೇಬರ್ ಚೌಕ್ (DLC) ಎಂಬ ತಂತ್ರಜ್ಞಾನ ವೇದಿಕೆಯು ನಿರ್ಮಾಣ ಕಾರ್ಮಿಕರನ್ನು ನೇರವಾಗಿ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ, ಇದರಿಂದಾಗಿ ಬೀದಿ ಬದಿಯಲ್ಲಿ ಕೆಲಸಕ್ಕಾಗಿ ಕಾಯುವ ಅನಿಶ್ಚಿತತೆಗೆ ಅಂತ್ಯ ಹಾಡಿದೆ. ಈ ವೇದಿಕೆಯು ಕಾರ್ಮಿಕರಿಗೆ ಭದ್ರವಾದ ಉದ್ಯೋಗ, ಪಿಎಫ್ ಸೌಲಭ್ಯಗಳನ್ನು ಒದಗಿಸುತ್ತಿದೆ.
06:03 PM (IST) Oct 16
Chamarajanagar youth suicide news ಚಾಮರಾಜನಗರ ತಾಲೂಕಿನ ಯುವಕನೊಬ್ಬ ತನ್ನ ಸ್ನೇಹಿತನ ಪ್ರೇಮಕ್ಕೆ ಬೆಂಬಲ ನೀಡಿದ್ದನು. ಈ ವಿಚಾರ ಸ್ನೇಹಿತನ ತಂದೆಯಿಂದ ಬೆದರಿಕೆಗೆ, ಮನನೊಂದು ಕೆರೆಗೆ ಹಾರಿ ಆತ್ಮ೧ಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
05:56 PM (IST) Oct 16
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ 12ರ ಮನೆಯೊಳಗಿರುವ ಸ್ಪರ್ಧಿಗಳ ಶೈಕ್ಷಣಿಕ ಅರ್ಹತೆ ಏನು ಎಂಬುದು ಇಲ್ಲಿದೆ ನೋಡಿ. ಡಿಗ್ರಿ, ಇಂಜಿನಿಯರ್, ಟೀಚರ್‌ನಿಂದ ಏನೂ ವಿದ್ಯಾಭ್ಯಾಸ ಇಲ್ಲದ ಗೃಹಿಣಿವರೆಗಿನ ಎಲ್ಲ ನವ ದುರ್ಗೆಯರ ಮಾಹಿತಿ ಇಲ್ಲಿದೆ ನೋಡಿ…
05:45 PM (IST) Oct 16
RGUHS UK hospital collaboration: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (RGUHS) ಇಂಗ್ಲೆಂಡ್‌ನ GTEC-WWL ಟೀಚಿಂಗ್ ಹಾಸ್ಪಿಟಲ್ಸ್ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ಯಾವ ರೀತಿ ಸಹಾಕವಾಗಲಿದೆ ಎಂಬುದು ತಿಳಿಯಿರಿ
05:16 PM (IST) Oct 16
Ashwath Narayan on Congress government : ಆರೆಸ್ಸೆಸ್ ಮೇಲೆ ನಿರ್ಬಂಧ ಹೇರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಡಾ. ಅಶ್ವತ್ಥ ನಾರಾಯಣ ತೀವ್ರವಾಗಿ ಖಂಡಿಸಿದ್ದಾರೆ. ಇದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಅಧಿಕಾರ ದುರ್ಬಳಕೆ ಎಂದ ಅವರು, ಆದೇಶ ಹಿಂಪಡೆಯದಿದ್ದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ
04:56 PM (IST) Oct 16
ಭಾರತೀಯ ರಿಸರ್ವ್ ಬ್ಯಾಂಕ್, ಸಾವರಿನ್ ಗೋಲ್ಡ್ ಬಾಂಡ್ 2017-18 ಸರಣಿ IIIರ ರಿಡೆಂಪ್ಶನ್ ಬೆಲೆಯನ್ನು ಪ್ರತಿ ಗ್ರಾಂಗೆ ₹12,567 ಎಂದು ನಿಗದಿಪಡಿಸಿದೆ. ಇದು ವಿತರಣೆ ಬೆಲೆಗಿಂತ 338% ಹೆಚ್ಚಾಗಿದ್ದು, ಹೂಡಿಕೆದಾರರಿಗೆ ಬೃಹತ್ ಬಂಡವಾಳ ಲಾಭ ಮತ್ತು ವಾರ್ಷಿಕ 2.5% ಬಡ್ಡಿಯನ್ನು ನೀಡಿದೆ.
04:10 PM (IST) Oct 16
ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಕ್ಕೆ ಸಂಪುಟ ಸಭೆಯಲ್ಲಿ ಅಂಕುಶ ಹಾಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಎಲ್ಲ ಸಂಘಗಳ ಕಾರ್ಯಕ್ರಮಗಳಿಗೂ ಕಡಿವಾಣ ಹಾಕಲು ನಿರ್ಧರಿಸಿದೆ. ಆ ಮೂಲಕ RSS ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಂಪುಟ ಸಭೆ ನಿರ್ಧರಿಸಿದೆ.
02:37 PM (IST) Oct 16
ಭಾರತದ ನಿರುದ್ಯೋಗ ದರವು ಶೇ. 5.2ಕ್ಕೆ ಏರಿಕೆಯಾಗಿದ್ದು, ಇದಕ್ಕೆ ಗ್ರಾಮೀಣ ಪ್ರದೇಶಗಳ ಹಿನ್ನಡೆ ಪ್ರಮುಖ ಕಾರಣವಾಗಿದೆ. ಮಹಿಳೆಯರ ನಿರುದ್ಯೋಗ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿದ್ದರೂ, ಕಾರ್ಮಿಕ ಬಲದ ಭಾಗವಹಿಸುವಿಕೆ ದರ, ವಿಶೇಷವಾಗಿ ಮಹಿಳೆಯರಲ್ಲಿ, ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ.
02:29 PM (IST) Oct 16
ಸರ್ಕಾರಿ ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ್ದ ದಿನೇಶ್ ನರೋನೆ ಎಂಬ ಆರೋಪಿಯನ್ನು ಬೆಂಗಳೂರು ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.
02:12 PM (IST) Oct 16
ಸಚಿವ ಪ್ರಿಯಾಂಕ್ ಖರ್ಗೆಯವರು, ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಗಳನ್ನು ಉಲ್ಲಂಘಿಸಿದರೆ ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
01:46 PM (IST) Oct 16
ಟಾಲಿವುಡ್‌ನ ಮೊದಲ ಸಿಕ್ಸ್ ಪ್ಯಾಕ್ ಹೀರೋ ಯಾರು ಅಂದ್ರೆ ತಕ್ಷಣ ಅಲ್ಲು ಅರ್ಜುನ್ ಹೆಸರು ಕೇಳಿಬರುತ್ತೆ. ಆದ್ರೆ ಬನ್ನಿಗಿಂತ ಮುಂಚೆಯೇ ಒಬ್ಬ ತೆಲುಗು ಹೀರೋ ಸಿಕ್ಸ್ ಪ್ಯಾಕ್ ಮಾಡಿದ್ದು ನಿಮಗೆ ಗೊತ್ತಾ? ಆ ಹೀರೋ ಯಾರು ಅಂತ ತಿಳಿದರೆ ನಿಜಕ್ಕೂ ಬೆರಗಾಗ್ತೀರಾ?