- Home
- Entertainment
- TV Talk
- BBK 12 ಗೆದ್ದೇ ಗೆಲ್ತೀನಿ ಎಂದು, ಫಿನಾಲೆಗೂ ಮುನ್ನ ಬೆಳಗಿನ ಜಾವವೇ ಮನೆಯಿಂದ ಹೊರಬಿದ್ದ ಸ್ಪರ್ಧಿ ಯಾರು?
BBK 12 ಗೆದ್ದೇ ಗೆಲ್ತೀನಿ ಎಂದು, ಫಿನಾಲೆಗೂ ಮುನ್ನ ಬೆಳಗಿನ ಜಾವವೇ ಮನೆಯಿಂದ ಹೊರಬಿದ್ದ ಸ್ಪರ್ಧಿ ಯಾರು?
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾಕ್ರೋಚ್ ಸುಧಿ ಅವರು ಫೈನಲಿಸ್ಟ್ ಆಗಿದ್ದಾರೆ. ಉಳಿದಂತೆ ಎಲ್ಲರೂ ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದರು.

ಮೂರನೇ ವಾರಕ್ಕೆ ಫಿನಾಲೆ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಿ ಮೂರನೇ ವಾರಕ್ಕೆ ಫಿನಾಲೆ ಇದೆ. ಅಲ್ಲಿ ದೊಡ್ಡ ಮಟ್ಟದಲ್ಲಿ ಎಲಿಮಿನೇಶನ್ ಆಗಲಿದೆ. ದೊಡ್ಡ ಎಲಿಮಿನೇಶನ್ ಆಗಿರೋದಿಕ್ಕೆ ರಿಪ್ಲೇಸ್ ಮಾಡೋದಿಕ್ಕೆ ಒಂದು ಬ್ಯಾಚ್ ಕೂಡ ರೆಡಿ ಇದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು.
ಮಿಡ್ ವೀಕ್ ಎಲಿಮಿನೇಶನ್
ವೀಕೆಂಡ್‌ನಲ್ಲಿ ಎಲಿಮಿನೇಶನ್ ಆಗಲಿದೆ. ಅದಕ್ಕೂ ಮುನ್ನ ಮಿಡ್ ವೀಕ್ ಎಲಿಮಿನೇಶನ್ ಆಗಲೂಬಹುದು ಎನ್ನಲಾಗಿತ್ತು. ಮೊದಲೇ ಬಿಗ್ ಬಾಸ್ ಈ ವಿಚಾರವನ್ನು ಹೇಳಿದ್ದರು. ಈಗ ಸತೀಶ್ ಅವರು ಔಟ್ ಆಗಿದ್ದಾರೆ.
ವಿಶ್ವದಾದ್ಯಂತ ನ್ಯೂಸ್ ಆಗತ್ತೆ
ನಾನು ಬಿಗ್ ಬಾಸ್ ಶೋ ಗೆಲ್ತೀನಿ, ನಾನು ಬಿಗ್ ಬಾಸ್ ಶೋಗೆ ಬಂದರೆ ಇಡೀ ವಿಶ್ವದಾದ್ಯಂತ ನ್ಯೂಸ್ ಆಗತ್ತೆ, ನಾನು ಮೊದಲೇ ಹೇಳಿಕೊಂಡಿದ್ದೆ ಎಂದು ಸತೀಶ್ ಅವರು ದೊಡ್ಮನೆಯಲ್ಲಿದ್ದಾಲೇ ಹೇಳಿಕೊಂಡಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗೆಲ್ಲೋದು ನಾನೇ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗೆಲ್ಲೋದು ನಾನೇ, ಇದನ್ನು ಮೊದಲು ಹೇಳಿಕೊಂಡು ಗೆಲ್ಲದೆ ಇದ್ದರೆ ಮುಜುಗರ ಆಗುತ್ತದೆ ಎಂದು ಸುಮ್ಮನೆ ಇದ್ದೆ ಎಂದು ಸತೀಶ್ ಅವರು ಹೇಳಿದ್ದರು. ಈಗ ಅವರು ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ.
ನೂರು ಕೋಟಿ ರೂಪಾಯಿ ನಾಯಿ ಇದೆ
ನನ್ನ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆ, ನಾನು ನಾಯಿ ಬ್ಯುಸಿನೆಸ್ ಮಾಡ್ತೀನಿ ಎಂದೆಲ್ಲ ಸತೀಶ್ ಅವರು ಹೇಳಿದ್ದರು. ಇದನ್ನು ಆರ್ ಜೆ ಅಮಿತ್ ಅವರು, “ಫುಲ್ ಡವ್ ಮಾಡ್ತಾನೆ” ಎಂದು ಆರೋಪ ಮಾಡಿದ್ದರು.