Wife Shocked by Husbands Sextortion Videos ಬೆಂಗಳೂರಿನಲ್ಲಿ 20 ವರ್ಷಗಳ ದಾಂಪತ್ಯ ನಡೆಸುತ್ತಿದ್ದವನ ರಾಸಲೀಲೆ ಬಯಲಾಗಿದೆ. ಪತ್ನಿ ಅನ್ನಪೂರ್ಣ, ಆಕಸ್ಮಿಕವಾಗಿ ಪತಿಯ ಮೊಬೈಲ್‌ನಲ್ಲಿ ಪರಸ್ತ್ರೀಯರೊಂದಿಗಿನ ಖಾಸಗಿ ವಿಡಿಯೋಗಳನ್ನು ಕಂಡಿದ್ದಾರೆ.

ಬೆಂಗಳೂರು (ಅ.16): ರಾಜಧಾನಿ ಬೆಂಗಳೂರಿನಲ್ಲಿ ಇಪ್ಪತ್ತು ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ಪತಿಯ ರಾಸಲೀಲೆ ಬಯಲಾಗಿದೆ. ಪತ್ನಿಯಿಂದ ಅಂತರ ಕಾಯ್ದುಕೊಂಡು, ಐದಾರು ಪರಸ್ತ್ರೀಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತಿಯೊಬ್ಬರ ವಿಡಿಯೋ ಸಿಕ್ಕಿದ್ದು, ಸಾಕ್ಷಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಲೇರಿದ್ದು, ವ್ಯಕ್ತಿಯ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

ಪತ್ನಿಯಿಂದ ದೂರ ಉಳಿದು ಲವ್ವಿಡವ್ವಿ

ಇಂದಿರಾನಗರದ ಬಿಎಂ ಕಾವಲ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು ಈ ಭೂಪ. ತಾನು ರಾಷ್ಟ್ರೀಯ ಪಕ್ಷವೊಂದರ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡು, ಹಲವು ರಾಜಕೀಯ ನಾಯಕರು ಆತ್ಮೀಯರೆಂದು ಬಿಲ್ಡಪ್ ನೀಡುತ್ತಿದ್ದ. ಈ ಬಿಲ್ಡಪ್‌ನಿಂದ ಆತ ಐದಾರು ಮಹಿಳೆಯರೊಂದಿಗೆ ಅನೈತಿಕ ಸಂಬಂಧವನ್ನೂ ಬೆಳೆಸಿದ್ದು. 

ಪಲ್ಲಂಗದಾಟದ ವಿಡಿಯೋಗಳು ಪತ್ನಿ ಕೈಗೆ

ವಿಪರ್ಯಾಸವೆಂದರೆ, ಈತ ಪರಸ್ತ್ರೀಯರೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋಗಳು ಮತ್ತು ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದ. ಆಕಸ್ಮಿಕವಾಗಿ ಪತಿಯ ಮೊಬೈಲ್ ನೋಡಿದ ಪತ್ನಿಗೆ ಈ ರಾಸಲೀಲೆ ವಿಡಿಯೋಗಳು ಸಿಕ್ಕಿದ್ದು, ಅದನ್ನು ನೋಡಿ ಆಕೆ ತೀವ್ರ ಆಘಾತಕ್ಕೊಳಗಾಗಿದ್ದಾಳೆ.

ಪತ್ನಿ ಈ ಬಗ್ಗೆ ಪ್ರಶ್ನಿಸಿದಾಗ, ಪತಿ ಆಕೆಯ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕಿದ್ದಾನೆಂದು ಮಡದಿ ಅಳಲು ತೋಡಿಕೊಂಡಿದ್ದಾರೆ. ಕೊನೆಗೆ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿರುವ ಮಹಿಳೆ, ಪತಿಯ ವಿರುದ್ಧ ಪೂರ್ವ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.