ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಬಹು ಚರ್ಚಿತವಾಗಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಅರ್‌ಎಸ್‌ಎಸ್ ಪಥಸಂಚಲನವು ಹೈಕೋರ್ಟ್ ಅನುಮತಿಯೊಂದಿಗೆ ನ.16ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನಡೆಯಲಿದೆ. ಇದಕ್ಕಾಗಿ ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕಲ್ಪಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಆಯೋಜಿಸಲಾಗಿದೆ.

11:47 PM (IST) Nov 16
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ, ಹಣ ಪಡೆಯಲು ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಸಾಮೂಹಿಕ ಅತ್ಯಾ೧ಚಾರ ಎಸಗಿದ್ದಾರೆ. ಈ ಘೋರ ಕೃತ್ಯದಿಂದ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಲಬುರ್ಗಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
11:08 PM (IST) Nov 16
ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು, ಚನ್ನರಾಯಪಟ್ಣಣ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳಕ್ಕೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ದೌಡಾಯಿಸಿದ್ದಾರೆ.
11:03 PM (IST) Nov 16
10:33 PM (IST) Nov 16
ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ನಿಗೂಢ ಸಾವಿನ ಸರಣಿ ಮುಂದುವರಿದಿದ್ದು, ಒಟ್ಟು 30 ಪ್ರಾಣಿಗಳು ಮೃತಪಟ್ಟಿವೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ, ಉಳಿದ 8 ಕೃಷ್ಣಮೃಗಗಳ ಮೇಲೆ ತಜ್ಞ ವೈದ್ಯರು ನಿಗಾ ಇರಿಸಿದ್ದಾರೆ.
08:53 PM (IST) Nov 16
ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್, ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು 'ಬ್ರಿಟಿಷರ ಏಜೆಂಟ್' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಬಿರ್ಸಾ ಮುಂಡಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ್ದಾರೆ.
08:14 PM (IST) Nov 16
Akon viral video Bengaluru: ಅಮೆರಿಕದ ಗಾಯಕ ಅಕಾನ್ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ ಮುಜುಗರದ ಘಟನೆಯೊಂದು ನಡೆದಿದೆ. ವೇದಿಕೆಯಲ್ಲಿ ಹಾಡುತ್ತಿದ್ದ ಅಕಾನ್‌ರ ಪ್ಯಾಂಟ್ ಅನ್ನು ಅಭಿಮಾನಿಗಳು ಎಳೆದಿದ್ದು, ಈ ವಿಡಿಯೋ ವೈರಲ್ ಆಗಿ ಬೆಂಗಳೂರಿನ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
07:29 PM (IST) Nov 16
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ, ರಾತ್ರೋರಾತ್ರಿ ಕೋಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಆರೋಪಿಗಳನ್ನು ಬಂಧಿಸಿ ವಾಹನ ಹಾಗೂ ಕೋಣವನ್ನು ವಶಪಡಿಸಿಕೊಳ್ಳಲಾಗಿದೆ.
07:05 PM (IST) Nov 16
07:01 PM (IST) Nov 16
06:10 PM (IST) Nov 16
ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಕೃಷ್ಣಾ ಜೋಷಿ, ಸಂಘದ ನೂರರ ಸಂಭ್ರಮದ ಹಿನ್ನೆಲೆಯಲ್ಲಿ ಅದರ ಸಾಧನೆ ವಿವರಿಸಿದರು. ಅಸಂಘಟಿತ ಹಿಂದೂಗಳನ್ನು ಒಗ್ಗೂಡಿಸುವುದು ದೇಶ ವಿರೋಧಿ ಶಕ್ತಿಗಳನ್ನು ವಿರೋಧಿಸುವುದೇ ಸಂಘದ ಗುರಿ ಎಂದು ಅವರು ಪ್ರತಿಪಾದಿಸಿದರು.
06:03 PM (IST) Nov 16
05:31 PM (IST) Nov 16
ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಗೌತಮ್ ಪರವಾಗಿ ಭೂಮಿಕಾ ವಠಾರದವರ ವಿರುದ್ಧ ರೊಚ್ಚಿಗೆದ್ದಿದ್ದಳು. ಆದರೆ, ವೈರಲ್ ಆದ ವಿಡಿಯೋವೊಂದರಲ್ಲಿ, ಗೌತಮ್ ವಿರುದ್ಧ ಹೇಗೆ ಮಾತನಾಡಬೇಕೆಂದು ಭೂಮಿಕಾ ಅವರೇ ಹೇಳಿಕೊಡುತ್ತಿರುವ ದೃಶ್ಯವಿದೆ. ಇದೇನಿದು ಟ್ವಿಸ್ಟ್?
05:27 PM (IST) Nov 16
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಕೀಲರ ಒಕ್ಕೂಟವು ಗ್ರಾಮೀಣ ಸೊಗಡಿನ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಆಯೋಜಿಸಿತ್ತು. ಪುರುಷರ ವಿಭಾಗದಲ್ಲಿ 12 ಮುದ್ದೆ ತಿಂದು ಅಜಯ್ ಕುಮಾರ್ ಟಗರು ಬಹುಮಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ 10 ಮುದ್ದೆ ಸೇವಿಸಿದ ಸೌಮ್ಯ ವಿಜೇತರಾದರು.
05:00 PM (IST) Nov 16
04:57 PM (IST) Nov 16
04:21 PM (IST) Nov 16
ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರ ವಿರುದ್ಧ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಕ್ಷಿತಾ ಅವರಂತಹ ಸ್ಪರ್ಧಿಗಳ ಮೇಲೆ ಕಠಿಣವಾಗಿ ನಡೆದುಕೊಳ್ಳುವ ಸುದೀಪ್, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ವಿಷಯದಲ್ಲಿ ಮೃದು ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
03:32 PM (IST) Nov 16
ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಲ್ವರು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ರಿಷಾ ಗೌಡ, ರಘು, ಕಾಕ್ರೋಚ್ ಸುಧಿ ಮತ್ತು ಜಾನ್ವಿ ಮುಖ್ಯದ್ವಾರದ ಬಳಿ ನಿಂತಿದ್ದು, ವಿಶೇಷ ಪ್ರಕ್ರಿಯೆಯ ಮೂಲಕ ಒಬ್ಬರು ಮನೆಯಿಂದ ಹೊರನಡೆಯಲಿದ್ದಾರೆ.
02:51 PM (IST) Nov 16
ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಮತ್ತೆ ಅಡೆ ತಡೆ, ಸಂಘ ಸದಸ್ಯನ ತಡೆದ ಪೊಲೀಸ್ , ಬ್ಯಾಂಡ್ ವಾದಕನನ್ನು ಪೊಲೀಸರು ತಡೆದಿದ್ದಾರೆ. ವಾಹನದಿಂದ ಇಳಿಸಿದ್ದಾರೆ. ಆರ್‌ಎಸ್ಎಸ್ ಮನವರಿಕೆ ಮಾಡುವ ಪ್ರಯತ್ನ ಮಾಡಿದರೂ ಪೊಲೀಸರು ನಿರಾಕರಿಸಿದ್ದಾರೆ.
02:38 PM (IST) Nov 16
01:58 PM (IST) Nov 16
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ದೊಂಗ ಮೊಗುಡು' ಸಿನಿಮಾದ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಈ ಚಿತ್ರಕ್ಕೆ ಸ್ಪರ್ಧಿಯಾಗಿ ಬಂದ ಬಾಲಯ್ಯ, ವಿಜಯಶಾಂತಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತು.
01:55 PM (IST) Nov 16
Actress viral Instagram story: ನಟಿಗೆ ಕಿರುಕುಳ ನೀಡಿದ ಆರೋಪದಲ್ಲಿ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಯವರನ್ನು ಗೋವಿಂದರಾಜನಗರ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡವು ಬಂಧಿಸಿತ್ತು. ಅವರಿಗೆ ಈಗ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ನಟಿಯ ಇನ್‌ಸ್ಟಾ ಪೋಸ್ಟ್ ವೈರಲ್ ಆಗಿದೆ.
01:50 PM (IST) Nov 16
01:27 PM (IST) Nov 16
ಬಾಹುಬಲಿ ನಂತರ ಸ್ವಲ್ಪ ಕಾಲ ಕಷ್ಟದ ಪರಿಸ್ಥಿತಿ ಎದುರಿಸಿದ್ದ ಪ್ರಭಾಸ್.. ಈಗೀಗ ಸತತ ಹಿಟ್‌ಗಳೊಂದಿಗೆ.. ಮತ್ತೆ ಒಳ್ಳೆ ಫಾರ್ಮ್‌ಗೆ ಬಂದಿದ್ದಾರೆ. ಈ ಸಮಯದಲ್ಲಿ ಯಂಗ್ ರೆಬೆಲ್ ಸ್ಟಾರ್ ಮತ್ತೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗುತ್ತಿದ್ದಾರಂತೆ.
01:23 PM (IST) Nov 16
ಡಾನ್ಸ್ ಕರ್ನಾಟಕ ಡಾನ್ಸ್ನ ಹೊಸ ಸೀಸನ್ನಲ್ಲಿ 'ಕರ್ಣ' ಧಾರಾವಾಹಿ ಖ್ಯಾತಿಯ ಭವ್ಯ ಗೌಡ ಭಾಗವಹಿಸಿದ್ದಾರೆ. 'ಸಾಲುತಿಲ್ಲವೇ' ಹಾಡಿಗೆ ಚಿಟ್ಟೆಯಂತೆ ನೃತ್ಯ ಮಾಡಿದ ಇವರ ಪ್ರದರ್ಶನಕ್ಕೆ ತೀರ್ಪುಗಾರರಾದ ಶಿವರಾಜ್ ಕುಮಾರ್ ಎದ್ದು ನಿಂತು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
12:53 PM (IST) Nov 16
ಬಿಹಾರ ಚುನಾವಣೆಯಲ್ಲಿ ಬಿಜೆಪಿಯು ಸರ್ಕಾರದ ದುಡ್ಡಿನಲ್ಲಿ ಮತ ಖರೀದಿ ಮಾಡಿದೆ. ಚುನಾವಣೆ ಘೋಷಣೆಯಾಗಲು 4 ದಿನ ಇದ್ದಾಗ ತಲಾ 10 ಸಾವಿರ ರು. ಹಣವನ್ನು ಮಹಿಳೆಯರ ಅಕೌಂಟ್‌ಗೆ ಹಾಕಿದ್ದಾರೆ.
12:50 PM (IST) Nov 16
ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ನಟ ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಕಾವ್ಯಾ ಜೊತೆ ಫಿನಾಲೆಯಲ್ಲಿ ತಾವೇ ವಿನ್ನರ್ ಆಗುವ ಕನಸು ಕಂಡಿದ್ದು, ನಿರೂಪಕ ಸುದೀಪ್ ಅವರನ್ನೂ ನಕಲು ಮಾಡಿ ಗಮನ ಸೆಳೆದಿದ್ದಾರೆ. ಅವರ ಆತ್ಮವಿಶ್ವಾಸವು ಮನೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
12:32 PM (IST) Nov 16
ನಟಿ ಸಿಮ್ರಾನ್ ಬಾಲಿವುಡ್ ಸಿನಿಮಾಗಳ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು, ನಂತರ ಟಾಲಿವುಡ್‌ಗೆ ಕಾಲಿಟ್ಟರು. ಆದರೆ ಅವರು ಮೊದಲು ಮಾಡಿದ್ದು ಆಂಕರಿಂಗ್. ಆ ಸಮಯದಲ್ಲಿ ಸಿಮ್ರಾನ್ ಸಂಭಾವನೆ ಎಷ್ಟಿತ್ತು ಗೊತ್ತಾ?
12:06 PM (IST) Nov 16
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಹಾಸ್ಯ ಪ್ರವೃತ್ತಿಯಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ, ನಿರೂಪಕ ಸುದೀಪ್ ಅವರ ಕೋರಿಕೆಯ ಮೇರೆಗೆ, ಅವರ ಮುಂದೆಯೇ ಅವರನ್ನು ನಕಲು ಮಾಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.
11:52 AM (IST) Nov 16
ಯಾರೋ ಬರೆದಿರುವ ಪುಸ್ತಕಕ್ಕೆ ತಮ್ಮ ಭಾವಚಿತ್ರ ಹಾಕಿಕೊಂಡು ಬಿಡುಗಡೆಗೊಳಿಸಿರುವುದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
11:38 AM (IST) Nov 16
ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾಗಾಗಿ ಫ್ಯಾನ್ಸ್ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದಾರೆ. ಈ ಸಿನಿಮಾಗಿಂತ ಮೊದಲು ಮಹೇಶ್ ಬಾಬು - ಪ್ರಿಯಾಂಕಾ ಚೋಪ್ರಾ ಕಾಂಬಿನೇಷನ್‌ನಲ್ಲಿ ಮಿಸ್ ಆದ ಸಿನಿಮಾದ ಬಗ್ಗೆ ನಿಮಗೆ ಗೊತ್ತಾ?
11:31 AM (IST) Nov 16
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯು ಕೇಂದ್ರ ಸಚಿವಾಲಯದ 'ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ದೇಶದ 78 ಠಾಣೆಗಳ ಪರಿಶೀಲನೆ ನಂತರ, ಜನಸ್ನೇಹಿ ಮತ್ತು ಸಿಬ್ಬಂದಿ ಸ್ನೇಹಿ ಗುಣಗಳಿಗಾಗಿ ಇದು ದೇಶದ ಮೂರು ಅತ್ಯುತ್ತಮ ಠಾಣೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
11:06 AM (IST) Nov 16
ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.
10:47 AM (IST) Nov 16
Mysuru lecturer harassment case: ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಅಂಕ ಹಾಗೂ ಒಳ್ಳೆಯ ಕೆಲಸದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಪನ್ಯಾಸಕ ಭರತ್ ಭಾರ್ಗವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
10:41 AM (IST) Nov 16
‘ನಾನು ಸೂರ್ಯೋದಯಕ್ಕೂ ಮುನ್ನವೇ ಪ್ರಾಣ ಬಿಡುತ್ತೇನೆ. ನೀವು ನನಗೆ ಕೇಳಿದ್ದು ಕೊಡಲಿಲ್ಲ. ಏನ್ಮಾಡ್ತೀನಿ ನೋಡಿ’ ಹೀಗೆ ಬೆದರಿಸಿ ಸೆಲ್‌ನಲ್ಲಿ ಕುಳಿತ ಕೈದಿಯನ್ನು ಇಡೀ ರಾತ್ರಿ ನಿದ್ದೆಯಿಲ್ಲದೆ ಮಹಿಳಾ ಅಧಿಕಾರಿ ಕಾದರು.
10:28 AM (IST) Nov 16
ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಸೀಮಿತಗೊಂಡಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
10:12 AM (IST) Nov 16
ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜೆಡಿಎಸ್ ಶಾಸಕ ಹೆಚ್.ಟಿ.ಮಂಜು ತಮ್ಮ ವಿರುದ್ಧ ಕೇಳಿಬಂದ 3 ಕೋಟಿ ರೂ. ಲಂಚದ ಆರೋಪದಿಂದ ಬೇಸತ್ತು ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
09:59 AM (IST) Nov 16
ಮನೆಯಲ್ಲಿದ್ದ ಸಾಯಿಬಾಬಾ ಫೋಟೋ ಮುಂದೆ ಮಹಿಳಾ ಪೇದೆಗೆ ತಾಳಿ ಕಟ್ಟಿ, ಲೈಂಗಿಕವಾಗಿ ಬಳಸಿಕೊಂಡ ನಂತರ ಆಕೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ಪತ್ನಿಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಿರಾಕರಿಸಿದ ಹಾಗೂ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯಿಸಿಕೊಳ್ಳುವ ಮೂಲಕ ವಂಚನೆ
09:54 AM (IST) Nov 16
ಗ್ಲೋಬ್‌ಟ್ರಾಟರ್ ಈವೆಂಟ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್, ರಾಜಮೌಳಿಯವರ ವಾರಣಾಸಿ ಸಿನಿಮಾ ಕಥೆ ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಐದು ನಿಮಿಷದಲ್ಲೇ ಶಾಕ್ ಆದೆ ಎಂದೂ ಹೇಳಿದ್ದಾರೆ. ಸಿನಿಮಾದಲ್ಲಿನ ತಮ್ಮ ವಿಲನ್ ಪಾತ್ರದ ಬಗ್ಗೆ ವಿಶೇಷ ಅನುಭವ ಹಂಚಿಕೊಂಡಿದ್ದಾರೆ.
09:39 AM (IST) Nov 16
ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ 10 ಸಾವಿರ ರು. ದಂಡ ವಿಧಿಸಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನ.11ರ ರಾತ್ರಿ ಪರಿಶೀಲನೆ ವೇಳೆ, ಅಶ್ವತ್ಥ ನಗರದಲ್ಲಿ ರಸ್ತೆ ಬದಿ ಪ್ಲಾಸ್ಟಿಕ್ ಸುಡುತ್ತಿರುವುದನ್ನು ಗಮನಿಸಿದ್ದರು.
09:26 AM (IST) Nov 16
ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ರಾಶಿಕಾ ನಡುವಿನ ಮನಸ್ತಾಪ ತಾರಕಕ್ಕೇರಿದೆ. ಪುರುಷ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ನಡೆದುಕೊಂಡ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡರು.