Akon viral video Bengaluru: ಅಮೆರಿಕದ ಗಾಯಕ ಅಕಾನ್ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ ಮುಜುಗರದ ಘಟನೆಯೊಂದು ನಡೆದಿದೆ. ವೇದಿಕೆಯಲ್ಲಿ ಹಾಡುತ್ತಿದ್ದ ಅಕಾನ್‌ರ ಪ್ಯಾಂಟ್ ಅನ್ನು ಅಭಿಮಾನಿಗಳು ಎಳೆದಿದ್ದು, ಈ ವಿಡಿಯೋ ವೈರಲ್ ಆಗಿ ಬೆಂಗಳೂರಿನ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಮೆರಿಕ ಮೂಲದ ಖ್ಯಾತ ಗಾಯಕ ಅಕಾನ್ (Akon) ಸದ್ಯ ಭಾರತದ ಪ್ರವಾಸದಲ್ಲಿದ್ದು, ವಿವಿಧ ನಗರದಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿಗೂ ಬಂದಿರುವ ಗಾಯಕ ಅಕಾನ್ ತೀವ್ರ ಮುಜುಗರಕ್ಕೀಡಾದ ಘಟನೆ ನಡೆದಿದೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವಾಗ ಕೆಳಗೆ ನಿಂತ ಅಭಿಮಾನಿಗಳು ಅಕಾನ್ ಅವರ ಪ್ಯಾಂಟ್ ಎಳೆದು ಹುಚ್ಚಾಟ ಮೆರೆದಿದ್ದಾರೆ. ಈ ಘಟನೆಯಿಂದಾಗಿ ಅಕಾನ್ ಅವರ ಬೆಂಗಳೂರಿನ ಸಂಗೀತ ಕಾರ್ಯಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಕಾನ್ 'ಸೆ ಕ್ಸಿ ಬಿಚ್' ಹಾಡುವಾಗ ಪ್ಯಾಂಟ್ ಎಳೆದ ಅಭಿಮಾನಿಗಳು:

ನವೆಂಬರ್ 14ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅಕಾನ್ ತಮ್ಮ ಹಿಟ್ ಹಾಡು 'ಸೆ ಕ್ಸಿ ಬಿಚ್' ಹಾಡುತ್ತಿರುವಾಗ ವಿಐಪಿ ವಿಭಾಗದ ಬಳಿ ಬ್ಯಾರಿಕೇಡ್ ಹತ್ತಿ ಹ್ಯಾಂಡ್‌ಶೇಕ್ ಮಾಡಲು ಹೋದ ವೇಳೆ ಮುಂದಿನ ಸಾಲಿನಲ್ಲಿದ್ದ ಅಭಿಮಾನಿಗಳು ವೇದಿಕೆಯ ಮೇಲೆ ನಿಂತಿದ್ದ ಅಕಾನ್‌ರ ಪ್ಯಾಂಟ್ ಅನ್ನು ಎಳೆದಿದ್ದಾರೆ. ಪದೇಪದೆ ಪ್ಯಾಂಟ್ ಎಳೆದಿರುವುದು ಈ ವೇಳೆ ಅಕಾನ್ ಸಂಯಮದಿಂದ ವರ್ತಿಸಿ ಹಾಡು ಮುಂದುವರಿಸಿರುವುದು ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅಭಿಮಾನಿಗಳ ಹುಚ್ಚಾಟದ ನಡುವೆಯೂ ಅಕಾನ್ ಕಾರ್ಯಕ್ರಮವನ್ನು ನಿಲ್ಲಿಸದೆ ಹಾಡುವುದನ್ನು ಮುಂದುವರೆಸಿದರು. ಅವರ ನಡೆವಳಿಕೆ ಬಗ್ಗೆ ನೆಟಿಜೆನ್ಸ್ ಶ್ಲಾಘಿಸಿದ್ದಾರೆ. ಇದೇ ವೇಳೆ ವಿಐಪಿ ವಿಭಾಗದಲ್ಲಿನ ಅಭಿಮಾನಿಗಳ ಹುಚ್ಚಾಟ ನಗರಕ್ಕೆ ಕಪ್ಪುಚುಕ್ಕೆ ತರುವಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕಾನ್ ಭಾರತ ಪ್ರವಾಸ: ಎಲ್ಲೆಲ್ಲಿ ಸಂಗೀತ ಕಾರ್ಯಕ್ರಮ?

ಅಕಾನ್ ಭಾರತ ಪ್ರವಾಸವನ್ನು ನವೆಂಬರ್ 9ರಂದು ದೆಹಲಿಗೆ ಬಂದಿಳಿಯುವುದರಿಂದ ಆರಂಭಿಸಿದ್ದರು. ಬೆಂಗಳೂರು ನಂತರ, ನವೆಂಬರ್ 16ರಂದು ಮುಂಬೈನಲ್ಲಿ ತಮ್ಮ ಪ್ರವಾಸದೊಂದಿಗೆ ಕಾರ್ಯಕ್ರಮ ಮುಗಿಸಲು ಸಜ್ಜಾಗಿದ್ದಾರೆ. ಬೆಂಗಳೂರು ಸಂಗೀತ ಕಾರ್ಯಕ್ರಮವು ಹೈ-ವೋಲ್ಟೇಜ್ ರಾತ್ರಿಯಾಗಬೇಕಿತ್ತು, ಆದರೆ ಈ ಘಟನೆಯು ವಿವಾದ ಸೃಷ್ಟಿಸಿದೆ.

Scroll to load tweet…

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್:

ಸೋಷಿಯಲ್ ಮೀಡಿಯಾಗಳ್ಲಲಿ ಈ ವೀಡಿಯೊ ವೈರಲ್ ಆಗಿದ್ದು, ಅಭಿಮಾನಿಗಳ ಹುಚ್ಚಾಟಕ್ಕೆ ತೀವ್ರವಾಗಿ ಟೀಕಿಸಲಾಗಿದೆ. ಬಳಕೆದಾರನೊಬ್ಬ ಇದು ದುಃಖಕರವಾದುದು, ವೇದಿಕೆಯಲ್ಲಿ ಅದು ನೇರಪ್ರಸಾರದಲ್ಲಿ ಅವರೊಂದಿಗೆ ಈ ರೀತಿ ವರ್ತಿಸಿರುವುದು ಸರಿಯಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಹೆಸರು ಹಾಳು ಮಾಡಿದೆ. ಅಕಾನ್ ಅಂತರರಾಷ್ಟ್ರೀಯ ಕಲಾವಿದರಾಗಿದ್ದು, ಬೆಂಗಳೂರಿನವರಿಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡಬೇಕು ಎಂದು ಭಾವನೆಯಿಂದ ಬಂದಿರುತ್ತಾರೆ. ಆದರೆ ಇಲ್ಲಿ ಅವರು ಕಿರುಕುಳ ಅನುಭವಿಸಿದ್ದಾರೆ ಎಂದರೆ; ಮತ್ತೊಬ್ಬರು: ಅಕಾನ್ ಇದನ್ನು ಸ್ವಲ್ಪ ಸಮಯದವರೆಗೆ ಮರೆಯಲು ಸಾಧ್ಯವಿಲ್ಲ. ಇಂತಹ ನಡವಳಿಕೆ ನಗರಕ್ಕೆ ಕಳಂಕ ಎಂದಿದ್ದಾರೆ. ಈ ಘಟನೆಯು ಅಭಿಮಾನಿಗಳ ನಡವಳಿಕೆಯ, ಕಲಾವಿದರ ಗೌರವ ಮತ್ತು ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.