ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ, ಹಣ ಪಡೆಯಲು ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಸಾಮೂಹಿಕ ಅತ್ಯಾ೧ಚಾರ ಎಸಗಿದ್ದಾರೆ. ಈ ಘೋರ ಕೃತ್ಯದಿಂದ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಲಬುರ್ಗಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಕೊಪ್ಪಳ, (ನ.16): ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರು ಸಾಮೂಹಿಕ ಅತ್ಯಾ೧ಚಾರ ನಡೆಸಿದ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ನಡೆದಿದೆ.
ಈ ಘಟನೆಯಿಂದ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ಸಂತ್ರಸ್ತ ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬೈಕ್‌ನಲ್ಲಿ ಕರೆದೊಯ್ದು ಮದ್ಯ ಕುಡಿಸಿ ಗ್ಯಾಂಗ್ ರೇ ಪ್!
ಪೊಲೀಸ್ ಮೂಲಗಳ ಪ್ರಕಾರ, ಪರಿಚಯದವರಿಂದ ಹಣ ಪಡೆಯಲು ಹೊಸಪೇಟೆಯಿಂದ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದ 39 ವರ್ಷದ ಮಹಿಳೆ. ಇಂದು ಸಂಜೆ ವೇಳೆ ನಾಲ್ವರು ಆರೋಪಿಗಳು ಮಹಿಳೆಯನ್ನ ಬೈಕ್ ಮೇಲೆ ಕರೆದೊಯ್ದಿದ್ದಾರೆ. ಮದ್ಲೂರ ಗ್ರಾಮದ ಬಳಿ ಗುಪ್ತ ಸ್ಥಳಕ್ಕೆ ಕರೆತಂದಿರುವ ಆರೋಪಿಗಳು. ಅಲ್ಲಿಯೇ ಸಂತ್ರಸ್ತೆಗೆ ಮದ್ಯ ಸೇವನೆ ಮಾಡಿಸಿ, ಬಳಿಕ ನಾಲ್ವರು ಗ್ಯಾಂಗ್ ರೇಪ್ ಕೃತ್ಯ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು:
ಸ್ಥಳಕ್ಕೆ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು. ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
