RSS route march Chittapur: ಚಿತ್ತಾಪೂರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಪಥ ಸಂಚಲನವು ಯಶಸ್ವಿಯಾಗಿ ಜರುಗಿತು. ಸುಮಾರು 300 ಗಣವೇಶಧಾರಿಗಳು ಹಾಗೂ ಘೋಷವಾದಕರ ಶಿಸ್ತುಬದ್ಧ ಸಂಚಲನಕ್ಕೆ, ಸಾವಿರಾರು ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ, ಜೈಘೋಷಗಳೊಂದಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು.

ಚಿತ್ತಾಪೂರ (ನ.16): ಅಡ್ಡಿ ಆತಂಕಗಳನ್ನೆಲ್ಲ ತೊಡೆದುಹಾಕಿ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಾರ್ಷಿಕ ಪಥ ಸಂಚಲನಕ್ಕೆ ಚಿತ್ತಾಪೂರ ನಗರ ಇಂದು ಸಜ್ಜುಗೊಂಡಿದೆ. ಬಜಾರ್ ಕಲ್ಯಾಣ ಮಂಟಪದಿಂದ RSS ಪಥ ಸಂಚಲನ ಆರಂಭವಾಗಿದೆ. ಪಥ ಸಂಚಲನದಲ್ಲಿ ಸುಮಾರು 300 ಮಂದಿ ಗಣವೇಶಧಾರಿಗಳು ಕೈಯಲ್ಲಿ ಲಾಠಿಗಳನ್ನು ಹಿಡಿದು ಶಿಸ್ತುಬದ್ಧರಾಗಿ ಪಥಸಂಚಲನ ಹೊರಟರು. ಇದರ ಜೊತೆಗೆ 50ಕ್ಕೂ ಹೆಚ್ಚು ಘೋಷವಾದಕರು ಜೈಘೋಷಗಳೊಂದಿಗೆ ಪಥಸಂಚಲನಕ್ಕೆ ಇನ್ನಷ್ಟು ಮೆರುಗು ತುಂಬಿದರು.

ಪಥ ಸಂಚಲದ ಹಿನ್ನಲೆ ಗಣವೇಶ ತೊಟ್ಟು ಆಗಮಿಸಿದ ಪುಟ್ಟ ಪುಟ್ಟ ಮಕ್ಕಳು. ಕೆಲವು ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ, ಗಣವೇಷಧಾರಿಗಳ ವೇಷ ತೊಟ್ಟು ಆಗಮಿಸಿ ವಿಶೇಷ ಭಾವನಾತ್ಮಕ ಮೆರುಗು ನೀಡಿತು.

ಮೊಳಗಿದ ಸಮಸ್ತೇ ಸದಾ ವತ್ಸಲೇ..

ಆರೆಸ್ಸೆಸ್ ಕಾರ್ಯಕರ್ತರು ಭಾಗವಾ ಧ್ವಜ ನೆಟ್ಟು, ಆರೆಸ್ಸೆಸ್ ಗೀತೆ ನಮಸ್ತೇ ಸದಾ ವತ್ಸಲೇ.. ಗೀತೆ ಹೇಳಿ ಭಾರತ್ ಮಾತಾ ಕೀ ಜೈ ಎನ್ನುತ್ತಾ ಜಯಘೋಷ ಮೊಳಗಿಸಿ ಪಥ ಸಂಚಲನ ಆರಂಬಿಸಿದರೆ ಇತ್ತ ಆರೆಸ್ಸೆಸ್ ಪಥ ಸಂಚನಲ ಶುರುವಾಗುತ್ತಿದ್ದಂತೆ ಇನ್ನೊಂದೆಡೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಭಾರತ್ ಮಾತಾ ಕೀ ಜೈ ಎನ್ನುತ್ತಾ ಜಯಘೋಷ ಹೇಳಿ ಗಣವೇಷಧಾರಿಗಳಿಗೆ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿದರು.. ಇಂದು ಚಿತ್ತಾಪುರದಲ್ಲಿ ನಡೆಯುತ್ತಿರುವ ಪಥಸಂಚಲನಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಯಿತು.

ಅರ್ಧ ಗಂಟೆಯಲ್ಲಿ ಪಥಸಂಚಲನ ಸಮಾಪ್ತಿ:

ಭಾರೀ ಭದ್ರತೆ ಏರ್ಪಡಿಸಲಾಗಿದ್ದ ಆರೆಸ್ಸೆಸ್ ಪಥಸಂಚಲನ ಕೇವಲ ಅರ್ಧ ತಾಸಿನೊಳಗೆ ಶಾಂತಿಯುತವಾಗಿ ಮುಗಿಯಿತು. ಎಲ್ಲಿಯೂ ಗೌಜು ಗದ್ದಲವಿರಲಿಲ್ಲ. ಎಲ್ಲೆಡೆ ದೇಶಭಕ್ತಿಯ ಘೋಷಣೆ ಕೇಳಿಬಂದಿತು. ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಬೆಂಬಲ ವ್ಯಕ್ತಪಡಿಸಿದರು. ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಮರಳಿ ಬಜಾಜ್ ಕಲ್ಯಾಣ ಮಂಟಪಕ್ಕೆ ಆಗಮಿಸುವ ಮೂಲಕ ಸಮಾಪ್ತಿಗೊಳಿಸಿತು. ಪಥ ಸಂಚಲನ ನೋಡಲು, ಬೆಂಬಲಿಸಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದರು.