- Home
- Entertainment
- TV Talk
- ಪುರುಷ ಸ್ಪರ್ಧಿ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲ
ಪುರುಷ ಸ್ಪರ್ಧಿ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲ
ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ರಾಶಿಕಾ ನಡುವಿನ ಮನಸ್ತಾಪ ತಾರಕಕ್ಕೇರಿದೆ. ಪುರುಷ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ನಡೆದುಕೊಂಡ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡರು.

ಸುದೀಪ್ ಕೆಂಡಾಮಂಡಲ
ಧ್ರುವಂತ್ ಮತ್ತು ರಾಶಿಕಾ ನಡುವಿನ ಮನಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು. ಈ ವೇಳೆ ಪುರುಷ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಧಕ್ಕೆಯುಂಟಾಗುವಂತೆ ನಡೆದುಕೊಂಡ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲರಾದರು.
ಧ್ರುವಂತ್ ಹೇಳಿದ್ದ ಹೇಳಿಕೆ
ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಹೇಳಿದ್ದ ಹೇಳಿಕೆ ಈ ವಾರ ಹೆಚ್ಚು ಸಂಚಲನ ಸೃಷ್ಟಿಸಿತ್ತು. ನೋಡುಗರಿಗೆ ಈ ಹೇಳಿಕೆ ರಾಶಿಕಾ ಶೆಟ್ಟಿಯವರ ವ್ಯಕ್ತಿತ್ವದ ಬಗ್ಗೆ ಒಂದು ಅಭಿಪ್ರಾಯವನ್ನು ನೀಡಿತ್ತು. ಧ್ರುವಂತ್ ಹೇಳಿಕೆಯನ್ನು ಎಲ್ಲರ ಮುಂದೆ ಪ್ರಸಾರ ಮಾಡಲಾಯ್ತು. ವಿಡಿಯೋ ನೋಡುತ್ತಿದ್ದಂತೆ ರಾಶಿಕಾ ಭಾವುಕರಾಗಿ ಕಣ್ಣೀರು ಹಾಕಿದರು.
ಸುದೀಪ್
ಈ ವಿಡಿಯೋ ಬಳಿಕ ಸುದೀಪ್ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ಇವರಿಬ್ಬರ ಸುತ್ತಲಿದ್ದ ಸ್ಪರ್ಧಿಗಳಿಂದಲೇ ಹೇಳಿಕೆಗಳನ್ನು ಪಡೆದುಕೊಳ್ಳಲಾರಂಭಿಸಿದರು. ವಿಡಿಯೋ ನೋಡಿದ ಮೇಲೆ ನಿಮಗೆ ಅನ್ನಿಸಿತು ಎಂದು ಅಶ್ವಿನಿ ಗೌಡ ಅವರ ಅಭಿಪ್ರಾಯ ಕೇಳಲಾಯ್ತು. ಅಶ್ವಿನಿ ಗೌಡ ನೇರವಾಗಿಯೇ ಅಲ್ಲಿ ರಾಶಿಕಾ ಅವರೇ ಹುಡುಗರನ್ನು ಟ್ರೈ ಮಾಡಲು ಪ್ರಯತ್ನಿಸಿದರು ಎಂದರು.
ರಾಶಿಕಾ
ನಂತರ ರಾಶಿಕಾ ಬಳಿಯಲ್ಲಿದ್ದ ಧ್ರುವಂತ್ ವಸ್ತುಗಳನ್ನು ಪಡೆದುಕೊಂಡ ಧನುಷ್ ಸಹ ತಮ್ಮ ಅಭಿಪ್ರಾಯ ನೀಡಿದರು. ಇದೆಲ್ಲಾ ಬಳಿಕ ರಾಶಿಕಾ ಮತ್ತು ರಿಷಾ ಗೌಡ ನಡುವಿನ ಸಂಭಾಷಣೆ ಬಗ್ಗೆಯೂ ಸುದೀಪ್ ಚರ್ಚಿಸಿದರು. ಧ್ರುವಂತ್ ಜೊತೆಗೆ ಇಷ್ಟೆಲ್ಲಾ ಗಲಾಟೆ ಆದ್ಮೇಲೆಯೂ ರಿಷಾ ಮುಂದೆ ರಾಶಿಕಾ ಅವರ ವಿಷಯವನ್ನು ತೆಗೆದುಕೊಂಡು ಮಾತನಾಡುತ್ತಾರೆ.
ಇದನ್ನೂ ಓದಿ: Bigg Boss Kannada 12: ಸುದೀಪ್ ಮುಂದೆ ಮಾಡಿದ್ದ ತಪ್ಪು ಒಪ್ಪಿಕೊಂಡ ಅಶ್ವಿನಿ ಗೌಡ
ಟ್ರ್ಯಾಕ್ ಕ್ರಿಯೇಟ್
ಧ್ರುವಂತ್ ಜೊತೆ ನೀವ್ಯಾಕೆ ಒಂದು ಟ್ರ್ಯಾಕ್ ಕ್ರಿಯೇಟ್ ಮಾಡಬಾರದು ರಿಷಾಗೆ ರಾಶಿಕಾ ಸಲಹೆ ನೀಡುತ್ತಾರೆ. ಇದಕ್ಕೆ ರಿಷಾ ವಾಂತಿ ಮಾಡುವಂತೆ ರಿಯಾಕ್ಟ್ ಮಾಡುತ್ತಾರೆ. ಈ ಮೂಲಕ ಧ್ರುವಂತ್ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತಾರೆ. ಇಡೀ ವಾರ ನಡೆದ ಈ ಎಲ್ಲಾ ಘಟನೆಗಳು ಗಮನಿಸಿದ ಸುದೀಪ್, ಪುರುಷ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ರಿಷಾ ಮತ್ತು ರಾಶಿಕಾ ವಿರುದ್ಧ ಕೆಂಡಾಮಂಡಲರಾದರು.
ಇದನ್ನೂ ಓದಿ: ರಕ್ಷಿತಾ ಆಟದ ಹಿಂದಿನ ರಹಸ್ಯ! ವೀಕೆಂಡ್‌ನಲ್ಲಿ ಬಯಲಾಗುವುದೇ ಸತ್ಯ? ಸುದೀಪ್ ಕೊಟ್ಟ ಸುಳಿವು ಏನು?