ಬೆಂಗಳೂರು: ಹಿರಿಯ ಚಿತ್ರನಟಿ ದಿ.ಲೀಲಾವತಿ ಅವರ ಪುತ್ರ, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ವಿನೋದ್ ರಾಜ್ ಅವರು ತಾವೇ ಸ್ವತಃ ತಮ್ಮ ತೋಟದ ಜಮೀನಿನ ಗದ್ದೆಯಲ್ಲಿ ಭತ್ತ ಬೆಳೆದು, ಕಟಾವಿಗೂ ಮೊದಲು ಪೂಜೆ ನೆರವೇರಿಸಿ, ಭತ್ತವನ್ನು ಸ್ವತಃ ತಾವೇ ಕಟಾವು ಮಾಡಿ ರೈತರಿಗೆ ಮಾದರಿಯಾಗಿದ್ದಾರೆ. ಸೋಲದೇವನಹಳ್ಳಿಯಲ್ಲಿ ವಾಸವಾಗಿರುವ ನಟ ವಿನೋದ್ ರಾಜ್ ಅವರು ತಮ್ಮ ತೋಟದಲ್ಲಿ ತುಂತುರು ನೀರಾವರಿ ಪದ್ಧತಿಯಲ್ಲಿ ಅವರೇ ಉತ್ತಮ ತಳಿಯ ಭತ್ತವನ್ನು ನಾಟಿ ಮಾಡಿದ್ದರು. ಉತ್ತಮ ಭತ್ತದ ಬೆಳೆ ಬೆಳೆದಿದ್ದು, ಸಮಗ್ರ ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳಿಗೆ ಮುಂದಾಗಿದ್ದಾರೆ. ಭತ್ತದ ಬೆಳೆಯ ಕಟಾವಿಗೂ ಮೊದಲು ಪೂಜೆ ಮಾಡಿ ತೋಟದ ಕೆಲಸಗಾರರ ಜೊತೆ ಭತ್ತವನ್ನು ಕಟಾವು ಮಾಡಿ ಅವರೇ ಗದ್ದೆಯಿಂದ ಟ್ರ್ಯಾಕ್ಟರ್‌ಮೂಲಕ ಭತ್ತವನ್ನು ಮನೆಗೆ ರವಾನಿಸಿದ್ದಾರೆ.

11:57 PM (IST) Oct 12
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉದ್ಯೋಗ ಸೃಷ್ಟಿಯ ಕಾರಣ ನೀಡಿ ಇನ್ನೋವೇಟಿವ್ ಫಿಲಂ ಸಿಟಿಗೆ ನೀಡಿದ್ದ ನೋಟಿಸ್ ಹಿಂಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಪತ್ನಿಯ ಟಿವಿ ವೀಕ್ಷಣೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ.
11:54 PM (IST) Oct 12
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್‌ಗೆ ದೊಡ್ಡ ಶಾಕ್ ಎದುರಾಗಿದೆ. ಗೌತಮ್ ಬಯಸದೆ ಇರೋದು ಕಣ್ಣು ಮುಂದೆ ಬಂದಿದೆ. ಈಗ ಅವನು ಏನು ಮಾಡುತ್ತಾನೆ?
11:23 PM (IST) Oct 12
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎರಡನೇ ವಾರ ಎಲಿಮಿನೇಶನ್ ನಡೆಯಲಿದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಆದರೆ ಕಿಚ್ಚ ಸುದೀಪ್ ಅವರು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಇದು ಅಂತಿಂಥ ಸರ್ಪ್ರೈಸ್ ಅಲ್ಲವೇ ಅಲ್ಲ!
11:18 PM (IST) Oct 12
Fatty Liver Symptoms: ಈ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಗಮನಿಸಿದರೆ ಫ್ಯಾಟಿ ಲಿವರ್ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬಹುದು. ಇಲ್ಲಿ ಆರಂಭಿಕ ಚಿಹ್ನೆಗಳನ್ನು ವಿವರಿಸುತ್ತೇವೆ. ನೀವು ಈ ಲಕ್ಷಣಗಳನ್ನು ಗಮನಿಸಿದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
10:24 PM (IST) Oct 12
ನಿಮ್ಮ ತಂದೆ RSS ಕಾರ್ಯ ಮೆಚ್ಚಿ ಸಹಕಾರ ನೀಡಿರುವುದು ಮರೆತಿದ್ದೀರಾ? ಪ್ರಿಯಾಂಕ್ ಖರ್ಗೆ ಬಿಜೆಪಿ ಪ್ರಶ್ನೆ ಮಾಡಿದೆ. 2002ರ ಘಟನೆ ಫೋಟೋ ಪೋಸ್ಟ್ ಮಾಡಿರುವ ಬಿಜೆಪಿ, ಹೈಕಮಾಂಡ್ ಮೆಚ್ಚಿಸಲು ಪ್ರಿಯಾಂಕ್ ಖರ್ಗೆ ನಾಟಕವಾಡುತ್ತಿದ್ದೀರಾ ಎಂದು ಪ್ರಶ್ನಿಸಿದೆ.
10:14 PM (IST) Oct 12
ಬೆಂಗಳೂರು ಬಿಟ್ಟು ಹೋಗ್ತೀನೆಂದವರು ಹೋಗ್ಲಿ ನೋಡೋಣ, ಅಮೇರಿಕಾದ ವೀಸಾ ಸಮಸ್ಯೆ ನಂತರ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಬೆಂಗಳೂರೇ ಬೇಕೆಂದು ಇಲ್ಲಿಯೇ ಭೂಮಿ ಖರೀದಿಸುತ್ತಿವೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ರಸ್ತೆಗುಂಡಿ, ಟ್ರಾಫಿಕ್ ಸಮಸ್ಯೆಗಳನ್ನು ಒಪ್ಪಿಕೊಂಡರು.
09:53 PM (IST) Oct 12
ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಕಾನೂನು ವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ. ಅಕ್ರಮ ಚಟುವಟಿಕೆಗಳಿಗೆ ಸರ್ಕಾರದ ಆಶೀರ್ವಾದವೇ ಕಾರಣ ಎಂದು ಸಂಸದ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕಿಡಿಕಾರಿದರು.
09:43 PM (IST) Oct 12
Mallamma and Rakshitha Shetty conversation: ಮಕ್ಕಳ ಸಾವಿನ ಬಗ್ಗೆ ಪೋಷಕರಿಗಾಗುವ ನೋವಿನ ಕುರಿತು ಚರ್ಚೆ. ರಕ್ಷಿತಾ ಪದೇ ಪದೇ ಕೇಳಿದ ಪ್ರಶ್ನೆಯಿಂದ ಬೇಸರಗೊಂಡ ಮಲ್ಲಮ್ಮ, ಆಟವಾಡಲು ಬಂದ ಜಾಗದಲ್ಲಿ ಇಂತಹ ಮಾತುಗಳು ಬೇಡವೆಂದು ರಕ್ಷಿತಾಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುತ್ತಾರೆ.
09:28 PM (IST) Oct 12
ಪಾಕ್ ಜಿಂದಾಬಾದ್ ಅಂದ್ರೆ ಢಮ್ ಅಷ್ಟೆ,ಮಾತು ಕೇಳದಿದ್ರೆ ಬುಲ್ಡೋಜರ್, ಯತ್ನಾಳ್ ಬೆಂಕಿ ಭಾಷಣ ಮಾಡಿದ್ದಾರೆ. ಹನುಮಧ್ವಜ ವಿವಾದದ ಮೂಲಕ ಭಾರಿ ಸದ್ದು ಮಾಡಿದ ಕೆರಗೋಡಿನಲ್ಲಿ ಯತ್ನಾಳ್ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿ ಭಾಷಣ ಮಾಡಿದ್ದಾರೆ.
09:25 PM (IST) Oct 12
ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ದೊಡ್ಡ ಮನಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತು. ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯದಿಂದ ಇರುವುದು ಪ್ರಭಾಸ್ ಶೈಲಿ. 13 ವರ್ಷಗಳ ಹಿಂದಿನ ಒಂದು ಘಟನೆ ಪ್ರಭಾಸ್ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
08:59 PM (IST) Oct 12
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಸಿಬಿ ಭರ್ಜರಿ ಕಾರ್ಯಾಚರಣೆ! ₹50 ಕೋಟಿ ಮೌಲ್ಯದ ಹೈಡ್ರೋಗಾಂಜಾ, ಸೈಲೋಸಿಬಿನ್ ಅಣಬೆ ವಶ. ಆಹಾರದ ಟಿನ್‌ಗಳಲ್ಲಿ ಸಾಗಾಟದ ರಹಸ್ಯ ತಿಳಿಯಲು ಕ್ಲಿಕ್ ಮಾಡಿ.
08:54 PM (IST) Oct 12
2100ಕ್ಕೂ ಹೆಚ್ಚು ಯೋಜನೆಗಳ ಮೂಲಕ 42,000 ಕೋಟಿ ರು. ಅನುದಾನ ನೀಡಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ರೈತರಿಗೆ ಲಾಭವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
08:26 PM (IST) Oct 12
Bigg Boss Kannada Season 7 viral clip: ಬಿಗ್‌ಬಾಸ್ ಕನ್ನಡ ಸೀಸನ್ 7ರ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಸ್ಪರ್ಧಿ ದೀಪಿಕಾ ದಾಸ್ ಅವರ ತುಟಿಗಳಿಗೆ ಸಹ ಮಹಿಳಾ ಸ್ಪರ್ಧಿ ಮುತ್ತಿಕ್ಕಿದ್ದಾರೆ.
08:25 PM (IST) Oct 12
ಟಾಲಿವುಡ್‌ನಲ್ಲಿ ವೆಂಕಟೇಶ್ ಮತ್ತು ಸೌಂದರ್ಯ ಜೋಡಿಯಾಗಿ ಅನೇಕ ಸಿನಿಮಾಗಳು ಬಂದಿವೆ. ತೆರೆಯ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಈ ಇಬ್ಬರು ಸ್ಟಾರ್ಸ್ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ವೈರಲ್ ಆಗಿದ್ದವು. ಆಗ ರಾಮಾನಾಯ್ಡು ಏನು ಮಾಡಿದರು ಗೊತ್ತಾ?
07:58 PM (IST) Oct 12
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಸವಾಲು ಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ನಿಷೇಧಿಸುವ ಅಧಿಕಾರವೇ ಇಲ್ಲ, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವು ನಾಯಕರು RSSನವರೇ ಆಗಿದ್ದಾರೆ ಎಂದು ಅವರು ಹೇಳಿದ್ದಾರೆ.
07:56 PM (IST) Oct 12
25 ವರ್ಷ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆಯಾದರೆ ಹೈಕಮಾಂಡ್ ವರಿಷ್ಠರು ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
07:32 PM (IST) Oct 12
ರಾಹುಲ್ ಗಾಂಧಿ ಸತ್ಯ ಹೇಳಲು ಹೊರಟಿದ್ದಾರೆ. ಅವರು ಜನರ ಬಳಿಗೆ ಬಂದು ಸಮಸ್ಯೆ ಆಲಿಸುತ್ತಿದ್ದಾರೆ. ವೋಟ್ ಚೋರಿ ಸಹಿತ ಹಲವು ವಿಚಾರಗಳನ್ನು ಬಯಲಿಗೆಳೆಯುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
07:25 PM (IST) Oct 12
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ಹಲವು ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು, ನಿಗದಿತ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯೊಂದಿಗೆ ನವೆಂಬರ್ 10ರೊಳಗೆ ಅರ್ಜಿ ಸಲ್ಲಿಸಬಹುದು.
07:25 PM (IST) Oct 12
ವಾರ್ 2 ಚಿತ್ರದ ಸೋಲಿನಿಂದ ನಟಿ ಕಿಯಾರಾ ಅಡ್ವಾಣಿ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ಬರುತ್ತಿವೆ. ಇದೀಗ YRF ಸಂಸ್ಥೆ ಕಿಯಾರಾಗೆ ಬಿಗ್ ಶಾಕ್ ನೀಡಿದೆ ಎಂದು ತಿಳಿದುಬಂದಿದೆ.
07:08 PM (IST) Oct 12
ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್‌ನಲ್ಲಿ ರೆಡ್ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕನೊಬ್ಬ ಬಿಎಂಟಿಸಿ ಬಸ್ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
06:59 PM (IST) Oct 12
cat with super power: ಬೆಕ್ಕೊಂದು ಆಸ್ಪತ್ರೆಯೊಂದರಲ್ಲಿ ಮೃತನಾಗುವ ವ್ಯಕ್ತಿಯ ಮುನ್ಸೂಚನೆಯನ್ನು ಮೊದಲೇ ನೀಡುತ್ತಿತ್ತು ತನ್ನ ಸಾವಿನವರೆಗೂ ಅದು ಸುಮಾರು 100 ಜನ ಸಾವನ್ನು ಮೊದಲೇ ಗುರುತು ಮಾಡಿತ್ತು. ಆ ಬೆಕ್ಕಿನ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...
06:47 PM (IST) Oct 12
ಸರ್ಕಾರಗಳು ಮಾಡಲಾಗದ ಸಾಧನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರ ಗೊಳಿಸಲಾಗುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿತ್ವ ದೇಶಕ್ಕೆ ಮಾದರಿ ಎಂದು ಸಿ.ಟಿ. ರವಿ ಹೇಳಿದ್ದಾರೆ.
06:45 PM (IST) Oct 12
ಬಿಗ್‌ಬಾಸ್ 12ನೇ ಆವೃತ್ತಿಯ ಸ್ಪರ್ಧಿಗಳ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರ ನಡೆದಿದೆಯೇ ಎಂಬ ಕುತೂಹಲ ಹಲವರಲ್ಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಬಾರಿ ಯಾವ ಸ್ಪರ್ಧಿ ಯಾವ ಜಾತಿ? ಹೆಚ್ಚಿನವರು ಯಾರು? ಇಲ್ಲಿದೆ ಲಿಸ್ಟ್
06:39 PM (IST) Oct 12
ಬಿಜೆಪಿ ನಾಯಕರು ಕೇವಲ ಮಾತುಗಾರರು, ಕೆಲಸಗಾರರಲ್ಲ. ತಮ್ಮ ಅವಧಿಯಲ್ಲಿ ಬಿಬಿಎಂಪಿ ಆಸ್ತಿ ಅಡವಿಟ್ಟು, ಸಾಲದ ಹೊರೆ ಹೊರೆಸಿದ್ದರು. ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನು ತೀರಿಸುತ್ತಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
06:25 PM (IST) Oct 12
‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಂಪನಾ ಅವರ ಕೊಡುಗೆ ಅಪಾರ. ನಾನು ರಾಜಕೀಯ ಪ್ರವೇಶಿಸಿದಾಗಿನಿಂದಲೂ ನನಗೆ ಹಂಪನಾ ಜೊತೆ ಸಂಪರ್ಕವಿದೆ. ನಾನು ಅವರ ಕಟ್ಟಾ ಅಭಿಮಾನಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
05:57 PM (IST) Oct 12
ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ತುಷ್ಟೀಕರಣ ರಾಜಕಾರಣ ಹೆಚ್ಚುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
05:46 PM (IST) Oct 12
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಅಧ್ಯಾಯ 1' ಚಿತ್ರವು ಭಾರಿ ಯಶಸ್ಸು ಗಳಿಸುತ್ತಿದೆ. ಆದರೆ, 4ನೇ ಶತಮಾನದ ಕಥಾಹಂದರ ಹೊಂದಿರುವ ಈ ಚಿತ್ರದ ಒಂದು ದೃಶ್ಯದಲ್ಲಿ ಚಿಕ್ಕ ತಪ್ಪು ನುಸುಳಿಕೊಂಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಏನದು ತಪ್ಪು ನೋಡಿ!
05:35 PM (IST) Oct 12
ಸಮಂತಾ ಅಭಿಮಾನಿಗಳಿಗೆ ಶಾಕ್ ನೀಡುವಂತೆ ನಾಗ ಚೈತನ್ಯ, ಶೋಭಿತಾ ಬಗ್ಗೆ ಮತ್ತೊಮ್ಮೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಚೈತೂ ಮಾಡಿದ ಕಾಮೆಂಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
05:12 PM (IST) Oct 12
ಲೇಡಿ ಸೂಪರ್‌ಸ್ಟಾರ್ ಅಂದ ತಕ್ಷಣ ಎಲ್ಲರಿಗೂ ನಯನತಾರಾ ನೆನಪಾಗ್ತಾರೆ. ಆದರೆ ಟಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್ ಯಾರು ಗೊತ್ತಾ? ತೆಲುಗು ಚಿತ್ರರಂಗದಲ್ಲಿ ಲೇಡಿ ಅಮಿತಾಭ್ ಅಂತ ಹೆಸರು ಮಾಡಿದ ಸ್ಟಾರ್ ನಟಿ ಯಾರು? ಸೌತ್‌ನಲ್ಲಿ ಲೇಡಿ ಸೂಪರ್‌ಸ್ಟಾರ್ ಬಿರುದು ಬೇರೆ ಯಾರಿಗಿತ್ತು?
05:07 PM (IST) Oct 12
ಸನಾತನ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಆಟವಾಡುವ ಆರ್‌ಎಸ್‌ಎಸ್ ನಾಯಕರಂತಹ ಕಪಟಿಗಳಿಂದ ಜನರು ಎಚ್ಚರವಹಿಸಬೇಕು ಎಂದು ಶಾಸಕ ನರೇಂದ್ರಸ್ವಾಮಿ ಆರೋಪಿಸಿದ್ದಾರೆ. ಸಂಘದ ಕಾನೂನುಬದ್ಧತೆ ಮತ್ತು ಸಂವಿಧಾನ ಗೌರವವನ್ನು ಪ್ರಶ್ನಿಸಿ. ಸಂಘದ ಚಟುವಟಿಕೆಗಳನ್ನು ನಿಷೇಧ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
04:55 PM (IST) Oct 12
ನನಗೂ ಮುಖ್ಯಮಂತ್ರಿಯಾಗಬೇಕೆನ್ನುವ ಆಸೆಯಿದೆ. ಯಾಕಾಗಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು. ಅವರು ಸಂಜೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ನಿಮಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆಯಾ?
04:42 PM (IST) Oct 12
ಸದ್ಯ ಎಲ್ಲಾ ನಾಲೆಗಳಿಗೂ ನೀರನ್ನು ನಿಲ್ಲಿಸಲಾಗಿದೆ. ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ಸಿಡಿಎಸ್ ನಾಲೆ ಒಡೆದು ರೈತರ ಬೆಳೆ ಹಾನಿಯಾಗಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
04:34 PM (IST) Oct 12
ದಳಪತಿ ವಿಜಯ್ ಜೊತೆ ಇತ್ತೀಚೆಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ ಎಂದು ಹಲವು ವರದಿಗಳು ಬರುತ್ತಿವೆ. ಮುಂಬರುವ ಚುನಾವಣೆಯಲ್ಲಿ ಹೇಗೆ ಮುಂದುವರಿಯಬೇಕು? ಮೈತ್ರಿ ಮಾಡಿಕೊಳ್ಳಬೇಕೇ? ಅಥವಾ ಬೇಡವೇ? ಎಂಬಂತಹ ವಿಷಯಗಳ ಬಗ್ಗೆ ಹಲವು ರಾಜಕೀಯ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
04:33 PM (IST) Oct 12
ಶಾಸಕ ಮುನಿರತ್ನರನ್ನು ಡಿಸಿಎಂ ಡಿಕೆ ಶಿವಕುಮಾರ್ 'ಕರಿ ಟೋಪಿ' ಎಂದು ಕರೆದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಅವಮಾನದಿಂದ ಆಕ್ರೋಶಗೊಂಡ ಮುನಿರತ್ನ, ಡಿಕೆಶಿ ತಮ್ಮನ್ನು ಕೊಲೆ ಮಾಡುತ್ತಾರೆ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಮುಗಿಸಲು ಕೇರಳದಲ್ಲಿ ಮಾಟ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
04:18 PM (IST) Oct 12
ಸಚಿವ ಪ್ರಿಯಾಂಕ್ ಖರ್ಗೆಯವರು ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದು ಖರ್ಗೆಯವರ 'ಬೌದ್ಧಿಕ ದಾರಿದ್ರ್ಯತನ' ಪ್ರದರ್ಶನ ಎಂದು ಕಿಡಿಕಾರಿದ್ದಾರೆ.
03:27 PM (IST) Oct 12
ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕ ಮುನಿರತ್ನರನ್ನು 'ಕರಿ ಟೋಪಿ ಎಂಎಲ್ಎ' ಎಂದು ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿದ್ದಾರೆ. ಮುನಿರತ್ನ ಅವರು ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
03:07 PM (IST) Oct 12
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಆರ್‌ಎಸ್‌ಎಸ್ ಸಂಘಟನೆಯು ಅನುಮತಿಯಿಲ್ಲದೆ ಸರ್ಕಾರಿ ಜಾಗಗಳಲ್ಲಿ ಶಾಖೆಗಳನ್ನು ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು 'ಭಾರತದ ತಾಲಿಬಾನಿಗಳು' ಎಂದು ಕರೆದಿದ್ದಾರೆ.
02:56 PM (IST) Oct 12
Ashwini Gowda Dove Rani title: ಬಿಗ್‌ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರದ ಸೂಪರ್ ಸಂಡೇ ಸಂಚಿಕೆಯಲ್ಲಿ, ಬಹುತೇಕ ಸ್ಪರ್ಧಿಗಳು ಅಶ್ವಿನಿ ಗೌಡ ಅವರಿಗೆ 'ಡವ್ ರಾಣಿ' ಎಂಬ ಕಿರೀಟವನ್ನು ತೊಡಿಸಿದ್ದಾರೆ.
02:41 PM (IST) Oct 12
ಹಾಫ್ ಚಡ್ಡಿ ಫುಲ್ ಚಡ್ಡಿ ಮಾಡಿದ್ದೇ ಸಾಧನೆ, ಆರ್‌ಎಸ್ಎಸ್ ನಿಷೇಧಕ್ಕೆ ಸಿಎಂಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ, ವಿಷ ಬೀಜ ಬಿತ್ತುವ ಕೆಲಸವನ್ನು ಆರ್‌ಎಸ್ಎಸ್ ಮಾಡುತ್ತಿದೆ. ಆರ್‌ಎಸ್ಎಸ್ ಸಂಘಟನೆಯನ್ನು ತಾಲೀಬಾನ್‌ಗ ಹೋಲಿಕೆ ಮಾಡಿದ್ದಾರೆ.
02:39 PM (IST) Oct 12
ಬಾಯಿಪಾಠ ಮಾಡಿಕೊಂಡು ಸ್ಟೇಜಿಗೆ ಬಂದಿರುವ ಆ ಮಕ್ಕಳು ಅರಳು ಹುರಿದಂತೆ ಪಟಪಟ ಅಂತ ಒಪ್ಪಿಸುವುದೇ ಒಂದು ರೀತಿಯ ಚೆಂದ. ತಾವು ಜೀವನದಲ್ಲಿಯೇ ನೋಡದಿರುವ ಆ ಪೌರಾಣಿಕ ಪಾತ್ರಗಳನ್ನು ಅನುಭವಿಸಿ ಅಭಿನಯಿಸುವುದು ಅದಕ್ಕಿಂತ ಚೆಂದ. ಆದರೆ, ಕೊನೆಯಲ್ಲಿ ನಾಟಕ ಮರೆತು ರಿಯಾಲಿಟಿಗೆ ಹೋಗುವುದು ಎಲ್ಲಕ್ಕಿಂತ ಚೆಂದ…