ಬಿಗ್​ಬಾಸ್​ 12ನೇ ಆವೃತ್ತಿಯ ಸ್ಪರ್ಧಿಗಳ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರ ನಡೆದಿದೆಯೇ ಎಂಬ ಕುತೂಹಲ ಹಲವರಲ್ಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಬಾರಿ ಯಾವ ಸ್ಪರ್ಧಿ ಯಾವ ಜಾತಿ? ಹೆಚ್ಚಿನವರು ಯಾರು? ಇಲ್ಲಿದೆ ಲಿಸ್ಟ್​

ಜಾತಿ ಎನ್ನೋದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಜಾತಿ-ಧರ್ಮ ಎಲ್ಲವೂ ಒಂದೇ, ನಾವೆಲ್ಲರೂ ಒಂದೇ ಜಾತಿ, ಒಂದೇ ಮತ ಎಂದು ದಿನಪೂರ್ತಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಇದೀಗ ಜಾತಿ ಗಣತಿಗೆ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಯಾವುದಾದರೂ ಒಂದು ಕಾರಣಕ್ಕೆ ಜಾತಿ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಇಂದಿನ ದಿನ ಆಗಿಹೋಗಿದೆ. ಏನಿಲ್ಲವೆಂದರೂ ವೋಟ್​ಬ್ಯಾಂಕ್​ಗಾಗಿಯಾದರೂ ಜಾತಿ-ಧರ್ಮ ಮುಂದಾಗುತ್ತದೆ. ಇನ್ನು ವಿವಿಧ ಹುದ್ದೆಗಳಿಗೆ ಅರ್ಹತೆಯ ಆಧಾರಕ್ಕಿಂತಲೂ ಹೆಚ್ಚಾಗಿ ಜಾತಿ ಆಧಾರವೂ ನಡೆಯುವುದು ಇದೆ. ಒಟ್ಟಿನಲ್ಲಿ ಜಾತಿ-ಜಾತಿ ಎಂದು ಬಡಿದಾಡಬೇಡಿ ಎಂದು ಭಾಷಣ ಬಿಗಿಯುವವರಿಗೂ ಒಂದಲ್ಲ ಒಂದು ರೀತಿಯಲ್ಲಿ ಜಾತಿ ಎನ್ನುವುದು ಕಾಡಿಯೇ ಕಾಡುತ್ತದೆ.

ಬಿಗ್​ಬಾಸ್​ 12 ರ ಜಾತಿ ಲೆಕ್ಕಾಚಾರ

ಇರಲಿ ಬಿಡಿ. ಇದೀಗ ಬಿಗ್​ಬಾಸ್​ 12 (Bigg Boss 12) ವಿಷಯಕ್ಕೆ ಬರೋಣ. ಇಲ್ಲಿ ಯಾವ ಯಾವ ಜಾತಿಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಪ್ರಶ್ನೆ ಬಹುದೊಡ್ಡ ವರ್ಗವನ್ನು ಕಾಡುವುದು ಇದೆ. ಕೆಲವು ಸ್ಪರ್ಧಿಗಳ ಅಡ್ಡ ಹೆಸರು ಅರ್ಥಾತ್​ Sir name ಆಧಾರದ ಮೇಲೆ ಜಾತಿಯನ್ನು ಸುಲಭದಲ್ಲಿ ಗುರುತು ಹಿಡಿಯಬಹುದು. ಆದರೆ ಹಲವು ಸ್ಪರ್ಧಿಗಳು ಈ ರೀತಿಯ ಹೆಸರು ಇಟ್ಟುಕೊಳ್ಳದೇ ಇರುವುದರಿಂದ ಅಥವಾ, ಅದನ್ನು ಅವರು ಬಹಿರಂಗಪಡಿಸಲು ಇಷ್ಟಪಡದೇ ಇರುವ ಕಾರಣಕ್ಕೆ ಅವರ ಹೆಸರಷ್ಟೇ ಇರುತ್ತದೆ, ಇಲ್ಲವೇ ಅವರ ಹೆಸರಿನ ಮುಂದೆ ಊರಿನ ಹೆಸರು ಜೋಡಣೆಯಾಗುತ್ತದೆ. ಅಷ್ಟಕ್ಕೂ ಬಿಗ್​ಬಾಸ್​ನಲ್ಲೇನೂ ಜಾತಿ-ಗೀತಿ ನೋಡಿ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಿಲ್ಲ. ಎಲ್ಲರಿಗೂ ತಿಳಿದಿರುವಂತೆ ಹೆಚ್ಚು ಕಾಂಟ್ರವರ್ಸಿ ಮಾಡಿದವರಿಗೆ ಹೆಚ್ಚು ಡಿಮಾಂಡ್​, ಜೈಲಿಗೆ ಹೋದವರು, ಹೆಚ್ಚಿನ ಟ್ರೋಲ್​ಗೆ ಒಳಗಾದವರು, ಕ್ರಿಮಿನಲ್​ ಪಟ್ಟ ಕಟ್ಟಿಕೊಂಡವರು… ಹೀಗೆ ಕೆಲವು ಭಾಷೆಗಳ ಬಿಗ್​ಬಾಸ್​​ನಲ್ಲಿ ಇವರಿಗೆ ಮೊದಲ ಆದ್ಯತೆ. ಆ ಬಳಿಕ ಒಂದಿಷ್ಟು ಮಂದಿ ಸೋಷಿಯಲ್​ ಮೀಡಿಯಾದ ಇನ್​ಫ್ಲೂಯೆನ್ಸರ್ಸ್​, ಒಂದಿಷ್ಟು ಮಂದಿ ಮೊದಲ ಕೆಲವು ಸೀಸನ್​ಗಳಲ್ಲಿ ಹೊರಕ್ಕೆ ಹೋಗಲು ಬಂದಿರೋ ಸ್ಪರ್ಧಿಗಳ ಆಯ್ಕೆ ನಡೆಯುತ್ತದೆ ಅಷ್ಟೇ. 

ಯಾರಿಗೆ ಪ್ರಾಬಲ್ಯ?

ಹಾಗಿದ್ದರೆ, ಈ ಬಾರಿ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿರುವವರ ಪೈಕಿ ಯಾರು ಯಾವ ಜಾತಿ, ಯಾರ ಪ್ರಾಬಲ್ಯ ಹೆಚ್ಚಿದೆ ಎಂದು ನೋಡುವ ಕುತೂಹಲ ಹಲವರಲ್ಲಿ ಇದೆ. ಅಂಥವರಿಗಾಗಿ ಸದ್ಯ ಸಿಕ್ಕಿರುವ ಮಾಹಿತಿಯನ್ನು ಆಧರಿಸಿ ಜಾತಿಯ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ (ಇದು ಗೂಗಲ್​ನಲ್ಲಿ ಸಿಕ್ಕಿರುವ ಮಾಹಿತಿ ಅಷ್ಟೇ). ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ಒಕ್ಕಲಿಗ ಸಮುದಾಯದ ಐದು ಮಂದಿ ಇದ್ದು, ಇವರ ಪ್ರಾಬಲ್ಯ ಹೆಚ್ಚಾಗಿದೆ. ಆ ಬಳಿಕ ಇರುವುದು ಲಿಂಗಾಯತರು, ಇವರ ಸಂಖ್ಯೆ 3. ಆ ಬಳಿಕ ಇಬ್ಬರು ಶೆಟ್ಟಿ ಅರ್ಥಾತ್​ ಬಂಟ್ಸ್​ ಹಾಗೂ ಇಬ್ಬರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದು, ಉಳಿದ ಸ್ಪರ್ಧಿಗಳು ವಿಭಿನ್ನ ಜಾತಿಗೆ ಸೇರಿದವರಾಗಿದ್ದಾರೆ. ಕೆಲವರ ಬಗ್ಗೆ ತಿಳಿದುಬಂದಿಲ್ಲ.

ಜಾತಿಯ ಲಿಸ್ಟ್​ ಇಲ್ಲಿದೆ...

  • ಒಕ್ಕಲಿಗರು: ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಅಭಿಷೇಕ್​, ಧನುಷ್​ ಗೌಡ ಮತ್ತು ಸ್ಪಂದನಾ ಸೋಮಣ್ಣ​.
  • ಲಿಂಗಾಯತರು: ಕಾವ್ಯಾ ಶೈವ, ಜಾನ್ವಿ ಮತ್ತು ಕರಿಬಸಪ್ಪ.
  • ಶೆಟ್ಟಿ (ಬಂಟ್ಸ್​): ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ.
  • ವಾಲ್ಮೀಕಿ: ಮಾಳು ಮತ್ತು ಡಾಗ್​ ಸತೀಶ್​.

ಇನ್ನುಳಿದಂತೆ

  • ಗಿಲ್ಲಿ ನಟ- ಕುರುಬ ಗೌಡ
  • ಚಂದ್ರಪ್ರಭ- ದಲಿತ
  • ಮಲ್ಲಮ್ಮ- ಆದಿವಾಸಿ ಲಂಬಾಣಿ
  • ಮಂಜು ಭಾಷಿಣಿ- ಬ್ರಾಹ್ಮಣ
  • ಅಶ್ವಿನಿ ಎಸ್​.ಎನ್​ - ಅಯ್ಯಂಗಾರ್​
  • ಧ್ರುವಂತ್​- ಕಬ್ಬಲಿಗ (ಬಿಲ್ಲವ)

ಇದನ್ನೂ ಓದಿ: ಹೆಣ್ಣೆಂದು ತಿಳಿದು ಎಲ್ಲೆಲ್ಲೋ ಉಜ್ಜಲು ಬಂದ ಅಜ್ಜ, ಆಮೇಲೆ? ಸೀರೆಯುಟ್ಟ ಕಾಮಿಡಿ ನಟ ರಾಘವೇಂದ್ರನ ಫಜೀತಿ ಕೇಳಿ