ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕ ಮುನಿರತ್ನರನ್ನು 'ಕರಿ ಟೋಪಿ ಎಂಎಲ್ಎ' ಎಂದು ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿದ್ದಾರೆ. ಮುನಿರತ್ನ ಅವರು ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ

ಯಾದಗಿರಿ: ಗಣವೇಷದಾರಿ ಶಾಸಕ ಮುನಿರತ್ನರನ್ನು ಹೆಯ್ ಕರಿ ಟೋಪಿ ಎಂಎಲ್ಎ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕರೆದ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯೆ ನೀಡಿ ಶಾಸಕ ಮುನಿರತ್ನ ವಿರುದ್ಧ ಸಚಿವ ದರ್ಶನಾಪುರ ಕಿಡಿಕಾರಿದ್ದಾರೆ. ಆರ್ ಎಸ್ ಎಸ್ ಮಾತ್ರ ಅಲ್ಲ, ಸರ್ಕಾರ ಜನರಿಗೆ ಮುನಿರತ್ನ ಅವಮಾನ ಮಾಡಿದ್ದಾರೆ. ಬಿಜೆಪಿ ಅವರು ಮೂರು ಬಿಟ್ಟು ನಿಂತಿದ್ದಾರೆ ಏನು ಮಾಡೋಕೆ ಆಗುತ್ತೆ. ಅವರಿಗೆ ಮಾತಾಡೋಕೆ ಏನು ಉಳಿದಿಲ್ಲ ಎಂದಿದ್ದಾರೆ.

ಬಿಜೆಪಿ ಶಾಸಕರನ್ನು ಹಾಕ್ಯಾರೇನ್ ಒಳಗ

ಪ್ರವಾಹ ಬಂತು ಏನು ಮಾಡಿದ್ರು, ಕಟಾವು ಆದ ಸೂರ್ಯಕಾಂತಿ ಹೊಲಕ್ಕೆ ಹೋಗಿ ಪೊಟೋ ಶೂಟ್ ಮಾಡ್ತಾರಂದ್ರೆ ಎಷ್ಟರ ಮಟ್ಟಿಗೆ ಇಳಿದಿದ್ದಾರೆ ನೋಡಿ. ಗೂಂಡಾಗಿರಿ ಸರ್ಕಾರ ಮಾಡಿದ್ರೆ, ಎಲ್ಲರನ್ನು ಒದ್ದು ಒಳಗೆ ಹಾಕ್ತಿದ್ವಿ. ಯಾರಿಗಾದ್ರು ಬಿಜೆಪಿ ಶಾಸಕರನ್ನು ಹಾಕ್ಯಾರೇನ್ ಒಳಗ. ಬಿಜೆಪಿ ಅವರು ಹೊಲಸು ಮುಚ್ಚಿಕೊಳ್ಳಲು ಬೇರೆ ಅವರ ಮೇಲೆ ಆರೋಪ ಮಾಡ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯವರು ವೈಯುಕ್ತಿಕವಾಗಿ ಕಚ್ಚಾಡ್ತಿದ್ದಾರೆ:ಶರಣಬಸಪ್ಪ

ಕರ್ನಾಟಕದಲ್ಲಿ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟಿದೆ. ಕಾನೂನು ಕಾಪಾಡುವ ಕೆಲಸ ನಾವೆಲ್ಲರೂ ಮಾಡ್ತಿದ್ದೇವೆ. ಮುನಿರತ್ನ ಮತ್ತು ಡಿಕೆಶಿ ಅವರದ್ದು ವೈಯುಕ್ತಿಕ ಇರಬಹುದು. ರಾಜ್ಯದಲ್ಲಿ ಸರ್ಕಾರ ಜನಪರ ಆಡಳಿತ ಕೊಡ್ತಿದೆ. ಬಿಜೆಪಿಯವರು ವೈಯುಕ್ತಿಕವಾಗಿ ಕಚ್ಚಾಡ್ತಿದ್ದಾರೆ, ಅವರೇ ಒಬ್ಬರಿಗೊಬ್ಬರು ಬೈದಾಡಿಕೊಳ್ತಿದ್ದಾರೆ. ಶಿವರಾಮ್ ಹೆಬ್ಬಾರ್, ಸೋಮಶೇಖರ್ ಎಸ್‌ ಟಿ, ಬಸನಗೌಡ ಪಾಟೀಲ್ ಯತ್ನಾಳ ಅವರ ಮಾತು ಕೇಳಿ ಎಲ್ಲವೂ ಗೊತ್ತಾಗಿತ್ತಿದೆ.

ಸುಳ್ಳು ಪ್ರಚಾರ ಮಾಡುವುದೇ ಬಿಜೆಪಿ ಕೆಲಸ

ನಾವು ಜನಪರ ಕಾರ್ಯಕ್ರಮ ಕೊಡುತ್ತಿರುವುದರಿಂದ ಬೇರೆ ದಾರಿನೇ ಇಲ್ಲ. ಸುಳ್ಳು ಪ್ರಚಾರ ಮಾಡುವುದೇ ಬಿಜೆಪಿ ಕೆಲಸ ಸಿಎಂ, ಡಿಸಿಎಂ ಆಹ್ವಾನ‌ ಕೊಡಲ್ಲ. ಸಂಬಂಧಪಟ್ಟ ಡಿಸಿ ಅಥವಾ ಯಾರೋ ಅಧಿಕಾರಿಗಳು ಆಹ್ವಾನ ಕೊಡುತ್ತಾರೆ ಅಂತಾರೆ ಅವರಿಗೇನು ಕುಂಕುಮ ಹಚ್ಚಿ ಕರೆಯಬೇಕಾ..? ಪ್ರೊಟೋಕಾಲ್ ಉಲ್ಲಂಘನೆ ಆಗಿದ್ರೆ ಅಸೆಂಬ್ಲಿಯಲ್ಲಿ ಹೇಳಲಿ. ನೀವು ಹೊರಗಡೆ ಯಾಕೆ ನಾಟಕ‌ ಮಾಡ್ತಿರಿ..? ಎಂದು ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ ನೀಡಿದ್ದಾರೆ.