ಬಿಗ್‌ಬಾಸ್ 7ರಲ್ಲಿ ದೀಪಿಕಾ ದಾಸ್ ತುಟಿಗೆ ಕಿಸ್ ಕೊಟ್ಟಿದ್ಯಾರು? ಅಚ್ಚರಿಯ ದೃಶ್ಯ ವೈರಲ್!
Bigg Boss Kannada Season 7 viral clip: ಬಿಗ್‌ಬಾಸ್ ಕನ್ನಡ ಸೀಸನ್ 7ರ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಸ್ಪರ್ಧಿ ದೀಪಿಕಾ ದಾಸ್ ಅವರ ತುಟಿಗಳಿಗೆ ಸಹ ಮಹಿಳಾ ಸ್ಪರ್ಧಿ ಮುತ್ತಿಕ್ಕಿದ್ದಾರೆ.

ವಿಡಿಯೋ ತುಣುಕು ವೈರಲ್
ಬಿಗ್‌ಬಾಸ್ ಸೀಸನ್ 12 ಆರಂಭವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದ ತುಂಬೆಲ್ಲಾ ಈ ರಿಯಾಲಿಟಿ ಶೋನ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ. ಇದರ ಜೊತೆಯಲ್ಲಿಯೇ ಈ ಹಿಂದಿನ ಸೀಸನ್‌ನಲ್ಲಿನ ವಿಡಿಯೋಗಳು ಮುನ್ನಲೆಗೆ ಬರುತ್ತಿವೆ. ಈ ವೈರಲ್ ವಿಡಿಯೋ ನೋಡುವ ನೆಟ್ಟಿಗರು, ಇದ್ಯಾವಾಗ ನಡೆದಿತ್ತು ಎಂದು ಮೂಗಿನ ಮೇಲೆ ಬೆರಳು ಇಟ್ಟಕೊಳ್ಳತ್ತಿದ್ದಾರೆ.
ಸ್ಟೈಲಿಶ್ ಗರ್ಲ್ ದೀಪಿಕಾ ದಾಸ್
ಇದೀಗ ಬಿಗ್‌ಬಾಸ್ ಸೀಸನ್ 7ರ ವಿಡಿಯೋ ಕ್ಲಿಪ್ ಮಿಂಚಿನಂತೆ ವೈರಲ್ ಆಗುತ್ತಿದೆ. ನಟ ಶೈನ್ ಶೆಟ್ಟಿ ಈ ಸೀಸನ್‌ನ ವಿನ್ನರ್ ಆಗಿದ್ದರು. ಹರೀಶ್ ರಾಜ್, ಕುರಿ ಪ್ರತಾಪ್, ಭೂಮಿಕಾ ಶೆಟ್ಟಿ, ಕಿಶನ್ ಬೆಳಗಲಿ, ರಾಜು ತಾಳಿಕೋಟಿ, ಪ್ರಿಯಾಂಕಾ ಸೇರಿದಂತೆ ಹಲವರು ಸೀಸನ್ 7ರ ಸ್ಪರ್ಧಿಗಳಾಗಿದ್ದರು. ನಟಿ ದೀಪಿಕಾ ದಾಸ್ ಈ ಸೀಸನ್‌ನ ಸ್ಟೈಲಿಶ್ ಗರ್ಲ್ ಆಗಿದ್ದರು. ಇದೇ ದೀಪಿಕಾ ದಾಸ್ ಅವರಿಗೆ ಮತ್ತೋರ್ವ ಮಹಿಳಾ ಸ್ಪರ್ಧಿಯೊಬ್ಬರು ತುಟಿಗಳಿಗೆ ಕಿಸ್ ಮಾಡಿದ್ದರು
ದೀಪಿಕಾ ದಾಸ್‌ಗೆ ಭೂಮಿ ಶೆಟ್ಟಿ ಮುತ್ತು
ದೀಪಿಕಾ ದಾಸ್ ಅವರಿಗೆ ಸಹ ಸ್ಪರ್ಧಿಯಾಗಿದ್ದ ಭೂಮಿ ಶೆಟ್ಟಿ ಕಿಸ್ ಮಾಡಿದ್ದರು. ಕಿಸ್ ಮಾಡಿರುವ ಸಣ್ಣದಾದ ತುಣುಕು ಇದೀಗ ಮುನ್ನಲೆಗೆ ಬಂದಿದೆ. ಈ ವೇಳೆ ಅಲ್ಲಿಯೇ ಗಾಯಕ ವಾಸುಕಿ ವೈಭವ್ ಮತ್ತು ನಟ ಹರೀಶ್ ರಾಜ್ ಸಹ ಇದ್ರು. ಅವರೆಲ್ಲರ ಮುಂದೆಯೇ ದೀಪಿಕಾ ಅವರಿಗೆ ಭೂಮಿ ಶೆಟ್ಟಿ ಮುತ್ತು ನೀಡುತ್ತಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಕನ್ನಡಕ ಕ್ಲೀನ್ ಮಾಡಿಕೊಳ್ಳುತ್ತಾ ಬರುವ ವಾಸುಕಿ ವೈಭವ್, ಏನು ಗುರು ಇವರು, ಇಬ್ಬರು ತುಟಿಗೆ ತುಟಿ ಮುತ್ತು ಕೊಡುತ್ತಿದ್ದರು ಎಂದು ಹರೀಶ್ ಮುಂದೆ ಹೇಳುತ್ತಾರೆ. ಆಗ ಅಲ್ಲಿಯೇ ಕುಳಿತಿದ್ದ ದೀಪಿಕಾ ದಾಸ್, ನಿದ್ದೆಗಣ್ಣಿನಲ್ಲಿ ವಾಸುಕಿ ವೈಭವ್ ಏನೋ ನೋಡಿದ್ದಾರೆ ಎಂದು ಹೇಳುತ್ತಾರೆ. ಈ ಮಾತಿನ ನಡುವೆಯೇ ದೀಪಿಕಾ ಬಳಿ ಬಂದ ಭೂಮಿ ಕಿಸ್ ಮಾಡುತ್ತಾರೆ.
ವಾಸುಕಿ ವೈಭವ್‌ಗೆ ದೀಪಿಕಾ ದಾಸ್ ಸ್ಪಷ್ಟನೆ
ನಾನು ಬೆಳಗ್ಗೆ ಇವರಿಬ್ಬರು ಕಿಸ್ ಮಾಡೋದನ್ನು ಕಣ್ಣರಳಿಸಿ ನೋಡಿದರೆ ನಮ್ಮದೇ ತಪ್ಪು ಎಂದು ಹೇಳುತ್ತಾರೆ ಸರ್ ಅಂತ ಹರೀಶ್ ರಾಜ್ ಮುಂದೆ ವಾಸುಕಿ ವೈಭವ್ ಹೇಳುತ್ತಾರೆ. ಬೆಳಗ್ಗೆಯಿಂದ ವಾಸುಕಿ ಹೀಗೆಯೇ ಹೇಳುತ್ತಿದ್ದಾರೆ. ಅದಕ್ಕೆ ಇವಾಗ ಕಿಸ್ ಮಾಡಿ ತೋರಿಸಿದೀವಿ ಎಂದು ದೀಪಿಕಾ ದಾಸ್ ಸ್ಪಷ್ಟನೆ ನೀಡಿದ್ದಾರೆ. ಈಗ ಈ ಕ್ಲಿಪ್ ನೋಡುತ್ತಿರುವವ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 7
ಬಿಗ್‌ಬಾಸ್ ಕನ್ನಡ ಸೀಸನ್ 7 ವೀಕ್ಷಕರಿಗೆ ತುಂಬಾ ಮನರಂಜನೆಯನ್ನು ನೀಡಿತ್ತು. ಕಿಶನ್ ಬೆಳಗಲಿ ಮತ್ತು ದೀಪಿಕಾ ದಾಸ್ ಉತ್ತಮ ನೃತ್ಯ ಕಲಾವಿದರು. ಇವರಿಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಸಹ ಇಂದಿಗೂ ವೈರಲ್ ಆಗುತ್ತಿರುತ್ತದೆ. ಹಾಗೆಯೇ ಶೈನ್ ಶೆಟ್ಟಿ- ದೀಪಿಕಾ ದಾಸ್ ಜೋಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕುರಿ ಪ್ರತಾಪ್, ಪ್ರಿಯಾಂಕಾ ಅವರ ತಮಾಷೆ, ಚೈತ್ರಾ ಕೋಟುರು ಅವರ ಮಾತುಗಳು ನೋಡುಗರಿಗೆ ಖುಷಿಯನ್ನು ನೀಡಿತ್ತು.
ಇದನ್ನೂ ಓದಿ: ಕನ್ನಡ ಮಾತನಾಡಲು ಬಿಗ್‌ಬಾಸ್ ತಡವರಿಸುವಂತೆ ಮಾಡಿದ್ದು ಮಲ್ಲಮ್ಮ; ಇದು ಹೇಗೆ ಸಾಧ್ಯ? ಕನ್ನಡತಿಯ ಮಾತು ಕೇಳಿ
ಸ್ಟ್ರಾಂಗ್ ಅಭ್ಯರ್ಥಿ ದೀಪಿಕಾ ದಾಸ್
ದೀಪಿಕಾ ದಾಸ್ ಸೀಸನ್ 7ರ ಅತ್ಯಂತ ಪ್ರಭಾವಶಾಲಿ ಸ್ಪರ್ಧಿಯಾಗಿದ್ದರು. ದೀಪಿಕಾ ದಾಸ್ ಆಟದ ಶೈಲಿಯಿಂದಲೇ ಫಿನಾಲೆವರೆಗೂ ತಲುಪಿದ್ದರು. ದೀಪಿಕಾ ಜೊತೆ ಆಟ ಅಂದ್ರೆ ಅಲ್ಲಿ ನೂರಕ್ಕೆ ನೂರರಷ್ಟು ಸ್ಪರ್ಧೆ ಇರುತ್ತಿತ್ತು. ದೈಹಿಕವಾಗಿಯೂ ಫಿಟ್ ಆಗಿದ್ದ ದೀಪಿಕಾ ದಾಸ್ ಯಾವುದೇ ಆಟದಿಂದ ಹಿಂದೆ ಸರಿದು ಸೋಲು ಒಪ್ಪಿಕೊಂಡಿರಲಿಲ್ಲ.
ವೈರಲ್ ಆಗಿರುವ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.facebook.com/reel/1486311285972650
ಇದನ್ನೂ ಓದಿ: ರಾಜಮಾತೆ ಅಶ್ವಿನಿ ಗೌಡಗೆ ' ಡವ್ ರಾಣಿ' ಕಿರೀಟ; ಸ್ಪರ್ಧಿಗಳು ಕೊಟ್ಟ ಕಾರಣ ಒಂದೊಂದು ಡೈರೆಕ್ಟ್ ಹಿಟ್