cat with super power: ಬೆಕ್ಕೊಂದು ಆಸ್ಪತ್ರೆಯೊಂದರಲ್ಲಿ ಮೃತನಾಗುವ ವ್ಯಕ್ತಿಯ ಮುನ್ಸೂಚನೆಯನ್ನು ಮೊದಲೇ ನೀಡುತ್ತಿತ್ತು ತನ್ನ ಸಾವಿನವರೆಗೂ ಅದು ಸುಮಾರು 100 ಜನ ಸಾವನ್ನು ಮೊದಲೇ ಗುರುತು ಮಾಡಿತ್ತು. ಆ ಬೆಕ್ಕಿನ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...

ಬೆಕ್ಕುಗಳಿಗೆ ನಿಜವಾಗಿಯೂ ಅಗೋಚರ ಶಕ್ತಿ ಕಾಣಿಸುತ್ತಾ?

ಬೆಕ್ಕುಗಳಿಗೆ ಅನಾಹುತ ಮೊದಲೇ ಗೊತ್ತಾಗುತ್ತಾ, ಬೆಕ್ಕಿನ ಬಗ್ಗೆ ಹಲವು ನಂಬಿಕೆಗಳಿವೆ. ಕೆಲವರು ಅದನ್ನು ಅಪಶಕುನ ಎಂದು ಕರೆದರೆ ಇನ್ನೂ ಕೆಲವರು ಮನುಷ್ಯನಿಗೆ ಬರುವ ಕೆಟ್ಟ ಶಕ್ತಿಯನ್ನು ಅದು ತಡೆಯುತ್ತದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಸದಾ ನಿದ್ರಿಸುವ ಬೆಕ್ಕಗಳು ಮನೆಯ ನೆಗೆಟಿವ್ ಎನರ್ಜಿಯನ್ನು ತಮ್ಮತ್ತ ಸೆಳೆದುಕೊಂಡು ಮನೆಯಲ್ಲಿ ಸಕರಾತ್ಮಕ ಶಕ್ತಿಯನ್ನು ತುಂಬುತ್ತವೆ ಎಂಬ ನಂಬಿಕೆ ಇದೆ. ಬೆಕ್ಕುಗಳಿಗೆ ಸಂಬಂಧಿಸಿದಂತೆ ಹಲವು ಕತೆಗಳಿವೆ. ಬೆಕ್ಕುಗಳು ನೀಡುವ ಕೆಲ ಶಕುನಗಳನ್ನು ಕೆಲವರು ನಂಬಿದರೆ ಮತ್ತೆ ಕೆಲವರು ಅದೆಲ್ಲಾ ಕಾಕಾತಾಳೀಯ ಎಂದು ಸುಮ್ಮನಾಗುತ್ತಾರೆ. ಆದರೆ ಬೆಕ್ಕೊಂದು ಆಸ್ಪತ್ರೆಯೊಂದರಲ್ಲಿ ಮೃತನಾಗುವ ವ್ಯಕ್ತಿಯ ಮುನ್ಸೂಚನೆಯನ್ನು ಮೊದಲೇ ನೀಡುತ್ತಿತ್ತು ತನ್ನ ಸಾವಿನವರೆಗೂ ಅದು ಸುಮಾರು 100 ಜನ ಸಾವನ್ನು ಮೊದಲೇ ಗುರುತು ಮಾಡಿತ್ತು. ಇದು ನಂಬಲು ಅಸಾಧ್ಯವೆನಿಸಿದರು ನಿಜವಾಗಿ ನಡೆದ ಘಟನೆ.ಆ ಬೆಕ್ಕಿನ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...

ವಿಚಿತ್ರ ಘಟನೆಗಳಿಗೆ ಸಾಕ್ಷಿಯಾದ ಆಸ್ಪತ್ರೆ: ಸಾವನ್ನು ಮೊದಲೇ ಗುರುತಿಸುತ್ತಿದ್ದ ಬೆಕ್ಕು

ಪ್ರಾಣಿಗಳು ಸಾವು ಮೊದಲೇ ತಿಳಿಯುತ್ತದೆ ಎಂದು ಕೆಲವರು ಹೇಳುತ್ತಾರೆ. ಈ ಬೆಕ್ಕು ಅದಕ್ಕೊಂದು ಉತ್ತಮ ಉದಾಹರಣೆ. 2005ರಲ್ಲಿ ಆಸ್ಕರ್ ಹೆಸರಿನ ಬೆಕ್ಕೊಂದನ್ನು ಅಮೆರಿಕಾದ ರೋಡೆ ಐಲ್ಯಾಂಡ್‌ನ ನರ್ಸಿಂಗ್ ಹೋಮ್ ಒಂದು ದತ್ತು ಪಡೆಯಲಾಗಿತ್ತು. ಈ ಬೆಕ್ಕು ಬಹುತೇಕ ಅಲ್ಲಿನ ಜನರನ್ನು ಹಾಗೂ ಸಿಬ್ಬಂದಿಯನ್ನು ಹತ್ತಿರ ಸೇರಿಸಿಕೊಳ್ಳದೇ ನಿರ್ಲಕ್ಷ್ಯ ಮಾಡ್ತಿತ್ತು. ಆದರೆ ಒಂದು ದಿನ ವಿಚಿತ್ರ ಘಟನೆಯೊಂದನ್ನು ಆ ನರ್ಸಿಂಗ್ ಹೋಮ್ ಸಿಬ್ಬಂದಿ ಗುರುತಿಸಿದರು. ಆಸ್ಕರ್ ಶಾಂತವಾಗಿ ರೋಗಿಯೊಬ್ಬರ ಕೋಣೆಯಲ್ಲಿ ಮಲಗಲು ಶುರು ಮಾಡಿತ್ತು. ಪ್ರತಿ ಬಾರಿಯೂ ಒಂದೇ ರೀತಿಯ ರೋಗಿಯ ಪಕ್ಕದಲ್ಲಿ ಅದು ಮಲಗುತ್ತಿತ್ತು. ಅದು ಅವರ ಹಾಸಿಗೆ ಮೇಲೆ ಹಾರಿ ಅವರ ಪಕ್ಕದಲ್ಲೇ ಮಲಗಿ ಅವರ ಬಳಿಯೇ ಇರುತ್ತಿತ್ತು. ಈ ಬೆಕ್ಕು ಹಾಗೆ ಯಾರ ಬೆಡ್ ಮೇಲೆ ಮಲಗಿರುತ್ತಿತ್ತೋ ಅವರು ಕೆಲ ಗಂಟೆಗಳಲ್ಲಿ ನಿಧನರಾಗುತ್ತಿದ್ದರು. ಆರಂಭದಲ್ಲಿ ಇದು ಕಾಕತಾಳೀಯ ಎಂದು ನರ್ಸಿಂಗ್ ಹೋಮ್ ಸಿಬ್ಬಂದಿ ಭಾವಿಸಿದರು. ಆದರೆ ಇದೇ ರೀತಿ ಮತ್ತೆ ಮತ್ತೆ ನಡೆಯಲು ಶುರುವಾಯ್ತು.

ನ್ಯೂ ಇಂಗ್ಲೆಂಡ್ ಜರ್ನಲ್‌ನಲ್ಲಿ ಬೆಕ್ಕಿನ ಬಗ್ಗೆ ಉಲ್ಲೇಖ

ಹೀಗಾದಾಗ ಆಸ್ಕರ್ ಜನರ ಸಾವನ್ನು ಮೊದಲೇ ಗುರುತಿಸುತ್ತಿದ್ದಾನೆ ಎಂಬುದನ್ನು ಅವರು ಅರ್ಥಮಾಡಿಕೊಂಡರು. ಸಾರ್ವಜನಿಕವಾಗಿ ಜನ ಈ ಬಗ್ಗೆ ಮಾತನಾಡುವ ಮೊದಲೇ ಆಸ್ಕರ್ 25 ಸಾವನ್ನು ಮೊದಲೇ ಸೂಚಿಸಿದ್ದ. ಇಲ್ಲಿನ ವೈದ್ಯರೊಬ್ಬರು ನ್ಯೂ ಇಂಗ್ಲೆಂಡ್ ಜರ್ನಲ್‌ನಲ್ಲಿ ಈ ಬೆಕ್ಕಿನ ಬಗ್ಗೆ ಬರೆದಿದ್ದರೂ ಕೂಡ. ಇದಾದ ನಂತರ ನರ್ಸಿಂಗ್ ಹೋಮ್ ಒಂದು ಪೋರ್ಟ್‌ಪೋಲಿಯೋವನ್ನು ಸೃಷ್ಟಿಸಿತ್ತು. ಒಂದು ವೇಳೆ ಬೆಕ್ಕು ಆಸ್ಕರ್ ಯಾವ ರೋಗಿಯ ಬೆಡ್ ಜೊತೆ ಕಾಲ ಕಳೆಯುತ್ತಾನೋ ಅಂತಹ ರೋಗಿಯ ಕುಟುಂಬದವರಿಗೆ ಕೂಡಲೇ ವಿಷಯ ಮುಟ್ಟಿಸುತ್ತಿದ್ದರು. ಅವರು ತಮ್ಮ ಸಂಬಂಧಿಗೆ ಕೊನೆಯ ವಿದಾಯವನ್ನು ಹೇಳಬಹುದು ಎಂಬ ಉದ್ದೇಶದಿಂದ ಆಸ್ಪತ್ರೆ ಈ ನಿಯಮ ಮಾಡಿತ್ತು.

2010ರ ವೇಳೆಗೆ ಆಸ್ಕರ್ ಹೀಗೆ 50 ಜನರ ಸಾವನ್ನು ಮೊದಲೇ ಊಹಿಸಿದ್ದ. ಹಾಗೆಯೇ ಆಸ್ಕರ್ ತನ್ನ ಅಂತ್ಯಕಾಲದ ವೇಳೆಗಾಗಲೇ ಈ ಸಂಖ್ಯೆ 100 ದಾಟಿತ್ತು. 2022ರಲ್ಲಿ ತಾನು ಸಾಯುವವರೆಗೂ ಸುಮಾರು 17 ವರ್ಷಗಳ ಕಾಲ ಈ ಆಸ್ಕರ್ ಬೆಕ್ಕು ನರ್ಸಿಂಗ್ ಹೋಮ್‌ನಲ್ಲಿ ಸೇವೆ ಸಲ್ಲಿಸಿದ್ದ. ಈ ವಿಚಾರ ತಿಳಿದ ಜನರು ಈ ಬೆಕ್ಕು ಕೊನೆಯ ಕ್ಷಣದಲ್ಲಿ ವ್ಯಕ್ತಿಯ ದೇಹದಲ್ಲಾಗುವ ರಾಸಾಯನಿಕ ಪ್ರಕ್ರಿಯೆಯನ್ನು ಗೃಹಿಸುತ್ತಿತ್ತು ಎಂದು ಹೇಳಿದರೆ ಇನ್ನೂ ಕೆಲವರು ಇದೊಂದು ವಿಜ್ಞಾನಕ್ಕೆ ನಿಲುಕದ ಆಳವಾದ ವಿಚಾರ ಎಂದು ನಂಬಿದ್ದರು.

ನರ್ಸಿಂಗ್ ಹೋಮ್‌ನ ಸ್ಟಾಪ್ ಹಾಗೂ ಕುಟುಂಬಕ್ಕೆ ಆಸ್ಕರ್ ಒಬ್ಬ ಪತ್ತೆ ಮಾಡಬೇಕಾದ ನಿಗೂಢತೆ ಆಗಿರಲಿಲ್ಲ. ಆತನೋರ್ವ ವ್ಯಕ್ತಿಯ ಕೊನೆಕ್ಷಣಗಳಲ್ಲಿ ಜೊತೆಗಿದ್ದು ಅವರಿಗೆ ಆರಾಮ ನೀಡುವ ಕೊನೆಗಾಲದ ಜೊತೆಗಾರನಾಗಿದ್ದ. ಈ ಬಗ್ಗೆ ನಿಮಗೇನನಿಸುತ್ತದೆ. ನೀವು ಇದನ್ನು ನಂಬುವಿರಾ ಕಾಮೆಂಟ್ ಮಾಡಿ.

ಇದನ್ನೂ ಓದಿ: ಸಂಗಾತಿಯ ಸಾವಿನ ಅರಿವಿಲ್ಲದೇ ಹುಡುಕಾಟ ನಡೆಸಿ ರೋಧಿಸಿದ ಹೆಣ್ಣು ಹುಲಿ ಬಘಾನಿ

ಇದನ್ನೂ ಓದಿ: ಮೊಸಳೆ ಬಂದಿದೆ ಎಂದ್ರು ಬಾರದ ಅರಣ್ಯ ಸಿಬ್ಬಂದಿ: ಯುವಕ ಏನ್ ಮಾಡ್ದಾ ನೋಡಿ